ವಿಧಿಯೇ ನೀನೆಷ್ಟು ಕ್ರೂರಿ ; ಕೇವಲ 19ರ ಪ್ರಾಯದಲ್ಲಿಯೇ ಉಸಿರು ಚೆಲ್ಲಿದ ದಂಗಲ್ ನಟಿ ..!
ತಾನೊಂದು ಬಗೆದರೆ ದೈವವೊಂದು ಬಗೆದಿತ್ತು ಅನ್ನುವುದಕ್ಕೆ ಮತ್ತೊಂದು ಉದಾಹರಣೆ ಸುಹಾನಿ ಭಟ್ನಾಗರ್.ಆಡುವ ವಯಸ್ಸಿನಲ್ಲಿಯೇ ಅಸಂಖ್ಯಾತ ಸಿನಿ ಪ್ರಿಯರ ಹೃದಯವನ್ನೂ ಗೆದ್ದು, ದಂಗಲ್ ಚಿತ್ರದ ಮೂಲಕ ರಾಷ್ಟ್ರವ್ಯಾಪಿ ಛಾಪು ಮೂಡಿಸಿದ್ದ ಸುಹಾನಿ ಭಟ್ನಾಗರ್ ಕೇವಲ 19ರ ಪ್ರಾಯದಲ್ಲಿಯೇ ಉಸಿರು ಚೆಲ್ಲಿದ್ದಾರೆ. ಅಸಂಖ್ಯಾತ ಅಭಿಮಾನಿಗಳನ್ನ ಅಗಲಿದ್ದಾರೆ
ದಂಗಲ್ ಚಿತ್ರದಲ್ಲಿ ಆಮೀರ್ ಕಿರಿಯ ಪುತ್ರಿ ಸುಹಾನಿ
ಆಮೀರ್ ಖಾನ್ ಅಭಿನಯದ ಬ್ಲಾಕ್ ಬಸ್ಟರ್ ಸಿನಿಮಾ ದಂಗಲ್ ಮೂಲಕ, ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದವರು ಸುಹಾನಿ ಭಟ್ನಾಗರ್. ಚಿತ್ರದಲ್ಲಿ ಆಮೀರ್ ಖಾನ್ ಕಿರಿಯ ಪುತ್ರಿ ಬಬಿತಾ ಪೋಗಟ್ ಅವರ ಬಾಲ್ಯಾವಸ್ಥೆಯ ಪಾತ್ರವನ್ನ ನಿರ್ವಹಿಸಿ, ಅನೇಕರ ಹೃದಯವನ್ನ ಗೆದಿದ್ದ ಸುಹಾನಿ ಇಂದು ಕೊನೆಯುಸಿರೆಳೆದಿದ್ದಾರೆ.

ಸುಹಾನಿಗೆ ಆಗಿದ್ದೇನು..?
ದಂಗಲ್ ಚಿತ್ರದ ಮೂಲಕ ನೇಮ್ ಹಾಗೂ ಫೇಮ್ ಗಳಿಸಿದ್ದ ಸುಹಾನಿಯ ಸಾವಿನ ಬಗ್ಗೆ ಅನೇಕ ರೀತಿಯ ಚರ್ಚೆಗಳಾಗ್ತಿವೆ. ಅಂತೆ-ಕಂತೆ ಎಂಬ ಮಾತು ಕೇಳಿ ಬರುತ್ತಿವೆ. ಆದರೆ, ವಾಸ್ತವದಲ್ಲಿ ಸುಹಾನಿ ಕೆಲ ದಿನಗಳ ಹಿಂದೆ ಭೀಕರ ಅಪಘಾತಕ್ಕೆ ತುತ್ತಾಗಿದ್ದರು ಅನ್ನುವ ಮಾತು ಇದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಸುಹಾನ ಅವರನ್ನ ದೆಹಲಿಯ ಪ್ರತಿಷ್ಠಿತ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಬದಲಿಗೆ ಸುಹಾನಿ ಆರೋಗ್ಯ ಇನ್ನೆಷ್ಟು ಹದಗೆಟ್ಟಿತ್ತು. ನೀಡಲಾದ ಔಷಧಿಯ ಅಡ್ಡ ಪರಿಣಾಮದಿಂದ ದಿನದಿಂದ ದಿನಕ್ಕೆ ಸುಹಾನಿ ಸ್ಥಿತಿ ಕ್ಷೀಣಿಸತೊಡಗಿತು. ದೇಹದಲ್ಲಿ ನೀರು ತುಂಬಿಕೊಂಡಿತು. ಕೊನೆಗೆ ಸಾವು ಬದುಕಿನ ನಡುವೆ ಅನೇಕ ದಿನಗಳ ಕಾಲ ಹೋರಾಟ ಮಾಡಿದ ಸುಹಾನಿ ಇಂದು ಕೊನೆಯುಸಿರೆಳೆದರು ಅನ್ನುವ ಮಾತು ಸದ್ಯಕ್ಕೆ ಹಿಂದಿ ಉದ್ಯಮದಲ್ಲಿ ಕೇಳಿ ಬರುತ್ತಿದೆ.
ಚಿತ್ರರಂಗದಿಂದ ದೂರವಾಗಿದ್ದೇಕೆ ಸುಹಾನಿ
ಅಸಲಿಗೆ ದಂಗಲ್ ಚಿತ್ರದ ನಂತರ ಸುಹಾನಿ ಭಟ್ನಾಗರ್ ಗೆ ಅನೇಕ ಅವಕಾಶಗಳು ಅರಸಿ ಹೋಗಿದ್ದವು. ಆದರೆ ಸುಹಾನಿ ಯಾವುದನ್ನೂ ಒಪ್ಪಿರಲಿಲ್ಲ. ಯಾಕೆಂದರೆ ಮೊದಲು 'ಅಭ್ಯಾಸ' ಆ ನಂತರ 'ಹವ್ಯಾಸ' ಎನ್ನುವ ತೀರ್ಮಾನಕ್ಕೆ ಸುಹಾನಿ ಬಂದಿದ್ದರು. ಚಿತ್ರರಂಗದಿಂದ ಅಲ್ಪ ವಿರಾಮವನ್ನೂ ತೆಗೆದುಕೊಂಡರು. ಆದರೆ ವಿಧಿಯಾಟ ಬಾಳಿ ಬದುಕಬೇಕಿದ್ದ ಸುಹಾನಿ ಚಿಕ್ಕ ವಯಸ್ಸಿನಲ್ಲಿಯೇ ಕಣ್ಮರೆಯಾದರು

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದ ಸುಹಾನಿ
ಸುಹಾನಿ ಭಟ್ನಾಗರ್ 25 ನವೆಂಬರ್ 2021 ರಿಂದ Instagram ಖಾತೆಯಲ್ಲಿ ಸಕ್ರಿಯವಾಗಿಲ್ಲ. ಅದಾಗ್ಯೂ, ಇದಕ್ಕೂ ಮೊದಲು ಅವರು ಆಗಾಗ್ಗೆ ತಮ್ಮ ಫೋಟೋಗಳನ್ನು ಹಂಚಿಕೊಂಡಿದ್ದರು. ಸುಹಾನಿಯ ರೂಪಾಂತರವನ್ನು ಕಂಡು ಜನರು ಆಶ್ಚರ್ಯಚಕಿತರಾಗಿದ್ದರು ಕೂಡ. ಇದಕ್ಕೆ ಫೋಟೋ ಕೆಳಗೆ ವ್ಯಕ್ತವಾದ ಅಭಿಪ್ರಾಯಗಳೇ ಸಾಕ್ಷಿ. ಆದರೆ ಈಗ ಅತ್ಯಲ್ಪ ಅವಧಿಯಲ್ಲಿಯೇ ಖ್ಯಾತಿಯ ಶಿಖರಕ್ಕೇರಿದ್ದ ಸುಹಾನಿ ನಮ್ಮ ನಡುವೆ ಇಲ್ಲ. ಇದಲ್ಲವೇ ದೌರ್ಭಾಗ್ಯ, ವಿಧಿಲಿಖಿತ. ಪ್ರೀತಿಯ ಸುಹಾನಿ ಹೋಗಿ ಬನ್ನಿ..!


Click it and Unblock the Notifications










