ಮಿಡತೆ ದಾಳಿಗೆ ಕುರಾನ್ ಉಕ್ತಿಯ ಉಲ್ಲೇಖ: ಮಾಜಿ ನಟಿ ಝೈರಾ ವಾಸಿಮ್ ವಿರುದ್ಧ ಆಕ್ರೋಶ
ಭಾರತದಲ್ಲಿ ನಡೆಯುತ್ತಿರುವ ಮಿಡತೆಗಳ ದಾಳಿಯನ್ನು ಪವಿತ್ರ ಕುರಾನ್‌ನ ಉಕ್ತಿಯೊಂದನ್ನು ಉಲ್ಲೇಖಿಸುವ ಮೂಲಕ ಪ್ರಸ್ತಾಪಿಸಿದ್ದ ಮಾಜಿ ನಟಿ ಝೈರಾ ವಾಸಿಮ್, ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
Recommended Video
ತೀವ್ರ ಆಕ್ರೋಶಕ್ಕೆ ತುತ್ತಾಗಿರುವ 'ದಂಗಲ್' ಖ್ಯಾತಿಯ ನಟಿ ಝೈರಾ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ಟ್ವಿಟ್ಟರ್‌ನಲ್ಲಿ ತಮ್ಮ ಹೆಸರು ಟ್ರೆಂಡ್ ಆಗುತ್ತಿದ್ದಂತೆಯೇ ಅವರು, ಟ್ವಿಟ್ಟರ್ ಮತ್ತು ಇನ್‌ಸ್ಟಾಗ್ರಾಂ ಎರಡರಿಂದಲೂ ತಮ್ಮ ಖಾತೆಗಳನ್ನು ಡಿಲೀಟ್ ಮಾಡಿದ್ದರು.
ಕೊರೊನಾ ವೈರಸ್ ಸೋಂಕಿನ ನಡುವೆಯೇ ಮಿಡತೆಗಳ ದಾಳಿಯ ಸಂಕಷ್ಟವನ್ನು ಭಾರತ ಎದುರಿಸುತ್ತಿದೆ. ಇದಕ್ಕೆ ಧಾರ್ಮಿಕ ಲೇಪನ ನೀಡುವ ಮೂಲಕ ಈ ದುಸ್ಥಿತಿಯನ್ನು ಸಂಭ್ರಮಿಸಿದ್ದಾರೆ ಎಂದು ಅವರ ವಾಗ್ದಾಳಿ ಮುಂದುವರಿದಿದೆ. ಮುಂದೆ ಓದಿ...

ಝೈರಾ ವಿರುದ್ಧ ಆಕ್ರೋಶ
ಇದು ವಿವಾದ ಸೃಷ್ಟಿಸಿತ್ತು. ಮಿಡತೆಗಳ ದಾಳಿಯನ್ನು ಝೈರಾ ಬೆಂಬಲಿಸುತ್ತಿದ್ದಾರೆ ಎಂದು ಅನೇಕರು ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿದ್ದರು. ಇದು ತೀವ್ರಗೊಳ್ಳುತ್ತಿದ್ದಂತೆಯೇ ಝೈರಾ ಬೇಸರದಿಂದ ಸಾಮಾಜಿಕ ಜಾಲತಾಣಗಳನ್ನು ತೊರೆದಿದ್ದರು.

ಝೈರಾ ಬೆಂಬಲಕ್ಕೆ ನಿಂತ ಅಭಿಮಾನಿಗಳು
ಝೈರಾ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಆಕೆ ಟ್ವೀಟ್ ಮಾಡಿರುವುದರಲ್ಲಿ ತಪ್ಪೇನಿಲ್ಲ. ಅದು ಶಿಕ್ಷೆಯೇ ಇರಲಿ ಅಥವಾ ಬೇರೆ ಏನೇ ಇರಲಿ, ಪ್ರತಿಯೊಂದೂ ದೇವರ ಅನುಮತಿಯೊಂದಿಗೇ ನಡೆಯುವುದು. ಆತ ಸಾಯಿಸಬಹುದು ಅಥವಾ ಯಾವುದೋ ಪವಾಡ ಸೃಷ್ಟಿಸಬಹುದು. ಆತ ಏನನ್ನು ಬಯಸಿದರೂ ಮಾಡಬಹುದು. ಏಕೆಂದರೆ ಇದು ಆತನ ಜಗತ್ತೇ ಹೊರತು ನಮ್ಮದಲ್ಲ. ನಾವು ಇಲ್ಲಿ ಕೆಲವು ವರ್ಷ ಇರುತ್ತೇವೆಯೇ ಹೊರತು ಎಂದೆಂದಿಗೂ ಅಲ್ಲ ಎಂದು ಝೈರಾ ಮಾತಿನ ಅರ್ಥವನ್ನು ಕೆಲವರು ವಿವರಿಸಿದ್ದರು.

ಚಿತ್ರರಂಗ ತೊರೆದಿರುವ ಝೈರಾ
'ದಂಗಲ್' ಚಿತ್ರದಲ್ಲಿ ಅಮೀರ್ ಖಾನ್ ಮಗಳ ಪಾತ್ರದಲ್ಲಿ ನಟಿಸಿದ್ದ ಝೈರಾ, ಅಭಿನಯಕ್ಕೆ ರಾಷ್ಟ್ರಪ್ರಶಸ್ತಿಯನ್ನೂ ಪಡೆದಿದ್ದರು. ಆದರೆ ಚಿತ್ರರಂಗ ತಮ್ಮ ನಂಬಿಕೆ ಮತ್ತು ಧರ್ಮಕ್ಕೆ ಅಡ್ಡಿಯಾಗಿದೆ ಎಂದು ಹೇಳಿ ಚಿತ್ರರಂಗವನ್ನೇ ತೊರೆದಿದ್ದಾರೆ.


Click it and Unblock the Notifications











