ಪಿ.ಕೆ. ಚಿತ್ರದ ದಾಖಲೆ ಮುರಿದ ದಂಗಲ್
ಆಮೀರ್ ಖಾನ್ ಅಭಿನಯದ ದಂಗಲ್ ಚಿತ್ರ ಬಾಲಿವುಡ್ ನ ಅತಿ ದೊಡ್ಡ ಗಳಿಕೆಯ ಚಿತ್ರವಾಗಿ ಹೊರಹೊಮ್ಮಿದೆ.
ಡಿ. 23ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದ್ದ ಈ ಚಿತ್ರ ಮೂರನೇ ವಾರಾಂತ್ಯಕ್ಕೆ ವಿಶ್ವದಾದ್ಯಂತ 345.30 ಕೋಟಿ ರು.ಗಳಷ್ಟು ಭರ್ಜರಿ ಕಲೆಕ್ಷನ್ ಮಾಡಿದೆ. ಇದೇ ವಾರಾಂತ್ಯಕ್ಕೆ ಈ ಚಿತ್ರದ ಗಳಿಕೆ 360ರಿಂದ 365 ಕೋಟಿ ರು. ಆಗಬಹುದೆಂದು ಅಂದಾಜಿಸಲಾಗಿದೆ.
ಈ ಹಿಂದೆ, 2014ರಲ್ಲಿ ತೆರೆಕಂಡಿದ್ದ ಆಮೀರ್ ಖಾನ್ ಅವರೇ ಅಭಿನಯಿಸಿದ್ದ ಪಿ.ಕೆ. (340 ಕೋಟಿ ರು.) ಈವರೆಗಿನ ದೊಡ್ಡ ಗಳಿಕೆಯ ಹಿಂದಿ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.

ಈವರೆಗೆ ದಂಗಲ್ ಚಿತ್ರವು ಉತ್ತರ ಅಮೆರಿಕದಲ್ಲಿ 75 ಕೋಟಿ ರು., ಆಸ್ಟ್ರೇಲಿಯಾದಲ್ಲಿ 8.81 ಕೋಟಿ ರು. ಗಳಿಸಿದೆ.
ಇದಷ್ಟೇ ಅಲ್ಲದೆ, ಭಾರತದಲ್ಲಿ 2016ರಲ್ಲಿ ಬಿಡುಗಡೆಗೊಂಡ ಚಿತ್ರಗಳಲ್ಲೇ ಅತಿ ಹೆಚ್ಚು ಹಣ ಬಾಚಿದ ಚಿತ್ರವೆಂದ ಹೆಗ್ಗಳಿಕೆಯೂ ದಂಗಲ್ ಪಾಲಿಗೆ ಸಂದಿದೆ. ಭಾರತದಲ್ಲಿ ಆ ಚಿತ್ರ ಈವರೆಗೆ 90 ಕೋಟಿ ರು. ಗಳಿಸಿದೆ ಎನ್ನಲಾಗಿದೆ.
ಈ ಚಿತ್ರಕ್ಕೆ ಬಂದಿರುವ ಮತ್ತೊಂದು ಪ್ರಶಂಸೆಯೆಂದರೆ, ಈ ಚಿತ್ರದ ತೆಲುಗು, ತಮಿಳು ಚಿತ್ರಗಳೂ ಸೂಪರ್ ಹಿಟ್ ಆಗಿವೆ. ಈ ಪ್ರಾದೇಶಿಕ ಭಾಷಾ ಚಿತ್ರಗಳೂ ಮೊದಲ ವಾರಾಂತ್ಯಕ್ಕೆ 1 ಕೋಟಿ ರು. ಹಣ ಸಂಗ್ರಹಿಸಿದ್ದವು.


Click it and Unblock the Notifications











