twitter
    For Quick Alerts
    ALLOW NOTIFICATIONS  
    For Daily Alerts

    ಗೋವಾ ಸಿನಿಮೋತ್ಸವ: 'ಇಂಟು ದಿ ಡಾರ್ಕ್ನೇಸ್ ಅತ್ಯುತ್ತಮ ಸಿನಿಮಾ, ತ್ಸು-ಚುನ್ ಲಿಯು ಅತ್ಯುತ್ತಮ ನಟ

    By ಫಿಲ್ಮೀಬೀಟ್ ಡೆಸ್ಕ್
    |

    ಎರಡನೇ ಮಹಾಯುದ್ಧದ ಬಗೆಗಿನ ಡ್ಯಾನಿಷ್ ಚಲನಚಿತ್ರ" ಇನ್ ಟು ದಿ ಡಾರ್ಕ್ನೇಸ್ ಗೆ 51 ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಗೋಲ್ಡನ್ ಪೀಕಾಕ್ ಪ್ರಶಸ್ತಿ ಲಭಿಸಿದೆ. ಅಂದೇರ್ಸ್ ರೆಪ್ನ್ ನಿರ್ದೇಶಿಸಿರುವ ಈ ಚಿತ್ರ 152 ನಿಮಿಷದ ದೀರ್ಘ ಅವಧಿಯದ್ದು. ನಾಜಿ ಆಕ್ರಮಣದ ಸಂದರ್ಭದಲ್ಲಿ ಡೆನ್ಮಾರ್ಕ್ ನ ಜನತೆ ಅನುಭವಿಸಿದ ಸಂಕಿರ್ಣ, ಭಾವನಾತ್ಮಕ, ಪ್ರಕ್ಷುಬ್ದತೆಯ ಅಂಶಗಳನ್ನು ಹೊಂದಿರುವ ಚಿತ್ರವಾಗಿದೆ. ಚಿತ್ರದಲ್ಲಿ ನಾಯಕ ಕರ್ಲ್ ಸ್ಕೊವ್ ಮಾನಸಿಕ ಸಂಘರ್ಷಗಳಿಗೆ ಒಳಗಾಗುವ ಚಿತ್ರ ಇದಾಗಿದ್ದು, ಇದು ಪರಿಣಾಮಕಾರಿಯಾಗಿ ಮತ್ತು ಶಕ್ತಿಯುತವಾಗಿ ಮೂಡಿ ಬಂದಿದೆ.

    ಗೋಲ್ಡನ್ ಪೀಕಾಕ್ ಪ್ರಶಸ್ತಿ 40 ಲಕ್ಷ ರೂಪಾಯಿ ನಗದು ಒಳಗೊಂಡಿದೆ. ನಿರ್ದೇಶಕ ಅಂಡೆರ್ಸ್ ರೆಪ್ನ್ ಮತ್ತು ನಿರ್ಮಾಪಕ ಲೆನೆ ಬೊರ್ಗ್ಲುಮ್ ಅವರುಗಳಿಗೆ ನಗದು ಬಹುಮಾನ ಸಮಾನವಾಗಿ ಹಂಚಿಕೆ ಮಾಡಲಾಗಿದೆ. ಇಬ್ಬರಿಗೂ ಪ್ರಮಾಣ ಪತ್ರ ವಿತರಿಸಲಾಗಿದೆ.

    ಉತ್ತಮ ನಿರ್ದೇಶನಕ್ಕಾಗಿ ಸಿಲ್ವರ್ ಪೀಕಾಕ್ ಪ್ರಶಸ್ತಿ ತೈವಾನ್ ನ ನಿರ್ದೇಶಕ, ಕಥೆಗಾರ ಮತ್ತು ನಿರ್ಮಾಪಕ ಚೆನ್ ನಿಯೆನ್ ಕೊ ಅವರಿಗೆ ಸಂದಿದೆ. ಅವರ 2020 ರ 'ದಿ ಸೈಲೆಂಟ್ ಫಾರೆಸ್ಟ್' ಚಿತ್ರಕ್ಕೆ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ. ವಿಶೇಷ ಅಗತ್ಯವಿರುವ ಮಕ್ಕಳ ಶಾಲೆಯಲ್ಲಿ ನಡೆಯುವ ವ್ಯವಸ್ಥಿತ ಲೈಂಗಿಕ ಕಿರುಕುಳದ ನಿಷ್ಕಪಟ ಮತ್ತು ಹೃದಯ ಕಲಕುವ ಕಥೆಯನ್ನು ಈ ಚಿತ್ರ ಹೊಂದಿದೆ.

    Danish World War II drama Into the Darkness bags Golden Peacock Award at 51st IFFI

    ಶ್ರವಣದೋಷವಿರುವ ಪ್ರಮುಖ ಪಾತ್ರದಾರಿ ಚೆಂಗ್ ಚೆಂಗ್ ಅವರ ಕಣ್ಣುಗಳ ಮೂಲಕ ಹೇಳಲಾಗುವ 108 ನಿಮಿಷಗಳ ಚಿತ್ರವು ಕಿವುಡರ ಜಗತ್ತಿನಲ್ಲಿ ಶಬ್ದಗಳ ಪ್ರಕ್ಷುಬ್ದ ಶಬ್ದಗಳ ಅಲೆ ಎಬ್ಬಿಸುತ್ತದೆ. ತೈವಾನ್ ನಲ್ಲಿನ ಶಾಲೆಯಲ್ಲಿನ ನೈಜ ಘಟನೆಯನ್ನ ಆಧರಿಸಿದ ಚಿತ್ರ ಇದಾಗಿದೆ. ಬಲಿಪಶುಗಳು ಹೇಗೆ ಪರಭಕ್ಷರಾಗಿ ರೂಪಾಂತರಗೊಳ್ಳುತ್ತಾರೆ ಎಂಬ ನೋವಿನ ಕಥೆಯನ್ನು ಈ ಸಿನಿಮಾ ಹೇಳುತ್ತದೆ.

    ಸಿಲ್ವರ್ ಪಿಕಾಕ್ ವಲಯದಲ್ಲಿ ಅತ್ಯುತ್ತಮ ನಿರ್ದೇಶಕರಿಗೆ 15 ಲಕ್ಷ ರೂಪಾಯಿ ನಗದು ಮತ್ತು ಪ್ರಮಾಣ ಪತ್ರ ದೊರೆಯಲಿದೆ. ವಿಶೇಷವೆಂದರೆ 17 ವರ್ಷದ ತ್ಸು ಚುವಾನ್ ಲಿಯು ಅವರಿಗೂ ಪ್ರಶಸ್ತಿ ನೀಡಲಾಗಿದೆ. 'ದಿ ಸೈಲೆಂಟ್ ಫಾರೆಸ್ಟ್' ಚಿತ್ರದಲ್ಲಿ ವಿಭಿನ್ನ ಸಾಮರ್ಥ್ಯ್ಥದ ಚಾಂಗ್ ಚಾಂಗ್ ಪಾತ್ರದ ಮೂಲಕ ಸುಂದರ ಮತ್ತು ಶಕ್ತಿಯುತವಾಗಿ ಹೊರ ಜಗತ್ತನ್ನು ಹೊರತರುವಲ್ಲಿ ಈ ನಟ ಯಶಸ್ವಿಯಾಗಿದ್ದಾರೆ. ಲಿಯು ಈಗಾಗಲೇ 76 ಹಾರರ್ ಬುಕ್ ಸ್ಟೋರ್ [2020] ಮತ್ತು ಆನ್ ಚಿಲ್ಡ್ರನ್ [2018] ಚಿತ್ರಗಳಲ್ಲಿನ ಮನೋಜ್ಞ ಅಭಿನಯಕ್ಕಾಗಿ ಪ್ರಮಾಣ ಪತ್ರ ಮತ್ತು 10 ಲಕ್ಷ ರೂಪಾಯಿ ಬಹುಮಾನವನ್ನು ಮುಡಿಗೇರಿಸಿಕೊಂಡಿದ್ದಾರೆ.

    Danish World War II drama Into the Darkness bags Golden Peacock Award at 51st IFFI

    'ಐ ನೆವರ್ ಕ್ರೈ' ಚಿತ್ರದಲ್ಲಿನ ಅತ್ಯುತ್ತಮ ನಟನೆಗೆ ಪೊಲೆಂಡ್ ನ ನಟಿ ಝೋಫಿಯ ಸ್ಟಫಿಯೆಜ್ ಗೆ ಸಿಲ್ವರ್ ಪೀಕಾಕ್ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ. ಈ ಚಿತ್ರದಲ್ಲಿ ಅವರು ಪಿಯೊಟ್ರ್ ಡೊಮಲೆವಸ್ಕಿ ಪಾತ್ರದಲ್ಲಿ ನಟಿಸಿದ್ದಾರೆ. ಐ ಜಾಕ್ ನಜ್ಡಲೆಜ್ ಎಂಬುವರ ಮಗಳಾಗಿ ತಂದೆಯ ಮೃತ ದೇಹವನ್ನು ಮರಳಿ ತರಲು ವಿದೇಶದಲ್ಲಿ ಅಧಿಕಾರ ಶಾಹಿಯ ಜಟಿಲತೆಯಲ್ಲಿ ಹೆಣಗಾಡುವ ಕಥಾ ಹಂದರವನ್ನು ಇದು ಒಳಗೊಂಡಿದೆ. ನಟಿ ಝೋಫಿಯ ಸ್ಟಫಿಯೆಜ್ ಹತ್ತು ಲಕ್ಷ ರೂಪಾಯಿ ನಗದು ಮತ್ತು ಪ್ರಮಾಣಪತ್ರವನ್ನು ಪಡೆದುಕೊಂಡಿದ್ದಾರೆ. ಸ್ಟಫಿಯೆಜ್ 25 ಲಾಟ್ ನಿಯೆವಿನ್ನೊಸ್ಸಿ, ಸ್ಪ್ರವ ಟೊಮ್ಕ ಕೊಮೆಂಡಿ [2020] ಮತ್ತು ಮರ್ಸೆಲ್ [2019] ಚಿತ್ರಗಳಲ್ಲಿ ನಟಿಸಿ ಇವರು ಈಗಾಗಲೇ ಹೆಸರು ವಾಸಿಯಾಗಿದ್ದಾರೆ.

    51ನೇ ಐಎಫ್ಎಫ್ಐ ವಿಶೇಷ ತೀರ್ಪುಗಾರರ ಪ್ರಶಸ್ತಿ ಬಲ್ಗೇರಿಯಾದ ನಿರ್ದೇಶಕ ಕಮಿನ್ ಕಲೆವ್ ಅವರಿಗೆ ಸಂದಿದ್ದು, ಅವರ 2020ರ "ಫೆಬ್ರವರಿ" ಚಿತ್ರ ಪ್ರಶಸ್ತಿಯನ್ನು ತನ್ನ ಬಗಲಿಗೆ ಹಾಕಿಕೊಂಡಿದೆ. ಒಬ್ಬ ವ್ಯಕ್ತಿಯ 8, 18 ಮತ್ತು 82 ವರ್ಷಗಳ ಮೂರು ವಿಭಿ್ನ್ನ ವಯೋಮಾನ ಕುರಿತ ಕಥೆಯನ್ನು ಈ ಚಿತ್ರ ಹೇಳುತ್ತದೆ. ಈ ಚಿತ್ರ ವಿವಿಧ ಅವತಾರಗಳನ್ನು, ಅವತಾರಗಳ ನಿರಂತರತೆಯನ್ನು ತೋರಿಸುತ್ತದೆ. ಕಾವ್ಯಾತ್ಮಕ ರೂಪಗಳನ್ನು ಬಳಸಿ ವಿಶಾಲ ಆಕಾಶದ ಕೆಳಗಿರುವ ವಿಶಾಲವಾದ ತೆರೆದ ಭೂ ಪ್ರದೇಶದಲ್ಲಿ ಮಾನವರು ಕೇವಲ ಬಿಂದುಗಳೇ ಎಂಬಂತೆ ಪ್ರೇಕ್ಷಕರು ಭಾವಿಸುವಂತೆ ಈ ಚಿತ್ರ ಮಾಡುತ್ತದೆ. ಕಲೇವ್ ಚಿತ್ರಕಥೆಗಾರರೂ ಹೌದು. ಈಸ್ಟರ್ನ್ ಪ್ಲೇಸ್ [2009] ಮತ್ತು ಫೆಸ್ ಡೌನ್ [2015] ಚಿತ್ರಗಳ ಮೂಲಕ ಖ್ಯಾತಿ ಪಡೆದಿದ್ದಾರೆ. ಸಿಲ್ವರ್ ಪೀಕಾಕ್ ಪ್ರಶಸ್ತಿಗಾಗಿ ಕೆಲೆವ್ ಗೆ 15 ಲಕ್ಷ ರೂಪಾಯಿ ನಗದು ಮತ್ತು ಪ್ರಶಸ್ತಿ ಪತ್ರ ದೊರೆತಿದೆ.

    Danish World War II drama Into the Darkness bags Golden Peacock Award at 51st IFFI

    51 ನೇ ಐಎಫ್ಎಫ್ಐ ನಲ್ಲಿ ವಿಶೇಷ ಪ್ರಶಸ್ತಿ ಅಸ್ಸಾಂ 'ಬ್ರಿಡ್ಜ್' ಚಿತ್ರ ನಿರ್ಮಿಸಿದ ಅಸ್ಸಾಂ ನ ನಿರ್ದೇಶಕ ಕೃಪಾಲ್ ಕಲಿತ ಅವರಿಗೆ ಲಭಿಸಿದೆ. ಗ್ರಾಮೀಣ ಅಸ್ಸಾಂನಲ್ಲಿ ವಾರ್ಷಿಕವಾಗಿ ಸಂಭವಿಸುವ ಪ್ರವಾಹ ಪರಿಸ್ಥಿತಿಯ ಸಂಕಷ್ಟಗಳನ್ನು ಈ ಚಿತ್ರ ಪ್ರತಿಬಿಂಬಿಸುತ್ತದೆಯಲ್ಲದೇ ರಾಜ್ಯದ ಪರಿಸ್ಥಿತಿಯನ್ನು ಅನಾವರಣಗೊಳಿಸುತ್ತದೆ. ಬ್ರಹ್ಮಪುತ್ರ ಮತ್ತು ಅದರ ಉಪನದಿಗಳು ಅನೇಕ ಹಳ್ಳಿಗಳನ್ನು ಪ್ರವಾಹಕ್ಕೆ ದೂಡಿ ಕೃಷಿ ವ್ಯವಸ್ಥೆಯನ್ನು ಹಾಳು ಮಾಡುವ ಸಂಕಷ್ಟಗಳ ಸರಮಾಲೆಯನ್ನು ಇದು ಪ್ರತಿಬಿಂಬಿಸುತ್ತದೆ. ನಿರ್ದೇಶಕ ಕಲಿತ ಅವರಿಗೆ ಪ್ರಮಾಣಪತ್ರ ನೀಡಲಾಗಿದೆ.

    ಚೊಚ್ಚಲ ಅತ್ಯುತ್ತಮ ನಿರ್ದೇಶಕ ಪುರಸ್ಕಾರ ಪೊರ್ಚುಗಲ್ ನ ವಲೆಂಟೈನ [2020] ಚಿತ್ರ ನಿರ್ದೇಶಕ ಬ್ರಜಿಲಿಯನ್ ನಿರ್ದೇಶಕ ಕಸ್ಸಿಯೊ ಪೆರೈರಿಯ ಡೊಸ್ ಸಂತ್ರಾಸ್ ಅವರಿಗೆ ದೊರೆತಿದೆ. 17 ವರ್ಷದ ಲಿಂಗಪರಿವರ್ತೆಯಾದ 17 ವರ್ಷದ ಹುಡುಗಿಯ ಕಥೆಯನ್ನು ಈ ಚಿತ್ರ ಸಾರುತ್ತದೆ. ತಾಯಿಯೊಂದಿಗೆ ಸಹಜ ಜೀವನ ನಡೆಸುವುದು ಆಕೆಯ ಏಕೈಕ ಗುರಿಯಾಗಿರುವುದನ್ನು ಚಲನಚಿತ್ರದಲ್ಲಿ ವಿಶೇಷವಾಗಿ ಚಿತ್ರಿಸಲಾಗಿದೆ.

    Danish World War II drama Into the Darkness bags Golden Peacock Award at 51st IFFI

    Recommended Video

    ಸ್ನೇಹಿತರ ಮಾತು ಕೇಳದೆ ಇದ್ದಿದ್ರೆ ಜಯಶ್ರೀ ಬದುಕಿರ್ತಾ ಇದ್ರು | Oneindia Kannada

    ನಿರ್ದೇಶಕ ಕಸ್ಸಿಯೊ ಪೆರೈರಿಯ ಡೊಸ್ ಸಂತ್ರಾಸ್ ಬ್ರಸಿಲಿಯಾದ ಸಿನೆಮಾ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ್ದು, ಅವರು ಕಾದಂಬರಿ ಆಧರಿತ ಚಿತ್ರಗಳು ಮತ್ತು ಸಾಕ್ಷ್ಯ ಚಿತ್ರಗಳನ್ನು ನಿರ್ಮಿಸಿದ್ದಾರೆ. ಇವರ ಅಪ್ರತಿಮ ಕ್ರಿಯಾಶೀಲತೆಯನ್ನು ಹಲವಾರು ಚಲನಚಿತ್ರೋತ್ಸವಗಳಲ್ಲಿ ಪ್ರತಿಬಿಂಬಿಸಲಾಗಿದೆ. ಈವರೆಗೆ 50 ಕ್ಕೂ ಹೆಚ್ಚು ಪ್ರಶಸ್ತಿಗಳಿಗೆ ಇವರು ಭಾಜನರಾಗಿದ್ದಾರೆ.

    English summary
    Danish World War II drama Into the Darkness bags Golden Peacock Award at 51st IFFI.
    Monday, January 25, 2021, 19:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X