ನನ್ನ ಕೆರಿಯರ್‌ನಲ್ಲಿ ಅವರೊಬ್ಬರೇ ನನ್ನ ಲಕ್ಕಿ ಹೀರೋಯಿನ್ ಎಂದ ದರ್ಶನ್!
ದರ್ಶನ್ ಮೊದಲ ಬಾರಿ ನಾಯಕನಾಗಿ ಥಿಯೇಟರ್‌ಗೆ ಎಂಟ್ರಿಕೊಟ್ಟಿದ್ದ 'ಮೆಜೆಸ್ಟಿಕ್' ಸಿನಿಮಾಗೆ 20 ವರ್ಷ ತುಂಬಿದ ಸಂಭ್ರಮದಲ್ಲಿದೆ ಚಿತ್ರ ತಂಡ. ಮೊದಲ ಸಿನಿಮಾದಲ್ಲಿಯೇ ಇಷ್ಟೊಂದು ಅದ್ಭುತ ಯಶಸ್ಸು ಸಿಗಬಹುದೆಂದು ಬಹುಶಃ ದರ್ಶನ್ ಕೂಡ ಊಹಿಸಿರಲು ಸಾಧ್ಯವಿಲ್ಲ.
Recommended Video
ಆದರೆ, ಸಿನಿಮಾ ಅಂದುಕೊಂಡ ಲೆಕ್ಕಾಚಾರವನ್ನೆಲ್ಲಾ ತಲೆಕೆಳಗೆ ಮಾಡಿತ್ತು. ಥಿಯೇಟರ್‌ಗಳಲ್ಲಿ ಈ ಸಿನಿಮಾ 100 ದಿನ ಯಶಸ್ವಿಯಾಗಿ ಪೂರೈಸಿತ್ತು. ಅಲ್ಲದೇ ದರ್ಶನ್ ಕೆರಿಯರ್‌ಗೆ ಈ ಸಿನಿಮಾ ಬುನಾದಿಯಾಗಿತ್ತು. ಮೊದಲ ಸಿನಿಮಾದಲ್ಲೆ ಯಶಸ್ಸನ್ನು ತನ್ನದಾಗಿಸಿಕೊಂಡ ದರ್ಶನ್ ಸಿನಿಮಾದ ಬಗ್ಗೆ ಸಾಕಷ್ಟು ವಿಚಾರಗಳನ್ನು ಮೆಲುಕು ಹಾಕಿಕೊಂಡಿದ್ದಾರೆ.
ಈ ಬಾರಿ ಕೂಡ ದರ್ಶನ್ ಹುಟ್ಟುಹಬ್ಬ ಆಚರಣೆ ಇಲ್ಲ: ಅಪ್ಪು ನೆನೆದ ದಾಸ
'ಮೆಜೆಸ್ಟಿಕ್' ಚಿತ್ರಕ್ಕೆ 20 ವರ್ಷ ತುಂಬಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಮಾರಂಭದಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಕಷ್ಟು ವಿಚಾರಗಳನ್ನು ಮಾತನಾಡುತ್ತಾ ಭಾವುಕರಾದರು. ಸಿನಿಮಾ ಆರಂಭ, ಮುಂಚೆ ಇದ್ದ ಕಷ್ಟದ ದಿನಗಳು, ಅವಕಾಶ ಸಿಗೋದಕ್ಕೆ ಪಟ್ಟಿದ್ದ ಕಷ್ಟಗಳು, ಆಗ ಸಹಾಯ ಮಾಡಿದ ವ್ಯೆಕ್ತಿಗಳು , ಹೀಗೆ ಸಾಕಷ್ಟು ವಿಚಾರಗಳ ಬಗ್ಗೆ ಈ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ಜೊತೆಗೆ ಸಿನಿಮಾದಲ್ಲಿ ನಾಯಕಿಯಾಗಿದ್ದ ಸ್ಪರ್ಶ ರೇಖಾ ಅವರ ಬಗ್ಗೆಯೂ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ರೇಖಾರಿಂದ ಕಲಿತದ್ದು ಸಾಕಷ್ಟಿದೆ ಎಂದ ದಾಸ
ಹೌದು ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ ನಟ ದರ್ಶನ್ ಮೆಜೆಸ್ಟಿಕ್ ಚಿತ್ರದಲ್ಲಿ ತನ್ನ ಸಹ ನಟಿ ಯಾಗಿದ್ದ ಸ್ಪರ್ಶ ರೇಖಾ ಬಗ್ಗೆ ಮಾತನಾಡಿದ್ದಾರೆ. ಅವರು ನನ್ನ ಲಕ್ಕಿ ನಟಿ ಎಂದು ಸಾರೀ ಸಾರೀ ಹೇಳಿದ್ದಾರೆ. ರೇಖಾ ಅವರ ಬಗ್ಗೆ ಮಾತು ಆರಂಭಿಸಿದ ದರ್ಶನ್ " ನನಗೆ ಲಕ್ಕಿಯೆಸ್ಟ್ ಹೀರೋಯಿನ್ ಅಂದ್ರೆ ಅದು ರೇಖಾ ಅವರು. ಇದನ್ನು ಹೇಳಿಕೊಳ್ಲಲು ನನಗೆ ತುಂಬಾ ಖುಷಿ ಆಗುತ್ತೆ. ಮೆಜೆಸ್ಟಿಕ್ ಚಿತ್ರದಲ್ಲಿ ತಂಗಾಳಿ ಮೇಲೆ ಎಂಬ ಸಾಂಗ್ ಇದೆ. ಅದನ್ನು ಮಾಡಬೇಕು ಅಂದಾಗ ಕಮ್ಮಿಅಂದ್ರು ನಾನು 30 ರಿಂದ 40 ಟೇಕ್ ತಗೊಂಡಿದ್ದೆ. ರೀಲ್ ಬೇರೆ ಹೋಗ್ತಾನೆ ಇತ್ತು. ಆದ್ರೂ ನಟಿ ರೇಖಾ ಅವರು ನೀವು ಮಾಡಿ ದರ್ಶನ್ ಆಗುತ್ತೆ, ಏನು ಆಗಲ್ಲಾ ಅಂತ ಧೈರ್ಯ ತುಂಬುತ್ತಿದ್ದರು" ಎಂದಿದ್ದಾರೆ.

ನಟಿ ರೇಖಾ ಮಾಡಿದ ಸಪೋರ್ಟ್ ಬೇರೆ ಯಾರು ಮಾಡಲು ಸಾಧ್ಯವಿಲ್ಲ
ಮಾತು ಮುಂದುವರೆಸಿ ಮಾತನಾಡಿದ ಅವರು "ರೇಖಾ ಅವರು ಆಗ ತುಂಬ ಫೇಮ್ ಪಡೆದುಕೊಂಡಿದ್ರು. ಅದ್ರೆ ಅದು ನನ್ನ ಮೊದಲ ಸಿನಿಮಾ. ಹೀಗಿದ್ರು ಅವರು ನನಗೆ ಮಾಡಿದ ಸಪೋರ್ಟ್ ಬೇರೆ ಯಾವ ನಟಿಯು ಮಾಡಿರಲು ಸಾಧ್ಯವಿಲ್ಲ. ಅದಕ್ಕೆ ಈಗಲೂ ನಾನು ನನ್ನ ಜೊತೆ ಯಾವುದೇ ಹೀರೋಯಿನ್ ಡ್ಯಾನ್ಸ್ ಮಾಡಬೇಕಾದಾರೇ ಸರ್ ನೀವು ಕೂತ್ಕೊಳಿ ನಾನು ಮಾನಿಟರ್ ಮಾಡ್ತೀನಿ ಅಂದರೇ ಬೇಡಮ್ಮ ನಾನು ಮಾಡ್ತೀನಿ, ನೀನು ಡ್ಯಾನ್ಸರ್ ಜೊತೆ ಮಾಡಿದರೇ ನಿನ್ನ ಜೊತೆ ಡ್ಯಾನ್ಸ್ ಮಾಡೊನು ನಾನು ಮತ್ತೆ ತೊಂದ್ರೆ ಆಗುತ್ತೆ ಅಂತ ಹೇಳಿ ನಾನು ಅವರೊಂದಿಗೆ ರಿಹರ್ಸಲ್ ಮಾಡ್ತೀನಿ. ಇದನ್ನ ನಾನು ರೇಖಾ ಅವರಿಂದ ಕಲಿತ್ತಿದ್ದೇನೆ. ಒಟ್ನಲ್ಲಿ ಹೇಳಬೇಕು ಅಂದರೇ ರೇಖಾ ಅವರು ಲಕ್ಕಿಯೆಸ್ಟ್ ಹೀರೋಯಿನ್ ಆಫ್ ಮೈ ಕೆರಿಯರ್ ಎಂದು ದರ್ಶನ್ ಕೈ ಮುಗಿದಿದ್ದಾರೆ.

ನಿರ್ಮಾಪಕ ಎಂ. ಜಿ. ರಾಮಮೂರ್ತಿ ಬಗ್ಗೆಯೂ ಹೆಮ್ಮೆಯ ಮಾತು
ಇನ್ನು ಇದೇ ಕಾರ್ಯಕ್ರಮದಲ್ಲಿ 'ಮೆಜೆಸ್ಟಿಕ್' ಚಿತ್ರದ ನಿರ್ದೇಶಕ ಪಿ.ಎನ್. ಸತ್ಯ ಅವರನ್ನು ನೆನೆದ ದರ್ಶನ್, ಆವತ್ತು ಸತ್ಯ ಅವರು ನೀಡಿದ ಬೆಂಬಲ ಇಂದಿಗೂ ನನ್ನ ಸ್ಯಾಂಡಲ್ ವುಡ್‌ನಲ್ಲಿ ಗಟ್ಟಿಯಾಗಿ ನೆಲೆಯೂರುವಂತೆ ಮಾಡಿದೆ ಎಂದರು. ಹಾಗೇ ತಮ್ಮ ಮೊದಲ ಸಿನಿಮಾಗೆ ಬಂಡವಾಳ ಹೂಡಿದ ನಿರ್ಮಾಪಕ ಎಂ. ಜಿ. ರಾಮಮೂರ್ತಿ ಬಗ್ಗೆಯೂ ಹೆಮ್ಮೆಯ ಮಾತುಗಳನ್ನು ಆಡಿದರು. ಹಾಗೇ ನಿಮ್ಮೆಲ್ಲರ ಮನದಂಗಳಕ್ಕೆ ದಾಸನಾಗಿ ಇಟ್ಟ ಮೊದಲ ಹೆಜ್ಜೆ'' ಮೆಜೆಸ್ಟಿಕ್ ಬಿಡುಗಡೆಯಾಗಿ ಇಂದಿಗೆ ಎರಡು ದಶಕಗಳು ಕಳೆದಿವೆ. ಇಂತ ಒಳ್ಳೆಯ ಬುನಾದಿಯನ್ನು ನೀಡಿ ಚಿತ್ರಕ್ಕೆ ಶ್ರಮಿಸಿದ ನಿರ್ದೇಶಕ, ನಿರ್ಮಾಪಕರು ಹಾಗೂ ಪ್ರತಿಯೊಬ್ಬರಿಗೂ ಹೃದಯಪೂರ್ವಕ ವಂದನೆಗಳು, ನಿಮ್ಮ ಪ್ರೀತಿಗೆ ಸದಾ ಚಿರಋಣಿ ಎಂದಿದ್ದಾರೆ.

‘ಮೆಜೆಸ್ಟಿಕ್’ ಸಿನಿಮಾ ಮತ್ತೊಮ್ಮೆ ಚಿತ್ರ ಮಂದಿರಗಳಲ್ಲಿ ರಾರಾಜಿಸಲಿದೆ
ಎಂ. ಜಿ. ರಾಮಮೂರ್ತಿ ನಿರ್ಮಾಣದ ಪಿ.ಎನ್. ಸತ್ಯ ನಿರ್ದೇಶನದ ಮೆಜೆಸ್ಟಿಕ್ ಚಿತ್ರ 2002ರ ಫೆಬ್ರವರಿ 8 ರಂದು ತೆರೆ ಕಂಡಿತ್ತು. 2 ದಶಕಗಳ ಹಿಂದೆ ಬಿಡುಗಡೆಯಾಗಿ ಗಲ್ಲಾ ಪೆಟ್ಟಿಗೆಯಲ್ಲಿ ಭಾರಿ ಸದ್ದು ಮಾಡಿದ್ದ 'ಮೆಜೆಸ್ಟಿಕ್' ಸಿನಿಮಾವನ್ನು ರೀ ರಿಲೀಸ್ ಮಾಡಲು ನಿರ್ಮಾಪಕ ಎಂ.ಜಿ. ರಾಮಮೂರ್ತಿ ಮುಂದಾಗಿದ್ದಾರೆ. ದರ್ಶನ್ ನಾಯಕನಾಗಿ ಎಂಟ್ರಿ ಕೊಟ್ಟ ಮೊದಲ ಸಿನಿಮಾ 'ಮೆಜೆಸ್ಟಿಕ್' ದೊಡ್ಡ ಹಿಟ್ ಕಂಡಿತ್ತು. ಮಾಸ್ ಲುಕ್‌ನಲ್ಲಿ ದರ್ಶನ್ ಮಿಂಚಿದ್ದರು. ಫೆಬ್ರವರಿ 8ಕ್ಕೆ 'ಮೆಜೆಸ್ಟಿಕ್' ಸಿನಿಮಾ 20 ವರ್ಷ ಪೂರೈಸಿದೆ. ಮತ್ತೊಂದ್ಕಡೆ ಫೆಬ್ರವರಿ 16ರಂದು ದರ್ಶನ್ ಹುಟ್ಟುಹಬ್ಬವಿದ್ದು, ಈ ಬಾರಿ ಡಿ ಬಾಸ್ ಬರ್ತ್‌ಡೇಯನ್ನು ವಿಶಿಷ್ಟವಾಗಿ ಆಚರಿಸಲು ನಿರ್ಧರಿಸಲಾಗಿದೆ. ಈ ಕಾರಣಕ್ಕೆ 'ಮೆಜೆಸ್ಟಿಕ್' ಸಿನಿಮಾ ಮತ್ತೊಮ್ಮೆ ಚಿತ್ರ ಮಂದಿರಗಳಲ್ಲಿ ರಾರಾಜಿಸಲಿದೆ.


Click it and Unblock the Notifications











