For Quick Alerts
  ALLOW NOTIFICATIONS  
  For Daily Alerts

  ಮತ್ತೆ ತಮ್ಮದೇ ಹಳೆಯ ಸಿನಿಮಾ ರೀಮೇಕ್ ಮಾಡಲಿದ್ದಾರೆ ನಿರ್ದೇಶಕ ಧವನ್

  |

  ಹೊಸ ಹೀರೋಗಳನ್ನು ಹಾಕಿಕೊಂಡು ಹಳೆಯ ಹಿಟ್ ಸಿನಿಮಾಗಳನ್ನು ರೀಮೇಕ್ ಮಾಡುವ ಟ್ರೆಂಡ್ ಬಾಲಿವುಡ್‌ನಲ್ಲಿ ಹೆಚ್ಚಾಗುತ್ತಿದೆ.

  ಅಮಿತಾಬ್ ಬಚ್ಚನ್ ನಟನೆಯ ಡಾನ್, ಅಗ್ನಿಪತ್, ಜಂಜೀರ್ ಇನ್ನೂ ಕೆಲವು ಸಿನಿಮಾಗಳನ್ನು ಹೊಸ ಹೀರೋಗಳನ್ನು ಹಾಕಿಕೊಂಡು ಹೊಸರೀತಿಯಲ್ಲಿ ತೆರೆಗೆ ತರಲಾಯಿತು. ಕೆಲವು ಹಿಟ್ ಸಹ ಆಗಿವೆ. ಕೆಲವು ಫ್ಲಾಫ್ ಆದರೆ ಕೆಲವು ಅಟ್ಟರ್ ಫ್ಲಾಫ್ ಆಗಿವೆ.

  ನಿರ್ದೇಶಕ ಡೇವಿಡ್ ಧವನ್ ಸಹ 90 ರ ದಶಕದಲ್ಲಿ ತಾವೇ ನಿರ್ದೇಶಿಸಿದ್ದ ಸಿನಿಮಾವನ್ನು ಮತ್ತೆ ಅದೇ ಹೆಸರಿನಲ್ಲಿ ಹೊಸದಾಗಿ ರೀಮೇಕ್ ಮಾಡಿದ್ದಾರೆ. 1995 ರಲ್ಲಿ ಗೋವಿಂದ ನಟಿಸಿದ್ದ ಕೂಲಿ ನಂ1 ಸಿನಿಮಾವನ್ನು ಈಗ ಹೊಸದಾಗಿ ತಮ್ಮ ಪುತ್ರ ವರುಣ್ ಧವನ್ ಅನ್ನು ನಾಯಕನನ್ನಾಗಿಸಿಕೊಂಡು ಮತ್ತೆ ತೆರೆಗೆ ತಂದಿದ್ದಾರೆ. ಆದರೆ ಸಿನಿಮಾ ಫ್ಲಾಫ್ ಎನಿಸಿಕೊಂಡಿದೆ.

  ಆದರೆ ಈಗ ಮತ್ತೆ ಹೊಸ ಪ್ರಯತ್ನಕ್ಕೆ ಕೈ ಹಾಕಿರುವ ಡೇವಿಡ್ ಧವನ್, ತಾವೇ ನಿರ್ದೇಶಿಸಿದ್ದ 'ಬೀವಿ ನಂ 1' ಸಿನಿಮಾವನ್ನು ಮತ್ತೆ ತೆರೆಗೆ ತರುವ ಸಾಹಸ ಮಾಡುತ್ತಿದ್ದಾರೆ. ಸಲ್ಮಾನ್ -ಕರೀಶ್ಮಾ ನಟನೆಯ ಬೀವಿ ನಂ 1 ಸಿನಿಮಾ 1999 ರಲ್ಲಿ ಬಿಡುಗಡೆ ಆಗಿತ್ತು ಸಿನಿಮಾದಲ್ಲಿ ಅನಿಲ್ ಕಪೂರ್ ಸಹ ನಟಿಸಿದ್ದರು.

  'ಬೀವಿ ನಂ 1' ಸಿನಿಮಾದಲ್ಲಿ ಸಹ ತಮ್ಮ ಪುತ್ರ ವರುಣ್ ಧವನ್ ಅವರನ್ನೇ ನಾಯಕನನ್ನಾಗಿ ಹಾಕಿಕೊಳ್ಳಲಿದ್ದಾರೆ ಡೇವಿಡ್ ಧವನ್. ನಾಯಕಿಯನ್ನಾಗಿ ಯಾರನ್ನು ಆರಿಸಿಕೊಳ್ಳಲಿದ್ದಾರೆ ಎಂಬುದು ಕುತೂಹಲ.

  English summary
  Director David Dhawan will remake his own movie Biwi no 1 again. He remade Cooli no 1 with his son Varun Dhawan and movie failed.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X