ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆ ನೋರಾ ಫತೇಹಿ ಡ್ರಗ್ಸ್ ದಂಧೆ ? ಕೆರಳಿದ ದಂತದ ಗೊಂಬೆ

ಮಾದಕ ವ್ಯಸನ ಕೇವಲ ವ್ಯಕ್ತಿಯನ್ನಷ್ಟೇ ಅಲ್ಲ ಇಡೀ ಸಮಾಜವನ್ನೇ ಹಾಳು ಮಾಡುತ್ತೆ. ಬದಲಾದ ಈ ಕಾಲದಲ್ಲಿ ಶೇಕಡಾ 70 ರಷ್ಟು ಜನ ಯುವ ಜನಾಂಗ ಮಾದಕ ವ್ಯಸನಕ್ಕೆ ದಾಸರಾಗಿದ್ದಾರೆ.ಮಾದಕ ಮಾಯಾಜಾಲದಲ್ಲಿ ಸಿಲುಕಿ ಮಾನಸಿಕವಾಗಿ ದೈಹಿಕವಾಗಿ ನೊಂದು ಬೆಂದು ಹೋಗುವುದಲ್ಲದೇ ಅನೇಕರು ತಮ್ಮ ಬದುಕಿಗೆ ತಾವೇ ತಮ್ಮ ಕೈಯಾರೆ ಕೊಳ್ಳಿ ಇಡುತ್ತಿದ್ದಾರೆ. ಮನೆಯವರ ನೆಮ್ಮದಿಯನ್ನು ಹಾಳು ಮಾಡುತ್ತಿದ್ದಾರೆ.

ಕೇವಲ ಜನಸಾಮಾನ್ಯರು ಮಾತ್ರವಲ್ಲ ಚಿತ್ರರಂಗದಲ್ಲಿ ಬದುಕು ರೂಪಿಸಿಕೊಂಡ ಅನೇಕರು ಈ ಡ್ರಗ್ಸ್‌ ಸುಳಿಯಲ್ಲಿ ಸಿಲುಕಿದ್ದಾರೆ. ಮಾದಕ ಮೆರವಣಿಗೆಯಲ್ಲಿ ತಾವು ಹೆಜ್ಜೆ ಹಾಕುವುದಲ್ಲದೇ ಅಮಾಯಕ ಮುಗ್ದ ಜನರ ದಾರಿಯನ್ನು ಕೂಡ ತಪ್ಪಿಸುತ್ತಿದ್ದಾರೆ. ಈ ಸಾಲಿನಲ್ಲಿ ಬಾಲಿವುಡ್‌ನ ಚೆಲುವೆಯರಾದ ಶ್ರದ್ಧಾ ಕಪೂರ್ ಮತ್ತು ನೋರಾ ಫತೇಹಿ ಇದ್ದಾರೆ ಎನ್ನುವ ಅನುಮಾನ ಸದ್ಯ ಹಲವರಲ್ಲಿದೆ.

DAWOOD NEXUS SHOCKER Nora Fatehi Vows Heavy Price After Name Dragged in Underworld Drug Probe

ಇದಕ್ಕೆ ಪೂರಕವಾಗಿ ದಾವೂದ್ ಇಬ್ರಾಹಿಂಗೆ ಸಂಬಂಧಿಸಿದ 252 ಕೋಟಿ ರೂಪಾಯಿಗಳ ಮಾದಕವಸ್ತು ಕಳ್ಳಸಾಗಣೆ ಜಾಲದಲ್ಲಿ ಈ ಮದನಾರಿಯರ ಹೆಸರು ಕೇಳಿಬಂದಿದೆ. ಶ್ರದ್ಧಾ ಕಪೂರ್ ಅವರ ಸಹೋದರ ಸಿದ್ಧಾಂತ್ ಕಪೂರ್ ಅವರನ್ನೂ ಮಾದಕವಸ್ತು ತನಿಖೆಯಲ್ಲಿ ಹೆಸರಿಸಲಾಗಿದೆ.

ಕೇವಲ ಇವರು ಇಬ್ಬರೇ ಅಲ್ಲ. ಬೇರೆ ಸೆಲೆಬ್ರಿಟಿಗಳಾದ ಓರ್ರಿ.. ನಿರ್ದೇಶಕರಾದ ಅಬ್ಬಾಸ್ ಮಸ್ತಾನ್.. ಬಾಬಾ ಸಿದ್ದಿಕಿ ಅವರ ಪುತ್ರ ಜೀಶನ್ ಸಿದ್ದಿಕಿ..ಹೀಗೆ ಹಲವರಿಗೆ ದಾವೂದ್ ಇಬ್ರಾಹಿಂ ಗ್ಯಾಂಗ್‌ನ ಪ್ರಮುಖನಾಗಿರುವ ಮೊಹಮ್ಮದ್ ಸಲೀಂ ದುಬೈ ಮತ್ತು ಮುಂಬೈನಲ್ಲಿ ಪಾರ್ಟಿಗಳನ್ನು ಆಯೋಜಿಸಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ನೋರಾ ಫತೇಹಿ ಮೌನ ಮುರಿದಿದ್ದು, ಇಲ್ಲ ಸಲ್ಲದ ವಿಚಾರಕ್ಕೆಲ್ಲಾ ನನ್ನ ಹೆಸರು ಥಳಕು ಹಾಕಬೇಡಿ ಎಂದು ಹೇಳಿದ್ದಾರೆ. ಮಾಧ್ಯಮದವರಿಗೆ ಖಡಕ್ ಎಚ್ಚರಿಕೆಯನ್ನು ಕೂಡ ನೀಡಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಇಡೀ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡಿದ್ದಾರೆ.

ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದ ನೋರಾ ಫತೇಹಿ ನಾನು ಯಾವುದೇ ಪಾರ್ಟಿಗಳಿಗೆ ಹೋಗುವುದಿಲ್ಲ ಎಂದು ಹೇಳಿದ್ದಾರೆ. ನನಗೆ ನನ್ನ ಕೆಲಸ ಅಂದರೆ ತುಂಬಾ ಇಷ್ಟ, ನನ್ನ ಪಾಲಿಗೆ ನನ್ನ ಕೆಲಸವೇ ನನಗೆ ನಶೆ ಇದ್ದಂತೆ ಎಂದು ಹೇಳಿರುವ ನೋರಾ ನಾನು ಕೆಲಸದ ಪ್ರಯುಕ್ತ ನಿರಂತರವಾಗಿ ವಿಮಾನಗಳಲ್ಲಿ ಪ್ರಯಾಣ ಮಾಡುತ್ತಿರುತ್ತೇನೆ ಎಂದು ಹೇಳಿದ್ದಾರೆ.

DAWOOD NEXUS SHOCKER Nora Fatehi Vows Heavy Price After Name Dragged in Underworld Drug Probe

ವ್ಯೆಯಕ್ತಿಕ ಬದುಕು ಎನ್ನುವುದೇ ನನಗೆ ಇಲ್ಲ ಹೀಗಿರುವಾಗ ಇಂತಹ ಜನರ ಜೊತೆ ನಾನು ಸಂಬಂಧ ಹೊಂದಲು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿರುವ ನೋರಾ, ಸ್ನೇಹಿತರ ಜೊತೆ ನಾನು ಸಮಯ ಕಳೆಯುತ್ತೇನೆ, ದುಬೈನಲ್ಲಿ ವಿಶ್ರಾಂತಿ ಪಡೆಯುತ್ತೇನೆ, ಕನಸೆಂಬ ಕುದುರೆಯ ಬೆನ್ನೇರಿ ನನ್ನ ಗುರಿ ತಲುಪಲು ಹಗಲು ರಾತ್ರಿ ನಾನು ಕೆಲಸ ಮಾಡುತ್ತೇನೆ ಅಷ್ಟೇ ಎಂದು ಹೇಳಿದ್ದಾರೆ.

ನನಗೆ ಯಾವ ಡ್ರಗ್ಸ್‌ನ ಸಿಂಡಿಕೇಟ್ ಗುಂಪಿನ ಜೊತೆ ಸಂಬಂಧ ಇಲ್ಲ ಎಂದು ಹೇಳಿರುವ ನೋರಾ ಜನರನ್ನು ಸೆಳೆಯಲು ನನ್ನ ಹೆಸರಿನಲ್ಲಿ ಇಲ್ಲ ಸಲ್ಲದ ಶೀರ್ಷಿಕೆಗಳಡಿ ಕಾರ್ಯಕ್ರಮ ಪ್ರಸಾರ ಮಾಡಿದರೆ ಪರಿಣಾಮ ಸರಿ ಇರಲ್ಲ ಎಂದು ಮಾಧ್ಯಮದವರಿಗೆ ಎಚ್ಚರಿಕೆಯನ್ನು ಕೂಡ ನೀಡಿದ್ದಾರೆ.

ಅಂದ್ಹಾಗೇ 2022ರಲ್ಲಿ ಮುಂಬೈ ಕ್ರೈಮ್ ಬ್ರ್ಯಾಂಚ್ ಮುಂಬೈ ಸಮೀಪ 122 ಕೆಜಿ ಎಂಡಿ (ಮೆಫೆಡ್ರೋನ್ ಡ್ರಗ್) ವಶಕ್ಕೆ ಪಡೆದಿತ್ತು. ಇದರ ಬೆಲೆ 252 ಕೋಟಿ ರೂಪಾಯಿ ಎನ್ನಲಾಗಿದೆ. ಈ ಪ್ರಕರಣದ ಬೆನ್ನು ಹತ್ತಿದಾಗ ಸಾಕಷ್ಟು ವಿಚಾರಗಳು, ಸಾಕಷ್ಟು ಸೆಲೆಬ್ರಿಟಿಗಳ ಹೆಸರು ತಳುಕು ಹಾಕಿಕೊಂಡಿತ್ತು.

ಇನ್ನುಳಿದಂತೆ ತನಿಖಾಧಿಕಾರಿಗಳ ಪ್ರಕಾರ, ಮುಂಬೈ ಮತ್ತು ದುಬೈನಲ್ಲಿ ಸಲೀಂ ಸೋಹಿಲ್ ಶೇಖ್ ಪಾರ್ಟಿಗಳನ್ನು ಆಯೋಜನೆ ಮಾಡಿದ್ದ. ಈತ ಪರಾರಿಯಾಗಿರುವ ಕಳ್ಳಸಾಗಣೆದಾರ ಸಲೀಂ ಡೋಲಾ ( ದಾವೂದ್ ಪ್ರಮುಖ ಸಹಚರ )ನ ಆಪ್ತ ಎಂಬ ಸುದ್ದಿ ಇದೆ.

ಇನ್ನು ಪೊಲೀಸ ವರದಿಗಳ ಪ್ರಕಾರ, ಭಾರತದ ಹಲವು ರಾಜ್ಯಗಳಿಗೆ ಮೆಫೆಡ್ರೋನ್ (ಎಂ-ಕ್ಯಾಟ್ ಅಥವಾ ಮಿಯಾಂವ್ ಮಿಯಾಂವ್) ನ್ನು ಪೂರೈಸುತ್ತಿದ್ದ ಸಲೀಂ ಡೋಲಾನ ಮಗ ತಾಹೆರ್‌ ಡೋಲಾನನ್ನು ಆಗಸ್ಟ್‌ನಲ್ಲಿ ಯುಎಇಯಿಂದ ಹಸ್ತಾಂತರಿಸಲಾಗಿತ್ತು. ಇದೇ ಸಮಯದಲ್ಲಿ ತನಿಖಾಧಿಕಾರಿಗಳಿಗೆ ತಾಹೆರ್ ಮಾಹಿತಿಯನ್ನು ನೀಡಿದ್ದು ನೋರಾ ಫತೇಹಿ, ಶ್ರದ್ದಾ ಕಪೂರ್ ಸೇರಿ ಈ ಮಾದಕ ಮಾಯಾಜಾಲದಲ್ಲಿ ಕೇಳಿ ಬಂದ ಉಳಿದ ಸೆಲೆಬ್ರೇಟಿಗಳನ್ನು ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ.

More from Filmibeat

English summary
Actor Nora Fatehi denies all links to the underworld drug nexus, warning the media against dragging her name in the high-profile case. Get the full details of her legal statement.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X