twitter
    For Quick Alerts
    ALLOW NOTIFICATIONS  
    For Daily Alerts

    1995ರಲ್ಲಿ 'DDLJ' ಗಳಿಸಿದ್ದೆಷ್ಟು, ಇಂದಿಗೆ ಅದರ ಮೌಲ್ಯವೆಷ್ಟು? ಕಲೆಕ್ಷನ್ ಕುರಿತು ಬಿಚ್ಚಿಟ್ಟ ನಿರ್ಮಾಪಕ

    |

    ಶಾರೂಖ್ ಖಾನ್ ಮತ್ತು ಕಾಜೋಲ್ ನಟನೆಯ 'ದಿಲ್ವಾಲೆ ದುಲ್ಹನಿಯಾ ಲೇ ಜಾಯೆಂಗೆ' (ಡಿಡಿಎಲ್‌ಜೆ) ಸಿನಿಮಾ ತೆರೆಕಂಡು 25 ವರ್ಷ ಆಗಿದೆ. ಬಾಲಿವುಡ್‌ನ ಎವರ್‌ಗ್ರೀನ್ ಸಿನಿಮಾದ ಸಿಲ್ವರ್ ಜ್ಯೂಬ್ಲಿ ಸಂಭ್ರಮವನ್ನು ದೇಶಾದ್ಯಂತ ಚಿತ್ರಪ್ರೇಮಿಗಳು ಆಚರಿಸುತ್ತಿದ್ದಾರೆ. DDLJ ಸಿನಿಮಾ 25 ವರ್ಷದ ಪೂರೈಸಿದ ಹಿನ್ನೆಲೆ ಅನೇಕ ಸ್ಟಾರ್ ಕಲಾವಿದರು, ನಿರ್ದೇಶಕ, ತಂತ್ರಜ್ಞರು ಸಹ ಸಂತಸ ಹಂಚಿಕೊಂಡಿದ್ದಾರೆ.

    ಮುಂಬೈನ ಮರಾಠ ಮಂದಿರ್‌ನಲ್ಲಿ ಸತತ 20 ವರ್ಷಗಳ ಪ್ರದರ್ಶನ ಕಂಡ ಏಕೈಕ ಚಿತ್ರ ಡಿಡಿಎಲ್‌ಜೆ. ಈ ಸಿನಿಮಾದ ಕೊನೆಯ ಪ್ರದರ್ಶನದ ವೇಳೆಯೂ 210 ಜನ ಪ್ರೇಕ್ಷಕರಿದ್ದರು. ಬಿಟೌನ್ ಇಂಡಸ್ಟ್ರಿಯಲ್ಲಿ ಒಂದು ಮೈಲಿಗಲ್ಲಾಗಿ ಉಳಿದುಕೊಂಡಿರುವ ಡಿಡಿಎಲ್‌ಜೆ ಸಿನಿಮಾದ ಬಂಡವಾಳ, ಗಳಿಕೆ ಹಾಗೂ ಇಂದಿನ ಲೆಕ್ಕಾಚಾರದಲ್ಲಿ ಅದರ ಮೌಲ್ಯ ಎಷ್ಟು ಎಂಬುದರ ಬಗ್ಗೆ ಸ್ವತಃ ಯಶ್ ರಾಜ್ ಫಿಲಂಸ್‌ ಮಾಹಿತಿ ನೀಡಿದೆ. ಮುಂದೆ ಓದಿ...

    ಡಿಡಿಎಲ್‌ಜೆ ಚಿತ್ರಕ್ಕೆ ಬಂಡವಾಳ ಎಷ್ಟು?

    ಡಿಡಿಎಲ್‌ಜೆ ಚಿತ್ರಕ್ಕೆ ಬಂಡವಾಳ ಎಷ್ಟು?

    ಶಾರೂಖ್ ಖಾನ್, ಕಾಜೋಲ್, ಅಂಬರೀಶ್ ಪುರಿ, ಫರೀದ ಜಲಾಲ್, ಅನುಪಮ್ ಖೇರ್ ಸೇರಿದಂತೆ ಬಹುದೊಡ್ಡ ತಾರಬಳಗ ಕಾಣಿಸಿಕೊಂಡಿದ್ದ ಸಿನಿಮಾ 1995 ಅಕ್ಟೋಬರ್ 25 ರಂದು ಬಿಡುಗಡೆಯಾಗಿತ್ತು. ಆದಿತ್ಯ ಚೋಪ್ರಾ ನಿರ್ದೇಶಿಸಿದ್ದ ಈ ಚಿತ್ರವನ್ನು ಯಶ್ ಚೋಪ್ರಾ ನಿರ್ಮಿಸಿದ್ದರು. ಆಗಿನ ಸಮಯದಲ್ಲಿ ಈ ಚಿತ್ರ ತಯಾರಿಸಲು ತಗುಲಿದ ವೆಚ್ಚು ಕೇವಲ 4 ಕೋಟಿ. ಈ ಮಾಹಿತಿಯನ್ನು ಖ್ಯಾತ ವಿಶ್ಲೇಷಕ ತರಣ್ ಆದರ್ಶ್ ಹಂಚಿಕೊಂಡಿದ್ದಾರೆ.

    'DDLJ' ಚಿತ್ರಕ್ಕೆ 25ನೇ ವರ್ಷದ ಸಂಭ್ರಮ: ಲಂಡನ್ ನಲ್ಲಿ ಶಾರುಖ್-ಕಾಜೋಲ್ ಪ್ರತಿಮೆ ಅನಾವರಣ'DDLJ' ಚಿತ್ರಕ್ಕೆ 25ನೇ ವರ್ಷದ ಸಂಭ್ರಮ: ಲಂಡನ್ ನಲ್ಲಿ ಶಾರುಖ್-ಕಾಜೋಲ್ ಪ್ರತಿಮೆ ಅನಾವರಣ

    ಡಿಡಿಎಲ್‌ಜೆ ಗಳಿಕೆ ಎಷ್ಟು?

    ಡಿಡಿಎಲ್‌ಜೆ ಗಳಿಕೆ ಎಷ್ಟು?

    'ದಿಲ್ವಾಲೆ ದುಲ್ಹನಿಯಾ ಲೇ ಜಾಯೆಂಗೆ' ಸಿನಿಮಾ ತೆರೆಕಂಡಾಗ ಭರ್ಜರಿ ಓಪನಿಂಗ್ ಸಿಕ್ಕಿತ್ತು. ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಯಿತು. ಇದರ ಪರಿಣಾಮ ಡಿಡಿಎಲ್‌ಜೆ ಆಗಿನ ಸಮಯದಲ್ಲಿ ಗಳಿಸಿದ್ದು ಬರೋಬ್ಬರಿ 102.5 ಕೋಟಿ. (ಭಾರತದಲ್ಲಿ 89 ಕೋಟಿ ಹಾಗೂ ವಿದೇಶದಲ್ಲಿ 13.5 ಕೋಟಿ ಗಳಿಕೆ).

    ಈಗ ಅದರ ಮೌಲ್ಯವೆಷ್ಟು?

    ಈಗ ಅದರ ಮೌಲ್ಯವೆಷ್ಟು?

    ನಿರ್ಮಾಪಕರು ನೀಡಿರುವ ಮಾಹಿತಿ ಆಧಾರದಲ್ಲಿ ನೋಡುವುದಾದರೆ ಆಗಿನ ಸಮಯಕ್ಕೆ DDLJ ಕಲೆಕ್ಷನ್ ದಾಖಲೆಯಾಗಿತ್ತು. ಆಗಲೇ ನೂರು ಕೋಟಿ ಕ್ಲಬ್‌ ದಾಟಿತ್ತು. ಈಗಿನ ಸಮಯದಕ್ಕೆ ಅದರ ಮೌಲ್ಯ ಎಷ್ಟು ಎಂದು ಅಂದಾಜು ಹಾಕಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ. ಈಗ ಅದರ ಅಂದಾಜು 524 ಕೋಟಿ ಎಂದು ಹೇಳಲಾಗಿದೆ. (ಭಾರತದಲ್ಲಿ 455 ಕೋಟಿ ಹಾಗೂ ವಿದೇಶದಲ್ಲಿ 69 ಕೋಟಿ)

    'DDLJ' ಚಿತ್ರಕ್ಕೆ 25ನೇ ವರ್ಷದ ಸಂಭ್ರಮ: ಹೆಸರು ಬದಲಾಯಿಸಿಕೊಂಡ ಶಾರುಖ್-ಕಾಜೋಲ್'DDLJ' ಚಿತ್ರಕ್ಕೆ 25ನೇ ವರ್ಷದ ಸಂಭ್ರಮ: ಹೆಸರು ಬದಲಾಯಿಸಿಕೊಂಡ ಶಾರುಖ್-ಕಾಜೋಲ್

    Recommended Video

    ಮೈಸೂರಿನಲ್ಲಿ ಬೀಡುಬಿಟ್ಟ ಹರಿಪ್ರಿಯಾ, ನೀನಾಸಂ ಸತೀಶ್ | Filmibeat Kannada
    ಹೆಚ್ಚು ಗಳಿಕೆ ಮಾಡಿದ ಶಾರೂಖ್ ಚಿತ್ರ

    ಹೆಚ್ಚು ಗಳಿಕೆ ಮಾಡಿದ ಶಾರೂಖ್ ಚಿತ್ರ

    ಜಗತ್ತಿನಾದ್ಯಂತ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳ ಪೈಕಿ ಶಾರೂಖ್ ನಟಿಸಿರುವ ಚೆನ್ನೂ ಎಕ್ಸ್‌ಪ್ರೆಸ್‌ ಸಿನಿಮಾ 18ನೇ ಸ್ಥಾನದಲ್ಲಿದೆ. 423 ಕೋಟಿ ಗಳಿಕೆ ಕಂಡಿರುವ ಈ ಚಿತ್ರ ಶಾರೂಖ್ ವೃತ್ತಿ ಜೀವನದಲ್ಲಿ ಮೊದಲ ಸ್ಥಾನದಲ್ಲಿದೆ. ಹಾಗ್ನೋಡಿದ್ರೆ, ಡಿಡಿಎಲ್‌ಜೆ ಸಿನಿಮಾ ಈ ದಾಖಲೆಯನ್ನು ಸಹ ಬ್ರೇಕ್ ಮಾಡಿದೆ.

    English summary
    DDLJ movie celebrates 25th anniversary: here's the Box office data shared by Yash Raj Films. DDLJ Made at a budget of 4 cr. it collected 89 cr in India.
    Wednesday, October 21, 2020, 12:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X