For Quick Alerts
  ALLOW NOTIFICATIONS  
  For Daily Alerts

  ಮುಂಬೈನ ಮರಾಠ ಮಂದಿರದಲ್ಲಿ ಮತ್ತೆ ಡಿಡಿಎಲ್‌ಜೆ ಬಿಡುಗಡೆ

  |

  ಲಾಕ್‌ಡೌನ್ ಬಳಿಕ ಅಕ್ಟೋಬರ್ 15 ರಂದು ದೇಶಾದ್ಯಂತ ಚಿತ್ರಮಂದಿರ ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿತ್ತು. ಆದರೆ, ಕೆಲವು ರಾಜ್ಯಗಳು ಅಕ್ಟೋಬರ್ 15 ರಿಂದ ಪ್ರದರ್ಶನ ಆರಂಭಿಸಿಲ್ಲ. ಇದರಲ್ಲಿ ಮಹಾರಾಷ್ಟ್ರ ರಾಜ್ಯ ಸಹ ಸೇರಿತ್ತು.

  ಇದೀಗ, ನವೆಂಬರ್ 5 ರಿಂದ ಮಹಾರಾಷ್ಟ್ರದಲ್ಲಿ ಚಿತ್ರಮಂದಿರಗಳು ಕಾರ್ಯನಿರ್ವಹಿಸಲು ಅನುಮತಿ ಸಿಕ್ಕಿವೆ. ಈ ಹಿನ್ನೆಲೆ ಮುಂಬೈ ಐತಿಹಾಸಿಕ ಚಿತ್ರಮಂದಿರ ಮರಾಠದಲ್ಲಿ ಮೊದಲ ದಿನ ಡಿಡಿಎಲ್ ಜೆ ಸಿನಿಮಾ ಪ್ರದರ್ಶನವಾಗಲಿದೆ.

  ಮಹಾರಾಷ್ಟ್ರ: ಕೊನೆಗೂ ಚಿತ್ರಮಂದಿರಗಳು ತೆರೆಯಲು ಸಿಕ್ತು ಅನುಮತಿ

  ಬಾಲಿವುಡ್ ಖ್ಯಾತ ವಿಶ್ಲೇಶಕ ತರಣ್ ಆದರ್ಶ್ ಟ್ವೀಟ್ ಮಾಡಿರುವ ಪ್ರಕಾರ, ಶುಕ್ರವಾರದಿಂದ ಮರಾಠ ಮಂದಿರದಲ್ಲಿ ಶಾರೂಖ್ ಮತ್ತು ಕಾಜೋಲ್ ನಟಿಸಿದ್ದ ಸೂಪರ್ ಹಿಟ್ ಚಿತ್ರ 'ಡಿಡಿಎಲ್ ಜೆ' ಮರು ಪ್ರದರ್ಶನವಾಗಲಿದೆ.

  1995ರಲ್ಲಿ ತೆರೆಕಂಡಿದ್ದ ಡಿಡಿಎಲ್ ಜೆ ಸಿನಿಮಾವನ್ನು ಮರಾಠ ಮಂದಿರ ಸುಮಾರು 20 ವರ್ಷ ಸತತವಾಗಿ ಪ್ರದರ್ಶನ ಮಾಡಿದೆ. ಈ ಸಿನಿಮಾದ ಕೊನೆಯ ಪ್ರದರ್ಶನದ ವೇಳೆಯೂ 210 ಜನ ಪ್ರೇಕ್ಷಕರಿದ್ದರು. ಅಂದ್ಹಾಗೆ, ಅಕ್ಟೋಬರ್ 20 ರಂದು ಡಿಡಿಎಲ್ ಜೆ ಚಿತ್ರ ಬಿಡುಗಡೆಯಾಗಿ 25 ವರ್ಷ ಪೂರೈಸಿತ್ತು.

  1995ರಲ್ಲಿ 'DDLJ' ಗಳಿಸಿದ್ದೆಷ್ಟು, ಇಂದಿಗೆ ಅದರ ಮೌಲ್ಯವೆಷ್ಟು? ಕಲೆಕ್ಷನ್ ಕುರಿತು ಬಿಚ್ಚಿಟ್ಟ ನಿರ್ಮಾಪಕ

  ಡಿಡಿಎಲ್ ಜೆ ಬಜೆಟ್ ಮತ್ತು ಗಳಿಕೆ

  4 ಕೋಟಿ ತಯಾರಾಗಿದ್ದ 'ದಿಲ್ವಾಲೆ ದುಲ್ಹನಿಯಾ ಲೇ ಜಾಯೆಂಗೆ' ಸಿನಿಮಾ ಆಗಿನ ಸಮಯದಲ್ಲಿ ಗಳಿಸಿದ್ದು ಬರೋಬ್ಬರಿ 102.5 ಕೋಟಿ. (ಭಾರತದಲ್ಲಿ 89 ಕೋಟಿ ಹಾಗೂ ವಿದೇಶದಲ್ಲಿ 13.5 ಕೋಟಿ ಗಳಿಕೆ).

  English summary
  As theatres reopen in Maharashtra, Aditya Chopra’s iconic film DDLJ will start playing at Maratha Mandir [Mumbai] again from today.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X