For Quick Alerts
  ALLOW NOTIFICATIONS  
  For Daily Alerts

  'ಡೆತ್ ಇನ್ ಬಾಲಿವುಡ್': ಜಿಯಾ ಖಾನ್ ನಿಗೂಢ ಸಾವಿನ ರಹಸ್ಯ ಬಿಚ್ಚಿಟ್ಟಿದೆಯಾ ಡಾಕ್ಯುಮೆಂಟರಿ?

  |

  ಬಾಲಿವುಡ್ ನ ಉದಯೋನ್ಮಕ ನಟಿ, ಕೆಲವೇ ಕೆಲವು ಸಿನಿಮಾಗಳ ಮೂಲಕ ಭಾರತೀಯ ಸಿನಿಪ್ರೇಕ್ಷಕರ ಹೃದಯ ಕದ್ದ ಸುಂದರಿ ಜಿಯಾ ಖಾನ್ ಅವರ ನಿಗೂಢ ಸಾವು ಇಂದಿಗೂ ಚರ್ಚೆಯಲ್ಲಿದೆ. ಜಿಯಾ ಖಾನ್ ನಿಧನರಾಗಿ 8 ವರ್ಷಗಳೇ ಕಳೆದಿವೆ. ಆದರೆ ಅವರದ್ದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎನ್ನುವ ಚರ್ಚೆ ಚಾಲ್ತಿಯಲ್ಲಿದೆ. ಈ ಬಗ್ಗೆ ಪ್ರತಿಷ್ಠಿತ ಬಿಬಿಸಿ ವಾಹಿನಿ ಸಾಕ್ಷ್ಯಚಿತ್ರ ತಯಾರಿಸಿದೆ.

  'ಡೆತ್ ಇನ್ ಬಾಲಿವುಡ್' ಹೆಸರಿನಲ್ಲಿ ನಿರ್ಮಾಣವಾಗಿರುವ ಜಿಯಾ ಖಾನ್ ಸಾಕ್ಷ್ಯ ಚಿತ್ರ ಭಾರತೀಯರ ಗಮನ ಸೆಳೆಯುತ್ತಿದೆ. ಈ ಸಾಕ್ಷ್ಯ ಚಿತ್ರದಲ್ಲಿ ಹಲವು ರಹಸ್ಯಗಳ ಬಗ್ಗೆ ಪ್ರಶ್ನೆ ಮಾಡಲಾಗಿದೆ. ಈ ಸಾಕ್ಷ್ಯಚಿತ್ರ ಸದ್ಯ ಭಾರತದಲ್ಲಿ ರಿಲೀಸ್ ಆಗಿಲ್ಲ. ಬ್ರಿಟನ್ ನಲ್ಲಿ ಮಾತ್ರ ರಿಲೀಸ್ ಆಗಿದ್ದು, ಈಗಾಗಲೇ ಸಾಕಷ್ಟು ವೀಕ್ಷಣೆ ಕಂಡಿದೆ. ಮುಂದೆ ಓದಿ..

  ಬಾಲಿವುಡ್ ವಿರುದ್ಧ ನೆಟ್ಟಿಗರ ಅಸಮಾಧಾನ

  ಬಾಲಿವುಡ್ ವಿರುದ್ಧ ನೆಟ್ಟಿಗರ ಅಸಮಾಧಾನ

  ಮೂರು ಎಪಿಸೋಡ್ ಗಳಲ್ಲಿ ಸಾಕ್ಷ್ಯಚಿತ್ರ ನಿರ್ಮಿಸಲಾಗಿದೆ. ಈ ಸಾಕ್ಷ್ಯಚಿತ್ರ ನೋಡಿ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅನೇಕರು ಬಾಲಿವುಡ್ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ. ಜಿಯಾ ಖಾನ್ ಅವರ ರೂಮರ್ ಬಾಯ್ ಫ್ರೆಂಡ್ ಸೂರಜ್ ಪಾಂಚೋಲಿ ವಿರುದ್ಧ ಸಹ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

  ಬಾಲಿವುಡ್ ಮೇಲ್ನೋಟಕ್ಕೆ ಗ್ಲಾಮರ್ ಆಗಿ ಕಾಣುತ್ತೆ

  ಬಾಲಿವುಡ್ ಮೇಲ್ನೋಟಕ್ಕೆ ಗ್ಲಾಮರ್ ಆಗಿ ಕಾಣುತ್ತೆ

  'ಬಿಬಿಸಿಯಲ್ಲಿ ಡೆತ್ ಇನ್ ಬಾಲಿವುಡ್ ನೋಡಿದೆ. ಜಿಯಾ ಖಾನ್ ಮತ್ತು ಅವರ ಕುಟುಂಬ ನೋಡಿ ನನ್ನ ಹೃದಯ ಛಿದ್ರವಾಯಿತು. ಬಾಲಿವುಡ್ ಮೇಲ್ನೋಟಕ್ಕೆ ಗ್ಲಾಮರ್ ಆಗಿ ಕಾಣುತ್ತೆ. ಆದರೆ ಒಳಗೆ ಕೊಳೆತು ನಾರುತ್ತಿದೆ' ಎಂದು ನೆಟ್ಟಿಗರು ಪ್ರತಿಕ್ರಿಯೆ ನೀಡುತ್ತಿದ್ದಾರೆ.

  ಸುಶಾಂತ್ ಸಿಂಗ್ ಪ್ರಕರಣಕ್ಕೆ ಕನ್ನಡಿ ಹಿಡಿದ ಹಾಗಿದೆ

  ಸುಶಾಂತ್ ಸಿಂಗ್ ಪ್ರಕರಣಕ್ಕೆ ಕನ್ನಡಿ ಹಿಡಿದ ಹಾಗಿದೆ

  'ಓ ಗಾಡ್.. ಈ ಪ್ರಕರಣ ಸುಶಾಂತ್ ಸಿಂಗ್ ಪ್ರಕರಣಕ್ಕೆ ಕನ್ನಡಿ ಹಿಡಿದ ಹಾಗಿದೆ. ಇದು ಬಾಲಿವುಡ್ ನ ಕೆಟ್ಟ ಅಂಶದ ಬಗ್ಗೆ ಅನೇಕ ಜನರಿಗೆ ದರ್ಶನ ಮಾಡಿಸುತ್ತೆ' ಎಂದು ಭಾವಿಸಿದ್ದೇನೆ ಎಂದಿದ್ದಾರೆ.

  ನನ್ನ ಹೃದಯ ಛಿದ್ರವಾಯಿತು

  ನನ್ನ ಹೃದಯ ಛಿದ್ರವಾಯಿತು

  'ಜಿಯಾ ಖಾನ್ ಮತ್ತು ಅವರ ಕುಟುಂಬ ನೋಡಿ ನನ್ನ ಹೃದಯ ಛಿದ್ರವಾಯಿತು. ಜಿಯಾ ಖಾನ್ ಮೊದಲ ಸಿನಿಮಾ ಮಾಡುವಾಗ ಕೇವಲ 16 ವರ್ಷ. ಎಷ್ಟು ಗ್ಲಾಮರಸ್ ಆಗಿದ್ದ. ಅವರ ಕಾಣೆಯಾದ ಟ್ರ್ಯಾಕ್ ಸೂಟ್ ಮತ್ತು ಫೋನ್ ಭಯಾನಕವಾಗಿದೆ' ಎಂದಿದ್ದಾರೆ.

  2013ರಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಜಿಯಾ

  2013ರಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಜಿಯಾ

  ನಟಿ ಜಿಯಾ ಖಾನ್ ಚಿಕ್ಕ ವಯಸ್ಸಿನಲ್ಲೇ ಬಣ್ಣದ ಲೋಕದ ಪಯಣ ಶುರು ಮಾಡಿದವರು. ನಿಶಬ್ದ್, ಗಜಿನಿ ಮತ್ತು ಹೌಸ್ ಫುಲ್ ಸಿನಿಮಾಗಳಲ್ಲಿ ನಟಿಸಿದ್ದ ಜಿಯಾ ಇನ್ನು ಕೆಲವು ಸಿನಿಮಾಗಳ ತಯಾರಿಯಲ್ಲಿದ್ದರು. ಆದರೆ 2013 ಜೂನ್ 3ರಂದು ಜಿಯಾ ಖಾನ್ ಮುಂಬೈನ ಜುಹು ಅಪಾರ್ಟ್ ಮೆಂಟ್ ನಲ್ಲಿ ಶವವಾಗಿ ಪತ್ತೆಯಾಗಿ ಆಘಾತವುಂಟು ಮಾಡಿದ್ದರು.

  ಜಿಯಾ ಅವರದ್ದು ಕೊಲೆ ಎನ್ನುತ್ತಿರುವ ಕುಟುಂಬ

  ಜಿಯಾ ಅವರದ್ದು ಕೊಲೆ ಎನ್ನುತ್ತಿರುವ ಕುಟುಂಬ

  ಸಾವಿನ ತನಿಖೆ ಮಾಡಿದ ಸಿಬಿಐ ಇದು ಆತ್ಮಹತ್ಯೆ ಎಂದು ಅಂತಿಮ ವರದಿ ಸಲ್ಲಿಸಿತು. ಆದರೆ ಜಿಯಾ ಖಾನ್ ಅವರದ್ದು ಆತ್ಮಹತ್ಯೆ ಅಲ್ಲ ಎಂದು ಅವರ ಕುಟುಂಬ ಮತ್ತು ತಾಯಿ ವಾದಿಸುತ್ತಲೇ ಬರುತ್ತಿದ್ದಾರೆ. ಇಂದಿಗೂ ನಿಗೂಢವಾಗಿರುವ ಜಿಯಾ ಖಾನ್ ಸಾವಿನ ಬಗ್ಗೆ ಬಿಬಿಸಿ ನಿರ್ಮಿಸಿರುವ ಸಾಕ್ಷ್ಯ ಚಿತ್ರದಲ್ಲಿ ಸಿಬಿಐ ತನಿಖೆಯ ಅನೇಕ ಲೋಪಗಳನ್ನು ಎತ್ತಿ ತೋರಿಸಲಾಗಿದೆ ಎನ್ನಲಾಗುತ್ತಿದೆ.

  English summary
  BBC Documentary on Jiah Khan death, Netizens heartbroken after watching Jiah Khan's documentary.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X