ತಮನ್ನಾ ನೋಡಿ ಊರ್ವಶಿಗೆ ಹೊಟ್ಟೆಕಿಚ್ಚು? ಆ ಪೋಸ್ಟ್ ಡಿಲೀಟ್ ಮಾಡಿದ್ದೇಕೆ?

ಸಿನಿಮಾ ನಟ-ನಟಿಯರ ನಡುವೆ ಪೈಪೋಟಿ ಸರ್ವೇಸಾಮಾನ್ಯ. ಕೆಲವರು ಇದನ್ನು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಚಿತ್ರರಂಗ ಅಂದಮೇಲೆ ಸ್ಟಾರ್ ವಾರ್ ಇಲ್ಲದೇ ಇದ್ದರೆ ಏನ್ ಮಜಾ ಇರುತ್ತೆ ಎಂದು ಸ್ವತಃ ಉಪೇಂದ್ರ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಸದ್ಯ ತಮನ್ನಾ ಹಾಗೂ ಊವರ್ಶಿ ರೌಟೇಲಾ ನಡುವೆ ಪೈಪೋಟಿ ಎನ್ನುವ ಚರ್ಚೆ ಶುರುವಾಗಿದೆ.

ಬಾಲಿವುಡ್ ನಟಿಯರಾದ ತಮನ್ನಾ ಹಾಗೂ ಊರ್ವಶಿ ರೌಟೇಲಾ ಇತ್ತೀಚೆಗೆ ಐಟಂ ಸಾಂಗ್‌ಗಳಲ್ಲಿ ಹೆಚ್ಚು ಹೆಜ್ಜೆ ಹಾಕುತ್ತಿದ್ದಾರೆ. ಅದಕ್ಕಾಗಿ ಭಾರೀ ಮೊತ್ತದ ಸಂಭಾವನೆಯನ್ನು ಇಬ್ಬರೂ ಪಡೆದಿದ್ದಾರೆ. ಊರ್ವಶಿ ಕನ್ನಡದ 'ಮಿ. ಐರಾವತ' ಚಿತ್ರದಲ್ಲಿ ನಾಯಕಿ ಆಗಿಯೂ ನಟಿಸಿದ್ದರು. ಆದರೆ ಆಕೆಗೆ ನಾಯಕಿಯಾಗಿ ಹೆಚ್ಚು ಅವಕಾಶಗಳು ಸಿಗಲಿಲ್ಲ. ಗ್ಲಾಮರ್ ಗೊಂಬೆಯಂತೆ ಸಿನಿಮಾಗಳಲ್ಲಿ ಮಿಂಚುತ್ತಾ ಬರುತ್ತಿದ್ದಾರೆ.

Debate Erupts as Urvashi Rautela Compares Her Song Touch Kiya with Tamannaah s Nasha

ತಮನ್ನಾ ಭಾಟಿಯಾ ಕೂಡ ಇತ್ತೀಚೆಗೆ ಸ್ಪೆಷಲ್ ಸಾಂಗ್‌ಗಳ ಕಡೆ ಹೆಚ್ಚು ಗಮನ ಹರಿಸಿದ್ದಾರೆ. ಬಿಂದಾಸ್ ಡ್ಯಾನ್ಸ್ ನಂಬರ್‌ಗಳಿಗೆ ಹೆಜ್ಜೆ ಹಾಕಿ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. 'ರೈಡ್‌-2' ಚಿತ್ರದ 'ನಶಾ' ಎಂಬ ಹಾಡಿಗೆ ತಮನ್ನಾ ಡ್ಯಾನ್ಸ್ ಮಾಡಿದ್ದಾರೆ. ಇತ್ತೀಚೆಗೆ ಸಾಂಗ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಮಿಲ್ಕಿ ಬ್ಯೂಟಿ ಮಾದಕ ಸ್ಟೆಪ್ಸ್ ನೋಡಿ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ.

'ನಶಾ' ಸಾಂಗ್ ಬೆನ್ನಲ್ಲೇ ಊವರ್ಶಿ ಹೆಜ್ಜೆ ಹಾಕಿರುವ 'ಜಾಟ್' ಚಿತ್ರದ 'ಸ್ವಾರಿ ಬೋಲ್' ಸಾಂಗ್ ಕೂಡ ಹೊರ ಬಂದಿದೆ. ಸದ್ಯ ಎರಡೂ ಹಾಡುಗಳು ನಡುವೆ ಹೋಲಿಕೆ ಶುರುವಾಗಿದೆ. ಯಾವ ಸಾಂಗ್ ಯಾವುದು ಚೆನ್ನಾಗಿದೆ. ಯಾರು ಚೆನ್ನಾಗಿ ಹೆಜ್ಜೆ ಹಾಕಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆ ನಡೀತಿದೆ.

Debate Erupts as Urvashi Rautela Compares Her Song Touch Kiya with Tamannaah s Nasha

ಸಾಕಷ್ಟು ಜನ ತಮನ್ನಾ 'ನಶಾ' ಮೋಡಿಗೆ ಫಿದಾ ಆಗಿದ್ದಾರೆ. ಆದರೆ ಹಾಡು ಕೇಳಲು ಅಷ್ಟೇನು ಮಜವಾಗಿಲ್ಲ. 'ಸ್ವಾರಿ ಬೋಲ್' ಸಾಂಗ್ ಕೂಡ ಊರ್ವಶಿ ಅಭಿಮಾನಿಗಳ ಮನಗೆದ್ದಿದೆ. ಕೇಳೋಕು ಸಖತ್ ಮಜವಾಗಿದೆ. ಈಗಾಗಲೇ 'ಜಾಟ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡ್ತಿದೆ. ತೆರೆಮೇಲೆ ಈ ಡ್ಯಾನ್ಸಿಂಗ್ ನಂಬರ್ ನೋಡಿದವರು ಇದೀಗ ಯೂಟ್ಯೂಬ್‌ನಲ್ಲಿ ನೋಡಿ ಎಂಜಾಯ್ ಮಾಡುತ್ತಿದ್ದಾರೆ.

ಸದ್ಯ ಅಭಿಮಾನಿಯೊಬ್ಬರು ಮಾಡಿದ್ದ ಕಾಮೆಂಟ್ ಅನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಊರ್ವಶಿ ರೌಟೇಲಾ ಹಂಚಿಕೊಂಡಿದ್ದರು. ಬಳಿಕ ತಪ್ಪಿನ ಅರಿವಾಗಿ ಅದನ್ನು ಡಿಲೀಟ್ ಮಾಡಿದ್ದಾರೆ. ಆದರೆ ಅಷ್ಟರಲ್ಲೇ ಅದರ ಸ್ಕ್ರೀನ್‌ಶಾಟ್ ವೈರಲ್ ಆಗಿತ್ತು. ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿ "ಸ್ವಾರಿ ಬೋಲ್ ಸಾಂಗ್ ತಮನ್ನಾಳ ನಶಾ ಸಾಂಗ್‌ಗಿಂತ ಬಹಳ ಚೆನ್ನಾಗಿದೆ" ಎಂದು ಬರೆದುಕೊಂಡಿದ್ದರು. ಅದರ ಸ್ಕ್ರೀನ್‌ಶಾಟ್ ಅನ್ನು ಊವರ್ಶಿ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಾಕಿದ್ದರು.

ಅಭಿಮಾನಿಗಳು ಹೀಗೆ ನಟಿಯರು ಅಥವಾ ನಟರ ನಡುವೆ ಹೋಲಿಕೆ ಮಾಡಿ ಕಾಮೆಂಟ್ ಮಾಡುವುದು ಸರ್ವೇ ಸಾಧಾರಣ. ಆದರೆ ಅದನ್ನು ನಟಿ ಹೀಗೆ ಸ್ಕ್ರೀನ್‌ ಶಾಟ್ ತೆಗೆದು ಹಂಚಿಕೊಳ್ಳುವುದು ಬೇಕಿರಲಿಲ್ಲ. ಇದು ಪರೋಕ್ಷವಾಗಿ ಟಾಂಗ್ ಕೊಟ್ಟಂತೆ ಆಗುತ್ತದೆ ಎನ್ನುವ ಚರ್ಚೆ ಶುರುವಾಗಿತ್ತು. ಅಷ್ಟರಲ್ಲೇ ಊರ್ವಶಿ ಆ ಪೋಸ್ಟ್ ಡಿಲೀಟ್ ಮಾಡಿದ್ದರು. ಆಕೆಗೆ ತಮನ್ನಾ ಕ್ರೇಜ್ ನೋಡಿ ಹೊಟ್ಟೆಉರಿ ಅದಕ್ಕೆ ಹೀಗೆ ಪೋಸ್ಟ್ ಮಾಡಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ.

ಊರ್ವಶಿ ರೌಟೇಲಾ ಹೀಗೆ ಪೋಸ್ಟ್ ಮಾಡಿ ಎಡವಟ್ಟು ಮಾಡಿಕೊಂಡು ಬಳಿಕ ಡಿಲೀಟ್ ಮಾಡೋದು ಹೊಸದೇನು ಅಲ್ಲ. ಈ ಹಿಂದೆ 'ಡಾಕು ಮಹರಾಜ್' ಚಿತ್ರದ ಹಾಡೊಂದಕ್ಕೆ ಆಕೆ ಡ್ಯಾನ್ಸ್ ಮಾಡಿದ್ದರು. ಅದನ್ನು ಟೀಕಿಸಿ ಒಂದಷ್ಟು ಮೀಮ್ಸ್ ವೈರಲ್ ಆಗಿತ್ತು. ತೆಲುಗು ಅರ್ಥವಾಗದೇ ಅದನ್ನು ಹೊಗಳಿಕೆ ಎಂದುಕೊಂಡು ಊರ್ವಶಿ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಹಾಕಿಕೊಂಡಿದ್ದರು. ಬಳಿಕ ಯಾರೋ ತಿಳಿ ಹೇಳಿದ ಮೇಲೆ ಅದನ್ನು ತೆಗೆದು ಹಾಕಿದ್ದರು. ಶಾರುಖ್ ಖಾನ್ ಬಳಿಕ ಬಾಲಿವುಡ್‌ನಲ್ಲಿ ಬೆಸ್ಟ್ ಪ್ರಮೊಟರ್ ನಾನೇ ಎಂದು ಹೇಳಿ ಊರ್ವಶಿ ಇತ್ತೀಚೆಗೆ ಗಮನ ಸೆಳೆಯುವ ಪ್ರಯತ್ನ ಮಾಡಿದ್ದರು.

More from Filmibeat

English summary
Urvashi Rautela's Remarks Comparing 'Touch Kiya' and Tamannaah's 'Nasha' Spark Online Buzz;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X