»   » ಆಸ್ತಿಯನ್ನೆಲ್ಲ ಸ್ಟಾರ್ ನಟನ ಹೆಸರಿಗೆ ಬರೆದು ಸತ್ತ ಅಭಿಮಾನಿ! ಫ್ಯಾನ್ಸ್ ಹೀಗೂ ಇರ್ತಾರಾ?

ಆಸ್ತಿಯನ್ನೆಲ್ಲ ಸ್ಟಾರ್ ನಟನ ಹೆಸರಿಗೆ ಬರೆದು ಸತ್ತ ಅಭಿಮಾನಿ! ಫ್ಯಾನ್ಸ್ ಹೀಗೂ ಇರ್ತಾರಾ?

Posted By:
Subscribe to Filmibeat Kannada

ತಾರೆಯರ ಮುಂದೆ ಅಭಿಮಾನಿಗಳು ತಮ್ಮ ಅಭಿಮಾನ ಮೆರೆಯಲು ಏನೇನೆಲ್ಲಾ ಮಾಡಬಹುದು.? ಮೆಚ್ಚಿನ ನಟನ ಚಿತ್ರವನ್ನ ಫಸ್ಟ್ ಡೇ ಫಸ್ಟ್ ಶೋ ನೋಡಬಹುದು, ಸೆಲೆಬ್ರಿಟಿಗಳ ಹುಟ್ಟುಹಬ್ಬವನ್ನ ಧಾಂ ಧೂಂ ಆಗಿ ಆಚರಿಸಬಹುದು, ಸ್ಟಾರ್ ನಟರ ಭಾವಚಿತ್ರ ಅಥವಾ ಹೆಸರಿನ ಟಾಟ್ಯೂ ಹಾಕಿಸಿಕೊಳ್ಳಬಹುದು, ಉಡುಗೊರೆ ನೀಡಬಹುದು, ಮನೆ ತುಂಬಾ ಇಷ್ಟದ ನಟ-ನಟಿಯರ ಫೋಟೋ ಹಾಕಿಕೊಳ್ಳಬಹುದು, ಹೆಚ್ಚೆಂದರೆ ತಾರೆಯರ ಸ್ಟೈಲ್ ಫಾಲೋ ಮಾಡಬಹುದು, ಎಲ್ಲದಕ್ಕಿಂತ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಮಕ್ಕಳಿಗೆ ನೆಚ್ಚಿನ ಕಲಾವಿದರ ಹೆಸರು ಇಡಬಹುದು. ಇವೆಲ್ಲವನ್ನು ಬಿಟ್ಟು ಇನ್ನೇನು ಮಾಡಲು ಸಾಧ್ಯ.?

ಸಾಯುವ ಮುನ್ನ ನೆಚ್ಚಿನ ಹೀರೋ ಹೆಸರಿಗೆ ಅಭಿಮಾನಿಯೊಬ್ಬರು ತಮ್ಮ ಆಸ್ತಿ-ಹಣವನ್ನೆಲ್ಲಾ ಬರೆದು ವಿಲ್ ಮಾಡಿದ್ದಾರೆ ಅಂದ್ರೆ ನೀವು ನಂಬ್ತೀರಾ.? ನೀವು ನಂಬಿದ್ರೂ, ಬಿಟ್ಟರೂ.. ಇದೇ ಸತ್ಯ ಸ್ವಾಮಿ.

ಕೋಟ್ಯಾಂತರ ರೂಪಾಯಿ ಆಸ್ತಿ ಹಾಗೂ ಹಣವನ್ನ ಸ್ಟಾರ್ ನಟರೊಬ್ಬರ ಹೆಸರಿಗೆ ವಿಲ್ ಮಾಡಿದ್ದಾರೆ ಅಭಿಮಾನಿಯೊಬ್ಬರು. ಇದಕ್ಕೆ ಅಭಿಮಾನದ ಪರಾಕಾಷ್ಟೆ ಅಂತ ಕಣ್ಣು ಬಾಯಿ ಬಿಡ್ತೀರೋ, ಸ್ಟಾರ್ ಮೇನಿಯಾ ಅಂತ ತಲೆ ಚಚ್ಚಿಕೊಳ್ತೀರೋ, ನಿಮಗೆ ಬಿಟ್ಟಿದ್ದು. ಅದಕ್ಕೂ ಮುನ್ನ ಪೂರ ಮ್ಯಾಟರ್ ಓದ್ಕೊಂಡ್ ಬನ್ನಿ....

ಯಾರು 'ಆ' ಸ್ಟಾರ್ ನಟ.?

ಅಷ್ಟಕ್ಕೂ, ಅಭಿಮಾನಿಯೊಬ್ಬರು ಯಾವ ಸ್ಟಾರ್ ನಟನ ಹೆಸರಿಗೆ ತಮ್ಮ ಆಸ್ತಿಯನ್ನೆಲ್ಲಾ ವಿಲ್ ಮಾಡಿದ್ದಾರೆ ಗೊತ್ತಾ.? ಅವರು ಬೇರೆ ಯಾರೂ ಅಲ್ಲ. ಒಂದ್ಕಾಲದ 'ಖಳನಾಯಕ್' ಬಾಲಿವುಡ್ ನಟ ಸಂಜಯ್ ದತ್.

ಬಾಲಿವುಡ್ 'ಖಳನಾಯಕ್' ಕನ್ನಡಕ್ಕೆ ಬರ್ತಾರ.?

ಯಾರು 'ಆ' ಸಂಜಯ್ ದತ್ ಅಭಿಮಾನಿ.?

ಸಂಜಯ್ ದತ್ ಹೆಸರಿಗೆ ವಿಲ್ ಮಾಡಿರುವಾಕೆ, ಮಲಬಾರ್ ಹಿಲ್ ನಿವಾಸಿ ನಿಶಿ ಹರಿಶ್ಚಂದ್ರ ತ್ರಿಪಾಠಿ ಎಂಬ 62 ವರ್ಷದ ವೃದ್ಧೆ.

ಸಂಜಯ್ ದತ್ ಅವರ ರೊಮ್ಯಾಂಟಿಕ್ ಫೋಟೋ ವೈರಲ್.!

ಜನವರಿಯಲ್ಲಿ ಮೃತಪಟ್ಟಿದ್ದ ನಿಶಿ

ಜನವರಿ 15 ರಂದು ಅನಾರೋಗ್ಯದಿಂದಾಗಿ ನಿಶಿ ಹರಿಶ್ಚಂದ್ರ ತ್ರಿಪಾಠಿ ಕೊನೆಯುಸಿರೆಳೆದರು. 80 ವರ್ಷದ ತಮ್ಮ ತಾಯಿ ಶಾಂತಿ, ಸಹೋದರರಾದ ಅರುಣ್, ಆಶೀಶ್ ಹಾಗೂ ಮಧು ಜೊತೆಗೆ ಮಲಬಾರ್ ಹಿಲ್ ನಲ್ಲಿರುವ ತ್ರಿವೇಣಿ ಅಪಾರ್ಟ್ ಮೆಂಟ್ ನಲ್ಲಿ ನಿಶಿ ಹರಿಶ್ಚಂದ್ರ ತ್ರಿಪಾಠಿ ನೆಲೆಸಿದ್ದರು.

ಸಂಜಯ್ ದತ್ ಜೀವನಾಧಾರಿತ ಚಿತ್ರದಲ್ಲಿ ಅನುಷ್ಕಾ ಶರ್ಮಾ

ಫ್ಲ್ಯಾಟ್ ಮೌಲ್ಯ ಹತ್ತು ಕೋಟಿ!

ನಿಶಿ ನೆಲೆಸಿದ್ದ ಮಲಬಾರ್ ಹಿಲ್ ನ ತ್ರಿವೇಣಿ ಅಪಾರ್ಟ್ ಮೆಂಟ್ ನ 3 ಬಿ.ಎಚ್.ಕೆ ಫ್ಲ್ಯಾಟ್ ಒಂದರ ಮೌಲ್ಯವೇ ಸುಮಾರು ಹತ್ತು ಕೋಟಿ ರೂಪಾಯಿಯಂತೆ!

ಸಂಜಯ್ ದತ್ ಅಂದ್ರೆ ಪಂಚಪ್ರಾಣ

ಸಂಜಯ್ ದತ್ ಅಂದ್ರೆ ನಿಶಿ ಹರಿಶ್ಚಂದ್ರ ತ್ರಿಪಾಠಿಗೆ ಪಂಚಪ್ರಾಣ. ಸಂಜಯ್ ದತ್ ಸಿನಿಮಾಗಳನ್ನೆಲ್ಲ ತಪ್ಪದೇ ವೀಕ್ಷಿಸುತ್ತಿದ್ದ ನಿಶಿ, ಸಾಯುವ ಮುನ್ನ ಅದೇ ಸಂಜಯ್ ದತ್ ಹೆಸರಿಗೆ ತಮ್ಮ ಆಸ್ತಿ-ಹಣವನ್ನೆಲ್ಲಾ ವಿಲ್ ಮಾಡಿದ್ದಾರೆ. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ, ನಿಶಿ ಕುಟುಂಬ ಆಘಾತಗೊಂಡಿದೆ.

ಬ್ಯಾಂಕ್ ಖಾತೆಗೆ ಸಂಜಯ್ ದತ್ ನಾಮಿನಿ

'ಬ್ಯಾಂಕ್ ಆಫ್ ಬರೋಡಾ'ದಲ್ಲಿದ್ದ ತಮ್ಮ ಖಾತೆಗೆ ಸಂಜಯ್ ದತ್ ರನ್ನೇ ನಾಮಿನಿ ಆಗಿ ಮಾಡಿದ್ದರಂತೆ ನಿಶಿ. ಹೀಗಾಗಿ, ನಿಶಿ ತೀರಿಕೊಂಡ ಬಳಿಕ, ಬ್ಯಾಂಕ್ ಆಫ್ ಬರೋಡ ಸಿಬ್ಬಂದಿ ಸಂಜಯ್ ದತ್ ಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ಬ್ಯಾಂಕ್ ಖಾತೆಯಲ್ಲಿದ್ದ ಹಣವೆಲ್ಲ ಸಂಜಯ್ ದತ್ ಗೆ ಸೇರಬೇಕು ಎಂಬುದು ನಿಶಿ ಇಚ್ಛೆ ಆಗಿತ್ತಂತೆ.

ಎಲ್ಲವೂ ಸಂಜಯ್ ದತ್ ಹೆಸರಿಗೆ

ತಮಗೆ ಸೇರಿದ್ದ ಆಸ್ತಿ, ಬ್ಯಾಂಕ್ ನಲ್ಲಿದ್ದ ಹಣ, ಬೆಲೆ ಬಾಳುವ ವಸ್ತುಗಳನ್ನೆಲ್ಲ ಸಂಜಯ್ ದತ್ ಹೆಸರಿಗೆ ಬರೆದು ನಿಶಿ ಇಹಲೋಕ ತ್ಯಜಿಸಿದ್ದಾರೆ.

ಸಂಜಯ್ ದತ್ ಗೆ ಶಾಕ್

ತಮ್ಮ ಹೆಸರಿಗೆ ಅಭಿಮಾನಿಯೊಬ್ಬರು ವಿಲ್ ಮಾಡಿರುವ ವಿಚಾರ ಕೇಳಿ ಸಂಜಯ್ ದತ್ ಅಕ್ಷರಶಃ ಶಾಕ್ ಆಗಿದ್ದಾರೆ. ಇಂತಹ ಅಭಿಮಾನಿಗಳು ಇರ್ತಾರಾ ಅಂತ ಸಂಜಯ್ ದತ್ ಬಾಯಿ ಮೇಲೆ ಬೆರಳಿಟ್ಟಿದ್ದಾರೆ.

ಯಾವುದೂ ಬೇಡ ಎಂದ ಸಂಜಯ್ ದತ್

''ವಿಲ್ ಪ್ರಕಾರ ನಿಶಿ ಅವರ ಆಸ್ತಿ, ಹಣ ನನಗೆ ಬೇಡ. ಎಲ್ಲವೂ ಅವರ ಕುಟುಂಬದವರಿಗೆ ಸೇರಲಿ. ನಿಶಿ ಯಾರು ಎಂಬುದೇ ನನಗೆ ಗೊತ್ತಿಲ್ಲ. ನಿಶಿ ಅವರ ಅಭಿಮಾನಕ್ಕೆ ನಾನು ಚಿರಋಣಿ'' ಎಂದಿದ್ದಾರೆ ಸಂಜಯ್ ದತ್.

English summary
Nishi Harishchandra Tripati, a Deceased fan of Sanjay Dutt wills all her money and property to his name.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada