ಡೀಪ್‌ಫೇಕ್ ವಿಡಿಯೋ: ಜೈಲು ಶಿಕ್ಷೆ, ದಂಡದ ಮಾಹಿತಿ ನೀಡಿದ ಸರ್ಕಾರ, ಎಷ್ಟೆಷ್ಟು ಗೊತ್ತೇ?

ಚಿತ್ರರಂಗದಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ವಿಡಿಯೋ ವೈರಲ್ ಆಗಿ ಸಾಮಾಜಿಕ ಮಾಧ್ಯಮದಲ್ಲಿ ಹಲ್‌ಚಲ್ ಎಬ್ಬಿಸಿತ್ತು. ಸಾಕಷ್ಟು ನೆಟ್ಟಿಗರು ಮತ್ತು ಚಿತ್ರರಂಗದ ಕಲಾವಿದರು ನಟಿಗೆ ಬೆಂಬಲ ನೀಡಿದರು. ಸದ್ಯ ವಿಡಿಯೋಗೆ ಪ್ರತಿಕ್ರಿಯೆಯಾಗಿ, ಭಾರತ ಸರ್ಕಾರವು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಗೆ ಕಠಿಣ ನಿಯಮಗಳನ್ನು ಹೊರಡಿಸಿದೆ.

ಡೀಪ್‌ಫೇಕ್‌ಗಳನ್ನು ನಿಯಂತ್ರಿಸುವ ಕಾನೂನು ನಿಬಂಧನೆಗಳು ಮತ್ತು ಅದಕ್ಕೆ ಸಂಬಂಧಿಸಿದ ಮಾನ ದಂಡಗಳನ್ನು ಸರ್ಕಾರ ಹೊರಡಿಸಿದೆ. ನಟ, ನಟಿಯರನ್ನು ಮುಜಗರಕ್ಕೆ ಈಡು ಮಾಡುವ ಇಂತಹ ಬೆಳವಣಿಗೆಗಳು, ತಪ್ಪು ಮಾಹಿತಿಗಾಗಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಅನ್ನು ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ.

Deepfake video: Government issued rule reminder to social media platforms

ಡೀಪ್‌ಫೇಕ್‌ಗೆ ಇರುವ ಶಿಕ್ಷೆಯೇನು ಗೊತ್ತೆ?

ಇನ್ನು, ಡೀಪ್‌ಫೇಕ್ ವಿಡಿಯೋ ಮಾಡಿ ಹರಿಬಿಟ್ಟರೇ ಕಠಿಣ ಕ್ರಮವನ್ನು ತೆಗೆದುಕೊಳ್ಳುವುದಾಗಿ ಸರ್ಕಾರ ಘೋಷಿಸಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು 2000 ರ ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 66D ಅನ್ನು ಈ ಪ್ರಕರಣಗಳಿಗೂ ಅನ್ವಯಿಸಲಿದೆ ಎಂದು ಹೇಳಿದೆ. ಸೆಕ್ಷನ್ 66D, 'ಕಂಪ್ಯೂಟರ್ ಸಂಪನ್ಮೂಲವನ್ನು ಬಳಸಿಕೊಂಡು ವೈಯಕ್ತಿಕವಾಗಿ ವಂಚನೆ ಮಾಡುವುದಕ್ಕೆ ನೀಡುವ ಶಿಕ್ಷೆಗೆ' ಸಂಬಂಧಿಸಿದೆ.

ಸೆಕ್ಷನ್ 66D ಪ್ರಕಾರ ಹೀಗೆ ಸಂವಹನ ಸಾಧನಗಳು ಅಥವಾ ಕಂಪ್ಯೂಟರ್ ಸಂಪನ್ಮೂಲಗಳನ್ನು ಬಳಸಿಕೊಂಡು ವೈಯಕ್ತಿಕವಾಗಿ ವಂಚನೆ ಮಾಡಿದ ತಪ್ಪಿತಸ್ಥರಿಗೆ ಆಗುವ ಶಿಕ್ಷೆ ಕೂಡ ಹೆಚ್ಚು. ಅಪರಾಧಿಗಳಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಒಂದು ಲಕ್ಷ ರೂಪಾಯಿಗಳವರೆಗೆ ದಂಡವನ್ನು ಎದುರಿಸಬೇಕಾಗುತ್ತದೆ.

ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವಿಡಿಯೋ

ನಟಿ ರಶ್ಮಿಕಾ ಮಂದಣ್ಣ ಎಂದು ಇನ್ನೊಬ್ಬರ ದೇಹಕ್ಕೆ ಇವರ ಮುಖವನ್ನು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಬಳಸಿಕೊಂಡು ವಿಡಿಯೋ ಮಾಡಿ ವೈರಲ್ ಮಾಡಲಾಗಿತ್ತು. ಆದರೆ, ಈ ವಿಡಿಯೋದಲ್ಲಿ ಇರುವುದು ಬ್ರಿಟಿಷ್ ಭಾರತೀಯ ಮೂಲಕ ಜಾರಾ ಪಟೇಲ್. ಅವರ ಮುಖವನ್ನು ರಶ್ಮಿಕಾ ಮಂದಣ್ಣರಿಗೆ ಹೋಲುವಂತೆ ಡೀಪ್‌ಫೇಕ್ ತಂತ್ರಜ್ಞಾನವನ್ನು ಬಳಸಿ ಬದಲಾಯಿಸಲಾಗಿತ್ತು. ಈ ವಿಡಿಯೋ ವೈರಲ್ ಆದ ನಂತರ ಸಾಮಾಜಿಕ ಮಾಧ್ಯಮಗಳ ಮೇಲೆ ನಿಯಂತ್ರಣ ಹೇರುವುದು ಪ್ರಮುಖ ವಿಷಯವಾಯಿತು.

ಇದಲ್ಲದೆ ನಟಿ ಕತ್ರಿನಾ ಕೈಫ್ ಅವರ ಟವಲ್ ಫೈಟ್ ದೃಶ್ಯದ ಫೋಟೋವನ್ನು ಕೂಡ ಡೀಪ್‌ಫೇಕ್ ತಂತ್ರಜ್ಞಾನವನ್ನು ಬಳಸಿ ಅರೆನಗ್ನರನ್ನಾಗಿ ತೋರಿಸಲಾಗಿತ್ತು. ಮೂಲ ಚಿತ್ರವನ್ನು ಈ ಹಿಂದೆ ಕತ್ರಿನಾ ಕೈಫ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಅದರಲ್ಲಿ ಬಾಲಿವುಡ್ ನಟಿ ಕತ್ರಿನಾ ಮತ್ತು ಹಾಲಿವುಡ್ ಸ್ಟಂಟ್ ವುಮನ್ ಜೊತೆ ಟವೆಲ್ ಧರಿಸಿ ಸಕತ್ ಫೈಟ್ ಮಾಡುತ್ತಿದ್ದಾರೆ. ಅದೇ ಚಿತ್ರವನ್ನು ಮಾರ್ಪ್ ಮಾಡಲಾಗಿದೆ.

ಈ ಬಗ್ಗೆ ನಟಿ ಕತ್ರಿನಾ ಕೈಫ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ನಟಿ ರಶ್ಮಿಕಾ ಮಂದಣ್ಣ ಘಟನೆಯನ್ನು ಅತ್ಯಂತ ಭಯಾನಕ ಎಂದು ಹೇಳಿದ್ದರು. ಜೊತೆಗೆ ತಂತ್ರಜ್ಞಾನದ ದುರುಪಯೋಗದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಇದು ಹೇಗೆ ವ್ಯಕ್ತಿಗಳನ್ನು ಅಪಾಯಕ್ಕೆ ಸಿಲುಕಿಸುತ್ತದೆ ಎಂದು ತಿಳಿಸಿ, ಸೂಕ್ತ ಕ್ರಮದ ಅಗತ್ಯತೆಯನ್ನು ಹೇಳಿದ್ದರು.

ಈ ಎಲ್ಲಾ ಘಟನೆಗಳ ಬೆನ್ನಲ್ಲೇ ಭಾರತ ಸರ್ಕಾರದ ನಿಯಮಗಳು ಡೀಪ್‌ಫೇಕ್‌ಗಳ ಮೂಲಕ ತಪ್ಪು ಮಾಹಿತಿಯ ಹರಡುವುದನ್ನು ನಿಭಾಯಿಸುವಲ್ಲಿ ಕಠಿಣ ನಿಯಮಗಳ ಅಗತ್ಯವನ್ನು ಒತ್ತಿಹೇಳುತ್ತವೆ. ಹೀಗಾಗಿಯೇ ಒಂದು ವಿಡಿಯೋ, ಫೋಟೋವನ್ನು ಶೇರ್ ಮಾಡುವ ಮುನ್ನ ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು ಇಲ್ಲದಿದ್ದರೇ ಶಿಕ್ಷೆ ಎದುರಿಸಲು ಸಿದ್ಧರಾಗಬೇಕು.

More from Filmibeat

English summary
Govt issued rules to social media platforms on deepfakes
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X