For Quick Alerts
  ALLOW NOTIFICATIONS  
  For Daily Alerts

  ಡಿಂಪಲ್ ಬ್ಯೂಟಿ ದೀಪಿಕಾ ಪಡುಕೋಣೆ ಹಿಂತಿರುಗಿ ನೋಡಿದಾಗ!

  By Harshitha
  |

  ಎತ್ತರದ ನಿಲುವು, ನೇರ ನುಡಿ, ಸಪೂರ ಮೈಕಟ್ಟು, ಎಂಥವರೂ ಒಮ್ಮೆ ತಿರುಗಿ ನೋಡುವಂತಹ ನಡಿಗೆ...ಬ್ಯಾಡ್ ಮಿಂಟನ್ ತಾರೆಯ ಮಗಳಾಗಿ ಕ್ರೀಡಾಲೋಕದಲ್ಲಿ ಸಂಚಲನ ಉಂಟುಮಾಡಬೇಕಾಗಿದ್ದವಳು, ಓದೋ ವಯಸ್ಸಲ್ಲಿ ಸೀದಾ ಕಾಲಿಟ್ಟಿದ್ದು ಬಣ್ಣದ ಪ್ರಪಂಚಕ್ಕೆ.

  ಮಾಯಾಲೋಕದಲ್ಲಿ ದರ್ಬಾರ್ ಮಾಡುತ್ತಿದ್ದ ನಟರೊಂದಿಗೆ ತೆರೆ ಹಂಚಿಕೊಂಡ ಈ ಬೆಂಗಳೂರು ಬೆಡಗಿ, ಇದೀಗ ಇಡೀ ಬಾಲಿವುಡ್ ಗೆ ಚಿನ್ನದ ಮೊಟ್ಟೆ ಇಡುವ ಕೋಳಿ. ಈಕೆ ಮತ್ತಿನ್ಯಾರು ಅಲ್ಲ...ಬಾಲಿವುಡ್ ನ ಹಾಟ್ ಕೇಕ್ ದೀಪಿಕಾ ಪಡುಕೋಣೆ. [ಬೆಡಗಿ ದೀಪಿಕಾ ಪಡುಕೋಣೆಗೆ ಎಂಟು ಕೋಟಿ ಆಫರ್]

  ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ದೀಪಿಕಾ ಪಡುಕೋಣೆಗೆ ಇಂದು ಹುಟ್ಟುಹಬ್ಬದ ಸಂಭ್ರಮ. ತಮ್ಮ 29ನೇ ವರ್ಷದ ಹುಟ್ಟುಹಬ್ಬವನ್ನ ಇಂದು (ಜನವರಿ 5) ಆಚರಿಸಿಕೊಳ್ಳುತ್ತಿರುವ ದೀಪಿಕಾ, ರಾಷ್ಟ್ರ ಮಟ್ಟದ ಬ್ಯಾಡ್ ಮಿಂಟನ್ ಚಾಂಪಿಯನ್ ಆಗಿ ನಂತರ ಬಾಲಿವುಡ್ ಸೂಪರ್ ಸ್ಟಾರ್ ಆಗಿ ಬೆಳೆದದ್ದೇ ಅಚ್ಚರಿಯ ಕಥೆ. ದೀಪಿಕಾ ಹುಟ್ಟುಹಬ್ಬದ ಪ್ರಯುಕ್ತ ಆ ಅಚ್ಚರಿ ಕಥೆ ಇಲ್ಲಿದೆ...ಮುಂದೆ ಓದಿ...

  ವಿದೇಶದಲ್ಲಿ ಹುಟ್ಟಿ, ಬೆಂಗಳೂರಲ್ಲಿ ಬೆಳೆದ ದಿಪ್ಪಿ

  ವಿದೇಶದಲ್ಲಿ ಹುಟ್ಟಿ, ಬೆಂಗಳೂರಲ್ಲಿ ಬೆಳೆದ ದಿಪ್ಪಿ

  ದೀಪಿಕಾ ಹುಟ್ಟಿದ್ದು ಡೆನ್ ಮಾರ್ಕ್ ನ ಕೋಪನ್ ಹೇಗನ್ ನಲ್ಲಿ. ಬ್ಯಾಡ್ ಮಿಂಟನ್ ತಾರೆ ಪ್ರಕಾಶ್ ಪಡುಕೋಣೆಯ ಮುದ್ದಿನ ಮಗಳಾದ ದೀಪಿಕಾ, ವಿದೇಶದಲ್ಲಿ ಹುಟ್ಟಿದ್ರೂ, ಬೆಳೆದದ್ದು ಮಾತ್ರ ಬೆಂಗಳೂರಲ್ಲಿ. ಸೋಫಿಯಾ ಸ್ಕೂಲ್ ಮತ್ತು ಪ್ಯಾಲೇಸ್ ರೋಡ್ ನಲ್ಲಿರುವ ಮೌಂಟ್ ಕಾರ್ಮೆಲ್ ಕಾಲೇಜ್ ನಲ್ಲಿ ದ್ವಿತೀಯ ಪಿ.ಯು.ಸಿ ವರೆಗೂ ಓದಿದ ದಿಪ್ಪಿ ಮಾತೃ ಭಾಷೆ ಕೊಂಕಣಿ. [ದೀಪಿಕಾಗೆ ಕನ್ನಡ ಬರುತ್ತಂತೆ]

  ಮುಕ್ತ ವಿಶ್ವವಿದ್ಯಾನಿಲಯದಿಂದ 'ಪದವಿ'

  ಮುಕ್ತ ವಿಶ್ವವಿದ್ಯಾನಿಲಯದಿಂದ 'ಪದವಿ'

  17ನೇ ವಯಸ್ಸಲ್ಲೇ ಬಣ್ಣದ ಲೋಕಕ್ಕೆ ಕಾಲಿಟ್ಟ ದೀಪಿಕಾಗೆ ಓದುವ ಸಮಯ ಸಿಗ್ಲಿಲ್ಲ. ಹೀಗಾಗಿ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯದಿಂದ ಸಮಾಜಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ.

  ಕ್ರೀಡೆಯಂದರೆ ಪ್ರಾಣ

  ಕ್ರೀಡೆಯಂದರೆ ಪ್ರಾಣ

  ಅಪ್ಪನಂತೆ ಮಗಳು ದೀಪಿಕಾಗೂ ಸ್ಪೋರ್ಟ್ಸ್ ಅಂದ್ರೆ ಪ್ರಾಣ. ಚಿಕ್ಕವಯಸ್ಸಲ್ಲೇ ಬ್ಯಾಡ್ ಮಿಂಟನ್ ಆಡೋಕೆ ನಿಂತ ದಿಪ್ಪಿ, ರಾಷ್ಟ್ರೀಯ ಮಟ್ಟದ ಬ್ಯಾಡ್ ಮಿಂಟನ್ ಚಾಂಪಿಯನ್ ಕೂಡ ಹೌದು. ಬ್ಯಾಡ್ ಮಿಂಟನ್ ಜೊತೆಗೆ ಬೇಸ್ ಬಾಲ್, ವಾಲಿ ಬಾಲ್ ನಲ್ಲೂ ದೀಪಿಕಾ ನಂಬರ್ ಒನ್.

  ಮಾಡೆಲಿಂಗ್ ಕೋಲ್ಮಿಂಚು

  ಮಾಡೆಲಿಂಗ್ ಕೋಲ್ಮಿಂಚು

  ಹತ್ತನೇ ತರಗತಿ ಓದುವಾಗಲೇ ಮಾಡೆಲಿಂಗ್ ಪ್ರಪಂಚಕ್ಕೆ ಆಕರ್ಷಿತಳಾದ ದೀಪಿಕಾ, ಫ್ಯಾಶನ್ ಗುರು ಪ್ರಸಾದ್ ಬಿದ್ದಪ್ಪ ಕ್ಯಾಂಪ್ ಗೆ ಸೇರಿದ್ರು. ಅಲ್ಲಿಂದ ಶುರುವಾಗಿದ್ದೇ ದೀಪಿಕಾ ಬೆಕ್ಕಿನ ನಡಿಗೆ. 'ಲಿರಿಲ್' ಮತ್ತು 'ಕಿಂಗ್ ಫಿಶರ್' ಕ್ಯಾಲೆಂಡರ್ ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ದೀಪಿಕಾ, ಸಿನಿರಂಗಕ್ಕೆ ಕಾಲಿಡೋಕೆ ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ.

  'ಐಶ್ವರ್ಯ'ಳಾದ ದೀಪಿಕಾ

  'ಐಶ್ವರ್ಯ'ಳಾದ ದೀಪಿಕಾ

  ಹಿಮೇಶ್ ರೇಶಮ್ಮಿಯಾ ಗಾನಸುಧೆ ಹರಿಸಿರುವ ಆಲ್ಬಂ ''ನಾಮ್ ಹೇ ತೇರಾ'' ಹಾಡಲ್ಲಿ ಸೊಂಟ ಬಳುಕಿಸಿದ್ದ ದೀಪಿಕಾ, ಚಿತ್ರರಂಗಕ್ಕೆ ಕಾಲಿಟ್ಟಿದ್ದು ಬಾಲಿವುಡ್ ನ 'ಓಂ ಶಾಂತಿ ಓಂ' ಚಿತ್ರದಿಂದ ಅಲ್ಲ! ಬದ್ಲಾಗಿ ಕನ್ನಡದ ಸಿನಿಮಾ, ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಐಶ್ವರ್ಯ' ಚಿತ್ರದ ಮೂಲಕ.

  ವೃತ್ತಿ ಬದುಕನ್ನೇ ಬದಲಿಸಿದ 'ಓಂ ಶಾಂತಿ ಓಂ'

  ವೃತ್ತಿ ಬದುಕನ್ನೇ ಬದಲಿಸಿದ 'ಓಂ ಶಾಂತಿ ಓಂ'

  ಅದ್ಯಾವ ಗಳಿಗೆಯಲ್ಲಿ ದೀಪಿಕಾ, ಫರಾಹ್ ಖಾನ್ ಕಣ್ಣಿಗೆ ಬಿದ್ರೋ, ದೀಪಿಕಾ ಅದೃಷ್ಟವೇ ಖುಲಾಯಿಸಿಬಿಡ್ತು. ಕಿಂಗ್ ಖಾನ್ ಶಾರೂಖ್ ಜೊತೆ 'ಓಂ ಶಾಂತಿ ಓಂ' ಚಿತ್ರದಲ್ಲಿ ನಟಿಸಿದ ದೀಪಿಕಾ, ನಂತರ ತಿರುಗಿ ನೋಡಿದ್ದೇ ಇಲ್ಲ. 'ಬಚ್ನಾ ಏ ಹಸೀನೋ', 'ಲವ್ ಆಜ್ ಕಲ್', 'ಹೌಸ್ ಫುಲ್', 'ಕಾಕ್ ಟೇಲ್', 'ಯೇ ಜವಾನಿ ಹೈ ದಿವಾನಿ', 'ಚೆನ್ನೈ ಎಕ್ಸ್ ಪ್ರೆಸ್', 'ರಾಮ್ ಲೀಲಾ', 'ಹ್ಯಾಪಿ ನ್ಯೂ ಇಯರ್' ಸೇರಿದಂತೆ ಸಾಲು ಸಾಲು ಹಿಟ್ ಸಿನಿಮಾಗಳನ್ನ ನೀಡಿದ ದಿಪ್ಪಿ, ಸದ್ಯ ಬಾಲಿವುಡ್ ನ ಲೀಡಿಂಗ್ ಕ್ವೀನ್.

  ಎಲ್ಲಾ ಸ್ಟಾರ್ಸ್ ಗೂ ದೀಪಿಕಾನೇ ಬೇಕು!

  ಎಲ್ಲಾ ಸ್ಟಾರ್ಸ್ ಗೂ ದೀಪಿಕಾನೇ ಬೇಕು!

  ಚಿತ್ರರಂಗಕ್ಕೆ ಕಾಲಿಟ್ಟ ಏಳು ವರ್ಷಗಳಲ್ಲಿ, ಶಾರೂಖ್ ಜೊತೆ ಮೂರು ಚಿತ್ರಗಳಲ್ಲಿ ನಟಿಸಿ, ಬ್ಲಾಕ್ ಬಸ್ಟರ್ ನೀಡಿರುವ ಖ್ಯಾತಿ ದೀಪಿಕಾಗೆ ಸಲ್ಲುತ್ತೆ. ಅಮಿತಾಬ್ ಬಚ್ಚನ್ ಮತ್ತು ರಜನಿಕಾಂತ್ ಜೊತೆ ಬಹುಬೇಗ ನಟಿಸಿ ಸೈ ಅನಿಸಿಕೊಂಡಿರುವ ದೀಪಿಕಾ ಕಾಲ್ ಶೀಟ್ ಗಾಗಿ ಸಲ್ಲು ಮತ್ತು ಆಮೀರ್ ಕೂಡ ಕಾಯ್ತಿದ್ದಾರೆ. [ರಣ್ವೀರ್ ಜೊತೆ ಡೇಟಿಂಗ್: ದೀಪಿಕಾ ಹೇಳಿದ್ದೇನು?]

  2015 ರಲ್ಲಿ ದೀಪಿಕಾ ಧಮಾಕಾ

  2015 ರಲ್ಲಿ ದೀಪಿಕಾ ಧಮಾಕಾ

  ಕರಣ್ ಜೋಹರ್ ನಿರ್ದೇಶನದ 'ಶುದ್ಧಿ', ಶಾರೂಖ್ ಅಭಿನಯದ 'ಜಬ್ ತಕ್ ಹೈ ಜಾನ್', ಹಾಲಿವುಡ್ ಸಿನಿಮಾ 'ಫಾಸ್ಟ್ ಅಂಡ್ ಫ್ಯೂರಿಯಸ್ 7', 'ಧೂಮ್ 3' ಮತ್ತು 'ರಾಯ್' ಚಿತ್ರಗಳನ್ನ ರಿಜೆಕ್ಟ್ ಮಾಡಿದ್ದ ದೀಪಿಕಾ ಸದ್ಯ 'ತಮಾಶಾ', 'ಪಿಕು' ಮತ್ತು 'ಭಾಜಿರಾವ್ ಮಸ್ತಾನಿ' ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ಈ ಮೂರು ಚಿತ್ರಗಳು ಇದೇ ವರ್ಷ ರಿಲೀಸ್ ಆಗುತ್ತಿದೆ. ಅಲ್ಲಿಗೆ, ದೀಪಿಕಾ ಈ ವರ್ಷ ಕೂಡ ಟಾಪ್ ನಟಿಯಾಗೋದು ಗ್ಯಾರಂಟಿ.

  English summary
  Bollywood hottie Deepika Padukone celebrates her 29th birthday today (Jan 5th). Here are some interesting facts about Deepika Padukone, A Journey of a Badminton player to a Bollywood Star.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X