'ಬ್ರಹ್ಮಾಸ್ತ್ರ'ದಲ್ಲಿ ದೀಪಿಕಾ ಪಡುಕೋಣೆ: ಆದರೆ ಗುರುತಿಸಿದ್ದು ಕೆಲವರೇ!
ಅಯಾನ್ ಮುಖರ್ಜಿ ನಿರ್ದೇಶನದ 'ಬ್ರಹ್ಮಾಸ್ತ್ರ' ಸಿನಿಮಾ ನಿನ್ನೆಯಷ್ಟೆ ಬಿಡುಗಡೆ ಆಗಿದ್ದು, ಮಿಶ್ರ ವಿಮರ್ಶೆಗಳ ನಡುವೆಯೂ ಸಿನಿಮಾ ಮೊದಲ ದಿನ ಭರ್ಜರಿ ಕಲೆಕ್ಷನ್ ಮಾಡಿದೆ.
ರಣ್ಬೀರ್ ಕಪೂರ್ ಸಿನಿಮಾವು, ಮೊದಲ ದಿನದ ಕಲೆಕ್ಷನ್‌ನಲ್ಲಿ ರಾಜಮೌಳಿಯ 'RRR' ಸಿನಿಮಾದ ಕಲೆಕ್ಷನ್ ಅನ್ನೇ ಹಿಂದಿಕ್ಕಿದೆ. ಮೊದಲ ದಿನವೇ ಉತ್ತಮ ಕಲೆಕ್ಷನ್ ಬಂದಿರುವ ಕಾರಣ ಮುಂದಿನ ಎರಡು ದಿನಗಳಲ್ಲಿ ಸಿನಿಮಾ ದೊಡ್ಡ ಮಟ್ಟದ ಕಲೆಕ್ಷನ್ ಮಾಡಲಿದೆ ಎನ್ನಲಾಗುತ್ತಿದೆ.
'ಬ್ರಹ್ಮಾಸ್ತ್ರ' ಸಿನಿಮಾದಲ್ಲಿನ ವಿಶ್ಯುಲ್ ಎಫೆಕ್ಟ್ಸ್ ಅನ್ನು ಜನ ಅತಿಯಾಗಿ ಮೆಚ್ಚಿಕೊಂಡಿದ್ದಾರೆ. ಜೊತೆಗೆ ಸಿನಿಮಾದ ಅತಿಥಿ ಪಾತ್ರದಲ್ಲಿ ನಟಿಸಿರುವ ಶಾರುಖ್ ಖಾನ್‌ರ ಎಂಟ್ರಿಯನ್ನಂತೂ ಬಹುವಾಗಿ ಮೆಚ್ಚಿ ಕೊಂಡಾಡಿದ್ದಾರೆ. ಆದರೆ ಸಿನಿಮಾದಲ್ಲಿ ಶಾರುಖ್ ಖಾನ್ ಮಾತ್ರವಲ್ಲ ದೀಪಿಕಾ ಪಡುಕೋಣೆ ಸಹ ಇದ್ದಾರೆ ಆದರೆ ದೀಪಿಕಾ ಅನ್ನು ಬಹಳ ಕಡಿಮೆ ಜನ ಗುರುತಿಸಿದ್ದಾರೆ.
ಹೌದು, ದೀಪಿಕಾ ಪಡುಕೋಣೆ ಸಹ 'ಬ್ರಹ್ಮಾಸ್ತ್ರ' ಸಿನಿಮಾದಲ್ಲಿ ನಟಿಸಿದ್ದಾರೆ ಆದರೆ ಅವರನ್ನು ಪ್ರೇಕ್ಷಕರು ಗುರುತಿಸಿಲ್ಲ. ಆದರೆ ಕೆಲವರು ಮಾತ್ರ, ಅದರಲ್ಲೂ ಐನಾಕ್ಸ್ ನ ಸ್ಪೆಷಲ್ ಪ್ರಿಂಟ್‌ನಲ್ಲಿ ಸಿನಿಮಾ ನೋಡಿದವರು ಮಾತ್ರವೇ ದೀಪಿಕಾ ಪಡುಕೋಣೆಯ ಮುಖವನ್ನು ಗುರುತಿಸಿದ್ದಾರೆ. ದೀಪಿಕಾ ಪಡುಕೋಣೆ ಸಿನಿಮಾದಲ್ಲಿದ್ದರೂ ಸಹ ಆಕೆಯನ್ನು ಏಕೆ ಹೈಲೆಟ್ ಮಾಡಿಲ್ಲ ಎಂಬ ಪ್ರಶ್ನೆ ಇದೀಗ ಎದುರಾಗಿದೆ.

ಶಿವನ ತಾಯಿಯ ಪಾತ್ರದಲ್ಲಿ ನಟಿಸಿರುವುದು ದೀಪಿಕಾ ಪಡುಕೋಣೆ!
ಸಿನಿಮಾದಲ್ಲಿ ಶಿವ ಅಂದರೆ ರಣ್ಬೀರ್ ಕಪೂರ್‌ನ ಜನ್ಮ ಹಾಗೂ ಆತನನ್ನು ಆಕೆಯ ತಾಯಿ ಬಿಟ್ಟು ಹೋಗುವ ಕೆಲವು ದೃಶ್ಯಗಳಿವೆ. ಆದರೆ ಆ ದೃಶ್ಯಗಳಲ್ಲಿ ಶಿವನ ತಾಯಿಯ ಮುಖವನ್ನು ಸರಿಯಾಗಿ ತೋರಿಸುವುದಿಲ್ಲ ಆದರೆ ಆಕೆಯ ಹೆಸರು ಅಮೃತ ಎಂದು ಹೇಳಲಾಗುತ್ತದೆ. ಆದರೆ ನೆಟ್ಟಿಜನರು, ಶಿವನ ತಾಯಿಯ ಪಾತ್ರದಲ್ಲಿ ನಟಿಸಿರುವುದು ದೀಪಿಕಾ ಪಡುಕೋಣೆ ಎಂದು ಹೇಳುತ್ತಿದ್ದು, ಇದಕ್ಕೆ ಕೆಲವು ಸಾಕ್ಷ್ಯಗಳನ್ನು ಸಹ ಒದಗಿಸಿದ್ದಾರೆ.

ಮುಂದಿನ ಪಾರ್ಟ್‌ನಲ್ಲಿ ದೀಪಿಕಾ ಪಡುಕೋಣೆ ಪಾತ್ರಕ್ಕೆ ಮಹತ್ವ
ಈ ಮೊದಲೇ ನಿರ್ದೇಶಕ ಅಯಾನ್ ಮುಖರ್ಜಿ ಹೇಳಿರುವಂತೆ 'ಬ್ರಹ್ಮಾಸ್ತ್ರ' ಸಿನಿಮಾವು ಹಲವು ಪಾರ್ಟ್‌ಗಳಲ್ಲಿ ಬಿಡುಗಡೆ ಆಗಲಿದೆ. ಈಗ ಬಿಡುಗಡೆ ಆಗಿರುವು ಮೊದಲ ಪಾರ್ಟ್ ಅಷ್ಟೆ. ಹಾಗಾಗಿ ಮುಂದಿನ ಪಾರ್ಟ್‌ನಲ್ಲಿ ದೀಪಿಕಾ ಪಡುಕೋಣೆಯ ಪಾತ್ರಕ್ಕೆ ಹೆಚ್ಚಿನ ಮಹತ್ವ ಇರಲಿದೆ ಎನ್ನಲಾಗುತ್ತಿದೆ. ದೀಪಿಕಾ ಪಡುಕೋಣೆಯ ಪತಿಯ ಪಾತ್ರದಲ್ಲಿ ರಣ್ಬೀರ್ ಕಪೂರ್ ನಟಿಸಲಿದ್ದಾರೆ ಎನ್ನಲಾಗಿದೆ. ದೀಪಿಕಾ ಪಡುಕೋಣೆ, ಅಮೃತಾ ಪಾತ್ರದಲ್ಲಿ ನಟಿಸಿದ್ದು, ಈಕೆ ಜಲ ಅಸ್ತ್ರವಾಗಿರುತ್ತಾಳೆ. ಆಕೆಯ ಮಗ ಶಿವನ ಪಾತ್ರದಲ್ಲಿ ನಟಿಸಿರುವ ರಣ್ಬೀರ್ ಕಪೂರ್ ಅಗ್ನಿ ಅಸ್ತ್ರ ಆಗಿರುತ್ತಾನೆ.

ಸಿನಿಮಾದ ಕನಿಷ್ಟ ಮೂರು ಸರಣಿ ಸಿನಿಮಾಗಳು
'ಬ್ರಹ್ಮಾಸ್ತ್ರ' ಸಿನಿಮಾದ ಕನಿಷ್ಟ ಮೂರು ಸರಣಿ ಸಿನಿಮಾಗಳು ಬರಲಿವೆ ಎಂದು ಅಯಾನ್ ಮುಖರ್ಜಿ ಈಗಾಗಲೇ ಹೇಳಿದ್ದಾರೆ. ಒಂದೊಂದು ಸಿನಿಮಾದಲ್ಲಿ ಒಂದೊಂದು ಅಸ್ತ್ರದ ಬಗ್ಗೆ ವಿವರವಾದ ಕತೆ ಇರಲಿದೆಯಂತೆ. ಮೊದಲ 'ಬ್ರಹ್ಮಾಸ್ತ್ರ' ಸಿನಿಮಾದಲ್ಲಿ ಅಗ್ನಿ ಅಸ್ತ್ರದ ಬಗ್ಗೆ ಕತೆ ಇದ್ದರೆ ಎರಡನೇಯದರಲ್ಲಿ ಜಲ ಅಸ್ತ್ರದ ಕತೆ ಇರಲಿದೆ ಹೀಗೆ. ಇದೀಗ ಮೊದಲ ಬ್ರಹ್ಮಾಸ್ತ್ರದಲ್ಲಿ ಕಾಣಿಸಿಕೊಂಡಿರುವ ಅಮೃತ ಜಲ ಅಸ್ತ್ರದ ಒಡತಿಯಾಗಿದ್ದು, ಆಕೆಯ ಬಗ್ಗೆ 'ಬ್ರಹ್ಮಾಸ್ತ್ರ' 2 ಇರಲಿದೆ ಎನ್ನಲಾಗುತ್ತಿದೆ.

9000 ಚಿತ್ರಮಂದಿರಗಳಲ್ಲಿ ಬಿಡುಗಡೆ
'ಬ್ರಹ್ಮಾಸ್ತ್ರ' ಸಿನಿಮಾ ಇದೇ ಶುಕ್ರವಾರ ದೇಶ ವಿದೇಶಗಳಲ್ಲಿ ಸುಮಾರು 9000 ಚಿತ್ರಮಂದಿರಗಳಲ್ಲಿ ತೆರೆಗೆ ಬಂದಿದೆ. ಸಿನಿಮಾವು ಮೊದಲ ದಿನವೇ ಸುಮಾರು 40 ಕೋಟಿಗೂ ಹೆಚ್ಚಿನ ಮೊತ್ತ ಕಲೆಕ್ಷನ್ ಮಾಡಿದೆ. ಸಿನಿಮಾವು ಈ ಶನಿವಾರ ಹಾಗೂ ಭಾನುವಾರ ಇನ್ನೂ ದೊಡ್ಡ ಮೊತ್ತವನ್ನು ಗಳಿಸುವ ನಿರೀಕ್ಷೆಯಲ್ಲಿ ಚಿತ್ರತಂಡ ಇದೆ. ಸಿನಿಮಾದಲ್ಲಿ ಆಲಿಯಾ-ರಣ್ಬೀರ್, ಅಮಿತಾಬ್ ಬಚ್ಚನ್, ನಾಗಾರ್ಜುನ, ಮೌನಿ ರಾಯ್ ಇನ್ನೂ ಹಲವರು ನಟಿಸಿದ್ದಾರೆ. ನಟ ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications











