For Quick Alerts
  ALLOW NOTIFICATIONS  
  For Daily Alerts

  ಪ್ರಭಾಸ್ ಜೊತೆ ನಟಿಸಲು ದೀಪಿಕಾ ಇಷ್ಟು ದಿನಗಳು ಮೀಸಲಿಟ್ಟಿದ್ದಾರಾ! ಇಲ್ಲಿದೆ ಕಾಲ್ ಶೀಟ್ ವಿವರ

  |

  ಬಾಲಿವುಡ್‌ನ ಟಾಪ್ ನಟಿ ದೀಪಿಕಾ ಪಡುಕೋಣೆ ಸದ್ಯ ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಚಿತ್ರೀಕರಣ ಪ್ರಾರಂಭ ಮಾಡಿದ್ದು, ಬಹುತೇಕ ಚಿತ್ರೀಕರಣ ಮಾಡಿ ಮುಗಿಸಿದ್ದಾರೆ.

  ಪಠಾಣ್ ಸಿನಿಮಾ ಮುಗಿಸುತ್ತಿದ್ದಂತೆ ದೀಪಿಕಾ, ತೆಲುಗು ಸಿನಿಮಾದಲ್ಲಿ ನಿರತರಾಗಲಿದ್ದಾರೆ.

  ತೆಲುಗು ಸ್ಟಾರ್ ನಟ ಪ್ರಭಾಸ್ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಇನ್ನೂ ಹೆಸರಿಡದ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿ ಮಿಂಚಲಿದ್ದಾರೆ. ಸಿನಿಮಾ ಅನೌನ್ಸ್ ಆಗಿ ತಿಂಗಳುಗಳೇ ಆಗಿದೆ. ಆದರೆ ಇನ್ನು ಸಿನಿಮಾದ ಬಗ್ಗೆ ಯಾವುದೇ ಅಪ್ ಡೇಟ್ ಇಲ್ಲ ಎನ್ನುವುದು ಅಭಿಮಾನಿಗಳ ಬೇಸರ. ಆದರೀಗ ದೀಪಿಕಾ ಈ ಸಿನಿಮಾಗಾಗಿ ಸುದೀರ್ಘ ಕಾಲ್ ಶೀಟ್ ನೀಡಿದ್ದಾರೆ ಎನ್ನುವ ಮಾಹಿತಿ ಬಹಿರಂಗವಾಗಿದೆ. ಮುಂದೆ ಓದಿ..

  ಪ್ರಭಾಸ್-ದೀಪಿಕಾ ಪಡುಕೋಣೆ ಸಿನಿಮಾ ಯಾವಾಗ? ಉತ್ತರ ಕೊಟ್ಟ ನಿರ್ದೇಶಕಪ್ರಭಾಸ್-ದೀಪಿಕಾ ಪಡುಕೋಣೆ ಸಿನಿಮಾ ಯಾವಾಗ? ಉತ್ತರ ಕೊಟ್ಟ ನಿರ್ದೇಶಕ

  ಜುಲೈನಿಂದ ಚಿತ್ರೀಕರಣ ಪ್ರಾರಂಭ

  ಜುಲೈನಿಂದ ಚಿತ್ರೀಕರಣ ಪ್ರಾರಂಭ

  ನಾಗ್ ಅಶ್ವಿನ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಇನ್ನು ಹೆಸರಿಡದ ಸಿನಿಮಾ ಅನೌನ್ಸ್ ಆಗಿ ತಿಂಗಳುಗಳೇ ಆಗಿದೆ. ಆದರೆ ಇನ್ನೂ ಚಿತ್ರೀಕರಣ ಪ್ರಾರಂಭವಾಗಿಲ್ಲ. ಸದ್ಯ ಪ್ರಿ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ ಸಿನಿಮಾತಂಡ ಜುಲೈನಿಂದ ಚಿತ್ರೀಕರಣ ಪ್ರಾರಂಭ ಮಾಡಲು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ.

  ಜುಲೈನಿಂದ ದೀಪಿಕಾ ಚಿತ್ರೀಕರಣದಲ್ಲಿ ಭಾಗಿ

  ಜುಲೈನಿಂದ ದೀಪಿಕಾ ಚಿತ್ರೀಕರಣದಲ್ಲಿ ಭಾಗಿ

  ದೀಪಿಕಾ ಪಡುಕೋಣೆ ಸಹ ಜೂನ್ ಒಳಗೆ ಕಮಿಟ್ ಆಗಿರುವ ಸಿನಿಮಾಗಳ ಚಿತ್ರೀಕರಣ ಮುಗಿಸಿ ಜುಲೈಯಿಂದ ಪ್ರಭಾಸ್ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಅಂದಹಾಗೆ ದೀಪಿಕಾ, ಪ್ರಭಾಸ್ ಮತ್ತು ನಾಗ್ ಅಶ್ವಿನ್ ಸಿನಿಮಾಗೆ ಸುದೀರ್ಘವಾದ ಕಾಲ್ ಶೀಟ್ ನೀಡಿದ್ದಾರೆ.

  75 ದಿನಗಳ ಕಾಲ್ ಶೀಟ್ ನೀಡಿರುವ ದೀಪಿಕಾ

  75 ದಿನಗಳ ಕಾಲ್ ಶೀಟ್ ನೀಡಿರುವ ದೀಪಿಕಾ

  ಬಾಲಿವುಡ್ ಮೂಲಗಳ ಪ್ರಕಾರ ದೀಪಿಕಾ ಪಡುಕೋಣೆ ಜುಲೈನಿಂದ ತೆಲುಗು ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಲಿದ್ದಾರೆ. ಈ ಸಿನಿಮಾಗಾಗಿ ದೀಪಿಕಾ ಬರೋಬ್ಬರಿ 75 ದಿನಗಳ ಕಾಲ್ ಶೀಟ್ ನೀಡಿದ್ದಾರೆ ಎನ್ನಲಾಗುತ್ತಿದೆ. ಚಿತ್ರದಲ್ಲಿ ದೀಪಿಕಾ ವಿಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದುವರೆಗೂ ಮಾಡಿರದ ಪಾತ್ರ ಇದಾಗಿರಲಿದೆ ಎಂಬ ಸುದ್ದಿಯಿದೆ.

  ಪತಿ ರಣ್ವೀರ್ ಸಿಂಗ್ 'ಸರ್ಕಸ್' ಸೇರಿದ ನಟಿ ದೀಪಿಕಾ ಪಡುಕೋಣೆಪತಿ ರಣ್ವೀರ್ ಸಿಂಗ್ 'ಸರ್ಕಸ್' ಸೇರಿದ ನಟಿ ದೀಪಿಕಾ ಪಡುಕೋಣೆ

  ಎರಡು ಸಿನಿಮಾಗಳಲ್ಲಿ ಪ್ರಭಾಸ್ ಬ್ಯುಸಿ

  ಎರಡು ಸಿನಿಮಾಗಳಲ್ಲಿ ಪ್ರಭಾಸ್ ಬ್ಯುಸಿ

  ಚಿತ್ರದಲ್ಲಿ ಹೆಚ್ಚು ವಿಎಫ್‌ಎಕ್ಸ್ ಕೆಲಸಗಳು ಇರಲಿದ್ದು, ಸಿನಿಮಾ ರಿಲೀಸ್ ಮತ್ತಷ್ಟು ತಡವಾಗುವ ಸಾಧ್ಯತೆ ಇದೆ. ಇನ್ನು ಪ್ರಭಾಸ್ ಸದ್ಯ ಸಲಾರ್ ಮತ್ತು ಅದಿಪುರುಷ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಮುಗಿಯುತ್ತಿದ್ದಂತೆ ಪ್ರಭಾಸ್, ನಾಗ್ ಅಶ್ವಿನ್ ಸಿನಿಮಾ ಸೇರಿಕೊಳ್ಳಲಿದ್ದಾರೆ.

  ರಾಕಿ ಭಾಯ್ ಹಿಂದೆ ಬಿದ್ದ ತೆಲುಗಿನ ನಿರ್ಮಾಪಕರು | Filmibeat Kannada
  2 ಸಿನಿಮಾಗಳ ರಿಲೀಸ್‌ಗೆ ಕಾಯುತ್ತಿದ್ದಾರೆ ದೀಪಿಕಾ

  2 ಸಿನಿಮಾಗಳ ರಿಲೀಸ್‌ಗೆ ಕಾಯುತ್ತಿದ್ದಾರೆ ದೀಪಿಕಾ

  ಪ್ರಭಾಸ್ ಮತ್ತು ದೀಪಿಕಾ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದು ಇಬ್ಬರನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಸಹ ಕಾತುರರಾಗಿದ್ದಾರೆ. ದೀಪಿಕಾ ಸದ್ಯ 2ಸಿನಿಮಾದ ರಿಲೀಸ್‌ಗೆ ಕಾಯುತ್ತಿದ್ದಾರೆ. ಇದಲ್ಲದೆ ಶಕುನ್ ಭಾತ್ರ ನಿರ್ದೇಶನದ ಇನ್ನು ಹೆಸರಿಡದ ಸಿನಿಮಾದ ಚಿತ್ರೀಕರಣವನ್ನು ಮುಗಿಸಿರುವ ದೀಪಿಕಾ ಬಿಡುಗಡೆಗೆ ಕಾಯುತ್ತಿದ್ದಾರೆ.

  English summary
  Bollywood Actress Deepika Padukone allots 75 days for Nag Ashwin's next directional with Prabhas.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X