'ನಕಲಿ ಸೋಷಿಯಲ್ ಮೀಡಿಯಾ ಫಾಲೋವರ್ಸ್ ಹಗರಣ'ದಲ್ಲಿ ದೀಪಿಕಾ-ಪ್ರಿಯಾಂಕಾ ಹೆಸರು: ಪೊಲೀಸರ ತನಿಖೆ

ನಕಲಿ ಸೋಷಿಯಲ್ ಮೀಡಿಯಾ ಫಾಲೋವರ್ಸ್ ಹಗರಣಕ್ಕೆ ಸಂಬಂಧಿಸಿದ್ದಂತೆ ಬಾಲಿವುಡ್ ನ ಖ್ಯಾತ ನಟಿಯರಾದ ದೀಪಿಕಾ ಪಡುಕೋಣೆ ಮತ್ತು ಪ್ರಿಯಾಂಕಾ ಚೋಪ್ರಾ ಅವರನ್ನು ಮುಂಬೈ ಪೊಲೀಸರು ಪ್ರಶ್ನಿಸುವ ಸಾಧ್ಯತೆ ಇದೆ. ಸಾಮಾಜಿಕ ಜಾಲತಾಣದಲ್ಲಿ ಫಾಲೋವರ್ಸ್ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ, ನಕಲಿ ಸೋಷಿಯಲ್ ಮೀಡಿಯಾ ಫಾಲೋವರ್ಸ್ ಜೊತೆ ಕೈ ಜೋಡಿಸಿ ಅವರಿಗೆ ಹಣ ನೀಡಿ ಫಾಲೋವರ್ಸ್ ಹೆಚ್ಚಿಸಿಕೊಳ್ಳುತ್ತಿದ್ದಾರೆ ಎನ್ನುವ ಆರೋಪ ಇವರ ವಿರುದ್ಧ ಕೇಳಿಬಂದಿದೆ.

ಈ ಸಂಬಂಧ ಮುಂಬೈ ಪೊಲೀಸರು ಈಗಾಗಲೆ ತನಿಖೆ ನಡೆಸುತ್ತಿರುವ ಬಗ್ಗೆ ವರದಿಯಾಗಿದೆ. ಕೇವಲ ದೀಪಿಕಾ ಮತ್ತು ಪ್ರಿಯಾಂಕಾ ಚೋಪ್ರಾ ಮಾತ್ರವಲ್ಲದೆ ಇವರ ಜೊತೆ 174 ಹೈ ಪ್ರೊಫೈಲ್ ಸೆಲೆಬ್ರಿಟಿ ಖಾತೆಗಳ ಮೇಲೆ ಪೊಲೀಸರು ಕಣ್ಣಿಟ್ಟಿದ್ದು, ಎಲ್ಲರನ್ನೂ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಖ್ಯಾತ ಸಿನಿಮಾ ತಾರೆಯರು, ಕ್ರೀಡಾ ಸೆಲೆಬ್ರಿಟಿಗಳು ಮತ್ತು ಬಿಲ್ಡರ್ಸ್ ಗಳ ಹೆಸರು ಈ ಹಗರಣದಲ್ಲಿ ಕೇಳಿಬರುತ್ತಿದೆ.

ವರದಿಗಳ ಪ್ರಕಾರ ನಕಲಿ ಸೋಷಿಯಲ್ ಮೀಡಿಯಾ ಫಾಲೋವರ್ಸ್ ಹಗರಣದಲ್ಲಿ ಸುಮಾರು 54ಕ್ಕು ಹೆಚ್ಚು ಸಂಸ್ಥೆಗಳು ಕೈಜೋಡಿಸಿವೆ ಎಂದು ಮುಂಬೈನ ಜಂಟಿ ಪೊಲೀಸ್ ಆಯುಕ್ತ ವಿನಯ್ ಕುಮಾರ್ ಚೌಬೆ ತಿಳಿಸಿದ್ದಾರೆ. ನಕಲಿ ಸೋಷಿಯಲ್ ಮೀಡಿಯಾ ಫಾಲೋವರ್ಸ್ ತನಿಖೆಗೆ ನೆರವು ನೀಡುವ ಸಲುವಾಗಿ ಕ್ರೈಮ್ ಬ್ರಾಂಚ್ ಮತ್ತು ಸೈಬರ್ ಸೆಲ್ ಒಳಗೊಂಡ ತಂಡವನ್ನು ರಚಿಸಲಾಗಿದೆ ಎಂದು ವಿನಯ್ ಕುಮಾರ್ ಹೇಳಿದ್ದಾರೆ.

Deepika Padukone And Priyanka Chopra To Be Questioned By Mumbai Police In Fake Followers Scam

ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆಗಳನ್ನು ಸೃಷ್ಟಿ ಮಾಡಿ ಫಾಲೋವರ್ಸ್ ಹೆಚ್ಚಿಸುವ ದೊಡ್ಡ ದಂಧೆಯೇ ನಡೆಯುತ್ತಿದೆ. ಇದಕ್ಕಾಗಿಯೆ ಸಾಕಷ್ಟು ಕಂಪನಿಗಳು ಭೂಗತವಾಗಿ ಕೆಲಸ ಮಾಡುತ್ತಿವೆ. ಅಂಥವರ ಜೊತೆ ಖ್ಯಾತ ಸೆಲೆಬ್ರಿಟಿಗಳು ಕೈ ಜೋಡಿಸಿದ್ದಾರೆ ಎನ್ನುವ ಆರೋಪ ಕೇಳಿಬರುತ್ತಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಅಭಿಷೇಕ್ ದಿನೇಶ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಈತ ವಿದೇಶಿ ಕಂಪನಿ ಜೊತೆ ಕೈಜೋಡಿಸಿದ್ದ ಎಂದು ಹೇಳಲಾಗುತ್ತಿದೆ. ಆ ಕಂಪನಿಯನ್ನು ತನಿಕೆ ನಡೆಸುವ ಸಾಧ್ಯತೆ ಇದೆ.

More from Filmibeat

English summary
Bollywood Actress Deepika Padukone And Priyanka chopra and other celebrities to be questioned by mumbai police in fake Social media followers scam.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X