ಕೆಂಪು ಬಣ್ಣದ ಸೀರೆ, ಹಣೆಯಲ್ಲಿ ಸಿಂಧೂರ, ಪತಿಯ ಜೊತೆ ತಿರುಪತಿಯಲ್ಲಿ ದೀಪಿಕಾ

Recommended Video

Ranveer and Deepika get blessings in Tirupati on a special occasion | Oneindia Kannada

ಬಾಲಿವುಡ್ ನ ಬ್ಯೂಟಿಪುಲ್ ಅಂಡ್ ಟ್ಯಾಲೆಂಟೆಡ್ ನಟಿ ದೀಪಿಕಾ ಪಡುಕೋಣೆ ಪತಿ ರಣ್ವೀರ್ ಜೊತೆ ತಿರುಪತಿಯಲ್ಲಿ ಮಿಂಚುತ್ತಿದ್ದಾರೆ. ಅಂದ್ಹಾಗೆ ಇವತ್ತು ರಣ್ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆಗೆ ಮೊದಲ ವರ್ಷದ ಮದುವೆ ವಾರ್ಷಿಕೋತ್ಸವದ ಸಂಭ್ರಮ. ಕಳೆದ ವರ್ಷ ಇದೆ ದಿನ ಅಂದರೆ ನವೆಂಬರ್ 15ರಂದು ದೀಪ್-ವೀರ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮೊದಲ ವರ್ಷದ ಸಂಭ್ರಮಾಚರಣೆಯನ್ನು ದೀಪಿಕಾ ದಂಪತಿ ವೆಂಕಟೇಶ್ವರನ ಸನ್ನಿದಿ ತಿರುಪತಿಯಲ್ಲಿ ಆಚರಿಸುತ್ತಿದ್ದಾರೆ.

ಇಬ್ಬರು ನಿನ್ನೆಯೆ(ನವೆಂಬರ್ 13) ತಿರುಪತೆಗೆ ತೆರಳಿದ್ದಾರೆ. ಇಂದು ವೆಂಕಟೇಶ್ವರನ ದರ್ಶನ ಪಡೆದಿದ್ದಾರೆ. ದೀಪಿಕಾ-ರಣ್ವೀರ್ ದಂಪತಿಗೆ ಕುಟುಂಬದವರು ಸಾಥ್ ನೀಡಿದ್ದಾರೆ. ದೀಪಿಕಾ ತಂದೆ ತಾಯಿ ಮತ್ತು ರಣ್ವೀರ್ ಸಿಂಗ್ ತಂದೆ-ತಾಯಿ ಕೂಡ ತಿರುಪತಿಗೆ ತೆರಳಿದ್ದಾರೆ. ಇಬ್ಬರು ದೇವರ ದರ್ಶನ ಪಡೆದು ಫೋಟೋಗೆ ಪೋಸ್ ನೀಡಿದ್ದಾರೆ. ಬ್ಯೂಟಿಫುಲ್ ದಂಪತಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Deepika Padukone And Ranveer Singh Are Celebrating Wedding Anniversary In Tirupati

ಅಂದ್ಹಾಗೆ ದೀಪಿಕಾ ಲುಕ್ ಗೆ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೆ ಹರಿದುಬರುತ್ತಿವೆ. ಕೆಂಪು ಮತ್ತು ಗೋಲ್ಡ್ ಬಣ್ಣದ ಬಾರ್ಡರ್ ಸೀರೆ ಧರಿಸಿದ್ದಾರೆ. ಡಿಂಪಲ್ ಸುಂದರಿ ತೊಟ್ಟಿರುವ ಆಭರಣ ಕೂಡ ಆಕರ್ಷವಾಗಿದೆ. ಹಣೆಗೆ ಇಟ್ಟಿರುವ ಸಿಂಧೂರ ದೀಪಿಕಾ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. ಪತಿ ರಣ್ವೀರ್ ಕೂಡ ಬಿಳಿ ಮತ್ತು ಗೋಲ್ಡನ್ ಬಣ್ಣದ ಶೇರ್ವಾನಿ ಧರಿಸಿದ್ದಾರೆ. ಇಬ್ಬರ ಲುಕ್ ಎಲ್ಲರ ಗಮನ ಸೆಳೆಯುತ್ತಿದೆ.

Deepika Padukone And Ranveer Singh Are Celebrating Wedding Anniversary In Tirupati

ಈ ಜೋಡಿಯ ಮದುವೆ ಕಳೆದ ವರ್ಷ ಇಟಲಿಯ ಲೇಕ್ ಕೊಮೊದಲ್ಲಿ ಅದ್ದೂರಿಯಾಗಿ ನೆರವೇರಿತ್ತು. ಇಬ್ಬರ ಮದುವೆಗೆ ಬಾಲಿವುಡ್ ಗಣ್ಯರು ಸೇರಿದಂತೆ ಕುಟುಬಂದವರು ಮತ್ತು ಸ್ನೇಹಿತರು ಸಾಕ್ಷಿಯಾಗಿದ್ದರು. ಮದುವೆ ನಂತರ ಬೆಂಗಳೂರಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಮದುವೆ ನಂತರ '83' ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸಿದ್ದಾರೆ. ಇನ್ನು ದೀಪಿಕಾ ಅಭಿನಯದ 'ಚಪಾಕ್' ಸಿನಿಮಾ ರಿಲೀಸ್ ಗೆ ತಯಾರಿನಡೆಯುತ್ತಿದೆ. ಜೊತೆಗೆ ಮಹಾಭಾರತದ ದ್ರೌಪದಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

More from Filmibeat

English summary
Bollywood actress Deepika Padukone and Ranveer Singh are celebrating wedding anniversary in Tirupati.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X