ಗರ್ಭಿಣಿಯಾಗಿದ್ದೇ ಸುಳ್ಳು ಎಂದವರೆಲ್ಲ ಗಪ್ ಚುಪ್, ಮುದ್ದಾದ ಮಗುವಿಗೆ ಜನ್ಮ ನೀಡಿದ ದೀಪಿಕಾ ಪಡುಕೋಣೆ..!

ನಮ್ಮಲ್ಲಿ ಕೆಲವರು ಹೇಗೆ ಅಂದರೆ ಮದ್ವೆ ವಯಸ್ಸಾದರೆ ಇನ್ನೂ ಮದ್ವೆಯಾಗಿಲ್ವಾ ಎಂದು ಹೋದಲ್ಲಿ, ಬಂದಲ್ಲಿ ಕೇಳಲು ಶುರು ಮಾಡುತ್ತಾರೆ. ಇನ್ನೂ ಮದ್ವೆಯಾದರೆ, ಆರು ತಿಂಗಳು ಕೂಡ ಕಳೆದಿರುವುದಿಲ್ಲ. ಅಷ್ಟರಲ್ಲಿಯೇ ಬಂದು ಏನು ಗುಡ್ ನ್ಯೂಸ್ ಇಲ್ವಾ ಎಂಬ ಪ್ರಶ್ನೆ ಕೇಳಲು ಶುರುಮಾಡುತ್ತಾರೆ. ಆಗ ಇಲ್ಲ ಎಂದು ಹೇಳಿದರೆ ಮುಗಿಯಿರು. ಅರೇ.. ಇನ್ನೂ ಮಗುನೇ ಇಲ್ವಂತೆ ಅನ್ನೋ ವಿಚಾರಕ್ಕೆ ಬಗೆ ಬಗೆಯ ಬಣ್ಣ ಬಳಿದು ಸಂಬಂಧಕ್ಕೆ ಕೊಳ್ಳಿ ಇಡುತ್ತಾರೆ. ಗುಡ್ ನ್ಯೂಸ್ ಇದೆ ಎಂದು ಹೇಳಿದರೆ, ಎಲ್ಲಿ ಬೇಬಿ ಬಂಪ್ ಕಾಣ್ತಾನೇ ಇಲ್ಲವಲ್ಲಾ ಎನ್ನುತ್ತಾರೆ. ಇವೆಲ್ಲ ಮಾತುಗಳನ್ನು ಕಳೆದ ಆರು ವರ್ಷಗಳಿಂದ ಕೇಳುತ್ತಾನೇ ಬಂದ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಸದ್ಯಕ್ಕೆ ತಂದೆ-ತಾಯಿಯಾಗಿ ಬಡ್ತಿ ಪಡೆದಿದ್ದಾರೆ.

ಹೌದು, ಅಸಲಿಗೆ ದೀಪಿಕಾ ಪಡುಕೋಣೆ ಗರ್ಭಿಣಿಯಾಗಿದ್ದಾರೆ ಎಂಬ ಸುದ್ದಿ ಹೊರ ಬಂದಾಗ ಅನೇಕರು ನಂಬಿರಲಿಲ್ಲ. ಹೀಗಾಗಿಯೇ ಕೆಲವರು ಬೇಬಿ ಬಂಪ್ ಕಾಣ್ತಿಲ್ಲವಲ್ಲ ಎಂದು ಕೊಂಕು ಮಾತನಾಡಲು ಶುರು ಮಾಡಿದ್ದರು. ಆಕೆ ಗರ್ಭಿಣಿ ಅನ್ನೋದೆಲ್ಲ ಸುಳ್ಳು ಎನ್ನಲು ಶುರು ಮಾಡಿದರು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬಾಡಿಗೆ ತಾಯ್ತನದ ಮೂಲಕ ದೀಪಿಕಾ ಪಡುಕೋಣೆ ತಾಯಿಯಾಗುತ್ತಿದ್ದಾರೆ ಎಂದು ಪುಕಾರು ಹಬ್ಬಿಸಿದರು. ಆದರೆ ಇದ್ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದ ದೀಪಿಕಾ ಪಡುಕೋಣೆ ತಾಯ್ತನದ ಖುಷಿಯನ್ನು ಅನುಭವಿಸುತ್ತಿದ್ದರು. ಇವತ್ತು ಆ ಖುಷಿ ಇನ್ನೂ ಇಮ್ಮಡಿಯಾಗಿದೆ. ದೀಪಿಕಾ ಪಡುಕೋಣೆ ಮತ್ತು ರಣ್‌ವೀರ್ ಸಿಂಗ್ ಮನೆಗೆ ಮಹಾಲಕ್ಷ್ಮೀಯ ಆಗಮನವಾಗಿದೆ.

Deepika Padukone and Ranveer Singh became parents to a baby girl on September 8

ನಿಜಾ. ರಣ್ ವೀರ್ ಸಿಂಗ್ ಆಗಲಿ ದೀಪಿಕಾ ಪಡುಕೋಣೆ ಆಗಲಿ ಈ ವಿಚಾರವನ್ನು ಇನ್ನೂ ಸಾಮಾಜಿಕ ಜಾಲತಾಣದ ಮೂಲಕ ಅಧಿಕೃತವಾಗಿ ಹೇಳಿಲ್ಲ. ಆದರೆ, ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿರುವಂತೆ ಮುಂಬೈನ ರಿಲಯನ್ಸ್ ಫೌಂಡೇಶನ್‌ ಹಾಸ್ಪಿಟಲ್ ಗೆ ಸೆಪ್ಟೆಂಬರ್ 07ರಂದು ಸಂಜೆ 5 ಘಂಟೆಗೆ ದಾಖಲಾಗಿದ್ದ ದೀಪಿಕಾ ಪಡುಕೋಣೆ ಇಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇನ್ನೂ ಎರಡು ದಿನದ ಹಿಂದೆ ಆಸ್ಪತ್ರೆಗೆ ದಾಖಲಾಗುವ ಮುನ್ನ ರಣ್ ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಮುಂಬೈನ ಸಿದ್ದಿ ವಿನಾಯಕನ ದರ್ಶನವನ್ನು ಪಡೆದಿದ್ದರು.

ಅಂದ್ಹಾಗೇ 2018ರಲ್ಲಿ ಇಟಲಿಯಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದ ದೀಪಿಕಾ ಪಡುಕೋಣೆ ಮತ್ತು ರಣ್‌ವೀರ್ ಸಿಂಗ್ ಅವರಿಗೆ ವೈದ್ಯರು ಈ ಹಿಂದೆ ಸೆಪ್ಟೆಂಬರ್ 28ರಂದು ಹೆರಿಗೆ ದಿನಾಂಕ ನೀಡಿದ್ದರು. ಇನ್ನೂ ಅದೇ ದಿನ ರಣ್‌ ಬೀರ್ ಕಪೂರ್ ಹುಟ್ಟುಹಬ್ಬ ಇರುವ ಕಾರಣಕ್ಕೆ ಈ ವಿಚಾರ ವ್ಯಾಪಕ ಚರ್ಚೆಯಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿತ್ತು. ಆದರೆ ಈಗ ದೀಪಿಕಾ ಪಡುಕೋಣೆ ಅವರು ಇಪ್ಪತ್ತು ದಿನಕ್ಕೂ ಮೊದಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇನ್ನೂ ಇತ್ತ ದೀಪಿಕಾ ಪಡುಕೋಣೆ ಮತ್ತು ರಣ್‌ವೀರ್ ಸಿಂಗ್ ತಂದೆ ತಾಯಿಯಾದ ವಿಚಾರ ತಿಳಿಯುತ್ತಿದ್ದಂತೆಯೇ ಅನೇಕ ಬಾಲಿವುಡ್‌ ಸೆಲೆಬ್ರೀಟಿಗಳು ಈ ಜೋಡಿಗೆ ಶುಭಾಶಯವನ್ನು ಕೋರುತ್ತಿದ್ಧಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X