ಅಲಿಬಾಗ್‌ನಲ್ಲಿ ದುಬಾರಿ ಬಂಗಲೆ ಖರೀದಿಸಿದ ದೀಪಿಕಾ-ರಣ್ವೀರ್

ಬಾಲಿವುಡ್‌ನ ತಾರಾ ದಂಪತಿ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಇತ್ತೀಚಿಗಷ್ಟೆ ಮುಂಬೈನ ರಿಜಿಸ್ಟರ್ ಕಚೇರಿಯಲ್ಲಿ ಕಾಣಿಸಿಕೊಂಡಿದ್ದಾರೆ. ರಿಜಿಸ್ಟರ್ ಕಚೇರಿಗೆ ರಣ್ವೀರ್ ದಂಪತಿ ಭೇಟಿ ನೀಡಿದ ಫೋಟೋಗಳು ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ದೀಪಿಕಾ ಮತ್ತು ರಣ್ವೀರ್ ಸಿಂಗ್ ರಿಜಿಸ್ಟರ್ ಕಚೇರಿಗೆ ಭೇಟಿ ಕೊಟ್ಟಿದ್ದು ಏಕೆ ಎಂದು ಕುತೂಹಲದಿಂದ ಹುಡುಕಿದಾಗ ತಿಳಿದು ಬಂದಿರುವುದು, ಮುಂಬೈನ ಅಲಿಬಾಗ್‌ನಲ್ಲಿ ದುಬಾರಿ ಬಂಗಲೆಯೊಂದನ್ನು ಖರೀದಿಸಿದ್ದಾರೆ ಎಂಬ ಮಾಹಿತಿ. ಅದಕ್ಕಾಗಿ ರಿಜಿಸ್ಟರ್ ಮಾಡಿಸಲು ಕಚೇರಿಗೆ ಭೇಟಿ ಕೊಟ್ಟಿದ್ದಾರೆ ಎಂಬ ವಿಚಾರ ಹೊರಬಿದ್ದಿದೆ.

ಮಿಡ್‌-ಡೇ ಪತ್ರಿಕೆ ವರದಿ ಮಾಡಿರುವಂತೆ ದೀಪಿಕಾ ಮತ್ತು ರಣ್ವೀರ್ ಸಿಂಗ್ ದಂಪತಿ ಅಲಿಬಾಗ್‌ನಲ್ಲಿ ಪ್ರತಿಷ್ಠಿತ ಕಟ್ಟಡದಲ್ಲಿ ಐಷಾರಾಮಿ ಬಂಗಲೆ ಖರೀದಿ ಮಾಡಿದ್ದಾರೆ. ಆದರೆ, ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಮುಂದೆ ಓದಿ...

ಒಂದಲ್ಲ, ಎರಡು ಬಂಗಲೆ

ಒಂದಲ್ಲ, ಎರಡು ಬಂಗಲೆ

ಮಿಡ್‌-ಡೇ ಪತ್ರಿಕೆಯ ವರದಿಯಲ್ಲಿ ತಿಳಿಸಿರುವಂತೆ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಅಲಿಬಾಗ್‌ನಲ್ಲಿ ಎರಡು ಬಂಗಲೆ ಖರೀದಿಸಿದ್ದಾರೆ. ಜೊತೆಗೆ ಒಂದು ಅಡಿಕೆ ತೋಟ ಮತ್ತು ಒಂದು ತೆಂಗಿನ ತೋಟವೂ ಸೇರಿದೆ ಎನ್ನಲಾಗಿದೆ.

ಬೆಂಗಳೂರಿನಲ್ಲಿ ಮನೆ ಖರೀದಿ

ಬೆಂಗಳೂರಿನಲ್ಲಿ ಮನೆ ಖರೀದಿ

ದೀಪಿಕಾ ಪಡುಕೋಣೆ ಬೆಂಗಳೂರಿನಲ್ಲಿ ಹೊಸ ಮನೆ ಖರೀದಿ ಮಾಡಿದ್ದಾರೆ ಎಂಬ ಸುದ್ದಿ ಇತ್ತೀಚಿಗಷ್ಟೆ ವರದಿಯಾಗಿತ್ತು. ಬೆಂಗಳೂರಿನ ಬಳ್ಳಾರಿ ರಸ್ತೆಯಲ್ಲಿರುವ ಗಂಗಾನಗರದ ಎಂಬಸಿ ಅಪಾರ್ಟ್‌ಮೆಂಟ್‌ನಲ್ಲಿ ದೀಪಿಕಾ ಪಡೊಕೋಣೆ ಫ್ಲ್ಯಾಟ್ ಕೊಂಡುಕೊಂಡಿದ್ದಾರೆ. 26 ಅಂತಸ್ತಿನ ಐಶಾರಾಮಿ ಅಪಾರ್ಟ್‌ಮೆಂಟ್ ಇದಾಗಿದ್ದು 22ನೇ ಫ್ಲೋರ್‌ನಲ್ಲಿ ಮನೆ ಹೊಂದಿದ್ದಾರೆ ಎಂದು ಹೇಳಲಾಗಿದೆ.

ಬೆಂಗಳೂರಿನಲ್ಲಿ ಪೋಷಕರು

ಬೆಂಗಳೂರಿನಲ್ಲಿ ಪೋಷಕರು

ಮೂಲತಃ ಕರ್ನಾಟಕದವರೇ ಆದ ದೀಪಿಕಾ ಪಡುಕೋಣೆ ಪ್ರಸ್ತುತ ಮುಂಬೈನಲ್ಲಿ ಪತಿ ರಣ್ವೀರ್ ಸಿಂಗ್ ಜೊತೆ ನೆಲೆಸಿದ್ದಾರೆ. ಸಮಯ ಸಿಕ್ಕಾಗೆಲ್ಲಾ ಬೆಂಗಳೂರಿಗೆ ಬಂದು ಹೋಗುವ ದಂಪತಿ, ಸಿಲಿಕಾನ್ ಸಿಟಿಯಲ್ಲೂ ಒಂದು ಸ್ವಂತ ಮನೆ ಇರಲಿ ಎಂಬ ಉದ್ದೇಶದಿಂದ ಹೊಸ ಫ್ಲ್ಯಾಟ್ ಖರೀದಿ ಮಾಡಿದ್ದಾರೆ ಎನ್ನಲಾಗಿದೆ. ಆದರೆ, ಈ ಮನೆಯಲ್ಲಿ ತಾವೇ ಉಳಿದುಕೊಳ್ಳುತ್ತಾರಾ ಅಥವಾ ಪೋಷಕರಿಗಾಗಿ ಖರೀದಿ ಮಾಡಿದ್ದಾರೆ ಎನ್ನುವುದರ ಬಗ್ಗೆ ಸ್ಪಷ್ಟನೆ ಇಲ್ಲ. ಬೆಂಗಳೂರಿನ ಈ ಹೊಸ ಮನೆಗೆ 7 ಕೋಟಿ ರು ಹಣ ನೀಡಿ ಖರೀದಿಸಿದ್ದಾರೆ ಎನ್ನಲಾಗುತ್ತಿದೆ. ಪ್ರಸ್ತುತ ದೀಪಿಕಾ ಪಡುಕೋಣೆ ಪೋಷಕರು ಮತ್ತು ಸಹೋದರಿ ಜೆಸಿ ನಗರದ ಮನೆಯಲ್ಲಿ ವಾಸವಿದ್ದಾರೆ. ಈ ಹಿಂದೆ ಅವರು ಕೋರಮಂಗಲದಲ್ಲಿ ನೆಲೆಸಿದ್ದರು.

ಮುಂಬೈ ಕನಸಿನ ಮನೆಯಲ್ಲಿ ದೀಪಿಕಾ

ಮುಂಬೈ ಕನಸಿನ ಮನೆಯಲ್ಲಿ ದೀಪಿಕಾ

ಪ್ರಸ್ತುತ, ದೀಪಿಕಾ ಪಡುಕೋಣೆ ಮುಂಬೈನ ಪ್ರತಿಷ್ಠಿತ ಪ್ರಭಾದೇವಿ ಅಪಾರ್ಟ್‌ಮೆಂಟ್‌ನಲ್ಲಿ 4 ಕೋಣೆಯ ಐಶಾರಾಮಿ ಮನೆ ವಾಸವಿದ್ದಾರೆ. ದೀಪಿಕಾ ಪಡುಕೋಣೆ ಮತ್ತು ಅವರ ತಂದೆ ಪ್ರಕಾಶ್ ಪಡುಕೋಣೆ ಹೆಸರಲ್ಲಿ ಈ ಮನೆ ನೊಂದಣಿ ಆಗಿದೆ. 2010ರಲ್ಲಿ ಈ ಮನೆ ಖರೀದಿಸಿದ್ದು, 16 ಕೋಟಿ ವೆಚ್ಚ ಭರಿಸಿದ್ದರು. ದೀಪಿಕಾ ಆಸೆಯಂತೆ ಮನೆಯೊಳಗೆ ವಿನ್ಯಾಸ ಮಾಡಲಾಗಿದ್ದು, ರಣ್ವೀರ್ ಜೊತೆ ವಿವಾಹವಾದ್ಮೇಲೆ ಇದೇ ಮನೆಯಲ್ಲಿ ನೆಲೆಸಿದ್ದಾರೆ.

ದೊಡ್ಡ ಸಿನಿಮಾಗಳಲ್ಲಿ ನಟನೆ

ದೊಡ್ಡ ಸಿನಿಮಾಗಳಲ್ಲಿ ನಟನೆ

ರೋಹಿತ್ ಶೆಟ್ಟಿ ನಿರ್ದೇಶನದಲ್ಲಿ ತಯಾರಾಗುತ್ತಿರುವ 'ಸರ್ಕಸ್' ಚಿತ್ರದಲ್ಲಿ ರಣ್ವೀರ್ ಸಿಂಗ್ ನಟಿಸುತ್ತಿದ್ದು, ದೀಪಿಕಾ ಪಡುಕೋಣೆ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಣ್ವೀರ್ ಜೊತೆ ಪೂಜಾ ಹೆಗ್ಡೆ, ವರುಣ್ ಶರ್ಮಾ, ಜಾಕ್ವೆಲಿನ್ ಫರ್ನಾಂಡೀಸ್ ಅಭಿನಯಿಸುತ್ತಿದ್ದಾರೆ. ರಣ್ವೀರ್ ಸಿಂಗ್ ನಟಿಸಿರುವ '83' ಚಿತ್ರದಲ್ಲಿಯೂ ದೀಪಿಕಾ ಅಭಿನಯಿಸಿದ್ದು, ಕಪಿಲ್ ದೇವ್ ಪಾತ್ರದಲ್ಲಿ ರಣ್ವೀರ್ ಹಾಗೂ ಅವರ ಪತ್ನಿ ಪಾತ್ರದಲ್ಲಿ ದೀಪಿಕಾ ಬಣ್ಣ ಹಚ್ಚಿದ್ದಾರೆ. ಶಾರೂಖ್ ಖಾನ್ ಅಭಿನಯಿಸುತ್ತಿರುವ ಪಠಾಣ್ ಹಾಗೂ ಪ್ರಭಾಸ್-ನಾಗ್ ಅಶ್ವಿನ್ ಜೋಡಿಯ ಚಿತ್ರದಲ್ಲೂ ದೀಪಿಕಾ ನಟಿಸುತ್ತಿದ್ದಾರೆ.

More from Filmibeat

English summary
Bollywood Actress Deepika Padukone And Ranveer Singh Buy A Lavish Bungalow In Alibaug.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X