twitter
    For Quick Alerts
    ALLOW NOTIFICATIONS  
    For Daily Alerts

    ಕ್ರಿಕೆಟ್‌ ಕ್ಷೇತ್ರಕ್ಕೆ ಕಾಲಿಡುತ್ತಿದ್ದಾರೆ ದೀಪಿಕಾ-ರಣ್ವೀರ್ ಸಿಂಗ್

    |

    ಭಾರತದಲ್ಲಿ ಕ್ರಿಕೆಟ್, ಸಿನಿಮಾ, ರಾಜಕೀಯ ರಂಗಗಳಿರುವ ಜನಪ್ರಿಯತೆ ಬೇರೆ ರಂಗಗಳಿಗಿಲ್ಲ. ಈ ಮೂರು ರಂಗಗಳು ಪರಸ್ಪರ ಆತ್ಮೀಯ ಬಂಧವನ್ನು ಹೊಂದಿವೆ.

    ಕ್ರಿಕೆಟಿಗರು ರಾಜಕಾರಣಿಗಳಾಗುವುದು, ಸಿನಿಮಾ ತಾರೆಗಳಾಗುವುದು ನಡೆದು ಬಂದಿದೆ. ರಾಜಕೀಯ ರಂಗದಲ್ಲಿರುವವರು ಸಿನಿಮಾ ನಿರ್ಮಿಸುವುದು, ರಾಜಕಾರಣಿಗಳ ಮಕ್ಕಳು ಸಿನಿಮಾ ತಾರೆಯರಾಗುವುದು ಸಹ ಸಾಮಾನ್ಯ. ಕ್ರಿಕೆಟ್‌ ಮೇಲೆ ಸಿನಿಮಾ ಹಾಗೂ ರಾಜಕಾರಣ ಎರಡರ ಪ್ರಭಾವವೂ ಇದೆ. ಬಿಸಿಸಿಐ ಮೇಲೆ ರಾಜಕಾರಣಿಗಳ ಹಿಡಿತದ ಬಗ್ಗೆ ಬಿಡಿಸಿ ಹೇಳಬೇಕಿಲ್ಲ.

    ಐಪಿಎಲ್‌ ಬಂದ ಮೇಲಂತೂ ಸಿನಿಮಾ ಹಾಗೂ ಕ್ರಿಕೆಟ್‌ನ ಆತ್ಮೀಯತೆ ಇನ್ನಷ್ಟು ಹೆಚ್ಚಾಗಿದೆ. ಐಪಿಎಲ್‌ ಉದ್ದೇಶವೇ ಮನರಂಜನೆ ಆಗಿರುವ ಕಾರಣ ಸಿನಿಮಾ ರಂಗದವರ ತೊಡಗಿಕೊಳ್ಳುವಿಕೆ ತುಸು ಹೆಚ್ಚೇ ಇದೆ. ಈಗಾಗಲೇ ಕೆಲವು ಸಿನಿಮಾ ತಾರೆಯರು ಐಪಿಎಲ್‌ ತಂಡಗಳ ಮೇಲೆ ಬಂಡವಾಳ ಹೂಡಿದ್ದಾರೆ. ಇದೀಗ ಬಾಲಿವುಡ್‌ನ ಖ್ಯಾತ ನಟ-ನಟಿಯರಾದ ರಣ್ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಐಪಿಎಲ್ ತಂಡ ಖರೀದಿಸಲು ಮುಂದಾಗಿದ್ದಾರೆ.

    Deepika Padukone And Ranveer Singh May Buy A IPL Cricket Team

    ಡಿಸೆಂಬರ್ ತಿಂಗಳಲ್ಲಿ ಐಪಿಎಲ್‌ನ ಮೆಗಾ ಆಕ್ಷನ್ ಆಗುತ್ತಿದ್ದು, ಎರಡು ಹೊಸ ತಂಡಗಳು ಐಪಿಎಲ್ ಅನ್ನು ಸೇರಿಕೊಳ್ಳಲಿವೆ. ಅದರಲ್ಲಿ ಒಂದು ತಂಡದ ಮಾಲೀಕತ್ವವನ್ನು ತಾರಾ ದಂಪತಿ ರಣ್ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ವಹಿಸಿಕೊಳ್ಳಲಿದ್ದಾರೆ.

    ಈಗಾಗಲೇ ಶಾರುಖ್ ಖಾನ್, ಜೂಹಿ ಚಾವ್ಲಾ, ಶಿಲ್ಪಾ ಶೆಟ್ಟಿ, ಪ್ರೀತಿ ಜಿಂಟಾ ಅವರುಗಳು ಐಪಿಎಲ್ ತಂಡ ಹೊಂದಿದ್ದಾರೆ. ಇನ್ನೂ ಕೆಲವು ಚಿತ್ರತಾರೆಯರು ಐಪಿಎಲ್ ತಂಡಗಳ ಸಹಭಾಗಿತ್ವವವನ್ನು ಹೊಂದಿದ್ದಾರೆ. ಇದೀಗ ರಣ್ವೀರ್ ಸಿಂಗ್-ದೀಪಿಕಾ ಸಹ ಐಪಿಎಲ್ ತಂಡ ಖರೀದಿಗೆ ಮುಂದಾಗಿದ್ದಾರೆ.

    ವಿಶೇಷವೆಂದರೆ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಐಪಿಎಲ್ ತಂಡವನ್ನು ಮ್ಯಾಂಚೆಸ್ಟರ್ ಯುನೈಟೆಡ್‌ನ ಸಹಭಾಗಿತ್ವದಲ್ಲಿ ಖರೀದಿಸಲಿದ್ದಾರೆ. ಹೊಸ ತಂಡಗಳು 3000 ರಿಂದ 3500 ಕೋಟಿ ಹಣಕ್ಕೆ ವ್ಯಾಪಾರವಾಗಲಿದೆ ಎನ್ನಲಾಗುತ್ತಿದೆ.

    ದೀಪಿಕಾ ಪಡುಕೋಣೆ ಸ್ವತಃ ಕ್ರೀಡಾಪಟು ಆಗಿದ್ದಾರೆ. ಭಾರತದ ಹೆಸರಾಂತ ಬ್ಯಾಡ್‌ಮಿಂಟನ್ ಪಟು ಪ್ರಕಾಶ್ ಪಡುಕೋಣೆ ಮಗಳಾಗಿರುವ ದೀಪಿಕಾ, ಸ್ವತಃ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿದ್ದರು. ಇನ್ನು ರಣ್ವೀರ್ ಸಿಂಗ್ ಎನ್‌ಬಿಎ ಕ್ರೀಡಾಕೂಟದೊಂದಿಗೆ ಗುರುತಿಸಿಕೊಂಡಿದ್ದಾರೆ. ಈ ಜೋಡಿಗೆ ಕ್ರೀಡೆ ಮೇಲೆ ಒಲವಿದ್ದು ಹಾಗಾಗಿಯೇ ಐಪಿಎಲ್ ತಂಡ ಖರೀದಿಗೆ ಮುಂದಾಗಿದ್ದಾರೆ.

    ದೀಪಿಕಾ ಪಡುಕೋಣೆ-ರಣ್ವೀರ್ ಮಾತ್ರವೇ ಅಲ್ಲದೆ ಇನ್ನೂ ಕೆಲವು ದೊಡ್ಡ ಹೆಸರಿನ ಉದ್ಯಮಿಗಳು ಸಹ ಈ ಬಾರಿ ಹೊಸ ತಂಡಗಳನ್ನು ಖರೀದಿಸಲು ಮುಂದೆ ಬಂದಿದ್ದಾರೆ. ಅದಾನಿ ಗ್ರೂಪ್, ಸಂಜೀವ್ ಗೋಯೆಂಕಾ ಗ್ರೂಪ್, ಪ್ರಾಮಿನೆಂಟ್ ಬ್ಯಾಂಕರ್, ಟೋರೆಂಟ್ ಸಂಸ್ಥೆಗಳು ಸಹ ಕ್ರಿಕೆಟ್ ತಂಡ ಖರೀದಿಸಲು ಮುಂದೆ ಬಂದಿವೆ. ಡಿಸೆಂಬರ್ ತಿಂಗಳಲ್ಲಿ ಮೆಗಾ ಆಕ್ಷನ್ ನಡೆಯಲಿದ್ದು, 2022 ರ ಐಪಿಎಲ್‌ಗೆ ಈಗಿರುವ ಎಂಟು ತಂಡಗಳ ಜೊತೆಗೆ ಇನ್ನೆರಡು ಎಕ್ಸ್‌ಟ್ರಾ ತಂಡಗಳು ಸೇರಿಕೊಳ್ಳಲಿವೆ.

    English summary
    Deepika Padukone and Ranveer Singh may buy a IPL cricket team. BCCI introducing two new teams for IPL 2022.
    Saturday, October 23, 2021, 18:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X