ಸಲಿಂಗಕಾಮ ತೀರ್ಪನ್ನು ವಿಭಿನ್ನವಾಗಿ ಸ್ವಾಗತಿಸಿದ ದೀಪಿಕಾ, ರಣ್ವೀರ್
ಸಲಿಂಗಕಾಮದ ಬಗ್ಗೆ ನಿನ್ನೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. 'ಸಲಿಂಗಕಾಮ ಅಪರಾಧವಲ್ಲ' ಎಂಬ ತೀರ್ಪು ಹೊರ ಬಂದಿದ್ದನ್ನು ಬಾಲಿವುಡ್ ಹಾಗೂ ಸ್ಯಾಂಡಲ್ ವುಡ್ ನ ಅನೇಕ ಸಿನಿಮಾ ತಾರೆಯರು ಸ್ವಾಗತಿಸಿದ್ದಾರೆ.
ಅದರಲ್ಲಿಯೂ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ರಣ್ವೀರ್ ಸಿಂಗ್ ಈ ತೀರ್ಪನ್ನು ತಮ್ಮದೆ ರೀತಿಯಲ್ಲಿ ವೆಲ್ ಕಮ್ ಮಾಡಿದ್ದಾರೆ. ಕಾಮನಬಿಲ್ಲು ಬಣ್ಣದ ಬಟ್ಟೆ ತೊಟ್ಟಿರುವ ದೀಪಿಕಾ ಡ್ಯಾನ್ ಮಾಡಿ ತಮ್ಮ ಸಂತಸ ಹಂಚಿಕೊಂಡಿದ್ದಾರೆ.
ರಣ್ವೀರ್ ಸಿಂಗ್ ಕೂಡ ಕಾಮನಬಿಲ್ಲು ಬಣ್ಣದ ಬಟ್ಟೆಯನ್ನು ಉಟ್ಟು ತೀರ್ಪನ್ನು ಸ್ವಾಗತಿಸಿದ್ದಾರೆ. ದೀಪಿಕಾ ಹಾಗೂ ರಣಬೀರ್ ಇಬ್ಬರು ತಮ್ಮ ಇನ್ಟಾಗ್ರಾಮ್ ಖಾತೆಯಲ್ಲಿ ಡ್ಯಾನ್ಸ್ ವಿಡಿಯೋ ಹಾಕಿದ್ದಾರೆ. ಈ ರೀತಿ ವಿಭಿನ್ನವಾಗಿ ತೀರ್ಪನ ಪರ ಈ ಸಿನಿ ತಾರೆಯರು ಧ್ವನಿ ಎತ್ತಿದ್ದಾರೆ.

ಅಂದಹಾಗೆ, 'ಸಲಿಂಗಕಾಮ ಅಪರಾಧವಲ್ಲ' ಎಂಬ ತೀರ್ಪಿನ ಬಗ್ಗೆ ಕನ್ನಡ ಚಿತ್ರರಂಗದ ಅನೇಕರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ್, ಪಾರೂಲ್ ಯಾದವ್, ನಟ ಚೇತನ್, ಆರ್ ಜೆ ನೇತ್ರ ಸೇರಿದಂತೆ ಅನೇಕರು ತೀರ್ಪಿನ ಬಗ್ಗೆ ಪಾಸಿಟಿವ್ ಆಗಿ ಮಾತನಾಡಿದ್ದಾರೆ.


Click it and Unblock the Notifications











