ದೀಪಿಕಾ ಪಡುಕೋಣೆ ಬಾಡಿಗಾರ್ಡ್ ತಿಂಗಳ ಸಂಬಳ ಇಷ್ಟೊಂದಾ!

ಸ್ಟಾರ್ ಕಲಾವಿದರ ಬಗ್ಗೆ ಎಲ್ಲರಿಗೂ ಗೊತ್ತಿರುತ್ತೆ. ಅವರ ಜೀವನ ಶೈಲಿ, ಸಿನಿಮಾಗಳು, ಆಹಾರ ಪದ್ದತಿ ಹೀಗೆ ಅನೇಕ ವಿಚಾರಗಳ ಬಗ್ಗೆ ತಿಳಿದುಕೊಳ್ಳುತ್ತಿರುತ್ತಾರೆ. ಆದ್ರೆ ಅವರನ್ನು ಸದಾ ರಕ್ಷಣೆ ಮಾಡುತ್ತ ಅವರ ಜೊತೆಯೆ ಇರುವ ಬಾಡಿಗಾರ್ಡ್ಸ್ ಬಗ್ಗೆ ಹೆಚ್ಚು ಗೊತ್ತಿರಲು ಸಾಧ್ಯವಿಲ್ಲ. ಕೆಲವು ಸ್ಟಾರ್ ನಟರ ಬಾಡಿಗಾರ್ಡ್ ಪಡೆಯುತ್ತಿರುವ ಸಂಬಳ ಕೇಳಿದ್ರೆ ನಿಜಕ್ಕು ಅಚ್ಚರಿ ಪಡುತ್ತೀರಿ.

Recommended Video

ಚಿರಂಜೀವಿ ಸಾವಿಗೆ ಕಾರಣ ಏನಿರಬಹುದು | Doctor about Chiranjeevi Sarja

ಇತ್ತೀಚಿಗೆ ಸಲ್ಮಾನ್ ಖಾನ್ ಬಾಡಿಗಾರ್ಡ್ ಸಂಬಳದ ವಿಚಾರ ಸುದ್ದಿಯಾಗಿತ್ತು. ಆದರೀಗ ನಟಿ ದೀಪಿಕಾ ಪಡುಕೋಣೆ ಬಾಡಿಗಾರ್ಡ್ ಸಂಬಳದ ವಿಚಾರ ವೈರಲ್ ಆಗುತ್ತಿದೆ. ದೀಪಿಕಾ ಬಾಡಿಗಾರ್ಡ್ ಪಡೆಯುತ್ತಿರುವ ಸಂಬಳ ಕೇಳಿದ್ರೆ ಅಚ್ಚರಿ ಪಡುತ್ತೀರಿ. ಮುಂದೆ ಓದಿ...

ದೀಪಿಕಾ ಪಡುಕೋಣೆ ಬಾಡಿಗಾರ್ಡ್ ಜಲಾಲ್

ದೀಪಿಕಾ ಪಡುಕೋಣೆ ಬಾಡಿಗಾರ್ಡ್ ಜಲಾಲ್

ದೀಪಿಕಾ ಪಡುಕೋಣೆ ಬಾಡಿಗಾರ್ಡ್ ಹೆಸರು ಜಲಾಲ್. ದೀಪಿಕಾ ಜೊತೆ ಅನೇಕ ವರ್ಷಗಳಿಂದ ಬಾಡಿಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಬಾಡಿಗಾರ್ಡ್ ಎನ್ನುವುದಕ್ಕಿಂತ ಹೆಚ್ಚಾಗಿ ಜಲಾಲ್ ಕುಟುಂಬದ ಸದಸ್ಯರಲ್ಲಿ ಒಬ್ಬರಾಗಿದ್ದಾರೆ. ಜಲಾಲ್ ಅವರನ್ನು ದೀಪಿಕಾ ಸಹೋದನ ಹಾಗೆ ಕಾಣುತ್ತಾರೆ. ರಕ್ಷಾ ಬಂಧನ ಹಬ್ಬದಲ್ಲಿ ದೀಪಿಕಾ ಜಲಾಲ್ ಗೆ ರಾಖಿ ಕಟ್ಟುತ್ತಾರೆ.

ಬಾಡಿಗಾರ್ಡ್ ಸಂಬಳ 1 ಕೋಟಿ

ಬಾಡಿಗಾರ್ಡ್ ಸಂಬಳ 1 ಕೋಟಿ

ದೀಪಿಕಾ ಪ್ರತಿ ಹೆಜ್ಜೆಯಲ್ಲೂ ಜಲಾಲ್ ನೆರಳಿನ ಹಾಗೆ ಜೊತೆಯಲ್ಲಿಯೇ ಇರುತ್ತಾರೆ. ಸದಾ ದೀಪಿಕಾ ಅವರನ್ನು ರಕ್ಷಣೆ ಮಾಡುವ ಜಲಾಲ್ ಪಡೆಯುವ ಸಂಬಳ ಕೇಳಿದ್ರೆ ನಿಜಕ್ಕು ಅಚ್ಚರಿ ಪಡುತ್ತೀರಿ. ಹೌದು, ಜಲಾಲ್ ವರ್ಷಕ್ಕೆ ಒಂದು ಕೋಟಿ ಸಂಬಳ ಪಡೆಯುತ್ತಾರೆ. ಕಳೆದ ಮೂರು ವರ್ಷಗಳ ಹಿಂದೆ ಜಲಾಲ್ ಸಂಬಳ ವರ್ಷಕ್ಕೆ 80 ಸಾವಿರವಿದೆ ಎಂದು ಹೇಳಲಾಗುತ್ತಿತ್ತು. ಆದರೀಗ ಒಂದು ಕೋಟಿಗೆ ಏರಿಕೆಯಾಗಿದೆ.

ತಿಂಗಳಿಗೆ 10 ಲಕ್ಷ ಸಂಬಳ

ತಿಂಗಳಿಗೆ 10 ಲಕ್ಷ ಸಂಬಳ

ತಿಂಗಳಿಗೆ 10 ಲಕ್ಷ ಸಂಬಳ ಪಡೆಯುತ್ತಿದ್ದಾರೆ. ಜಲಾಲ್ ದೀಪಿಕಾ ಅವರ ವೃತ್ತಿ ಜೀವನದ ಪ್ರಮುಖ ಭಾಗವಾಗಿದ್ದಾರೆ. ಮನೆಯಿಂದ ಹೊರಬಂದರೆ ಸಾಕು ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ, ಯಾವುದೆ ಕಾರ್ಯಕ್ರಮ ಅಥವಾ ಪ್ರಮೋಷನ್ ವೇಳೆ ಅಭಿಮಾನಿಗಳು ಮುಗಿಬೀಳುತ್ತಿರುತ್ತಾರೆ, ಸದಾ ದೀಪಿಕಾ ಅವರನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುವ ಜಲಾಲ್ ಗೆ ವರ್ಷಕ್ಕೆ ಒಂದು ಕೋಟಿ ಸಂಬಳ ಕೊಡುತ್ತಿದ್ದಾರೆ.

ದೀಪಿಕಾ ಸಿನಿಮಾಗಳು

ದೀಪಿಕಾ ಸಿನಿಮಾಗಳು

ದೀಪಿಕಾ ಸದ್ಯ 83 ಸಿನಿಮಾದ ರಿಲೀಸ್ ಗೆ ಕಾಯುತ್ತಿದ್ದಾರೆ. ಕೊನೆಯದಾಗಿ ಚಪಾಕ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಚಪಾಕ್ ಸಿನಿಮಾದಲ್ಲಿ ದೀಪಿಕಾ ಅಭಿನಯಕ್ಕೆ ಅಭಿಮಾನಿಗಳ ಮೆಚ್ಚುಗೆಯ ಮಹಾಪೂರ ಹರಿದು ಬಂದಿತ್ತು. ಇನ್ನೂ ಮುಂದಿನ ಸಿನಿಮಾದ ಬಗ್ಗೆ ದೀಪಿಕಾ ಅಧಿಕೃತವಾಗಿ ಬಹಿರಂಗ ಪಡಿಸಿಲ್ಲ.

More from Filmibeat

English summary
Actress Deepika Padukone Bodyguard Jalal Annual salary.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X