twitter
    For Quick Alerts
    ALLOW NOTIFICATIONS  
    For Daily Alerts

    ಕಾನ್ ಫೆಸ್ವಿವಲ್‌ನಲ್ಲಿ ದೀಪಿಕಾ ಧರಿಸಿದ ಸೀರೆ 'ಬಂಗಾಳದ ಹುಲಿ'ಯಿಂದ ಪಡೆದ ಸ್ಫೂರ್ತಿ: ಏನಿದೆ ವಿಶೇಷತೆ?

    |

    ಅಂತರಾಷ್ಟ್ರೀಯ ಕಾನ್‌ ಚಲನಚಿತ್ರೋತ್ಸವ ಅದ್ಧೂರಿಯಾಗಿ ಆರಂಭಗೊಂಡಿದ್ದು, ಮೇ 28 ರವರೆಗೂ ಈ ಚಲನಚಿತ್ರೋತ್ಸವ ಉತ್ಸವ ನಡೆಯಲಿದೆ. ಈಗಾಗಲೇ ಭಾರತದ ಸೆಲೆಬ್ರೆಟಿಗಳು ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಕಾನ್ಸ್‌ನಲ್ಲಿ ಬೀಡು ಬಿಟ್ಟಿದ್ದಾರೆ. ಇನ್ನು ಕಾನ್ ಚಲನಚಿತ್ರೋತ್ಸವದಲ್ಲಿ ಜ್ಯೂರಿಯಾಗಿರುವ ನಟಿ ದೀಪಿಕಾ ಪಡುಕೋಣೆ ಸೀರೆಯುಟ್ಟು ರೆಟ್ರೋ ಲುಕ್‌ನಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ.

    ನಿನ್ನೆಯೇ (ಮೇ 17) ಬಾಲಿವುಡ್‌ನ ಹಲವು ಮಂದಿ ರೆಡ್ ಕಾರ್ಪೆಟ್‌ ಮೇಲೆ ಹೆಜ್ಜೆ ಹಾಕಿದ್ದಾರೆ. ಈ ಬಾರಿ ದೀಪಿಕಾ ಪಡುಕೋಣೆ ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ರೆಟ್ರೋ ಲುಕ್‌ನಲ್ಲಿ ಬ್ಲಾಕ್‌ ಅಂಡ್ ಗೋಲ್ಡ್‌ ಕಲರ್ ಸ್ಯಾರಿಯಲ್ಲಿ ಮಿಂಚಿದ್ದಾರೆ. ಇದಕ್ಕೂ ಮೊದಲು ಗ್ರೀನ್‌ ಪ್ಯಾಂಟ್‌ ಅಂಡ್ ಪ್ಲವರ್ ಪ್ರಿಂಟೆಡ್ ಶರ್ಟ್‌ನಲ್ಲಿ ಮಿಂಚಿದ್ದರು. ಸದ್ಯ ಈ ಎರಡು ಡ್ರೆಸ್‌ ಆನ್‌ಲೈನ್‌ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದೆ.

    ಕಾನ್ ಚಿತ್ರೋತ್ಸವ: ಆರಂಭ ಯಾವಾಗ? ನೋಡುವುದು ಎಲ್ಲಿ? ಭಾಗವಹಿಸುವವರು ಯಾರು? ಇಲ್ಲಿದೆ ಮಾಹಿತಿಕಾನ್ ಚಿತ್ರೋತ್ಸವ: ಆರಂಭ ಯಾವಾಗ? ನೋಡುವುದು ಎಲ್ಲಿ? ಭಾಗವಹಿಸುವವರು ಯಾರು? ಇಲ್ಲಿದೆ ಮಾಹಿತಿ

    ನಟಿ ದೀಪಿಕಾ ಧರಿಸಿದ ಬ್ಲಾಕ್ ಅಂಡ್ ಗೋಲ್ಡ್‌ ಸ್ಯಾರಿಯನ್ನು ಭಾರತೀಯ ವಸ್ತ್ರ ವಿನ್ಯಾಸಕ ಸಬ್ಯಾಸಾಚಿ ಮುಖರ್ಜಿ ವಿನ್ಯಾಸಗೊಳಿಸಿದ್ದಾರೆ. ಸಬ್ಯಾಸಾಚಿ ಅವರು ಬೆಂಗಾಲಿ ಟೈಗರ್‌ನಿಂದ ಸ್ಪೂರ್ತಿ ಪಡೆದು ಅದೇ ಶೈಲಿಯಲ್ಲಿ ಸ್ಯಾರಿಯನ್ನು ಡಿಸೈನ್ ಮಾಡಿದ್ದಾರೆ. ವಿಶೇಷ ಅಂದರೆ, ಈ ಸೀರೆಯನ್ನು ಭಾರತದ ಕೆಲವು ಅತ್ಯುತ್ತಮ ವಿನ್ಯಾಸಗರಿಂದ ಪ್ರಿಂಟ್ ಮಾಡಿಸಲಾಗಿದ್ದು, ಕೈಯಿಂದಲೇ ನೇಯಿಗೆ ಮಾಡಿಸಲಾಗಿದೆ ಎಂದು ದೀಪಿಕಾ ಡಿಸೈನರ್‌ ಸಬ್ಯಾಸಾಚಿ ಮುಖರ್ಜಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇನ್ನು ದೀಪಿಕಾ ಧರಿಸಿದ್ದ ಆಭರಣಗಳು ಕೂಡ ಬೆಂಗಾಲಿ ರಾಯಲ್ ಕಲೆಕ್ಷನ್ ಆಗಿದ್ದು, ಇದು ದೀಪಿಕಾ ರೆಟ್ರೋ ಲುಕ್‌ಗೆ ಸಾಥ್ ನೀಡಿದೆ. ಇನ್ನು ನಟಿ ರೆಟ್ರೋ ಲುಕ್‌ನಲ್ಲಿ ಕಾಣುವಂತೆ ಹೇರ್‌ ಸ್ಟೈಲ್ ಹಾಗೂ ಮೇಕಪ್‌ ಕೂಡ ಮಾಡಲಾಗಿದ್ದು, ಈ ರೆಟ್ರೋ ಲುಕ್‌ ಎಲ್ಲರ ಗಮನ ಸೆಳೆದಿದೆ.

    Deepika Padukone Cannes Red Carpet Saree Inspired By Royal Bengal Tiger

    ಇದಕ್ಕೂ ಮೊದಲು ನಟಿ ದೀಪಿಕಾ ಪಡುಕೋಣೆ ಗ್ರೀನ್‌ ಪ್ಯಾಂಟ್ ಅಂಡ್ ಪ್ಲವರ್ ಪ್ರಿಂಟೆಡ್ ಡ್ರೆಸ್‌ನಲ್ಲಿ ಮಿಂಚಿದ್ದರು. ಇದನ್ನು ಕೂಡ ಸಬ್ಯಾಸಾಚಿಯವರೇ ಡಿಸೈನ್ ಮಾಡಿದ್ದು, ದೀಪಿಕಾ ಪಡುಕೋಣೆ ಮೈಸೂರು ಸಿಲ್ಕ್ ಶರ್ಟ್‌ನ್ನು ಧರಿಸಿದ್ದರು. ಶರ್ಟ್‌ ಮೇಲಿನ ಪ್ಲವರ್ ಪ್ರಿಂಟ್‌ನ್ನು ಕೈಯಲ್ಲೇ ಚಿತ್ರಿಸಲಾಗಿದೆ. ಇದರ ಜೊತೆ ದೀಪಿಕಾ ಧರಿಸಿದ್ದ ಬಹುವರ್ಣದ ರತ್ನ, ವಜ್ರದಿಂದ ಕೂಡಿದ ಮಹಾರಾಣಿ ನೆಕ್ಲೆಸ್‌ ಹಾಗೂ ವಜ್ರದ ಕಿವಿಯೊಲೆಯನ್ನು ಕೂಡ ಸಬ್ಯಾಸಾಚಿಯವರು ಡಿಸೈನ್ ಮಾಡಿದ್ದು, ಇದು ಕೂಡ ಕಾನ್‌ ಫೆಸ್ಟಿವಲ್‌ನಲ್ಲಿರುವವರ ಗಮನ ಸೆಳೆದಿದೆ.

    ಕಾನ್ ಚಿತ್ರೋತ್ಸವದಲ್ಲಿ ಭಾರತ ಪ್ರತಿನಿಧಿಸಿದ ದೀಪಿಕಾ ಪಡುಕೋಣೆ: ಈ ಹಿಂದೆ ಜ್ಯೂರಿ ಆಗಿದ್ಯಾರು?ಕಾನ್ ಚಿತ್ರೋತ್ಸವದಲ್ಲಿ ಭಾರತ ಪ್ರತಿನಿಧಿಸಿದ ದೀಪಿಕಾ ಪಡುಕೋಣೆ: ಈ ಹಿಂದೆ ಜ್ಯೂರಿ ಆಗಿದ್ಯಾರು?

    ದೀಪಿಕಾ ಪಡುಕೋಣೆ ಬಾಲಿವುಡ್ ಮಾತ್ರವಲ್ಲದೆ ಹಾಲಿವುಡ್‌ನಲ್ಲಿ ತಮ್ಮ ಚಾಪು ಮೂಡಿಸಿದ್ದಾರೆ. ಕನ್ನಡದಲ್ಲಿ ಐಶ್ವರ್ಯಾ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡಿಗರ ಮನ ಗೆದ್ದಿದ್ದರು. ದೀಪಿಕಾ ಹಲವು ಬಾರಿ ಕಾನ್ ಸಿನಿಮೋತ್ಸವದಲ್ಲಿ ಭಾಗವಹಿಸಿದ್ದರು. ಆದ್ರೀಗ ಇದೇ ಮೊದಲ ಬಾರಿಗೆ ಜ್ಯೂರಿ ತಂಡದ ಸದಸ್ಯರಾಗಿದ್ದಾರೆ.

    Deepika Padukone Cannes Red Carpet Saree Inspired By Royal Bengal Tiger

    ಸದ್ಯ ಮೇ 28 ರವರೆಗೂ ಫ್ಯಾನ್ಸ್‌ನಲ್ಲಿ ಕಾನ್ಸ್ ಉತ್ಸವ ನಡೆಯಲಿದ್ದು, ದೀಪಿಕಾ 10 ದಿನಗಳ ಕಾಲ ಕಾನ್ಸ್ ಉತ್ಸವದಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ. ಪ್ರತಿವರ್ಷ ಬಾಲಿವುಡ್‌ ಸೆಲೆಬ್ರೆಟಿಗಳಿಗೆ ಮಾತ್ರ ಕಾನ್ ಚಲನಚಿತ್ರೋತ್ಸವಕ್ಕೆ ಆಹ್ವಾನ ನೀಡಲಾಗುತ್ತಿತ್ತು. ಆದರೆ, ಈ ಬಾರಿ ದಕ್ಷಿಣ ಭಾರತದ ನಟಿಯರಿಗೂ ಆಹ್ವಾನ ನೀಡಿದ್ದು, ವಿಭಿನ್ನ ಡಿಸೈನ್ರ್ ಡ್ರೆಸ್‌ನಲ್ಲಿ ನಟಿಯರು ರೆಡ್‌ ಕಾರ್ಪೆಟ್‌ ಮೇಲೆ ಹೆಜ್ಜೆ ಹಾಕುತ್ತಿದ್ದಾರೆ.

    English summary
    Kolkata-Based Fashion Designer Sabyasachi Mukherjee’s Bengal Tiger Saree Concept. Deepika Padukone Walked The Red Carpet On The Opening Night Of The Cannes Film Festival On May 17th.
    Wednesday, May 18, 2022, 13:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X