ಸಾಮಾಜಿಕ ಜಾಲತಾಣದಲ್ಲಿ ಹೆಸರು ಬದಲಾಯಿಸಿದ ದೀಪಿಕಾ ಪಡುಕೋಣೆ: ಕಾರಣವೇನು?

ನಟಿ ದೀಪಿಕಾ ಪಡುಕೋಣೆ ಬಾಲಿವುಡ್‌ ಮಾತ್ರವಲ್ಲ ಹಾಲಿವುಡ್‌ನಲ್ಲೂ ಸಹ ಖ್ಯಾತ ಹೆಸರು. ಇಂಥಹಾ ತಮ್ಮ ಖ್ಯಾತವಾದ ಹೆಸರನ್ನೇ ಬದಲಾಯಿಸಿದ್ದಾರೆ ದೀಪಿಕಾ ಪಡುಕೋಣೆ.

Recommended Video

ಶಿವಣ್ಣನ ಈ ದಾಖಲೆಯನ್ನು ಯಾವ ಭಾಷೆಯ ಯಾವ ನಟನೂ ಮಾಡಿಲ್ಲ | Shivarajkumar | Pratham | Oneindia Kannada

ಹೌದು, ಬಾಲಿವುಡ್, ಹಾಲಿವುಡ್‌ನಲ್ಲಿ ಮಿಂಚುತ್ತಿರುವ ಈ ಕನ್ನಡತಿ ಹಠಾತ್ತಾಗಿ ಇಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹೆಸರನ್ನು ಬದಲಾಯಿಸಿ ಅಭಿಮಾನಿಗಳಿಗೆ ಆಶ್ಚರ್ಯ ತಂದಿದ್ದಾರೆ.

ದೀಪಿಕಾ ಪಡುಕೋಣೆ ತಮ್ಮ ಹೆಸರನ್ನು ಮಾತ್ರವಲ್ಲದೆ ಫ್ರೊಫೈಲ್ ಚಿತ್ರವನ್ನು ಸಹ ಬದಲಾಯಿಸಿದ್ದಾರೆ. ಆದರೆ ಹೀಗೆ ಹೆಸರು ಬದಲಾಯಿಸಿದ್ದಕ್ಕೆ ಕಾರಣ ಸಹ ಇದೆ.

ಕಾಕ್‌ಟೇಲ್ ಸಿನಿಮಾ ಬಿಡುಗಡೆಯಾಗಿ ಎಂಟು ವರ್ಷ

ಕಾಕ್‌ಟೇಲ್ ಸಿನಿಮಾ ಬಿಡುಗಡೆಯಾಗಿ ಎಂಟು ವರ್ಷ

ದೀಪಿಕಾ ಪಡುಕೋಣೆ ನಟಿಸಿದ್ದ 'ಕಾಕ್‌ಟೇಲ್' ಸಿನಿಮಾ ಬಿಡುಗಡೆ ಆಗಿ ಇಂದಿಗೆ 8 ವರ್ಷವಾಗಿದೆ. ಹಾಗಾಗಿ ಅದರ ನೆನಪಿಗೆ ದೀಪಿಕಾ ಪಡುಕೋಣೆ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳ ಹೆಸರನ್ನು ಬದಲಾಯಿಸಿದ್ದಾರೆ.

'ವೆರೊನಿಕಾ' ಎಂದು ಹೆಸರು ಬದಲಾವಣೆ

'ವೆರೊನಿಕಾ' ಎಂದು ಹೆಸರು ಬದಲಾವಣೆ

ದೀಪಿಕಾ ಪಡುಕೋಣೆ ತಮ್ಮ ಟ್ವಿಟ್ಟರ್‌ ನ ಹೆಸರನ್ನು 'ವೆರೋನಿಕಾ' ಬದಲಾಯಿಸಿದ್ದಾರೆ. ಕಾಕ್‌ಟೇಲ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಪಾತ್ರದ ಹೆಸರು ವೆರೋನಿಕಾ. ಜೊತೆಗೆ ಅದೇ ಸಿನಿಮಾದ ತಮ್ಮ ಚಿತ್ರವನ್ನು ಸಹ ಪ್ರೊಫೈಲ್ ಚಿತ್ರವನ್ನಾಗಿ ಮಾಡಿಕೊಂಡಿದ್ದಾರೆ.

ವೆರೊನಿಕಾ ಪಾತ್ರದಲ್ಲಿ ಮಿಂಚಿದ್ದರು ದೀಪಿಕಾ

ವೆರೊನಿಕಾ ಪಾತ್ರದಲ್ಲಿ ಮಿಂಚಿದ್ದರು ದೀಪಿಕಾ

ಕಾಕ್‌ಟೇಲ್ ಸಿನಿಮಾದಲ್ಲಿ ವೆರೋನಿಕಾ ಪಾತ್ರದಾರಿಯಾಗಿ ಅದ್ಭುತವಾಗಿ ನಟಿಸಿದ್ದರು ದೀಪಿಕಾ ಪಡುಕೋಣೆ. ಆ ಸಿನಿಮಾದಲ್ಲಿ ಸೈಫ್ ಅಲಿ ಖಾನ್ ಮತ್ತು ದಿಯಾನಾ ಪೆಂಟಿ ಸಹ ಮುಖ್ಯ ಭೂಮಿಕೆಯಲ್ಲಿದ್ದರು. ದೀಪಿಕಾ ನಾಯಕಿ ಹಾಗೂ ಪ್ರತಿ ನಾಯಕಿ ಎರಡು ಶೇಡ್‌ನ ಪಾತ್ರದಲ್ಲಿ ನಟಿಸಿದ್ದರು.

ವಿಮರ್ಶಕರ ಮೆಚ್ಚುಗೆ ಗಳಿಸಿದ ದೀಪಿಕಾ

ವಿಮರ್ಶಕರ ಮೆಚ್ಚುಗೆ ಗಳಿಸಿದ ದೀಪಿಕಾ

ಸಿನಿಮಾ ಬಾಕ್ಸ್‌ಆಫೀಸ್‌ನಲ್ಲಿ ಸಾಧಾರಣ ಹಿಟ್ ಆಯಿತು. ಆದರೆ ದೀಪಿಕಾ ಪಾತ್ರಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಯಿತು. ಪೂರ್ಣ ಪ್ರಮಾಣದ ನಾಯಕಿ ಪಾತ್ರ ಅಲ್ಲದಿದ್ದರೂ ಬೋಲ್ಡ್, ಜಿದ್ದಿ ಹುಡುಗಿ ವೆರೋನಿಕಾ ಪಾತ್ರದಲ್ಲಿ ಮಿಂಚಿದ್ದರು ದೀಪಿಕಾ ಪಡುಕೋಣೆ.

More from Filmibeat

English summary
Actress Deepika Padukone changed her name on twitter as Veronica.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X