ಬಾಲಿವುಡ್ ನಲ್ಲಿ 12 ವರ್ಷ ಪೂರೈಸಿದ ಬೆಂಗಳೂರು ಗರ್ಲ್

ಕರ್ನಾಟಕದಿಂದ ಹೋಗಿ ಬಾಲಿವುಡ್ ಸಿನಿಮಾ ಮಾಡಿರುವ ಅನೇಕ ನಟಿಯರು ಇದ್ದಾರೆ. ಆದರೆ, ಅಲ್ಲಿ ಸ್ಟಾರ್ ಗಿರಿ ಸಿಕ್ಕಿದ್ದು, ಮಾತ್ರ ಕೆಲವರಿಗೆ, ಆ ಸಾಲಿನಲ್ಲಿ ದೀಪಿಕಾ ಪಡುಕೋಣೆ ಪ್ರಮುಖರು.

ಬೆಂಗಳೂರು ಗರ್ಲ್ ದೀಪಿಕಾ ಪಡುಕೋಣೆ ಬಾಲಿವುಡ್ ನಂಬರ್ ಒನ್ ಹೀರೋಯಿನ್ ಆಗಿದ್ದಾರೆ. 'ಓಂ ಶಾಂತಿ ಓಂ' ಅವರ ಮೊದಲ ಸಿನಿಮಾವಾಗಿದ್ದು, ಈ ಚಿತ್ರ ಬಿಡುಗಡೆಯಾಗಿ, 12 ವರ್ಷ ಕಳೆದಿದೆ. ದೀಪಿಕಾ ಈ ಸಿನಿಮಾ ಮೂಲಕ ಬಾಲಿವುಡ್ ನಲ್ಲಿ ಮೊದಲ ಹೆಜ್ಜೆ ಇಟ್ಟಿದ್ದು, ಬಳಿಕ ಒಂದೊಂದೆ ಮೆಟ್ಟಿಲು ಹತ್ತಿ ಇಂದು ಎತ್ತರಕ್ಕೆ ಬೆಳೆದಿದ್ದಾರೆ.

ದೀಪಿಕಾ ಪಡುಕೋಣೆ ಮೊದಲ ಸಿನಿಮಾದಲ್ಲಿಯೇ ಶಾರೂಖ್ ಖಾನ್ ಜೊತೆಗೆ ನಟಿಸಿದರು. ನಿರ್ದೇಶಕಿ ಫರಾ ಖಾನ್ ದೀಪಿಕಾ ಪಡುಕೋಣೆಯನ್ನು ಹಿಂದಿ ಚಿತ್ರರಂಗಕ್ಕೆ ಲಾಂಚ್ ಮಾಡಿದರು. ಸಿನಿಮಾ ದೊಡ್ಡ ಹಿಟ್ ಆಗಿ, ದೀಪಿಕಾ ಕೂಡ ಸ್ಟಾರ್ ಆದರು. ಬಳಿಕ ಒಂದರ ನಂತರ ಒಂದು ಹಿಟ್ ಸಿನಿಮಾಗಳನ್ನು ನೀಡಿದರು.

Deepika Padukone Completes 12 Years In Bollywood

ಹಿಂದಿ ಸಿನಿಮಾಗೂ ಮುಂಚೆ ಕನ್ನಡದ ಐಶ್ವರ್ಯ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಟಿಸಿದ್ದರು. ಹೀಗೆ ಶುರುವಾದ ಇವರ ಜರ್ನಿ ಸದ್ಯ, ಹಾಲಿವುಡ್ ವರೆಗೆ ತಲುಪಿದೆ. ಒಳ್ಳೆಯ ಸಿನಿಮಾಗಳು, ಒಳ್ಳೆಯ ಪಾತ್ರಗಳು ಆಕೆಯನ್ನು ಗಟ್ಟಿಯಾಗಿ ನಿಲ್ಲುವಂತೆ ಮಾಡಿದೆ.

ಸದ್ಯ, 'ಚಪಾಕ್' ಸಿನಿಮಾದಲ್ಲಿ ದೀಪಿಕಾ ನಟಿಸುತ್ತಿದ್ದಾರೆ. ಆಸಿಡ್ ದಾಳಿಗೆ ಒಳಗಾಗಿದ್ದ ಲಕ್ಷ್ಮಿ ಅಗರ್ವಾಲ್ ಪಾತ್ರವನ್ನು ಅವರು ನಿರ್ವಹಿಸಿಸುತ್ತಿದ್ದಾರೆ. ಇದರ ಜೊತೆಗೆ '83' ಸಿನಿಮಾದಲ್ಲಿ ದೀಪಿಕಾ ನಾಯಕಿ ಆಗಿದ್ದಾರೆ. ಅವರ ಪತಿ, ನಟ ರಣ್ವೀರ್ ಸಿಂಗ್ ಈ ಸಿನಿಮಾದ ನಾಯಕ.

More from Filmibeat

English summary
Actress Deepika Padukone completes 12 years in bollywood.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X