ಬಾಲಿವುಡ್‌ನಲ್ಲಿ 18 ವರ್ಷ ಪೂರೈಸಿದ ದೀಪಿಕಾ; ಅಭಿನಂದನೆಗಳ ಮಹಾಪೂರ

By ಫಿಲ್ಮಿಬೀಟ್ ಡೆಸ್ಕ್

ಬೆಂಗಳೂರಿನ ಸುಂದರಿ, ಬಿಟೌನ್ 'ಪದ್ಮಾವತಿ' ದೀಪಿಕಾ ಪಡುಕೋಣೆ (Deepika Padukone) ಬಾಲಿವುಡ್ ಅಂಗಳದಲ್ಲಿ 18 ವರ್ಷ ಪೂರೈಸಿದ್ದಾರೆ. 2007ರಲ್ಲಿ ಶಾರುಖ್ ಖಾನ್ (Shah Rukh Khan) ಜೋಡಿಯಾಗಿ 'ಓಂ ಶಾಂತಿ ಓಂ' ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟ ದೀಪಿಕಾ ಈಗ ಭಾರತೀಯ ಚಿತ್ರರಂಗದ ಟಾಪ್ ನಟಿಯರಲ್ಲಿ ಒಬ್ಬರಾಗಿ ಮಿಂಚುತ್ತಿದ್ದಾರೆ.

ದೀಪಿಕಾ ಅವರ ಸಿನಿ ಪಯಣ ಆರಂಭವಾಗಿದ್ದು 2006ರಲ್ಲಿ ತೆರೆಕಂಡ ಕನ್ನಡದ 'ಐಶ್ವರ್ಯ' ಚಿತ್ರದ ಮೂಲಕ. ಈ ಚಿತ್ರದ ಯಶಸ್ಸಿನ ಬೆನ್ನಲ್ಲೇ ಅವರಿಗೆ ಬಾಲಿವುಡ್‌ನಿಂದ ಜಾಕ್‌ಪಾಟ್ ಹೊಡೆಯಿತು. ನಿರ್ದೇಶಕಿ ಫರಾಹ್ ಖಾನ್ ಅವರ ಮೆಗಾ ಪ್ರಾಜೆಕ್ಟ್ 'ಓಂ ಶಾಂತಿ ಓಂ'ನಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡು ಭಾರೀ ಮೆಚ್ಚುಗೆ ಗಳಿಸಿದರು. ದೀಪಿಕಾ ತಮ್ಮ ಮೊದಲ ಹಿಂದಿ ಚಿತ್ರದಲ್ಲೇ ಅತ್ಯುತ್ತಮ ಉದಯೋನ್ಮುಖ ನಟಿ ಪ್ರಶಸ್ತಿ ಪಡೆದು, ಬಾಲಿವುಡ್‌ನ ಬಹು ಬೇಡಿಕೆ ನಟಿಯಾಗಿ ನೆಲೆಯೂರಿದರು.

Deepika Padukone Completes 18 Glorious Years in Bollywood From Om Shanti Om to Global Stardom

ಆರಂಭದಲ್ಲಿ ಗ್ಲಾಮರ್ ಪಾತ್ರಗಳ ಮೂಲಕ ಗಮನ ಸೆಳೆದ ದೀಪಿಕಾ, ನಂತರ ತಮ್ಮ ಕರಿಯರ್‌ನಲ್ಲಿ ಬೋಲ್ಡ್ ನಿರ್ಧಾರಗಳನ್ನು ತೆಗೆದುಕೊಂಡು, 'ಕಾಕ್‌ಟೇಲ್'(2012) ಚಿತ್ರದಲ್ಲಿನ ಪಾತ್ರದ ಸೂಕ್ಷ್ಮ ಅಭಿನಯದಿಂದ ಮೋಡಿ ಮಾಡಿದ್ದರು. ನಂತರ ಬಂದ 'ಯೇ ಜವಾನಿ ಹೈ ದಿವಾನಿ' ಮತ್ತು 'ಚೆನ್ನೈ ಎಕ್ಸ್‌ಪ್ರೆಸ್‌' ಚಿತ್ರಗಳು ಆಕೆಯನ್ನು ಸೂಪರ್‌ ಸ್ಟಾರ್‌ ಪಟ್ಟಕ್ಕೇರಿಸಿದ್ದವು. ಸಂಜಯ್ ಲೀಲಾ ಬನ್ಸಾಲಿ ಅವರ ನಿರ್ದೇಶನದಲ್ಲಿ ಮೂಡಿಬಂದ 'ಗೋಲಿಯೋಂ ಕೀ ರಾಸ್‌ಲೀಲಾ ರಾಮ್-ಲೀಲಾ' ಮತ್ತು 'ಪದ್ಮಾವತ್' ಚಿತ್ರಗಳಲ್ಲಿ ದೀಪಿಕಾ ತೋರಿದ ಶ್ರೇಷ್ಠ ಅಭಿನಯಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗಿತ್ತು.

ದೀಪಿಕಾ ಕೇವಲ ಕಮರ್ಷಿಯಲ್ ಸ್ಟಾರ್ ಮಾತ್ರವಲ್ಲ, ಉತ್ತಮ ನಟಿ ಎಂಬುದನ್ನು ಪದೇ ಪದೆ ಸಾಬೀತುಪಡಿಸಿದ್ದಾರೆ. ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿರುವಾಗ ಗ್ಲಾಮರಸ್ ಇಮೇಜ್ ಬಿಟ್ಟು 'ಛಪಾಕ್' (2020) ಚಿತ್ರದಲ್ಲಿ ಆಸಿಡ್ ದಾಳಿ ಸಂತ್ರಸ್ತೆಯ ಪಾತ್ರ ನಿರ್ವಹಿಸಿದ್ದು ಒಂದು ರಿಸ್ಕಿ ಚಾಯ್ಸ್ ಆಗಿತ್ತು. 2023ರಲ್ಲಿ ಶಾರುಖ್ ಖಾನ್ ಜೊತೆ ನಟಿಸಿದ 'ಪಠಾಣ್' ಮತ್ತು 'ಜವಾನ್' ಚಿತ್ರಗಳಲ್ಲಿನ ಆಕ್ಷನ್ ಅವತಾರವು ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸಿ, 'ಆಕ್ಷನ್ ಕ್ವೀನ್' ಆಗಿ ಪರಿಚಯಿಸಿತು.

Deepika Padukone Completes 18 Glorious Years in Bollywood From Om Shanti Om to Global Stardom

ಬೆಂಗಳೂರು ಬೆಡಗಿ ಖ್ಯಾತಿ ಭಾರತೀಯ ಚಿತ್ರರಂಗದ ಗಡಿ ಮೀರಿ ಹರಡಿದೆ. 2017ರಲ್ಲಿ ಹಾಲಿವುಡ್ ಸ್ಟಾರ್ ವಿನ್ ಡೀಸೆಲ್ ಜೊತೆ '‍‍‍XXX: ರಿಟರ್ನ್ ಆಫ್ ಕ್ಸಾಂಡರ್ ಕೇಜ್'ನಲ್ಲಿ ನಟಿಸುವ ಮೂಲಕಜಾಗತಿಕವಾಗಿ ತಮ್ಮ ಛಾಪು ಮೂಡಿಸಿದ್ದರು. 2022ರಲ್ಲಿ ವಿಶ್ವದ ಪ್ರತಿಷ್ಠಿತ ಕೇನ್ಸ್ ಚಲನಚಿತ್ರೋತ್ಸವದ ಜ್ಯೂರಿ ಸದಸ್ಯರಾಗಿ ಆಗಿದ್ದರು. ಅಲ್ಲದೇ 2026ರಲ್ಲಿ ಆಕೆಗೆ ಹಾಲಿವುಡ್ 'ವಾಕ್ ಆಫ್ ಫೇಮ್' ಗೌರವ ಸಿಗುವ ಸಾಧ್ಯತೆಯಿದೆ.

ವೃತ್ತಿಪರ ಜೀವನದಲ್ಲಿ ಯಶಸ್ಸಿನ ಜೊತೆಗೆ, ದೀಪಿಕಾ ವೈಯಕ್ತಿಕ ಜೀವನವೂ ಅಷ್ಟೇ ಜನಪ್ರಿಯ. ನಟ ರಣವೀರ್ ಸಿಂಗ್ ಅವರನ್ನು ಪ್ರೀತಿಸಿ ಮದುವೆ ಆಗಿದ್ದಾರೆ. ಇವರಿಬ್ಬರು ಬಾಲಿವುಡ್‌ನ ಅತ್ಯಂತ ಜನಪ್ರಿಯ ಜೋಡಿಗಳಲ್ಲಿ ಒಂದು. ಇತ್ತೀಚೆಗೆ ಈ ಜೋಡಿಯ ಪ್ರೀತಿಗೆ ಸಾಕ್ಷಿ ಎನ್ನುವಂತೆ ಮುದ್ದಾದ ಮಗಳು 'ದುವಾ ಪಡುಕೋಣೆ ಸಿಂಗ್' ಜನಿಸಿದ್ದಾಳೆ. ನಟನೆಯ ಹೊರತಾಗಿ, ತಾವು ಖಿನ್ನತೆಯಿಂದ ಹೊರಬಂದ ಅನುಭವವನ್ನು ಹಂಚಿಕೊಂಡು, 'ಲಿವ್ ಲವ್ ಲಾಫ್ ಫೌಂಡೇಷನ್' ಸ್ಥಾಪಿಸಿದ ದೀಪಿಕಾ, ಈಗ ಮಾನಸಿಕ ಆರೋಗ್ಯದ ಅಂಬಾಸಿಡರ್ ಆಗಿ ದೇಶಕ್ಕೆ ಮಾದರಿ ಆಗಿದ್ದಾರೆ.

ದೀಪಿಕಾ ಅವರ ಈ 18 ವರ್ಷಗಳ ಅಮೋಘ ಪಯಣವು ಯಶಸ್ಸು, ಶ್ರಮ ಮತ್ತು ಬದ್ಧತೆಯ ಸಂಕೇತವಾಗಿದೆ. ಶಾರುಖ್ ಖಾನ್ ಗೆ ಜೋಡಿಯಾಗಿ 'ಕಿಂಗ್' ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆಕೆಯ ಯಶಸ್ಸಿನ ಓಟ ಮುಂದುವರಿಯಲಿ ಎಂಬುದು ಎಲ್ಲಾ ಅಭಿಮಾನಿಗಳ ಆಶಯ.

More from Filmibeat

Read more about: deepika padukone
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X