ಅಲ್ಲು ಅರ್ಜುನ್ 'ರಾಕಾ' ಚಿತ್ರದಿಂದ ಗರ್ಭಿಣಿ ದೀಪಿಕಾ ಹೊರಕ್ಕೆ; ಚಿತ್ರತಂಡದಿಂದಲೇ ಸಿಕ್ತು ಕ್ಲಾರಿಟಿ
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ಪತಿ ರಣ್‌ವೀರ್ ಸಿಂಗ್ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಡಿಪ್ಪಿ ಮತ್ತೆ ಗರ್ಭಿಣಿ ಆಗಿರುವ ಬಗ್ಗೆ ಇತ್ತೀಚೆಗೆ ಸಂತಸ ಹಂಚಿಕೊಂಡಿದ್ದರು. ಸದ್ಯ ಶಾರುಖ್ ಖಾನ್ ಜೊತೆ 'ಕಿಂಗ್' ಹಾಗೂ ಅಲ್ಲು ಅರ್ಜುನ್ ಜೊತೆ 'ರಾಕಾ' ಚಿತ್ರಗಳಲ್ಲಿ ಆಕೆ ನಟಿಸುತ್ತಿದ್ದಾರೆ.
ಗರ್ಭಿಣಿ ಆಗಿರುವ ಹಿನ್ನೆಲೆಯಲ್ಲಿ ಸಿನಿಮಾಗಳಲ್ಲಿ ನಟಿಸುತ್ತಾರಾ? ಅಥವಾ ವಿಶ್ರಾಂತಿ ಪಡೆಯುತ್ತಾರಾ? ಎನ್ನುವ ಚರ್ಚೆ ಶುರುವಾಗಿದೆ. 'ರಾಕಾ' ಚಿತ್ರದಿಂದ ಚಿತ್ರದಿಂದ ದೀಪಿಕಾ ಹೊರ ಬಂದಿದ್ದಾರೆ, ಆಕೆಯ ದೃಶ್ಯಗಳಿಗೆ ಕತ್ತರಿ ಬಿದ್ದಿದೆ ಎನ್ನುವ ವದಂತಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ. ಇದೀಗ ಚಿತ್ರತಂಡವೇ ಇದಕ್ಕೆಲ್ಲಾ ಬ್ರೇಕ್ ಹಾಕಿ ಸ್ಪಷ್ಟನೆ ನೀಡಿದೆ.

ದೀಪಿಕಾ ಪಡುಕೋಣೆ 'ರಾಕಾ' ಚಿತ್ರದಲ್ಲಿ ಮುಂದುವರೆಯುತ್ತಾರೆ ಎಂದು 'ಟೈಮ್ಸ್ ಆಫ್ ಇಂಡಿಯಾ'ಗೆ ಚಿತ್ರತಂಡ ಮಾಹಿತಿ ನೀಡಿದೆ. "ರಾಕಾ ಚಿತ್ರದಲ್ಲಿ ದೀಪಿಕಾ ಪಡುಕೋಣೆ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಸೆಟ್‌ನಲ್ಲಿ ಚಿತ್ರೀಕರಣ ಉತ್ಸಾಹದಿಂದ ಸರಾಗವಾಗಿ ನಡೆಯುತ್ತಿದೆ. ಇದೆಲ್ಲಾ ಬರೀ ವದಂತಿ" ಎಂದು ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ 'ಕಲ್ಕಿ 2898AD' ಸಿನಿಮಾ ಚಿತ್ರೀಕರಣ ಹಾಗೂ ಪ್ರಚಾರದ ಸಮಯದಲ್ಲಿ ಕೂಡ ದೀಪಿಕಾ ಗರ್ಭಿಣಿ ಆಗಿದ್ದರು. ಆದರೂ ಸಿನಿಮಾ ಚಿತ್ರೀಕರಣ ಹಾಗೂ ಪ್ರಚಾರದಲ್ಲಿ ಭಾಗಿ ಆಗಿ ಗಮನ ಸೆಳೆದಿದ್ದರು.
ಅಂದಹಾಗೆ 'ಕಲ್ಕಿ 2898AD' ಚಿತ್ರದಲ್ಲಿ ಕೂಡ ಆಗಿ ಗರ್ಭಿಣಿ ಆಗಿಯೇ ಕಾಣಿಸಿಕೊಂಡಿದ್ದು ವಿಶೇಷ. 'ಟಾಕ್ಸಿಕ್' ಸಿನಿಮಾ ಚಿತ್ರೀಕರಣದ ನಡುವೆ ಕಿಯಾರಾ ಅದ್ವಾನಿ ಗರ್ಭಿಣಿ ಆಗಿರುವ ವಿಷಯ ಗೊತ್ತಾಗಿತ್ತು. ಆದರೂ ಕೂಡ ಆಗಿ ಸಿನಿಮಾ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಆಕೆಗೆ ಸಮಸ್ಯೆ ಆಗಬಾರದು ಎನ್ನುವ ಕಾರಣಕ್ಕೆ ಮುಂಬೈಗೆ ಚಿತ್ರೀಕರಣವನ್ನು ಸ್ಥಳಾಂತರಿಸಲಾಗಿತ್ತು.
'ಜವಾನ್' ಬಳಿಕ 'ರಾಕಾ' ಚಿತ್ರಕ್ಕೆ ಅಟ್ಲಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಬಹಳ ಅದ್ಧೂರಿಯಾಗಿ ಈ ಸೈನ್ಸ್ ಫಿಕ್ಷನ್ ಸಿನಿಮಾ ನಿರ್ಮಾಣವಾಗುತ್ತಿದೆ. 800 ಕೋಟಿ ರೂ.ಗೂ ಅಧಿಕ ಬಜೆಟ್‌ನಲ್ಲಿ ಸನ್ ಪಿಕ್ಚರ್ಸ್ ಸಂಸ್ಥೆ ಸಿನಿಮಾ ಪ್ರೇಕ್ಷಕರ ಮುಂದೆ ತರ್ತಿದೆ. ಮುಂಬೈನಲ್ಲಿ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ಹಾಗಾಗಿ ಕೆಲ ಸಮಯ ಅಲ್ಲು ಅರ್ಜುನ್ ಅಲ್ಲೇ ಮನೆ ಬಾಡಿಗೆ ಪಡೆದು ಉಳಿದುಕೊಳ್ಳಲಿದ್ದಾರೆ.
ವಿಚಿತ್ರ ಜಂತುವಿನ ರೀತಿ ಕಾಣುವ ಪಾತ್ರದಲ್ಲಿ ಅಲ್ಲು ಅರ್ಜುನ್ ನಟಿಸುತ್ತಿದ್ದಾರೆ. ಅದು ಯಾಕೆ? ಕಥೆ ಏನು? ಎನ್ನುವ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ಸಿಗಲಿದೆ. ಹಾಲಿವುಡ್ ಗ್ರಾಫಿಕ್ಸ್ ಸಂಸ್ಥೆಗಳು ಚಿತ್ರಕ್ಕಾಗಿ ಕೆಲಸ ಮಾಡುತ್ತಿವೆ. ಮುಂದಿನ ವರ್ಷ ಸಿನಿಮಾ ತೆರೆಗೆ ಬರುವ ನಿರೀಕ್ಷೆಯಿದೆ. ಚಿತ್ರದಲ್ಲಿ ದೀಪಿಕಾ ಪವರ್‌ಫುಲ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಾಕಷ್ಟು ಸ್ಟಂಟ್ಸ್ ಕೂಡ ಮಾಡಲಿದ್ದಾರೆ. ಪಾತ್ರಕ್ಕಾಗಿ ಭಾರೀ ಮೊತ್ತದ ಸಂಭಾವನೆ ಆಕೆಗೆ ಸಿಕ್ಕಿದೆ.
ಸೆಪ್ಟೆಂಬರ್ 8, 2024ರಂದು ದೀಪಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮಗಳಿಗೆ ದುವಾ ಪಡುಕೋಣೆ ಸಿಂಗ್ ಎಂದು ನಾಮಕರಣ ಮಾಡಿದ್ದರು. ಮದುವೆ ಮಗು ಎಂದು ಕೊಂಚ ವಿಶ್ರಾಂತಿ ಪಡೆದಿದ್ದ ಡಿಪ್ಪಿ ಮತ್ತೆ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ತಾಯಿಯಾದ ಬಳಿಕ ಕಡ್ಡಾಯವಾಗಿ 8 ಗಂಟೆ ಮಾತ್ರ ಕೆಲಸ ಮಾಡುವುದಾದಿ ಆಕೆ ಹೇಳಿದ್ದಾರೆ. ಇದೇ ಕಾರಣಕ್ಕೆ ಪ್ರಭಾಸ್ ಜೊತೆ 'ಸ್ಪಿರಿಟ್' ಚಿತ್ರದಲ್ಲಿ ನಟಿಸೋಕೆ ಒಲ್ಲೆ ಅಂದಿದ್ದರು. 'ಕಲ್ಕಿ 2898AD' ಸೀಕ್ವೆಲ್ ಚಿತ್ರದಿಂದಲೂ ಹೊರ ಬಂದಿದ್ದಾರೆ.
ಹೌದು 'ಕಲ್ಕಿ 2898AD' ಚಿತ್ರದಲ್ಲಿ ಸುಮತಿ ಪಾತ್ರದಲ್ಲಿ ನಟಿಸಿದ್ದ ದೀಪಿಕಾ ಎರಡನೇ ಭಾಗದಲ್ಲಿ ನಟಿಸುತ್ತಿಲ್ಲ. ಚಿತ್ರತಂಡ ಕೂಡ ಈ ವಿಚಾರವನ್ನು ಸ್ಪಷ್ಟಪಡಿಸಿದೆ. ಆದರೂ ಆಕೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ತಮ್ಮ ಷರತ್ತಿಗೆ ಒಪ್ಪುವ ಚಿತ್ರತಂಡದ ಜೊತೆ ಮಾತ್ರ ಕೆಲಸ ಮಾಡಲು ತೀರ್ಮಾನಿಸಿದ್ದಾರೆ.


Click it and Unblock the Notifications