ಇನ್ಸ್ಟಾಗ್ರಾಮ್ ನಲ್ಲಿ ದೀಪಿಕಾ ಮ್ಯಾಜಿಕ್: 50 ಮಿಲಿಯನ್ ಗಡಿ ದಾಟಿದ 3ನೇ ಸೆಲೆಬ್ರಿಟಿ

ಭಾರತೀಯ ಚಿತ್ರರಂಗದ ಖ್ಯಾತ ನಟಿಯಲ್ಲಿ ದೀಪಿಕಾ ಪಡುಕೋಣೆ ಸಹ ಒಬ್ಬರು. ಉತ್ತಮ ಸಿನಿಮಾಗಳ ಮೂಲಕ ಅದ್ಭುತ ಅಭಿನಯ ನೀಡುವ ದೀಪಿಕಾ ಅತೀ ಹೆಚ್ಚು ಅಭಿಮಾನಿ ಬಳಗ ಹೊಂದಿದ್ದಾರೆ. ಇದಕ್ಕೆ ಸಾಕ್ಷಿ ಎಂದರೆ ಸಾಮಾಜಿಕ ಜಾಲತಾಣ. ಇನ್ಸ್ಟಾಗ್ರಾಮ್ ನಲ್ಲಿ ಅತೀ ಹೆಚ್ಚು ಫಾಲೋವರ್ಸ್ ಹೊಂದುವ ಮೂಲಕ ದೀಪಿಕಾ ಟಾಪ್ 3 ಸೆಲೆಬ್ರಿಟಿಗಳಲ್ಲಿ ಒಬ್ಬರಾಗಿದ್ದಾರೆ.

ದೀಪಿಕಾ ಪಡುಕೋಣೆ ಇನ್ಸ್ಟಾಗ್ರಾಮ್ ನಲ್ಲಿ 50 ಮಿಲಿಯನ್ ಫಾಲೋವರ್ಸ್ ದಾಟಿದ್ದಾರೆ. ಈ ಮೂಲಕ 50 ಕ್ಕು ಹೆಚ್ಚು ಫಾಲೋವರ್ಸ್ ಹೊಂದಿದ ಭಾರತದ 3ನೇ ಸೆಲೆಬ್ರಿಟಿಯಾಗಿದ್ದಾರೆ. ಕ್ರಮವಾಗಿ ಮೊದಲ ಸ್ಥಾನದಲ್ಲಿ ಕ್ರಿಕೆಟರ್ ವಿರಾಟ್ ಕೊಹ್ಲಿ ಇದ್ರೆ ಪ್ರಿಯಾಂಕಾ ಚೋಪ್ರಾ ಎರಡನೇ ಸ್ಥಾನದಲ್ಲಿದ್ದಾರೆ. ದೀಪಿಕಾ ಈಗ ಟಾಪ್ 3ಯಲ್ಲಿ ಸ್ಥಾನ ಪಡೆದಿದ್ದಾರೆ. ಮುಂದೆ ಓದಿ...

ಲಾಕ್ ಡೌನ್ ನಲ್ಲಿ ಹೆಚ್ಚು ಆಕ್ವಿಟ್ ಆಗಿದ್ದ ದೀಪಿಕಾ

ಲಾಕ್ ಡೌನ್ ನಲ್ಲಿ ಹೆಚ್ಚು ಆಕ್ವಿಟ್ ಆಗಿದ್ದ ದೀಪಿಕಾ

ಪ್ರಿಯಾಂಕಾ ಚೋಪ್ರಾಗೆ ಹೋಲಿಸಿದರೆ ದೀಪಿಕಾ ಪಡುಕೋಣೆ ಸಾಮಾಜಿಕ ಜಾಲತಾಣದಲ್ಲಿ ಆಕ್ವಿಟ್ ಆಗಿರುವುದು ಕಡಿಮೆ. ಲಾಕ್ ಡೌನ್ ಪರಿಣಾಮ ದೀಪಿಕಾ ಇನ್ಸ್ಟ್ಗಾಗ್ರಾಮ್ ಅನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಆಗಾಗ ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಸಾಕಷ್ಟು ಮಾಹಿತಿಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿರುತ್ತಾರೆ.

50.2 ಮಿಲಿಯನ್ ಫಾಲೋವರ್ಸ್

50.2 ಮಿಲಿಯನ್ ಫಾಲೋವರ್ಸ್

ದೀಪಿಕಾ ಪಡುಕೋಣೆ ಸದ್ಯ ಇನ್ಸ್ಟಾಗ್ರಾಮ್ ನಲ್ಲಿ 50.2 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. 126 ಮಂದಿಯನ್ನು ದೀಪಿಕಾ ಫಾಲೋ ಮಾಡುತ್ತಿದ್ದಾರೆ. ಇದುವರೆಗೂ ದೀಪಿಕಾ ಒಟ್ಟು 1,140 ಪೋಸ್ಟ್ ಗಳನ್ನು ಮಾಡಿದ್ದಾರೆ. ಸದ್ಯ 50 ಮಿಲಿಯನ್ ಫಾಲೋವರ್ಸ್ ದಾಟಿರುವ ಖುಷಿಗೆ ಇನ್ಸ್ಟಾಗ್ರಾಮ್ ನಲ್ಲಿ ಸಂಭ್ರಮ ವ್ಯಕ್ತಪಡಿಸಿದ್ದಾರೆ.

ವಿರಾಟ್ ಮತ್ತು ಪ್ರಿಯಾಂಕಾ ಚೋಪ್ರಾ

ವಿರಾಟ್ ಮತ್ತು ಪ್ರಿಯಾಂಕಾ ಚೋಪ್ರಾ

ಇನ್ನೂ ಭಾರತದಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಮೊದಲ ಸೆಲೆಬ್ರಿಟಿ ವಿರಾಟ್ ಕೊಹ್ಲಿ. ವಿರಾಟ್ 67.2 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಇನ್ನೂ ಪ್ರಿಯಾಂಕಾ ಚೋಪ್ರಾ 54.6 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಈಗ ಮೂರನೆ ಸ್ಥಾನಕ್ಕೆ ಪ್ರಿಯಾಂಕಾ ಚೋಪ್ರಾ ಸೇರ್ಪಡೆಯಾಗಿದ್ದಾರೆ.

ದೀಪಿಕಾ ಸಿನಿಮಾಗಳು

ದೀಪಿಕಾ ಸಿನಿಮಾಗಳು

ದೀಪಿಕಾ ಪಡುಕೋಣೆ ಕೊನೆಯದಾಗಿ ಚಪಾಕ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ನೈಜ ಘಟನೆ ಆಧಾರಿತ ಚಿತ್ರಕ್ಕೆ ದೀಪಿಕಾ ಜೀವತುಂಬಿದ್ದರು. ದೀಪಿಕಾ ಅಭಿನಯಕ್ಕೆ ಅಭಿಮಾನಿಗಳ ಮೆಚ್ಚುಗೆ ವ್ಯಕ್ತವಾಗಿತ್ತು. ಇನ್ನೂ ಪತಿ ರಣ್ವೀರ್ ಸಿಂಗ್ ಅಭಿನಯದ 83 ಸಿನಿಮಾದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಮತ್ಯಾವ ಸಿನಿಮಾವನ್ನು ದೀಪಿಕಾ ಅನೌನ್ಸ್ ಮಾಡಿಲ್ಲ. ದೀಪಿಕಾ ಮುಂದಿನ ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಾಗಿದೆ.

More from Filmibeat

English summary
Bollywood Actress Deepika Padukone crossed 50 million followers in Instagram.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X