For Quick Alerts
  ALLOW NOTIFICATIONS  
  For Daily Alerts

  ಗೆಳೆಯ ರಣ್ವೀರ್ ಹುಟ್ಟುಹಬ್ಬಕ್ಕೆ ದೀಪಿಕಾ ಶುಭ ಕೋರಿದ್ದು ಹೇಗೆ ಗೊತ್ತಾ.?

  By Harshitha
  |
  ಬಾಯ್‌ಫ್ರೆಂಡ್ ಬರ್ತ್‌ಡೇಗೆ ಹಿಂಗೂ ವಿಶ್ ಮಾಡಬಹುದು ಅಂತ ತೋರಿಸಿಕೊಟ್ಟ ಡಿಪ್ಪಿ...!! | Filmibeat Kannada

  ಬಾಲಿವುಡ್ ನಟ ರಣ್ವೀರ್ ಸಿಂಗ್ ಹಾಗೂ ಬೆಂಗಳೂರು ಬೆಡಗಿ ದೀಪಿಕಾ ಪಡುಕೋಣೆ ನಡುವಿನ ಗೆಳೆತನ ಎಕ್ಸ್ ಟ್ರಾ ಸ್ಪೆಷಲ್ ಆಗಿದೆ... ಇಬ್ಬರು ಡೇಟಿಂಗ್ ಮಾಡ್ತಿದ್ದಾರೆ... ಸದ್ಯದಲ್ಲಿಯೇ ಮದುವೆ ಕೂಡ ಆಗ್ತಾರೆ ಎಂಬ ಗಾಸಿಪ್ ಹೊಸದೇನಲ್ಲ ಬಿಡಿ.

  ಇದೇ ವರ್ಷದ ಡಿಸೆಂಬರ್ ಹೊತ್ತಿಗೆ ರಣ್ವೀರ್ ಸಿಂಗ್-ದೀಪಿಕಾ ಪಡುಕೋಣೆ ವಿವಾಹ ಮಹೋತ್ಸವ ನಡೆಯಲಿದೆ ಎಂಬ ಸುದ್ದಿ ಕೂಡ ಬ್ರೇಕ್ ಆಗಿದೆ. ಮದುವೆ ಬಗ್ಗೆ ದೀಪಿಕಾ ಆಗಲಿ, ರಣ್ವೀರ್ ಸಿಂಗ್ ಆಗಲಿ ಕ್ಲಾರಿಟಿ ಕೊಟ್ಟಿಲ್ಲ. ಆದ್ರೆ, ಇಬ್ಬರ ನಡುವಿನ ಅನ್ಯೋನ್ಯತೆ ಮಾತ್ರ ಸದ್ಯ ಎಲ್ಲರ ಕಣ್ಣು ಕುಕ್ಕುತ್ತಿದೆ.

  ಇತ್ತೀಚೆಗಷ್ಟೇ ಬಾಲಿವುಡ್ ನಟ ರಣ್ವೀರ್ ಸಿಂಗ್ ತಮ್ಮ ಹುಟ್ಟುಹಬ್ಬವನ್ನ ಆಚರಿಸಿಕೊಂಡರು. ಜನ್ಮದಿನದಂದು ಗೆಳೆಯ ರಣ್ವೀರ್ ಸಿಂಗ್ ಗೆ ದೀಪಿಕಾ ವಿಶ್ ಮಾಡಿದ್ದು ಹೇಗೆ ಗೊತ್ತಾ.? ನೀವೇ ನೋಡಿರಿ...

  ದೀಪಿಕಾ ಮಾಡಿರುವ ಕ್ಯೂಟ್ ವಿಶ್...

  ರಣ್ವೀರ್ ಸಿಂಗ್ ಜನ್ಮದಿನದಂದು ಇನ್ಸ್ಟಾಗ್ರಾಮ್ ನಲ್ಲಿ ಒಂದು ವಿಡಿಯೋ ಶೇರ್ ಮಾಡಿ ಶುಭಾಶಯ ಕೋರಿದ್ದಾರೆ ನಟಿ ದೀಪಿಕಾ ಪಡುಕೋಣೆ. ಆ ವಿಡಿಯೋ ಹೇಗಿದೆ ಅಂತ ನೋಡ್ಬಿಡಿ...

  ಸೋನಂ ರಿಸೆಪ್ಷನ್ ಪಾರ್ಟಿಯಲ್ಲಿ ರಣ್ವೀರ್ ಸಿಂಗ್ ಹೀಗೆ ಮೂಲೆ ಸೇರಿದ್ದು ಯಾಕೆ.?ಸೋನಂ ರಿಸೆಪ್ಷನ್ ಪಾರ್ಟಿಯಲ್ಲಿ ರಣ್ವೀರ್ ಸಿಂಗ್ ಹೀಗೆ ಮೂಲೆ ಸೇರಿದ್ದು ಯಾಕೆ.?

  'ಸಿಂಬಾ' ಶೂಟಿಂಗ್ ಸೆಟ್ ನಲ್ಲಿ ರಣ್ವೀರ್ ಸಿಂಗ್ ಹುಟ್ಟುಹಬ್ಬ

  'ಸಿಂಬಾ' ಚಿತ್ರದ ಚಿತ್ರೀಕರಣದಲ್ಲಿ ನಟ ರಣ್ವೀರ್ ಸಿಂಗ್ ಬಿಜಿಯಾಗಿದ್ದಾರೆ. ಹೀಗಾಗಿ, ಅದೇ ಶೂಟಿಂಗ್ ಸ್ಪಾಟ್ ನಲ್ಲಿ ಕೇಕ್ ಕಟ್ ಮಾಡುವ ಮೂಲಕ ಬರ್ತಡೆ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ ರಣ್ವೀರ್ ಸಿಂಗ್.

  ದೀಪಿಕಾ-ರಣ್ವೀರ್ ಸಿಂಗ್ ಮದುವೆ ದಿನಾಂಕ ನಿಗದಿ ಆಯ್ತಂತೆ.!ದೀಪಿಕಾ-ರಣ್ವೀರ್ ಸಿಂಗ್ ಮದುವೆ ದಿನಾಂಕ ನಿಗದಿ ಆಯ್ತಂತೆ.!

  ಮದುವೆಗೆ ತಯಾರಿ ನಡೆಸುತ್ತಿದ್ದಾರಾ ದೀಪಿಕಾ.?

  ಮದುವೆಗೆ ತಯಾರಿ ನಡೆಸುತ್ತಿದ್ದಾರಾ ದೀಪಿಕಾ.?

  'ಪದ್ಮಾವತ್' ಸಿನಿಮಾ ಬಳಿಕ 'ಝೀರೋ' ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಅತಿಥಿ ಪಾತ್ರ ನಿರ್ವಹಿಸಿದ್ದಾರೆ. ಅಷ್ಟು ಬಿಟ್ಟರೆ, ಬೇರೆ ಯಾವ ಚಿತ್ರವನ್ನೂ ದೀಪಿಕಾ ಪಡುಕೋಣೆ ಒಪ್ಪಿಕೊಂಡಿಲ್ಲ. ಇದಕ್ಕೆ ಕಾರಣ ಮದುವೆ ತಯಾರಿ ಎನ್ನಬಹುದೇ.?

  ಈ ತರ ಕಂಡಿಷನ್ ಹಾಕಿದ್ರೆ ದೀಪಿಕಾ ಜೊತೆ ಯಾರ್ ಸಿನಿಮಾ ಮಾಡ್ತಾರೆ.?ಈ ತರ ಕಂಡಿಷನ್ ಹಾಕಿದ್ರೆ ದೀಪಿಕಾ ಜೊತೆ ಯಾರ್ ಸಿನಿಮಾ ಮಾಡ್ತಾರೆ.?

  ಡಿಸೆಂಬರ್ ನಲ್ಲಿ ಮದುವೆ.?

  ಡಿಸೆಂಬರ್ ನಲ್ಲಿ ಮದುವೆ.?

  ಡಿಸೆಂಬರ್ ನಲ್ಲಿ ದೀಪಿಕಾ-ರಣ್ವೀರ್ ಮದುವೆ ಆಗಲಿದ್ದಾರೆ ಎನ್ನಲಾಗಿದೆ. ಮದುವೆಗಾಗಿ ಈಗಾಗಲೇ ಬೆಂಗಳೂರಿನಲ್ಲಿ ದೀಪಿಕಾ ಒಡವೆ-ವಸ್ತ್ರ ಖರೀದಿ ಮಾಡಿದ್ದಾರೆ ಎಂಬ ಸುದ್ದಿ ಕೂಡ ಇದೆ. ಆದ್ರೆ, ಮದುವೆ ಬಗ್ಗೆ ದೀಪಿಕಾ ಹಾಗೂ ರಣ್ವೀರ್ ಇನ್ನೂ ಕನ್ಫರ್ಮ್ ಮಾಡಿಲ್ಲ.

  English summary
  Bollywood Actress Deepika Padukone dances for Ranveer Singh on his birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X