ಶಾರುಖ್ ಹೆಸರೇಳಿ 'ಕಲ್ಕಿ' ಚಿತ್ರತಂಡಕ್ಕೆ ದೀಪಿಕಾ ಪಡುಕೋಣೆ ತಿರುಗೇಟು

ಸೂಪರ್ ಹಿಟ್ 'ಕಲ್ಕಿ 2898 AD' ಸರಣಿಯ ಮುಂದಿನ ಚಿತ್ರದಿಂದ ದೀಪಿಕಾ ಪಡುಕೋಣೆ ಹೊರ ಬಂದಿದ್ದಾರೆ. ಈ ಬಗ್ಗೆ ವೈಜಯಂತಿ ಮೂವೀಸ್ ಸಂಸ್ಥೆ ಅಧಿಕೃತವಾಗಿ ಮಾಹಿತಿ ನೀಡಿದೆ. ಕಳೆದೆರಡು ದಿನಗಳಿಂದ ಡಿಪ್ಪಿ ಬಗ್ಗೆ ಪರ ವಿರೋಧ ಚರ್ಚೆ ನಡೀತಿದೆ. ದೀಪಿಕಾ ಇಟ್ಟ ಷರತ್ತುಗಳನ್ನು ಒಪ್ಪಲು ಸಾಧ್ಯವಾಗದೇ ಚಿತ್ರದಿಂದ ಕೈಬಿಟ್ಟಿದ್ದಾರೆ.

ದೀಪಿಕಾ ನಡೆ ಸರಿಯಾಗಿದೇ ಎಂದು ಅಭಿಮಾನಿಗಳು ಬೆಂಬಲಿಸುತ್ತಿದ್ದಾರೆ. ಅತಿಯಾಗಿ ಹಾರಾಟ ಮಾಡಿದರೆ ಇದೇ ಪರಿಸ್ಥಿತಿ ಎದುರಾಗುತ್ತದೆ ಎಂದು ತೆಲುಗು ಪ್ರೇಕ್ಷಕರು ಕಾಮೆಂಟ್ ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ ಇದೇ ಮೊದಲ ಬಾರಿಗೆ ಡಿಪ್ಪಿ ಮೌನ ಮುರಿದಿದ್ದಾರೆ. ನೇರವಾಗಿ ಏನನ್ನೂ ಹೇಳದೇ ಪರೋಕ್ಷವಾಗಿ ಈ ಬಗ್ಗೆ ಪ್ರತಿಕ್ರಿಯಿಸಿ ಇನ್‌ಸ್ಟಾಗ್ರಾಮ್ ಪೋಸ್ಟ್ ಮಾಡಿದ್ದಾರೆ.

Deepika Padukone Exits Kalki 2898 AD Sequel Hints at Decision Through ShahRukh Khan s King

"ಯಾವುದೇ ಚಿತ್ರದಲ್ಲಿ ನಟಿಸುವ ಅನುಭವ ಹಾಗೂ ನೀವು ಯಾರ ಜೊತೆ ನಟಿಸುತ್ತಿದ್ದೀನಿ ಎನ್ನುವುದು ಅದರ ಯಶಸ್ಸಿಗಿಂತಲೂ ಮುಖ್ಯವಾಗುತ್ತದೆ. ಸುಮಾರು 18 ವರ್ಷಗಳ ಹಿಂದೆ 'ಓಂ ಶಾಂತಿ ಓಂ' ಚಿತ್ರೀಕರಣದ ಸಮಯದಲ್ಲಿ ಅವರು (ಶಾರುಖ್ ಖಾನ್) ನನಗೆ ಕಲಿಸಿದ ಮೊದಲ ಪಾಠ ಇದು. ಅಂದಿನಿಂದ ನಾನು ತೆಗೆದುಕೊಂಡ ಪ್ರತಿಯೊಂದು ನಿರ್ಧಾರಕ್ಕೂ ಆ ಕಲಿಕೆ ಅನ್ವಯಿಸಿದ್ದೇನೆ. ಅದೇ ಕಾರಣಕ್ಕೆ ಇರಬೇಕು, ನಾವು 6ನೇ ಸಿನಿಮಾದಲ್ಲಿ ಒಟ್ಟಿಗೆ ನಟಿಸುತ್ತಿದ್ದೇವೆ ಎನಿಸುತ್ತದೆ" ಎಂದು ಆಕೆ ಬರೆದುಕೊಂಡಿದ್ದಾರೆ.

ಸದ್ಯ 'ಕಿಂಗ್' ಎಂಬ ಚಿತ್ರದಲ್ಲಿ ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಒಟ್ಟಿಗೆ ನಟಿಸುತ್ತಿದ್ದಾರೆ. ಇದೇ ಚಿತ್ರದ ಬಗ್ಗೆ ಡಿಪ್ಪಿ ಈ ರೀತಿ ಬರೆದುಕೊಂಡಿದ್ದಾರೆ. ಆ ಮೂಲಕ 'ಕಲ್ಕಿ 2898 AD' ಚಿತ್ರದಿಂದ ಹೊರಬಂದ ವಿಚಾರವನ್ನು ಕೆಣಕಿ ಡಿಪ್ಪಿ ಪೋಸ್ಟ್ ಮಾಡಿದ್ದಾರೆ. 'ಓಂ ಶಾಂತಿ ಓಂ' ಚಿತ್ರದಲ್ಲಿ ಮೊದಲ ಬಾರಿಗೆ ಶಾರುಖ್ ಹಾಗೂ ದೀಪಿಕಾ ನಟಿಸಿದ್ದರು. ಬಳಿಕ 'ಚೆನ್ನೈ ಎಕ್ಸ್‌ಪ್ರೆಸ್', ಹ್ಯಾಪಿ 'ನ್ಯೂಇಯರ್', 'ಪಠಾಣ್' ಹೀಗೆ 4 ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದರು. 'ಜವಾನ್' ಚಿತ್ರದ ಅತಿಥಿ ಪಾತ್ರದಲ್ಲಿ ಡಿಪ್ಪಿ ಮಿಂಚಿದ್ದರು.

ಹೀಗೆ 5 ಸಿನಿಮಾಗಳಲ್ಲಿ ಒಟ್ಟಿಗೆ ತೆರೆಗೆ ಹಂಚಿಕೊಂಡಿದ್ದ ನಾವು ಈಗ 'ಕಿಂಗ್' ಚಿತ್ರದಲ್ಲಿ 6ನೇ ಬಾರಿ ಜೊತೆಯಾಗಿದ್ದಾರೆ. ನಾವು ಯಾರ ಜೊತೆ ನಟಿಸುತ್ತಿದ್ದೀವಿ ಎನ್ನುವುದು ಮುಖ್ಯ ಎಂದು ಹೇಳುವ ಮೂಲಕ 'ಕಲ್ಕಿ' ತಂಡಕ್ಕೆ ನಯವಾಗಿಯೇ ದೀಪಿಕಾ ತಿವಿದಿದ್ದಾರೆ. 30 ಕೋಟಿ ರೂ. ಸಂಭಾವನೆ, ಲಾಭದಲ್ಲಿ ಪಾಲು, ತಮ್ಮ ತಂಡಕ್ಕೆ ಬೇಕಾದ ಸೌಲಭ್ಯಗಳನ್ನು ದೀಪಿಕಾ ಕೇಳಿದ್ದಾರೆ, ಸಾಲದ್ದಕ್ಕೆ ಮಗು ಇರುವ ಕಾರಣ 7 ಗಂಟೆ ಮಾತ್ರ ಕೆಲಸ ಮಾಡ್ತೀನಿ ಎಂದು ಹೇಳುತ್ತಿದ್ದಾರೆ. ಅದೇ ಕಾರಣಕ್ಕೆ ಆಕೆಯನ್ನು 'ಕಲ್ಕಿ' ಸೀಕ್ವೆಲ್ ಚಿತ್ರದಿಂದ ಕೈಬಿಟ್ಟಿದ್ದಾರೆ ಎಂದು ಗುಲ್ಲಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.

ನಾಗ್ ಅಶ್ವಿನ್ ನಿರ್ದೇಶನದ 'ಕಲ್ಕಿ 2898 AD' ಚಿತ್ರದಲ್ಲಿ ಪ್ರಭಾಸ್, ಅಮಿತಾಬ್ ಬಚ್ಚನ್, ಕಮಲ್ ಹಾಸನ್ ಸೇರಿದಂತೆ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ಸೀಕ್ವೆಲ್‌ನಲ್ಲಿ ಅದೇ ತಂಡ ಮುಂದುವರೆಯಲಿದೆ. ಶೀಘ್ರದಲ್ಲೇ ಪಾರ್ಟ್-2 ಚಿತ್ರೀಕರಣ ಶುರುವಾಗಲಿದ್ದು ಕಮಲ್ ಹಾಸನ್ ನಟಿಸೋಕೆ ಆರಂಭಿಸುತ್ತಾರೆ. ಜನವರಿಯಲ್ಲಿ ಪ್ರಭಾಸ್ ತಂಡ ಸೇರಿಕೊಳ್ಳುತ್ತಾರೆ ಎನ್ನಲಾಗ್ತಿದೆ.

ಚಿತ್ರದಲ್ಲಿ ಸುಮತಿ ಪಾತ್ರದಲ್ಲಿ ದೀಪಿಕಾ ನಟಿಸುತ್ತಿದ್ದರು. ಮೊದಲ ಭಾಗದ ಕೊನೆಯಲ್ಲಿ ಆಕೆಯ ಆಕೆಯ ಪಾತ್ರಕ್ಕೆ ಒಳ್ಳೆ ಎಂಡಿಂಗ್ ಸಿಕ್ಕಿತ್ತು. ಸೀಕ್ವೆಲ್‌ನಲ್ಲಿ ಆಕೆಯ ಪಾತ್ರಕ್ಕೆ ಹೆಚ್ಚಿನ ಮಹತ್ವ ಇದ್ದ ಕಾರಣ ಹೆಚ್ಚಿನ ಕಾಲ್‌ಶೀಟ್ ಕೇಳಿದ್ದಾರೆ. ಆದರೆ ಆಕೆ ಇಟ್ಟ ಷರತ್ತುಗಳಿಗೆ ಚಿತ್ರತಂಡ ಸುಸ್ತಾಗಿ ಬೇಡವೇ ಬೇಡ ಎಂದುಬಿಟ್ಟಿದೆ.

More from Filmibeat

English summary
Deepika Padukone Bows Out of ‘Kalki 2898 AD’ Next Part, Shares Indirect Hint via ‘King’ with Shah Rukh Khan
Read more about: deepika padukone shahrukh khan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X