ಅತಿಯಾಗಿ ಮಸ್ತಿ ಮಾಡಿದ್ದೇ ದೀಪಿಕಾ ಆರೋಗ್ಯಕ್ಕೆ ಮುಳುವಾಯಿತು.!
ಬಾಲಿವುಡ್ ನಟಿ, ಬೆಂಗಳೂರು ಬೆಡಗಿ ದೀಪಿಕಾ ಪಡುಕೋಣೆ ಇತ್ತೀಚೆಗಷ್ಟೇ ತನ್ನ ಬೆಸ್ಟ್ ಫ್ರೆಂಡ್ ಮದುವೆಯಲ್ಲಿ ಪಾಲ್ಗೊಂಡಿದ್ದರು. ವಿವಾಹದಲ್ಲಿ ಪತಿ ರಣ್ವೀರ್ ಸಿಂಗ್ ಜೊತೆಗೆ ದೀಪಿಕಾ ಪಡುಕೋಣೆ ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದರು.
ಅತಿಯಾದರೆ ಅಮೃತವೂ ವಿಷ ಅಂತಾರಲ್ಲ.. ಹಾಗೆ ಅತಿಯಾಗಿ ಮಸ್ತಿ ಮಾಡಿದ್ಮೇಲೆ ದೀಪಿಕಾ ಪಡುಕೋಣೆ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಸುಸ್ತು ಮತ್ತು ಜ್ವರದಿಂದ ದೀಪಿಕಾ ಪಡುಕೋಣೆ ಬಳಲುತ್ತಿದ್ದಾರೆ. ಅದಕ್ಕೆ ಸಾಕ್ಷಿ ಅವರ ಲೇಟೆಸ್ಟ್ ಇನ್ಸ್ಟಾಗ್ರಾಮ್ ಸ್ಟೋರಿ.
''ಬೆಸ್ಟ್ ಫ್ರೆಂಡ್ ಮದುವೆಯಲ್ಲಿ ಅತಿಯಾಗಿ ಮಸ್ತಿ ಮಾಡಿದಾಗ..'' ಎಂಬ ಕ್ಯಾಪ್ಷನ್ ಕೊಟ್ಟು ಸುಸ್ತಾಗಿರುವ ತಮ್ಮ ಫೋಟೋವನ್ನ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ದೀಪಿಕಾ ಪಡುಕೋಣೆ ಶೇರ್ ಮಾಡಿದ್ದಾರೆ. ಇದನ್ನ ನೋಡಿ ''ಬೇಗ ಹುಷಾರಾಗಿ'' ಅಂತ ಅಭಿಮಾನಿಗಳು ದೀಪಿಕಾ ಪಡುಕೋಣೆಗೆ ಹಾರೈಸುತ್ತಿದ್ದಾರೆ.

ಹಾಗ್ನೋಡಿದ್ರೆ, ದೀಪಿಕಾ ಪಡುಕೋಣೆ ಗರ್ಭಿಣಿ ಎಂಬ ಗಾಳಿಸುದ್ದಿ ಇತ್ತೀಚೆಗಷ್ಟೇ ಬಾಲಿವುಡ್ ತುಂಬಾ ಹಬ್ಬಿತ್ತು. ಈ ಬಗ್ಗೆ ದೀಪಿಕಾ ಆಗಲಿ, ರಣ್ವೀರ್ ಸಿಂಗ್ ಆಗಲಿ ತುಟಿಕ್ ಪಿಟಿಕ್ ಎಂದಿಲ್ಲ. ಸಿನಿಮಾಗಳಲ್ಲಿ ಮಾತ್ರ ದೀಪಿಕಾ ಪಡುಕೋಣೆ ಬಿಜಿಯಾಗಿದ್ದಾರೆ. ಸದ್ಯ ದೀಪಿಕಾ ಪಡುಕೋಣೆ ಕೈಯಲ್ಲಿ '83', 'ಚಪಕ್' ಮತ್ತು 'ಮಹಾಭಾರತ್' ಚಿತ್ರಗಳಿವೆ.


Click it and Unblock the Notifications











