'ಪದ್ಮಾವತಿ' ಚಿತ್ರಕ್ಕೆ ದೀಪಿಕಾಗೆ ಸಿಗುವ ಸಂಭಾವನೆ ಎಷ್ಟು.?

By ಸೋನು ಗೌಡ

ಬಾಲಿವುಡ್ ಸಿನಿಮಾ ರಂಗದಲ್ಲಿ ಗುಳಿಕೆನ್ನೆ ಬೆಡಗಿ ದೀಪಿಕಾ ಪಡುಕೋಣೆ ಅಂದ್ರೆ ಬಾಕ್ಸಾಫೀಸ್ ರಾಣಿ ಅಂತಾನೇ ಸಿನಿ ಪಂಡಿತರ ಲೆಕ್ಕಾಚಾರ. ದೀಪಿಕಾ ಮುಟ್ಟಿದ್ದೆಲ್ಲಾ ಚಿನ್ನ ಆಗುತ್ತೆ ಅನ್ನೋ ಮಾತಿಗೂ, ಡಿಪ್ಪಿ ನಟಿಸಿದ ಸಿನಿಮಾ ಎಲ್ಲಾ ಸೂಪರ್ ಹಿಟ್ ಆಗೋದಕ್ಕೂ ಸರಿ ಹೋಗುತ್ತೆ.

ಅಂದಹಾಗೆ ದೀಪಿಕಾ ಅವರ ಸಂಭಾವನೆ ವಿಚಾರದ ಬಗ್ಗೆ ಬಿಟೌನ್ ನಲ್ಲಿ ಆಗಾಗ ಭಾರಿ ಚರ್ಚೆಗಳಾಗುತ್ತಿರುತ್ತದೆ. ಇಲ್ಲಿಯವರೆಗೆ ಸುಮಾರು ಹಿಟ್ ಸಿನಿಮಾಗಳನ್ನು ಕೊಟ್ಟಿರುವ ದೀಪಿಕಾ ಪಡುಕೋಣೆ ಅವರು ಹಾಲಿವುಡ್ ನಲ್ಲಿ ಬೇರೆ ತಮ್ಮ ಝಲಕ್ ತೋರಿಸಿ ಬಂದಿದ್ದಾರೆ.['ಪದ್ಮಾವತಿ' ಜೊತೆ ಹಸಿಬಿಸಿಯಾಗಿ ಕಾಣಿಸಿಕೊಳ್ತಾರಾ ಶಾರುಖ್.?]

Deepika Padukone Gets A Mindblowing Paycheck For Padmavati

ಅಂದಮೇಲೆ ಗ್ಯಾರೆಂಟಿ ಸಂಭಾವನೆ ಬರೋಬ್ಬರಿ ಇದ್ದೇ ಇರುತ್ತೆ ಅಂತ ಸಾಮಾನ್ಯವಾಗಿ ಎಲ್ಲರೂ ಯೋಚನೆ ಮಾಡಿಯೇ ಇರುತ್ತಾರೆ. ಅದರಂತೆ ಇದೀಗ ದೀಪಿಕಾ ಅವರು ತಮ್ಮ ಮುಂದಿನ ಚಿತ್ರ 'ಪದ್ಮಾವತಿ'ಗೆ ಸಂಭಾವನೆ ಅಂತ ಕೋಟಿ ಕೋಟಿ ಹಣವನ್ನು ತಮ್ಮ ವ್ಯಾನಿಟಿ ಬ್ಯಾಗಿಗಿಳಿಸಿದ್ದಾರೆ.[ಬಾಲಿವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಯಾರು?]

Deepika Padukone Gets A Mindblowing Paycheck For Padmavati

ಸಂಜಯ್ ಲೀಲಾ ಬನ್ಸಾಲಿ ಅವರು 'ಪದ್ಮಾವತಿ' ಚಿತ್ರಕ್ಕೆ ದೀಪಿಕಾ ಅವರಿಗೆ ನೀಡಿದ ಸಂಭಾವನೆ ಬರೋಬ್ಬರಿ 12.65 ಕೋಟಿ ರೂಪಾಯಿ. ಇವಾಗಂತೂ ದೀಪಿಕಾ ಅವರು ಬಾಲಿವುಡ್ ನ ರಾಣಿ ಅಂತ ಮತ್ತೆ ಪ್ರೂವ್ ಆಗಿದೆ.[ದೀಪಿಕಾ ಜೊತೆ ಮದುವೆ ಬಗ್ಗೆ ರಣವೀರ್ ಏನಂತಾರೆ.?]

Deepika Padukone Gets A Mindblowing Paycheck For Padmavati

'ರಾಮ್ ಲೀಲಾ' ಚಿತ್ರಕ್ಕೆ ದೀಪಿಕಾ ಪಡೆದುಕೊಂಡ ಸಂಭಾವನೆ 1 ಕೋಟಿ ರೂಪಾಯಿ, 2 ವರ್ಷದ ನಂತರ ಬಂದ 'ಬಾಜೀರಾವ್ ಮಸ್ತಾನಿ'ಗೆ 7 ಕೋಟಿ ರೂಪಾಯಿ, ಈ ಬಾರಿ 'ಪದ್ಮಾವತಿ'ಗೆ 12.65 ಕೋಟಿ ರೂಪಾಯಿ.[ಉಸ್ಸಪ್ಪಾ! 10 ನಿಮಿಷ ಕುಣಿಯಲು ಪ್ರಿಯಾಂಕ ಪಡೆದ ಸಂಭಾವನೆ ಇಷ್ಟಾ?]

Deepika Padukone Gets A Mindblowing Paycheck For Padmavati

ಈಗಾಗಲೇ ಬನ್ಸಾಲಿ ಅವರ ಜೊತೆ ಸಂಭಾವನೆ ವಿಚಾರದಲ್ಲಿ ಈ ಡೀಲ್ ನಡೆದಿದ್ದು, ಎಲ್ಲವನ್ನೂ ಬನ್ಸಾಲಿ ಅವರು ಫೈನಲ್ ಸೆಟ್ಲ್ ಮೆಂಟ್ ಮಾಡಿದ್ದಾರಂತೆ. ಅಂತೂ ಡಿಪ್ಪಿ ಸಂಭಾವನೆ ಎಷ್ಟು ಅಂತ ಪ್ರಶ್ನೆ ಮಾಡಿದವರಿಗೆ ಇದೀಗ ಉತ್ತರ ದೊರೆತಿರಬಹುದು.

More from Filmibeat

English summary
Bollywood Actress Deepika Padukone is climbing the ladder to richness year by year. The actress will be paid a staggering amount of 12.65 Crores to star in Sanjay Leela Bhansali's upcoming project, Padmavati.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X