ದೀಪಿಕಾ ಕಡೆಯಿಂದ ಹೀಗೊಂದು ಎಡವಟ್ಟು: ಇದು ಯಾಕೆ ಬೇಕಿತ್ತು.?

By Harshitha

ಬಾಲಿವುಡ್ ನಟಿ, ಬೆಂಗಳೂರು ಬೆಡಗಿ ದೀಪಿಕಾ ಪಡುಕೋಣೆ ಸದ್ಯದಲ್ಲೇ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಇದೆ. ಬಾಲಿವುಡ್ ನಟ ರಣ್ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಪರಸ್ಪರ ಪ್ರೀತಿಸುತ್ತಿದ್ದು, ಇದೇ ವರ್ಷದೊಳಗೆ ಇಟಲಿಯಲ್ಲಿ ವಿವಾಹವಾಗಲಿದ್ದಾರೆ ಎನ್ನಲಾಗಿದೆ.

ಮದುವೆ ಬಗ್ಗೆ ಆಗಲಿ, ಪ್ರೀತಿ ಬಗ್ಗೆ ಆಗಲಿ ದೀಪಿಕಾ ಪಡುಕೋಣೆ ಅಥವಾ ರಣ್ವೀರ್ ಸಿಂಗ್ ಕನ್ಫರ್ಮ್ ಮಾಡಿಲ್ಲ. ಆದರೂ, ಇಬ್ಬರ ಮದುವೆ ಬಗ್ಗೆ ದಿನಕ್ಕೊಂದು ಸುದ್ದಿ ಆಗುತ್ತಲೇ ಇದೆ.

ಹೀಗಿರುವಾಗಲೇ, ನಟಿ ದೀಪಿಕಾ ಪಡುಕೋಣೆ ನಿನ್ನೆ ಫೋಟೋವೊಂದನ್ನ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. ಬರೀ ಫೋಟೋ ಆಗಿದ್ದಿದ್ದರೆ, ವಿವಾದ ಆಗುತ್ತಿರಲಿಲ್ಲ. ಫೋಟೋದಲ್ಲಿ ದೀಪಿಕಾ ಜೊತೆಗೆ ರಣ್ಬೀರ್ ಕಪೂರ್ ಇರುವುದು ಕೆಲವರಿಗೆ ಕೋಪ ತರಿಸಿದೆ.

ರಣ್ವೀರ್ ಜೊತೆಗೆ ಮದುವೆ ಆಗಲಿರುವ ದೀಪಿಕಾ, ರಣ್ಬೀರ್ ಜೊತೆಗಿನ ಫೋಟೋ ಹಾಕಿದ್ದಕ್ಕೆ, ನೆಟ್ಟಿಗರು ದೀಪಿಕಾ ಪಡುಕೋಣೆಯನ್ನ ಟ್ರೋಲ್ ಮಾಡುತ್ತಿದ್ದಾರೆ. ಬೇಕಾದ್ರೆ, ನೀವೇ ಕೆಲ ಕಾಮೆಂಟ್ ಗಳನ್ನ ಓದಿರಿ...

ಇದೇನಾ ನೀವು ಮಾಡ್ತಿರೋದು.?

ಇದೇನಾ ನೀವು ಮಾಡ್ತಿರೋದು.?

''ರಣ್ವೀರ್ ಸಿಂಗ್ ಬಗ್ಗೆ ಬೇಸರ ಆಗುತ್ತೆ. ನಿಮ್ಮ ಖುಷಿಗಾಗಿ ರಣ್ವೀರ್ ಸಿಂಗ್ ಎಷ್ಟೆಲ್ಲಾ ಮಾಡಿದ್ದಾರೆ. ಅದಕ್ಕೆ ನಿಮ್ಮ ಪ್ರತಿಫಲ ಇದೇನಾ.? ರಣ್ವೀರ್ ಸಿಂಗ್ ಪ್ರೀತಿಗೆ ನೀವು ಅರ್ಹರಲ್ಲ. ರಣ್ವೀರ್ ಗೆ ಉತ್ತಮ ಬಾಳ ಸಂಗಾತಿ ಸಿಗಲಿ'' ಎನ್ನುತ್ತಿದ್ದಾರೆ ನೆಟ್ಟಿಗರು.

ಡಬಲ್ ಗೇಮ್ ಆಡ್ತಿದ್ದೀರಾ.?

ಡಬಲ್ ಗೇಮ್ ಆಡ್ತಿದ್ದೀರಾ.?

''ಇಂತಹ ಪೋಸ್ಟ್ ಗಳನ್ನ ಯಾಕೆ ಹಾಕ್ತೀರಾ.? ಇದನ್ನ ನೋಡಿ ರಣ್ವೀರ್ ಸಿಂಗ್ ಗೆ ಬೇಜಾರಾಗುತ್ತೆ. ರಣ್ಬೀರ್ ನ ಮರೆಯೋಕೆ ಆಗಲ್ಲ ಅಂದ್ರೆ, ರಣ್ವೀರ್ ಸಿಂಗ್ ನ ಬಿಟ್ಟುಬಿಡಿ. ಈ ತರಹ ಡಬಲ್ ಗೇಮ್ ಆಡುವುದು ಯಾಕೆ.?'' ಎಂದು ದೀಪಿಕಾಗೆ ಪ್ರಶ್ನಿಸಿದ್ದಾರೆ ನೆಟ್ಟಿಗರು.

ಮದುವೆ ಒಬ್ಬರ ಜೊತೆ, ಪ್ರೀತಿ ಇನ್ನೊಬ್ಬರ ಜೊತೆ...

ಮದುವೆ ಒಬ್ಬರ ಜೊತೆ, ಪ್ರೀತಿ ಇನ್ನೊಬ್ಬರ ಜೊತೆ...

''ಮದುವೆ ಒಬ್ಬರ ಜೊತೆ... ಪ್ರೀತಿ ಇನ್ನೊಬ್ಬರ ಜೊತೆ... ಇವೆಲ್ಲಾ ಯಾಕೆ ಬೇಕು.? ರಣ್ಬೀರ್ ಗಿಂತ ಉತ್ತಮ ಪ್ರತಿಭಾವಂತ ರಣ್ವೀರ್ ಸಿಂಗ್'' ಅಂತಿದ್ದಾರೆ ನೆಟ್ಟಿಗರು.

ಬಿಟ್ಟಿ ಪಬ್ಲಿಸಿಟಿ

ಬಿಟ್ಟಿ ಪಬ್ಲಿಸಿಟಿ

''ಬಿಟ್ಟಿ ಪಬ್ಲಿಸಿಟಿ ಬೇಕಾದಾಗ, ರಣ್ಬೀರ್ ಕಪೂರ್ ಹೆಸರನ್ನ ದೀಪಿಕಾ ಬಳಸುತ್ತಾರೆ. ಇವೆಲ್ಲ ಚೀಪ್ ಟ್ರಿಕ್'' ಅಂತ ನೆಟ್ಟಿಗರು ವ್ಯಂಗ್ಯವಾಡಿದ್ದಾರೆ.

ರಣ್ವೀರ್ ಸಿಂಗ್ ಗೆ ಬೇಸರ ಆಗಿದೆ.!

ರಣ್ವೀರ್ ಸಿಂಗ್ ಗೆ ಬೇಸರ ಆಗಿದೆ.!

''ಇದನ್ನ ನೋಡಿ ರಣ್ವೀರ್ ಸಿಂಗ್ ಗೆ ಬೇಸರ ಆಗಿದೆ ಅನ್ಸುತ್ತೆ. ಹೀಗಾಗಿ, ಈ ಪೋಸ್ಟ್ ಗೆ ಕಾಮೆಂಟ್ ಮಾಡಿಲ್ಲ'' ಎನ್ನುವುದು ನೆಟ್ಟಿಗರ ಅಭಿಪ್ರಾಯ.

ಒಳ್ಳೆ ಫ್ರೆಂಡ್ಸ್ ಆಗಿ ಇರಲು ಸಾಧ್ಯ ಇಲ್ಲವೇ.?

ಒಳ್ಳೆ ಫ್ರೆಂಡ್ಸ್ ಆಗಿ ಇರಲು ಸಾಧ್ಯ ಇಲ್ಲವೇ.?

''ಬ್ರೇಕಪ್ ಆದ್ಮೇಲೆ ಇಬ್ಬರೂ ಒಟ್ಟಿಗೆ ಇರಲು ಸಾಧ್ಯ ಇಲ್ಲವೇ.? ಟ್ರೋಲ್ ಮಾಡುವವರಿಗೆ ಇದನ್ನ ಅರ್ಥ ಮಾಡಿಕೊಳ್ಳುವುದು ಕಷ್ಟವೇ.?'' ಅಂತ ಕೆಲವರು ದೀಪಿಕಾ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ.

ತಪ್ಪೇನಿಲ್ಲ.!

ತಪ್ಪೇನಿಲ್ಲ.!

''ಹಳೇ ಫೋಟೋವನ್ನ ಪೋಸ್ಟ್ ಮಾಡಿದ ಮಾತ್ರಕ್ಕೆ ದೀಪಿಕಾ ತಪ್ಪು ಮಾಡಿದ್ದಾರೆ ಅಂತೇನಿಲ್ಲ. ಆಕೆಯನ್ನ ಟ್ರೋಲ್ ಮಾಡ್ಬೇಡಿ'' ಅಂತಾವ್ರೆ ಅಭಿಮಾನಿಗಳು.

More from Filmibeat

English summary
Bollywood Actress Deepika Padukone gets trolled for sharing Ranbir Kapoor's photo on Instagram.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X