For Quick Alerts
  ALLOW NOTIFICATIONS  
  For Daily Alerts

  ಬೆಂಗಳೂರಿನಲ್ಲಿ ದೀಪಿಕಾ ಪಡುಕೋಣೆ ಮದುವೆ ಶಾಪಿಂಗ್.!

  By Bharath Kumar
  |

  ಒಂದು ಕಡೆ ಅನಿಲ್ ಕಪೂರ್ ಪುತ್ರಿ ಸೋನಮ್ ಕಪೂರ್ ಮದುವೆ ತಯಾರಿ ನಡೆಯುತ್ತಿದ್ದರೇ, ಮತ್ತೊಂದೆಡೆ ಕರ್ನಾಟಕದ ಮಗಳು ದೀಪಿಕಾ ಪಡುಕೋಣೆಯ ವಿವಾಹದ ತಯಾರಿ ಜರುಗುತ್ತಿದೆ. ಬಾಲಿವುಡ್ ನಟ ರಣ್ವೀರ್ ಸಿಂಗ್ ಅವರ ಜೊತೆ ಪ್ರೀತಿಯಲ್ಲಿರುವ ದೀಪಿಕಾ ಸಪ್ತಪದಿ ತುಳಿಯಲು ನಿರ್ಧರಿಸಿದ್ದಾರೆ.

  ಮೂಲತಃ ಬೆಂಗಳೂರಿನವರಾದ ದೀಪಿಕಾ ಪಡುಕೋಣೆ ಸದ್ಯ ತಾಯಿ ಮತ್ತು ತಂಗಿಯ ಜೊತೆ ಸೇರಿ ಸಿಲಿಕಾನ್ ಸಿಟಿಯಲ್ಲಿ ಮದುವೆಗಾಗಿ ಶಾಪಿಂಗ್ ಮಾಡ್ತಿದ್ದಾರಂತೆ.

  2018ರಲ್ಲಿ ಗುಡ್ ನ್ಯೂಸ್ ಕೊಡಬಹುದು ಈ ಸ್ಟಾರ್ ಜೋಡಿಗಳು.!2018ರಲ್ಲಿ ಗುಡ್ ನ್ಯೂಸ್ ಕೊಡಬಹುದು ಈ ಸ್ಟಾರ್ ಜೋಡಿಗಳು.!

  ದೀಪಿಕಾ ಪಡುಕೋಣೆ ಮದುವೆಗಾಗಿ ಒಡವೆಗಳನ್ನ ಖರೀದಿಸುವಲ್ಲಿ ಎಲ್ಲರೂ ಬ್ಯುಸಿಯಾಗಿದ್ದು, ತಾಯಿ ಉಜ್ಜಲ ಪಡುಕೋಣೆ ಮತ್ತು ತಂಗಿ ಅನಿಶಾ ಪಡುಕೋಣೆ ಇಬ್ಬರು ದೀಪಿಕಾಗೆ ಸಾಥ್ ಕೊಡ್ತಿದ್ದಾರೆ.

  ಸದ್ದಿಲ್ಲದೇ ಮದುವೆ ದಿನಾಂಕ ನಿಗದಿ ಮಾಡಿದ ದೀಪಿಕಾ-ರಣ್ವೀರ್ ಕುಟುಂಬ.!ಸದ್ದಿಲ್ಲದೇ ಮದುವೆ ದಿನಾಂಕ ನಿಗದಿ ಮಾಡಿದ ದೀಪಿಕಾ-ರಣ್ವೀರ್ ಕುಟುಂಬ.!

  ಈಗಾಗಲೇ ಎರಡು ಕುಟುಂಬದವರು ಮದುವೆ ದಿನಾಂಕವನ್ನ ನಿಗದಿ ಪಡಿಸಿದ್ದು, ದೀಪಿಕಾ ಕುಟುಂಬಸ್ಥರು, ಸಂಬಂಧಿಕರು ಮತ್ತು ಸ್ನೇಹಿತರಿಗಾಗಿ ವಿಶೇಷ ಪಾರ್ಟಿ ಹಮ್ಮಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

  ಕಳೆದ ಕೆಲದಿನಗಳ ಹಿಂದೆಯಷ್ಟೇ ರಣ್ವೀರ್ ಕುಟುಂಬ ಮತ್ತು ದೀಪಿಕಾ ಕುಟುಂಬದವರು ಮದುವೆ ಪ್ಲಾನ್ ಬಗ್ಗೆ ಚರ್ಚಿಸಿದ್ದಾರೆ. ಈಗಾಗಲೇ ಎಲ್ಲಾ ಯೋಜನೆಗಳು ರೂಪುಗೊಂಡಿದೆ. ಆದ್ರೆ, ದಿನಾಂಕ ಯಾವುದು ಎಂಬುದು ಸದ್ಯಕ್ಕೆ ಬಹಿರಂಗವಾಗಿಲ್ಲ.

  English summary
  After the grand wedding of Anushka Sharma and Virat Kohli, fans have been waiting to see Ranveer Singh and Deepika Padukone married. And if recent reports are to be believed, Deepika Padukone has already started shopping for her wedding.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X