»   » ಕಪ್ಪು ದಿರಿಸಿನಲ್ಲಿ ದೀಪಿಕಾ ಬಿಚ್ಚಿಟ್ಟ ಕಲರ್ ಫುಲ್ ಸೌಂದರ್ಯ

ಕಪ್ಪು ದಿರಿಸಿನಲ್ಲಿ ದೀಪಿಕಾ ಬಿಚ್ಚಿಟ್ಟ ಕಲರ್ ಫುಲ್ ಸೌಂದರ್ಯ

Posted By: ಉದಯರವಿ
Subscribe to Filmibeat Kannada

ಬಾಲಿವುಡ್ ಚಿತ್ರರಂಗದ ಡಿಂಪಲ್ ಕ್ವೀನ್ ದೀಪಿಕಾ ಪಡುಕೋಣೆ ಮೂಲತಃ ಮಾಡೆಲಿಂಗ್ ಕ್ಷೇತ್ರದವರು. ಬೆಕ್ಕಿನ ಹೆಜ್ಜೆ, ರ್ಯಾಂಪ್ ವಾಕ್ ಇವೆಲ್ಲಾ ದೀಪಿಕಾಗೆ ನೀರು ಕುಡಿದಷ್ಟೇ ಸಲೀಸು. ಇನ್ನು ಫೋಟೋ ಶೂಟ್ ವಿಚಾರದಲ್ಲಿ ದೀಪಿಕಾ ಬಹಳ ಅಡ್ವಾನ್ಸ್ ಡ್ ಆಗಿರುತ್ತಾರೆ ಎಂಬ ಮಾತುಗಳು ಬಾಲಿವುಡ್ ವಲಯದಲ್ಲಿ ಆಗಾಗ ಕೇಳಿಬರುತ್ತವೆ.

ಈಗಾಗಲೆ ಸಾಕಷ್ಟು ಬಾರಿ ಕ್ಯಾಮೆರಾ ಮುಂದೆ ಹಾಟ್ ಅಂಡ್ ಸೆಕ್ಸಿಯಾಗಿ ಕಾಣಿಸಿರುವ ದೀಪಿಕಾ ಇತ್ತೀಚೆಗೆ ಮತ್ತೊಮ್ಮೆ ಫಿಲಂಫೇರ್ ನಿಯತಕಾಲಿಕೆಗಾಗಿ ತಮ್ಮ ಚೆಲುವನ್ನು ಬಿಚ್ಚಿಟ್ಟಿದ್ದಾರೆ. ನೂರಾರು ಬಾರಿ ಕ್ಯಾಮೆರಾ ಎದುರಿಸಿದರೂ ಪ್ರತಿ ಬಾರಿಯೂ ಏನೋ ಹೊಸತನ ದೀಪಿಕಾ ಅವರ ವಿಶೇಷ. [ಮದುವೆಗೆ ಮುನ್ನ ಸೆಕ್ಸ್ ನನ್ನಿಷ್ಟ: ದೀಪಿಕಾ ಪಡುಕೋಣೆ]

ಕೇವಲ ಫೋಟೋಗಳನ್ನಷ್ಟೇ ಅಲ್ಲದೆ ಫಿಲಂಫೇರ್ ನಲ್ಲಿ ತಮ್ಮ ಮನದಾಳದ ಮಾತುಗಳಿಗೆ ಅಕ್ಷರ ರೂಪವನ್ನೂ ಕೊಟ್ಟಿದ್ದಾರೆ. ಬಣ್ಣದ ಲೋಕದ ಕತ್ತಲ ಜಗತ್ತಿನ ಬಗ್ಗೆ, ನಟರಿಗಿಂತಲೂ ತಾನು ಹೆಚ್ಚಾಗಿ ಸಂಭಾವನೆ ಪಡೆಯುತ್ತಿರುವ ಪರಿಣಾಮಗಳ ಬಗ್ಗೆ, ತನ್ನ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ಭಾರಿ ಚರ್ಚೆಗೆ ಗ್ರಾಸವಾದ 'MyChoice' ವಿಡಿಯೋ ಬಗ್ಗೆ, ಅದಕ್ಕೂ ಮುನ್ನ ತನ್ನ ಕ್ಲೀವೇಜ್ ಶೋ ಬಗ್ಗೆ ಕೇಳಿಬಂದ ಮಾತುಗಳ ಬಗ್ಗೆ ನಿಯತಕಾಲಿಕೆಯಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ಈ ರೀತಿಯ ಮಾತುಗಳು ನನ್ನ ಮೇಲೆ ಕಿಂಚಿತ್ತೂ ಪ್ರಭಾವ ಬೀರುವುದಿಲ್ಲ ಎಂದಿದ್ದಾರೆ.

ನಾನು ಯಾವಾಗಲೂ ಪಾಸಿಟೀವ್ ಹಾದಿಯಲ್ಲಿ ಮುಂದಕ್ಕೆ ಸಾಗಿಹೋಗುತ್ತಿರುತ್ತೇನೆ. ಇವಕ್ಕಿಂತಲೂ ಮುಖ್ಯವಾದ ಹಲವಾರು ವಿಷಯಗಳು ಜೀವನದಲ್ಲಿವೆ. ತಾನು ವೈಯಕ್ತಿಕ ಹಾಗೂ ವೃತ್ತಿ ಬದುಕು ಎರಡರಲ್ಲೂ ಸಂತೋಷವಾಗಿದ್ದೇನೆ ಎಂದು ಮುಖ ಅರಳಿಸಿದ್ದಾರೆ.

ಸರಳ ಮೇಕಪ್ ಸೂಪರ್ ಲುಕ್

ಈ ಫೋಟೋಗಳನ್ನು ನೋಡುತ್ತಿದ್ದರೆ, ದೀಪಿಕಾ ಪಡುಕೋಣೆ ಅವರದು ಸರಳ ಮೇಕಪ್, ಸೂಪರ್ ಲುಕ್ ಅನ್ನಿಸುತ್ತದೆ. ಅದಕ್ಕೆ ತಕ್ಕಂತಹ ಕೇಶವಿನ್ಯಾಸ, ಕಣ್ಮನ ಸೆಳೆವ ಡ್ರೆಸ್ ನೋಡುಗರ ಕಣ್ಣಿಗೆ ಹಬ್ಬ.

ಅಂದಚೆಂದ ಹೊರಸೂಸಿದ ದೀಪಿಕಾ

ಹೊಚ್ಚ ಹೊಸ ಕಾಸ್ಟ್ಯೂಮ್ಸ್ ಧರಿಸಿ ಸ್ಟೈಲಿಶ್ ಲುಕ್ ನಲ್ಲಿ ತಮ್ಮ ನಾಭಿ ಅಂದಚೆಂದಗಳನ್ನು ಹೊರಸೂಸುತ್ತಿರುವ ದೀಪಿಕಾ ಪಡುಕೋಣೆ.

ಸೊಗಸುಗಾತಿ ಅಷ್ಟೇ ಅಲ್ಲ ದೀಪಿಕಾ

ದೀಪಿಕಾ ಪಡುಕೋಣೆ ಕೇವಲ ಸೊಗಸುಗಾತಿ ಅಷ್ಟೇ ಅಲ್ಲ, ಯಾವುದೇ ಪಾತ್ರದಲ್ಲಿ ಲೀನವಾಗುವ ನಟನಾ ನೈಪುಣ್ಯತೆ ಸಹ ಅವರಿಗಿದೆ.

ಮಾಡೆಲಿಂಗ್ ಕ್ವೀನ್ ಎಂಬ ಹೆಸರು ಪಡೆದವರು

ಮಾಡೆಲಿಂಗ್ ಕ್ಷೇತ್ರದಲ್ಲಿ ಅವರು ಟಾಪ್ ಮಾಡೆಲ್ ಆಗಿದ್ದವರು. ಮಾಡೆಲಿಂಗ್ ಕ್ವೀನ್ ಎಂಬ ಹೆಸರನ್ನೂ ಪಡೆದಿದ್ದರು.

ಮಂತ್ರಮುಗ್ಧಗೊಳಿಸುವ ಸೌಂದರ್ಯ

ಯಾರನ್ನೇ ಆಗಲಿ ಮಂತ್ರಮುಗ್ಧಗೊಳಿಸುವ ಸಮ್ಮೋಹನ ಶಕ್ತಿ ದೀಪಿಕಾ ಪಡುಕೋಣೆ ಅವರ ಬ್ಯೂಟಿಫುಲ್ ಸ್ಮೈಲ್ ಗೆ ಇದೆ.

ಅತ್ಯಧಿಕ ಸಂಭಾವನೆ ಪಡೆಯುವ ತಾರೆ

ಅಂದದ ಜೊತೆಗೆ ಅಭಿನಯ ಎರಡೂ ಇರುವ ಬೆಡಗಿಯಾದ ಕಾರಣ ದೀಪಿಕಾಗೆ ಅವಕಾಶಗಳೂ ಹೇರಳವಾಗಿ ಬರುತ್ತಿವೆ. ಸದ್ಯಕ್ಕೆ ಬಾಲಿವುಡ್ ನಲ್ಲ್ಲಿ ಅತ್ಯಧಿಕ ಸಂಭಾವನೆ ಪಡೆಯುತ್ತಿರುವ ಹೀರೋಯಿನ್ ಗಳಲ್ಲಿ ಅವರೂ ಒಬ್ಬರು.

ವೈಯಕ್ತಿಕ ಜೀವನದಲ್ಲಿ ನಾನು ಹಾಗಲ್ಲ

ತನ್ನ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುತ್ತಾ, "ನಾನು ಕೇವಲ ತೆರೆಯ ಮೇಲಷ್ಟೇ ರಂಜಿಸುತ್ತೇನೆ. ಅದೇ ರೀತಿ ನನ್ನ ವೈಯಕ್ತಿಕ ಜೀವನದಲ್ಲೂ ಇರುತ್ತೇನೆ ಎಂದು ಭಾವಿಸಬೇಡಿ" ಎನ್ನುತ್ತಾರೆ ಡಿಂಪಲ್ ಬ್ಯೂಟಿ.

ಸಮಯ ಕೂಡಿಬಂದಾಗ ಮದುವೆಯಾಗುತ್ತೇನೆ

ನನ್ನ ವೈಯಕ್ತಿಕ ಹಾಗೂ ವೃತ್ತಿ ಬದುಕು ತುಂಬಾ ಸಂತೋಷಮಯವಾಗಿದೆ. ಸಮಯ ಕೂಡಿಬಂದಾಗ ಮದುವೆಯಾಗುತ್ತೇನೆ. ಬಹಳಷ್ಟು ಮಕ್ಕಳನ್ನೂ ಹಡೆಯುತ್ತೇನೆ. ಯಾಕೆಂದರೆ ನನಗೆ ಮಕ್ಕಳೆಂದರೆ ತುಂಬಾ ಇಷ್ಟ ಎಂದು ಹೇಳಿಕೊಂಡಿದ್ದಾರೆ.

ಕಲರ್ ಫುಲ್ ಸೌಂದರ್ಯ ಅನಾವರಣ

ಈ ಫೋಟೋ ಫಿಲಂಫೇರ್ ನಿಯತಕಾಲಿಕೆಯ ಮುಖಪುಟ ಚಿತ್ರ. ಕಪ್ಪುಬಣ್ಣದ ದಿರಿಸಿನಲ್ಲಿ ತಮ್ಮ ಕಲರ್ ಫುಲ್ ಸೌಂದರ್ಯವನ್ನು ತೆರೆದಿಟ್ಟಿದ್ದಾರೆ ದೀಪಿಕಾ.

English summary
Dimple queen Deepika Padukone has sported an array of looks, from a red top with a plunging neckline to a sleek black gown that shows off her curves. The actress who has worked so hard to tone her figure is often seen showing it off in such photo shoots.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada