ಹೈದ್ರಾಬಾದ್‌ನಲ್ಲಿ ಪ್ರಭಾಸ್ ಜೊತೆಯಲ್ಲಿ ದೀಪಿಕಾ ಪಡುಕೋಣೆ!
ಟಾಲಿವುಡ್ ನಟ ಪ್ರಭಾಸ್ ಮತ್ತು ಬಾಲಿವುಡ್ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಒಟ್ಟಿಗೆ ತೆರೆ ಮೇಲೆ ಬರ್ತಿದ್ದಾರೆ. ಈ ಸೂಪರ್ ಸ್ಟಾರ್ ಜೋಡಿ ಈಗ ಬಿಗ್ ಸ್ಕ್ರೀನ್ ಮೇಲೆ ಒಂದಾಗುತ್ತಿದೆ. ಮುಂದಿನ ಪ್ಯಾನ್ ಇಂಡಿಯಾ ಚಿತ್ರದಲ್ಲಿ ಈ ಜೋಡಿ ಒಂದಾಗುತ್ತಿದೆ. ಈ ಚಿತ್ರಕ್ಕೆ ನಿರ್ದೇಶಕ ಅಶ್ವಿನ್ ನಾಗ್ ನಿರ್ದೇಶನ ಇದೆ.
ಇಷ್ಟು ದಿನ ಈ ಚಿತ್ರದ ಬಗ್ಗೆ ಸುದ್ದಿ ಇರಲಿಲ್ಲ. ದೀಪಿಕಾ ಪಡುಕೋಣೆ ಬಾಲಿವುಡ್ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿ ಆಗಿದ್ದರು. ಈಗ ಚಿತ್ರದ ಬಗ್ಗೆ ಹೊಸ ಅಪ್ಡೇಟ್ ಸಿಕ್ಕಿದೆ. ಸಿನಿಮಾದ ಮುಂದಿನ ಹಂತದ ಶೂಟಿಂಗ್ ಶುರುವಾಗಿದೆ. ಅದಕ್ಕಾಗಿ ನಟಿ ದೀಪಕಾ ಪಡುಕೋಣೆ ಹೈದ್ರಾಬಾದ್‌ಗೆ ಪ್ರಯಾಣ ಬೆಳಿಸಿದ್ದಾರೆ.
ಮುಂದಿನ ಕೆಲವು ದಿನಗಳು ನಟಿ ದೀಪಿಕಾ ಪಡುಕೋಣೆ ಅವರು ಹೈದ್ರಾಬಾದ್‌ನಲ್ಲಿಯೇ ತಂಗಲಿದ್ದಾರೆ. ಯಾಕೆಂದರೆ ಪ್ರಾಜೆಕ್ಟ್ ಕೆ ಚಿತ್ರದ ಶೂಟಿಂಗ್ ಸದ್ಯ ಹೈದ್ರಾಬಾದ್‌ನಲ್ಲಿಯೇ ನಡೆಯುತ್ತಿದೆ. ಪ್ರಭಾಸ್ ಮತ್ತು ನಟಿ ದೀಪಿಕಾ ಅವರ ಕಾಂಬಿನೇಷನ್‌ನ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತದೆ. ಇಬ್ಬರ ಅಭಿಮಾನಿಗಳಿಗೂ ಸಹಜವಾಗಿಯೇ ಪ್ರಭಾಸ್ ಮತ್ತು ದೀಪಿಕಾ ಕೆಮಿಸ್ಟ್ರಿಯನ್ನು ತೆರೆ ಮೇಲೆ ನೋಡಲು ಕುತೂಹಲ ಇದ್ದೇ ಇರುತ್ತದೆ.

ಪ್ರಭಾಸ್ ಮತ್ತು ದೀಪಿಕಾ ಜೊತೆಗೆ ಈ ಚಿತ್ರದಲ್ಲಿ ನಟ ಅಮಿತಾಬ್ ಬಚ್ಚನ್ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಟಿಸಲು ನಟಿ ದೀಪಿಕಾ ಮತ್ತು ಅಮಿತಾಬ್ ಬಚ್ಚನ್ ದೊಡ್ಡ ಮಟ್ಟದ ಸಂಭಾವನೆಯನ್ನೂ ಪಡೆದುಕೊಂಡಿದ್ದಾರೆ ಎಂದು ವರದಿ ಆಗಿದೆ. ನಟ ಪ್ರಭಾಸ್ 'ಸಲಾರ್' ಜೊತೆಗೆ ಇತ್ತ ಈ ಚಿತ್ರದ ಶೂಟಿಂಗ್‌ನಲ್ಲಿ ಕೂಡ ಬ್ಯೂಸಿಯಾಗಿದ್ದಾರೆ. ಮತ್ತೊಂದು ಕಡೆ 'ಆದಿಪುರುಷ್' ಸಿನಿಮಾದ ಶೂಟಿಂಗ್ ಮಾಡುತ್ತಿದ್ದಾರೆ.
ಪ್ಯಾನ್ ಇಂಡಿಯಾ ಸಿನಿಮಾ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಬಾಲಿವುಡ್, ತಾರೆಯರು ಯಾವುದೇ ಬೇಲಿ ಹಾಕಿಕೊಳ್ಳದೆ ಸಿನಿಮಾಗಳಲ್ಲಿ ಸೌತ್ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. RRR ಚಿತ್ರದಲ್ಲಿ ಆಲಿಯಾ ಭಟ್ ಅಭಿನಯಿಸುತ್ತಿದ್ದಾರೆ. ಜೊತೆಗೆ ನಟ ಜೂನಿಯರ್ ಎನ್‌ಟಿಆರ್ ಅವರ ಮುಂದಿನ ಚಿತ್ರಕ್ಕೆ ಆಲಿಯಾ ನಾಯಕಿ ಅಂತೆ. ಈಗ ದೀಪಿಕಾ ಪಡುಕೋಣೆ ಕೂಡ ಸೌತ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











