Deepika Padukone Fashion: ದೀಪಿಕಾರ ಈ ಸೀರೆ ಬೆಲೆಯಲ್ಲಿ ಸಾಮಾನ್ಯರು 50 ಸೀರೆ ಖರೀದಿಸಬಹುದು!
ನಟ, ನಟಿಯರು ಅಂದರೆ ಸಾಕು ತಾವು ಧರಿಸುವ ಬಟ್ಟೆ, ಓಡಾಡುವ ಕಾರು, ಇರುವ ಮನೆ ಎಲ್ಲಾ ವಿಚಾರಗಳಲ್ಲೂ ಸ್ವಲ್ಪ ಹೈಫೈ ಆಗೆ ಇರುತ್ತಾರೆ. ಅದರಲ್ಲೂ ಈ ನಟಿ ಮಣಿಯರು ಗ್ಲಾಮರಸ್ ಆಗಿ ಕಾಣಿಸಿಕೊಳ್ಳಲು ತರಹೇವಾರಿ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರೆ.
ಬಟ್ಟೆ, ಆಭರಣ, ಬ್ಯಾಗ್ ಹೀಗೆ ಎಲ್ಲಾ ವಿಚಾರದಲ್ಲೂ ಸೆಲೆಕ್ಟಿವ್ ಆಗಿ ಇರುತ್ತಾರೆ. ಅದರಲ್ಲೂ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಇದೀಗ ಸದಾ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ.
ತಾನು ತೊಡುವ ಬಟ್ಟೆ ಮತ್ತು ಆಭರಣಗಳ ವಿಚಾರಕ್ಕೆ ಸುದ್ದಿ ಆಗುತ್ತಲೇ ಇರುತ್ತಾರೆ ದೀಪಿಕಾ ಪಡುಕೋಣೆ. ದೀಪಿಕಾ ಪಡುಕೋಣೆ ಇತ್ತೀಚೆಗೆ ತೊಟ್ಟಿದ್ದ ಸೀರೆ ವಿಚಾರಕ್ಕೆ ಇದೀಗ ಸುದ್ದಿಯಾಗುತ್ತಿದ್ದಾರೆ. ಅಷ್ಟಕ್ಕೂ ಆ ಸೀರೆ ಯಾವುದು? ಅದರ ಬೆಲೆ ಎಷ್ಟು? ಈ ಸೀರೆಯ ಸ್ಪೆಷಾಲಿಟಿ ಏನು ಗೊತ್ತಾ?

ಉಡುಗೆ ತೊಡುಗೆ ಬಗ್ಗೆಯೂ ಜನರಿಗೆ ಹೆಚ್ಚು ಆಸಕ್ತಿ
ದೀಪಿಕಾ ಪಡುಕೋಣೆ ಮದುವೆ ನಂತರವೂ ಸಖತ್ ಬ್ಯುಸಿ ಇರುವ ನಟಿ. ದೀಪಿಕಾ ಪಡುಕೋಣೆ ಧರಿಸುವ ಉಡುಗೆ ತೊಡುಗೆ ಬಗ್ಗೆ ಜನರಿಗೆ ಹೆಚ್ಚು ಆಸಕ್ತಿ. ಯಾಕೆಂದರೆ ಯಾವುದೆ ಸ್ಪೆಷಲ್ ಇವೆಂಟ್ ಇದ್ದರು ಸಖತ್ ಆಗಿ ರೆಡಿ ಆಗುವ ದೀಪಿಕಾ ಪಡುಕೋಣೆ ನೋಡುಗರ ಗಮನ ಸೆಳೆಯುತ್ತಾರೆ. ಪ್ರತಿ ಭಾರಿಯೂ ವಿಭಿನ್ನವಾದ ಕೇಶ ವಿನ್ಯಾಸ, ಕಾಸ್ಟ್ಯೂಮ್, ಆಕ್ಸೆಸರೀಸ್ ಸೇರಿದಂತೆ ಎಲ್ಲವೂ ಕೊಂಚ ವಿಶೇಷವಾಗಿ ಧರಿಸುವ ಅವರು ಸೆಂಟರ್ ಆಫ್ ದಿ ಅಟ್ರ್ಯಾಕ್ಷನ್ ಆಗಿರುತ್ತಾರೆ. ಇದೀಗ ಮತ್ತೊಂದು ಡ್ರೆಸ್ ವಿಚಾರಕ್ಕೆ ದೀಪಿಕಾ ಪಡುಕೋಣೆ ಸುದ್ದಿಯಲ್ಲಿದ್ದಾರೆ.

ಸ್ಟನ್ನಿಂಗ್ ಲುಕ್ ಮೂಲಕ ನೋಡುಗರನ್ನು ಬೆರಗುಗೊಳಿಸಿದ ದೀಪಿಕಾ
ಇತ್ತೀಚೆಗೆ ಅಂದರೆ ಮಾರ್ಚ್ 28 ರಂದು ದುಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ದೀಪಿಕಾ ಪಡುಕೋಣೆ ಭಾಗವಹಿಸಿದ್ದರು. ಈ ಕಾರ್ಯಕ್ರಮಕ್ಕೆ ಸೀರೆಯನ್ನು ತೊಟ್ಟಿದ್ದ ದೀಪಿಕಾ ತಮ್ಮ ಸ್ಟನ್ನಿಂಗ್ ಲುಕ್ ಮೂಲಕ ನೋಡುಗರನ್ನು ಬೆರಗುಗೊಳಿಸಿದ್ದಾರೆ. ಸಿಲ್ವರ್ ಬಣ್ಣದ ಟಿಕ್ಲಿ ವರ್ಕ್ ಇರುವ ಸೀರೆ ಇದಾಗಿದ್ದು, ಸೆಟ್ಟೆಡ್ ಮೆಟೀರಿಯಲ್ ಹೊಂದಿದೆ. ಅಲ್ಲದೇ ಈ ಸೀರೆ ದೀಪಿಕಾಗೆ ತುಂಬಾ ಚೆನ್ನಾಗಿ ಒಪ್ಪುವಂತಿತ್ತು. ಅಲ್ಲದೆ ಈ ಸೀರೆ ಸಾಕಷ್ಟು ವಿಶೇಷತೆಯನ್ನು ಹೊಂದಿದೆ. ಮತ್ತು ದುಬಾರಿ ಕೂಡ ಹೌದು.

ಹೂವಿನ ಕಸೂತಿ ಮಿಶ್ರಣವನ್ನು ಈ ಸೀರೆ ಒಳಗೊಂಡಿದೆ
ಡಿಸೈನರ್ ಸಬ್ಯಸಾಚಿ ಮುಖರ್ಜಿ ಅವರ ಡಿಸೈನ್‌ನಲ್ಲಿ ಈ ಸೀರೆ ರೂಪುಗೊಂಡಿದೆ. ಹೂವಿನ ಕಸೂತಿ ಮಿಶ್ರಣವನ್ನು ಈ ಸೀರೆ ಒಳಗೊಂಡಿದೆ. ಈ ಸೀರೆಯ ಸಂಪೂರ್ಣ ಕಸೂತಿ ಕೆಲಸವನ್ನು ಕೈಯಿಂದಲೇ ಮಾಡಲಾಗಿರೋದು ಇದರ ಮತ್ತೊಂದು ವಿಶೇಷತೆ. ತೆಳುವಾದ ಹಾಗೂ ದುವಾರಿ ದಾರದಿಂದ ಈ ಸೀರೆಯ ಕಸೂತಿ ಕೆಲಸವನ್ನು ಮಾಡಲಾಗಿದೆಯಂತೆ. ಅಲ್ಲದೆ ಸೀರೆಯಲ್ಲಿ ಮೀನುಗಳು ಮತ್ತು ಹೂವುಗಳ ಕಸೂತಿ ಇದೆ. ಜೊತೆಗೆ ಸಿಲ್ವರ್ ಬಣ್ಣದ ಟಿಕ್ಲಿಯನ್ನು ತುಂಬಾ ಜಾಗರೂಕವಾಗಿ ಅಳವಡಿಸಲಾಗಿದೆ. ಈ ಸೀರೆಯ ಬಣ್ಣವನ್ನು ಸ್ವತಃ ತಯಾರು ಮಾಡಿ ಈ ಸೀರೆಯನ್ನು ಸಿದ್ಧಪಡಿಸಲಾಗಿದೆಯಂತೆ.

ಮಿರರ್ ವರ್ಕ್ ಇರುವ ಸ್ಲೀವ್ ಲೆಸ್ ಬ್ಲೌಸ್
ಅಚ್ಚರಿಯ ವಿಚಾರ ಅಂದರೆ ಸ್ವತಃ ದೀಪಿಕಾ ಪಡುಕೋಣೆ ಈ ಸೀರಿಯನ್ನು ಆರ್ಡರ್ ಕೊಟ್ಟು ತಯಾರು ಮಾಡುವಂತೆ ಹೇಳಿದ್ದಾರೆ. ಹೀಗಾಗಿ ಹೆಚ್ಚು ಮುತುವರ್ಜಿ ವಹಿಸಿ ಸೀರೆ ಸಿದ್ಧಪಡಿಸಲಾಗಿದೆ. ಅಲ್ಲದೆ ಈ ಸೀರೆಗೆ ದೀಪಿಕಾ 1 ಲಕ್ಷದ 50ಸಾವಿರ ರುಪಾಯಿಯನ್ನು ನೀಡಿದ್ದಾರೆ. ಈ ವಿಚಾರ ತಿಳಿದು ಜನಸಾಮಾನ್ಯರು ಈ ಬೆಲೆಗೆ ಅದೆಷ್ಟು ಸೇರೆಯನ್ನು ನಾವು ಕೊಂಡುಕೊಳ್ಳಬಹುದಿತ್ತು ಎಂದು ಅಂದುಕೊಳ್ಳುತ್ತಿದ್ದಾರೆ. ಇನ್ನು ದೀಪಿಕಾ ಈ ಸೀರೆಗೆ ಮಿರರ್ ಮಾದರಿಯ ವರ್ಕ್ ಇರುವ ಸ್ಲೀವ್ ಲೆಸ್ ಬ್ಲೌಸ್ ತೊಟ್ಟಿದ್ದಾರೆ. ಹಾಗೂ ಕುತ್ತಿಗೆಗೆ ಸಿಫಲ್ ಚೋಕರ್ ಒಂದನ್ನು ಧರಿಸಿದ್ದಾರೆ. ಹಾಗೂ ಮುತ್ತಿನ ಕಿವಿಯೋಲೆಯೂ ದೀಪಿಕಾರನ್ನು ಮತ್ತಷ್ಟು ಚಂದಗಾಣುವಂತೆ ಮಾಡಿದೆ.


Click it and Unblock the Notifications











