For Quick Alerts
  ALLOW NOTIFICATIONS  
  For Daily Alerts

  ನರೇಗಾ ಅಡಿ ಕೂಲಿ ಹಣ ಪಡೆದಿರುವ ದೀಪಿಕಾ ಪಡುಕೋಣೆ, ಜಾಕ್ವೆಲಿನ್ ಫರ್ನಾಂಡೀಸ್!

  |

  ಸತತ ಉದ್ಯೋಗ ಸೃಷ್ಟಿಯ ಕಾರಣಕ್ಕಾಗಿ ಸರ್ಕಾರವು ನರೇಗಾ, ಮನ್‌ರೇಗಾ ಮಾದರಿಯ ದಿನಗೂಲಿ ಕಾರ್ಯಕ್ರಮಗಳನ್ನು ಬಹು ವರ್ಷದಿಂದಲೂ ನಡೆಸಿಕೊಂಡು ಬಂದಿದೆ.

  ನರೇಗಾ ಅಥವಾ ಮನ್‌ರೇಗಾ ಅಡಿಯಲ್ಲಿ ಕಾರ್ಮಿಕರು ಸರ್ಕಾರಿ ರಿಜಿಸ್ಟರ್‌ನಲ್ಲಿ ಹೆಸರು ನೊಂದಾಯಿಸಿ, ಕಾರ್ಡ್ ಪಡೆದು, ಕೆಲಸ ಮಾಡಿ ಕೂಲಿ ಭತ್ಯೆ ಪಡೆಯುತ್ತಾರೆ.

  ಪ್ರಭಾಸ್ ಸಿನಿಮಾದಲ್ಲಿ ನಟಿಸಲು ದೀಪಿಕಾಗಿಂತ ಹೆಚ್ಚು ಸಂಭಾವನೆ ಪಡೆದ ಬಿಗ್ ಬಿ ಅಮಿತಾಬ್ಪ್ರಭಾಸ್ ಸಿನಿಮಾದಲ್ಲಿ ನಟಿಸಲು ದೀಪಿಕಾಗಿಂತ ಹೆಚ್ಚು ಸಂಭಾವನೆ ಪಡೆದ ಬಿಗ್ ಬಿ ಅಮಿತಾಬ್

  ಬಡವರಿಗೆ, ಕೂಲಿ ಕಾರ್ಮಿಕರಿಗೆ ವರ್ಷದ ಎಲ್ಲಾ ದಿನವೂ ಕೆಲಸ ದೊರಕುವಂತೆ ಹಾಗೂ ಹಣದ ಆಗಮ ಸದಾ ಇರುವಂತೆ ಮಾಡಲೆಂದು ಈ ಕಾರ್ಯಕ್ರಮಗಳನ್ನು ಹಿಂದಿನ ಸರ್ಕಾರಗಳು ಮಾಡಿವೆ. ಪ್ರಸ್ತುತ ಸರ್ಕಾರ ಸಹ ಮುಂದುವರೆಸುತ್ತಿದೆ. ದೇಶದಾದ್ಯಂತ ಅತ್ಯಂತ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದು ಇದು. ಆದರೆ ಇದೇ ಕಾರ್ಯಕ್ರಮದ ಅಡಿಯಲ್ಲಿ ಬಾಲಿವುಡ್ ನಟಿಯರು ಸಹ ಕೂಲಿ ಮಾಡಿ ಹಣ ಪಡೆದುಕೊಂಡಿದ್ದಾರೆ!

  ನರೇಗಾ ಜಾಬ್‌ ಕಾರ್ಡ್‌ನಲ್ಲಿ ದೀಪಿಕಾ ಪಡುಕೋಣೆ, ಜಾಕ್ವೆಲಿನ್ ಫರ್ನಾಂಡೀಸ್

  ನರೇಗಾ ಜಾಬ್‌ ಕಾರ್ಡ್‌ನಲ್ಲಿ ದೀಪಿಕಾ ಪಡುಕೋಣೆ, ಜಾಕ್ವೆಲಿನ್ ಫರ್ನಾಂಡೀಸ್

  ಹೌದು, ಮಧ್ಯಪ್ರದೇಶದ ಸರ್ಕಾರಿ ರಿಜಿಸ್ಟರ್‌ನಲ್ಲಿ ನರೇಗಾ ಅಡಿಯಲ್ಲಿ ನಟಿ ದೀಪಿಕಾ ಪಡುಕೋಣೆ ಹಾಗೂ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಹೆಸರುಗಳು ನಮೂದಾಗಿವೆ. ರಾಜ್ಯದ ಕಾರ್ಗೊನ್ ಜಿಲ್ಲೆಯ ಈ ನಟಿಯರು ಕೂಲಿ ಮಾಡಿದ್ದಾರೆ!

  NCB ವಿಚಾರಣೆ ಬಳಿಕ ಮತ್ತೆ ಗೋವಾಗೆ ಹೊರಟ ನಟಿ ದೀಪಿಕಾ ಪಡುಕೋಣೆNCB ವಿಚಾರಣೆ ಬಳಿಕ ಮತ್ತೆ ಗೋವಾಗೆ ಹೊರಟ ನಟಿ ದೀಪಿಕಾ ಪಡುಕೋಣೆ

  ಜುಲೈ ನಲ್ಲಿ ದೀಪಿಕಾ, ಜಾಕ್ವೆಲಿನ್ ಖಾತೆಗೆ ಕೂಲಿ ಹಣ ಜಮಾ!

  ಜುಲೈ ನಲ್ಲಿ ದೀಪಿಕಾ, ಜಾಕ್ವೆಲಿನ್ ಖಾತೆಗೆ ಕೂಲಿ ಹಣ ಜಮಾ!

  ರಿಜಿಸ್ಟರ್‌ನಲ್ಲಿ ನಮೂದಾಗಿರುವಂತೆ ದೀಪಿಕಾ ಪಡುಕೋಣೆ ಹಾಗೂ ಜಾಕ್ವೆಲಿನ್ ಫರ್ನಾಂಡೀಸ್ ಕುಟುಂಬ ಜಾಬ್ ಕಾರ್ಡ್‌ನಲ್ಲಿದ್ದು, ಜಾಬ್ ಕಾರ್ಡ್‌ನಲ್ಲಿ ಇದೇ ನಟಿಯರ ಚಿತ್ರಗಳಿವೆ. ಅಷ್ಟೇ ಅಲ್ಲ ಕಳೆದ ಜುಲೈ ತಿಂಗಳಲ್ಲಿ ಇವರ ಖಾತೆಗೆ ಕೂಲಿ ಹಣ ಪಾವತಿಸಲಾಗಿದೆ, ಅದನ್ನು ವಿತ್‌ಡ್ರಾ ಸಹ ಮಾಡಿದ್ದಾರೆ ಈ ನಟಿಯರು.

  ಪುರುಶರ ಹೆಸರಿಗೆ ನಟಿಯರ ಚಿತ್ರಗಳು

  ಪುರುಶರ ಹೆಸರಿಗೆ ನಟಿಯರ ಚಿತ್ರಗಳು

  ವಿಶೇಷವೆಂದರೆ ಇಂಧೋರ್ ಹಾಗೂ ಸುತ್ತಮುತ್ತಲಿನ ಕೆಲವು ಹಳ್ಳಿಗಳಲ್ಲಿ ಸಾಕಷ್ಟು ಮಂದಿಯ ಮನ್‌ರೇಗಾ ಜಾಬ್‌ ಕಾರ್ಡ್‌ಗಳಿವೆ, ಪುರುಷರ ಜಾಬ್‌ ಕಾರ್ಡ್‌ಗಳು ಹೆಚ್ಚಿಗಿವೆ. ಆದರೆ ಅವಕ್ಕೂ ಸಹ ದೀಪಿಕಾ ಪಡುಕೋಣೆ, ಜಾಕ್ವೆಲಿನ್ ಫರ್ನಾಂಡೀಸ್ ಹಾಗೂ ಇತರೆ ನಟಿಯರ ಚಿತ್ರಗಳಿವೆ!

  ಡ್ರಗ್ಸ್ ಪ್ರಕರಣದಲ್ಲಿ ದೀಪಿಕಾ, ಸಾರಾ, ಶ್ರದ್ಧ ಕಪೂರ್‌ಗೆ ಕ್ಲೀನ್ ಚಿಟ್?ಡ್ರಗ್ಸ್ ಪ್ರಕರಣದಲ್ಲಿ ದೀಪಿಕಾ, ಸಾರಾ, ಶ್ರದ್ಧ ಕಪೂರ್‌ಗೆ ಕ್ಲೀನ್ ಚಿಟ್?

  ಅಂಬರೀಷ್ ಮನೆ ಪಕ್ಕ ಫ್ಲಾಟ್ ತಗೋಬೇಕು ಅಂತ ತುಂಬಾ ಆಸೆ ಪಟ್ಟಿದ್ದ ಚಿರು : PrashanthSambargi | Chiranjeevi Sarja
  ತನಿಖೆಗೆ ಆದೇಶ ನೀಡಿರುವ ಜಿಲ್ಲಾಧಿಕಾರಿ

  ತನಿಖೆಗೆ ಆದೇಶ ನೀಡಿರುವ ಜಿಲ್ಲಾಧಿಕಾರಿ

  ಹಳ್ಳಿಗರಾದ ಸುನಿಲ್ ಸಿಂಗ್, ಮನೋಜ್ ಶಿವಕುಮಾರ್ ಅವರ ಹೆಸರುಗಳಲ್ಲಿ ಜಾಬ್ ಕಾರ್ಡ್‌ಗಳಿವೆ ಆದರೆ ಚಿತ್ರಗಳು ಮಾತ್ರ ನಟಿಯರದ್ದಿವೆ. ಇಂಥಹಾ ಸಾವಿರಾರು ಜಾಬ್‌ಕಾರ್ಡ್‌ಗಳು ಚಾಲ್ತಿಯಲ್ಲಿವೆ. ಈ ಬಗ್ಗೆ ತನಿಖೆ ನಡೆಸಲು ಸೂಚಿಸಲಾಗಿದೆ ಎಂದು ಸ್ಥಳೀಯ ಜಿಲ್ಲಾಧಿಕಾರಿ ಮಾಧ್ಯಮಗಳಿಗೆ ಹೇಳಿದ್ದಾರೆ.

  English summary
  Actress Deepika Padukone, Jacqueline Fernandez names and photos on Nrega job cards in Madya Pradesh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X