For Quick Alerts
  ALLOW NOTIFICATIONS  
  For Daily Alerts

  ಪತಿ ರಣ್ವೀರ್ ಸಿಂಗ್ 'ಸರ್ಕಸ್' ಸೇರಿದ ನಟಿ ದೀಪಿಕಾ ಪಡುಕೋಣೆ

  |

  2018ರಲ್ಲಿ ತೆರೆಕಂಡ 'ಸಿಂಬಾ' ಚಿತ್ರದ ಮೂಲಕ ಬಾಕ್ಸ್ ಆಫೀಸ್‌ ಧೂಳೆಬ್ಬಿಸಿದ್ದ ನಟ ರಣ್ವೀರ್ ಸಿಂಗ್ ಮತ್ತು ನಿರ್ದೇಶಕ ರೋಹಿತ್ ಶೆಟ್ಟಿ ಕಾಂಬಿನೇಷನ್ ಮತ್ತೆ ಬರ್ತಿದೆ. 'ಸರ್ಕಸ್' ಚಿತ್ರದ ಮೂಲಕ ಹಿಟ್ ಜೋಡಿ ಒಂದಾಗಿದೆ.

  ರಣ್ವೀರ್ ಸಿಂಗ್ ಜೊತೆ ಜಾಕ್‌ಲೀನ್ ಫರ್ನಾಂಡಿಸ್, ಪೂಜಾ ಹೆಗ್ಡೆ ಹಾಗೂ ವರುಣ್ ಶರ್ಮಾ ಕಾಣಿಸಿಕೊಳ್ಳಲಿದ್ದಾರೆ. ಶೇಕ್ಸ್‌ಪಿಯರ್‌ನ 'ದಿ ಕಾಮಿಡಿ ಆಫ್ ಎರರ್ಸ್' ನಾಟಕದಿಂದ ಈ ಕಥೆ ಸ್ಫೂರ್ತಿ ಪಡೆದುಕೊಂಡಿದೆ.

  ಕೆಟ್ಟದಾಗಿ ಕಾಮೆಂಟ್ ಮಾಡಿದವರಿಗೆ ತಕ್ಕ ತಿರುಗೇಟು ನೀಡಿದ ದೀಪಿಕಾ ಪಡುಕೋಣೆಕೆಟ್ಟದಾಗಿ ಕಾಮೆಂಟ್ ಮಾಡಿದವರಿಗೆ ತಕ್ಕ ತಿರುಗೇಟು ನೀಡಿದ ದೀಪಿಕಾ ಪಡುಕೋಣೆ

  ಈಗಾಗಲೇ ಚಿತ್ರೀಕರಣ ನಡೆಯುತ್ತಿದ್ದು, ಮುಂದಿನ ತಿಂಗಳ ಸಿನಿಮಾ ಕೆಲಸ ಮುಗಿಯಲಿದೆ ಎಂದು ಹೇಳಲಾಗುತ್ತಿದೆ. ಈ ನಡುವೆ ದೀಪಿಕಾ ಪಡುಕೋಣೆಯ ಎಂಟ್ರಿ ಮತ್ತಷ್ಟು ಕುತೂಹಲ ಮೂಡಿಸಿದೆ.

  ಹೌದು, ಬಾಲಿವುಡ್ ಹಂಗಮಾ ವರದಿ ಮಾಡಿರುವಂತೆ ದೀಪಿಕಾ ಪಡುಕೋಣೆ ಸರ್ಕಸ್ ಚಿತ್ರದಲ್ಲಿ ಅತಿಥಿ ಪಾತ್ರ ನಿರ್ವಹಿಸಲಿದ್ದಾರೆ. ಚಿತ್ರದ ಹಾಡೊಂದಕ್ಕೆ ದೀಪಿಕಾ ಹೆಜ್ಜೆ ಹಾಕಲಿದ್ದು, ಜೊತೆಗೆ ಕೆಲವು ದೃಶ್ಯಗಳಲ್ಲಿ ಸಹ ನಟಿಸಲಿದ್ದಾರಂತೆ. ಇದು ಸರ್ಕಸ್ ಚಿತ್ರದ ಕಾಮಿಡಿಗೆ ಮತ್ತಷ್ಟು ಶಕ್ತಿ ನೀಡಲಿದೆ ಎನ್ನಲಾಗಿದೆ.

  ಇದಕ್ಕೂ ಮುಂಚೆ ಕಬೀರ್ ಖಾನ್ ನಿರ್ದೇಶಕದ '83 ಚಿತ್ರದಲ್ಲೂ ದೀಪಿಕಾಪಡುಕೋಣೆ ಅತಿಥಿ ಪಾತ್ರ ನಿರ್ವಹಿಸಿದ್ದಾರೆ. '83' ಸಿನಿಮಾದಲ್ಲಿ ರಣ್ವೀರ್ ಸಿಂಗ್ ಕಪಿಲ್ ದೇವ್ ಪಾತ್ರ ಮಾಡಿದ್ದು, ಕಪಿಲ್ ದೇವ್ ಪತ್ನಿ ಪಾತ್ರದಲ್ಲಿ ದೀಪಿಕಾ ಬಣ್ಣ ಹಚ್ಚಿದ್ದಾರೆ.

  ಇನ್ನುಳಿದಂತೆ ದೀಪಿಕಾ ಪಡುಕೋಣೆ, ಶಕುನ್ ಬಾತ್ರ ನಿರ್ದೇಶನದಲ್ಲಿ ಇನ್ನು ಹೆಸರಿಡದ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರೀಕರಣ ಬಹುತೇಕ ಮುಗಿದಿದೆ. ಹೃತಿಕ್ ರೋಷನ್ ಅಭಿನಯಿಸಲಿರುವ ''ಫೈಟರ್'' ಚಿತ್ರದಲ್ಲಿ ದೀಪಿಕಾ ನಟಿಸಲಿದ್ದು, ಈ ಚಿತ್ರವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶಿಸಲಿದ್ದಾರೆ. ನಾಗ್ ಅಶ್ವಿನ್ ನಿರ್ದೇಶನದ ಪ್ರಭಾಸ್ 21ನೇ ಚಿತ್ರದಲ್ಲೂ ದೀಪಿಕಾ ನಾಯಕಿಯಾಗಿದ್ದಾರೆ.

  English summary
  Actress Deepika Padukone joins Ranveer Singh and Rohit shetty's Cirkus team.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X