NCB ನೋಟಿಸ್ ನೀಡದ ಬೆನ್ನಲ್ಲೇ ದೀಪಿಕಾ ಮ್ಯಾನೇಜರ್ ನಾಪತ್ತೆ

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮ್ಯಾನೇಜರ್ ಕರಿಷ್ಮಾ ಪ್ರಕಾಶ್ ಗೆ ಮತ್ತೆ ಎನ್‌ಸಿಬಿ ನೋಟಿಸ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಎನ್ ಸಿ ಬಿ ನೋಟಿಸ್ ನೀಡಿದ ಬೆನ್ನಲೇ ವ್ಯವಸ್ಥಾಪಕಿ ಕರಿಷ್ಮಾ ನಾಪತ್ತೆಯಾಗಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ.

ಈ ಮೊದಲು ದೀಪಿಕಾ ಪಡುಕೋಣೆ ಮತ್ತು ವ್ಯವಸ್ಥಾಪಕಿ ಕರಿಷ್ಮಾ ಪ್ರಕಾಶ್ ಗೆ ಸಮನ್ಸ್ ನೀಡಿ ವಿಚಾರಣೆ ನಡೆಸಲಾಗಿತ್ತು. ಇದೀಗ ಎರಡನೇ ಬಾರಿ ಕರಿಷ್ಮಾಗೆ ನೋಟಿಸ್ ನೀಡಲಾಗಿದೆ. ಅಕ್ಟೋಬರ್ 27 ರಂದು ಎನ್‌ಸಿಬಿ ಅಧಿಕಾರಿಗಳು ಕರಿಷ್ಮಾ ಪ್ರಕಾಶ್ ಮನೆಯ ಮೇಲೆ ರೇಡ್ ಮಾಡಿದ್ದು, ಕರಿಷ್ಮಾ ನಿವಾಸದಲ್ಲಿ ಡ್ರಗ್ಸ್ ಪತ್ತೆಯಾಗಿದೆ ಎನ್ನಲಾಗುತ್ತಿದೆ.

ಕರಿಷ್ಮಾ ಎನ್‌ಸಿಬಿ ಸಂಪರ್ಕಕ್ಕೆ ಸಿಗುತ್ತಿಲ್ಲ, ಆಕೆ ಬಂಧನ ಬೀತಿಯಿಂದ ಪರಾರಿಯಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಹಾಗಾಗಿ ಅವರ ನಿವಾಸದ ಬಾಗಿಲಿಗೆ ಎನ್‌ಸಿಬಿ ಸಮನ್ಸ್ ಅಂಟಿಸಲಾಗಿದೆಯಂತೆ. ಒಂದುವೇಳೆ ಕರಿಷ್ಮಾ ಅವರು ಸಮನ್ಸ್ ಗೆ ಪ್ರತಿಕ್ರಿಯಿಸಲಿಲ್ಲವಾದರೆ ಆಕೆಯ ಬಂಧನಕ್ಕೆ ಎನ್‌ಸಿಬಿ ಮನವಿ ಮಾಡಲಿದೆ.

Deepika Padukone Manager Karishma Abscond After Summoned By NCB

ಡ್ರಗ್ಸ್ ಪ್ರಕರಣ ಸಂಬಂಧ ಈಗಾಗಲೇ ಬಾಲಿವುಡ್ ನ ಖ್ಯಾತ ನಟಿಯರಾದ ಶ್ರದ್ಧಾ ಕಪೂರ್, ರಕುಲ್ ಪ್ರೀತ್ ಸಿಂಗ್, ಸಾರಾ ಅಲಿ ಖಾನ್ ಸೇರಿದಂತೆ ಅನೇಕರಿಗೆ ಸಮನ್ಸ್ ನೀಡಿ ವಿಚಾರಣೆ ನಡೆಸಲಾಗಿದೆ. ಎಲ್ಲಾ ನಟಿಯರಿಗೂ ಎನ್ ಸಿ ಬಿ ಯಿಂದ ಕ್ಲೀನ್ ಚಿಟ್ ದೊರೆಯುವ ಸಾಧ್ಯತೆ ಇದೆ ಎಂಬ ಸುದ್ದಿ ಕೇಳಿಬರುತ್ತಿದೆ.

Recommended Video

ಮುನಿರತ್ನ ಬೆಂಬಲಕ್ಕೆ ಅಣ್ಣ ದರ್ಶನ್ ಜೊತೆಗೆ ಬಂದ ಅಮೂಲ್ಯ | Darshan | Amulya | Munirathna

More from Filmibeat

English summary
Bollywood Actress Deepika Padukone manager karishma abscond after summoned by NCB.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X