For Quick Alerts
  ALLOW NOTIFICATIONS  
  For Daily Alerts

  ಖಳನಾಯಕಿ ಆಗಲಿದ್ದಾರೆ ನಟಿ ದೀಪಿಕಾ ಪಡುಕೋಣೆ

  |

  ಧೂಮ್ ಸರಣಿಯ ಸಿನಿಮಾಗಳಿಗೆ ಅದರದ್ದೇ ಆದ ದೊಡ್ಡ ಅಭಿಮಾನಿ ವರ್ಗವಿದೆ. ಖಳರನ್ನು ನಾಯಕರಂತೆ ತೋರಲಾಗುವ ಈ ಧೂಮ್ ಸರಣಿಯ ಸಿನಿಮಾಗಳ ಮುಂದಿನ ಸರಣಿಯಲ್ಲಿ ನಟಿ ದೀಪಿಕಾ ಪಡುಕೋಣೆ ಖಳನಾಯಕಿಯಾಗಿ ನಟಿಸಲಿದ್ದಾರೆ.

  ಬೈಕ್‌ಗಳು, ಐಶಾರಾಮಿ ಲೊಕೇಶನ್‌ಗಳು, ರೋಚಕ ಚೇಸ್ ದೃಶ್ಯಗಳು, ಥ್ರಿಲ್ಲರ್ ಕತೆ ಹೀಗೆ ಹಲವು ಕುತೂಹಲಕಾರಿ ಅಂಶಗಳನ್ನು ಒಳಗೊಂಡಿರುವ ಧೂಮ್ ಸರಣಿಯ ನಾಲ್ಕನೇ ಸಿನಿಮಾ ಸೆಟ್ಟೇರಲಿದ್ದು, ಖಳ ನಾಯಕಿ ಪಾತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

  ಜಾನ್ ಅಬ್ರಹಾಂ, ಹೃತಿಕ್ ರೋಷನ್, ಐಶ್ವರ್ಯಾ ರೈ, ಅಮೀರ್ ಖಾನ್ ಅಂಥಹಾ ಖ್ಯಾತ ನಟರು ಧೂಮ್ ಸರಣಿಯ ಸಿನಿಮಾಗಳಲ್ಲಿ ಖಳರಾಗಿ ನಟಿಸಿದ್ದಾರೆ. ಇದೀಗ ದೀಪಿಕಾ ಪಡುಕೋಣೆ ಇದೇ ಸಾಲಿಗೆ ಸೇರುತ್ತಿದ್ದಾರೆ. ಸಿನಿಮಾದ ಮತ್ತೊಂದು ಆಸಕ್ತಿಕರ ವಿಷಯವೆಂದರೆ ದೀಪಿಕಾ ಜೊತೆಗೆ ದೊಡ್ಡ ಸ್ಟಾರ್ ನಟ ಸಹ ಇರಲಿದ್ದಾರೆ.

  ಹೌದು, ಇದೇ ಮೊದಲ ಬಾರಿಗೆ ಶಾರುಖ್ ಖಾನ್ ಧೂಮ್ ಸರಣಿಯ ಸಿನಿಮಾದಲ್ಲಿ ನಟಿಸಲಿದ್ದಾರೆ. ಶಾರುಖ್ ಖಾನ್ ಖಳರಾಗಿ ನಟಿಸುತ್ತಿದ್ದು, ಅವರಿಗೆ ಜೊತೆಗಾರ್ತಿಯಾಗಿ ದೀಪಿಕಾ ಪಡುಕೋಣೆ ಇರಲಿದ್ದಾರೆ.

  ಇನ್ನುಳಿದಂತೆ ಅಭಿಷೇಕ್ ಬಚ್ಚನ್ ಹಾಗೂ ಉದಯ್ ಚೋಪ್ರಾ ಅವರುಗಳು ತಮ್ಮ ಪೊಲೀಸ್ ಪಾತ್ರಗಳಲ್ಲಿ ಮುಂದುವರೆಯಲಿದ್ದಾರೆ. ಕಳೆದ ಮೂರು ಧೂಂ ಸಿನಿಮಾಗಳಲ್ಲಿಯೂ ಇವರಿಬ್ಬರೇ ಪ್ರಮುಖ ಪೊಲೀಸ್ ಆಫೀಸರ್ ಆಗಿದ್ದರು. ಧೂಮ್ 2 ನಲ್ಲಿ ಬಿಪಾಷಾ ಬಸು ಸಹ ನಟಿಸಿದ್ದರು.

  ಸರ ಕದಿಯಲು ಬಂದವರಿಗೆ ಪಾಠ ಕಲಿಸಿದ ರಶ್ಮಿಕಾ ಮಂದಣ್ಣ | Filmibeat Kannada

  ದೀಪಿಕಾ ಪಡುಕೋಣೆ ಪ್ರಸ್ತುತ ಅನನ್ಯಾ ಪಾಂಡೆ, ಸಿದ್ಧಾರ್ಥ್ ಚತುರ್ವೇದಿ ಜೊತೆಗೆ ಹೆಸರಿಡದ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ. ಶಾರುಖ್ ಖಾನ್ ಜೊತೆಗೆ ಪಠಾಣ್, ಹೃತಿಕ್ ರೋಷನ್ ಜೊತೆಗೆ ಫೈಟರ್ ಸಿನಿಮಾಗಳಲ್ಲಿಯೂ ದೀಪಿಕಾ ನಟಿಸುವವರಿದ್ದಾರೆ. ಅದರ ನಂತರ ಪ್ರಭಾಸ್ ಜೊತೆಗೆ ಹಾಗೂ ಮತ್ತೆ ಹೃತಿಕ್ ರೋಷನ್ ಜೊತೆಗೆ ನಟಿಸಲಿದ್ದಾರೆ ದೀಪಿಕಾ ಪಡುಕೋಣೆ.

  English summary
  Actress Deepika Padukone may act in Dhoom 4 as villain. Sharukh Khan also may act in Dhoom 4 movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X