ದೀಪಿಕಾ ಮುಂದಿನ ಚಿತ್ರ ಹಾಲಿವುಡ್ ರೀಮೇಕ್: ಕನ್ನಡದಲ್ಲೂ ಈ ಸಿನಿಮಾ ಬಂದಿದೆ!

'ಚಪಾಕ್' ಸಿನಿಮಾದ ಬಳಿಕ ದೀಪಿಕಾ ಪಡುಕೋಣೆ ಯಾವ ಪ್ರಾಜೆಕ್ಟ್ ಕೈಗೆತ್ತಿಕೊಳ್ಳಬಹುದು ಎಂಬ ಕುತೂಹಲ ಸಿನಿ ಪ್ರೇಕ್ಷಕರಲ್ಲಿ ಕಾಡುತ್ತಿದೆ. ರಣ್ವೀರ್ ಸಿಂಗ್ ನಟನೆಯ '83' ಚಿತ್ರದಲ್ಲಿ ದೀಪಿಕಾ ಕಾಣಿಸಿಕೊಂಡಿದ್ದು, ಈ ಸಿನಿಮಾ ಏಪ್ರಿಲ್ ತಿಂಗಳಲ್ಲಿ ತೆರೆಗೆ ಬರ್ತಿದೆ.

ಈ ಸಿನಿಮಾದ ಚಿತ್ರೀಕರಣವೂ ಮುಗಿದಿದೆ. ಈಗ ಹಾಲಿವುಡ್ ಚಿತ್ರದ ಹಿಟ್ ಸಿನಿಮಾವೊಂದನ್ನು ಹಿಂದಿಗೆ ರೀಮೇಕ್ ಮಾಡುತ್ತಿದ್ದು, ಆ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ.

2015ರಲ್ಲಿ ತೆರೆಕಂಡಿದ್ದ 'ಇಂಟರ್ನ್' ಚಿತ್ರವನ್ನು ಬಾಲಿವುಡ್ ಗೆ ತರಲಾಗುತ್ತಿದೆ. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಮತ್ತು ಹಿರಿಯ ನಟ ರಿಷಿ ಕಪೂರ್ ಮುಖ್ಯ ಪಾತ್ರಗಳಲ್ಲಿ ಬಣ್ಣ ಹಚ್ಚಲಿದ್ದಾರೆ. ಈ ಮೂಲಕ ದೀಪಿಕಾ ಮತ್ತು ರಿಷಿ ಕಪೂರ್ ಕಾಂಬಿನೇಷನ್ ಈಗ ನಿರೀಕ್ಷೆ ಹುಟ್ಟುಹಾಕಿದೆ.

Deepika Padukone Next Movie Hollywood Remake

ಅಂದ್ಹಾಗೆ, ಇಂಟರ್ನ್ ಚಿತ್ರದಿಂದ ಸ್ಫೂರ್ತಿಗೊಂಡು ಕನ್ನಡದಲ್ಲೂ ಈಗಾಗಲೇ ಸಿನಿಮಾ ಬಂದಿದೆ. ರಾಧಿಕಾ ಚೇತನ್ ಮತ್ತು ಅನಂತ್ ನಾಗ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ 'ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ' ಸಿನಿಮಾ ಅದೇ ಚಿತ್ರದ ರೀಮೇಕ್.

2018ರಲ್ಲಿ ಈ ಸಿನಿಮಾ ಕನ್ನಡದಲ್ಲಿ ಬಿಡುಗಡೆಯಾಗಿತ್ತು. ನಾಗೇಂದ್ರ ಬಾಬು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಈಗ ಹಿಂದಿಯಲ್ಲಿ ಅದೇ ಚಿತ್ರವನ್ನು ರೀಮೇಕ್ ಮಾಡಲಾಗುತ್ತಿದೆ. 2021ಕ್ಕೆ ಈ ಚಿತ್ರ ಚಿತ್ರಮಂದಿರಕ್ಕೆ ಬರಲಿದೆ.

Deepika Padukone Next Movie Hollywood Remake

ಶೀರ್ಷಿಕೆ ಇನ್ನು ಅಂತಿಮವಾಗಿಲ್ಲ. ಈ ಚಿತ್ರವನ್ನು ಕ ಪ್ರೊಡಕ್ಷನ್ ಮತ್ತು ಅಜುರೆ ಎಂಟರ್ ಟೈನ್ ಮೆಂಟ್ ಸಂಸ್ಥೆಗಳು, ವಾರ್ನರ್ ಬ್ರೋಸ್ ಇಂಡಿಯಾ ಜೊತೆ ಸೇರಿ ನಿರ್ಮಿಸುತ್ತಿದ್ದಾರೆ.

More from Filmibeat

English summary
After Success of Chhapaak movie deepika padukone announced her next movie with rishi kapoor. its remake of 2015th hollywood movie intern.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X