ಕೋವಿಡ್‌ನಿಂದಾಗಿ ಗುರುತು ಹಿಡಿಯಲಾಗದಂತೆ ಬದಲಾಗಿಬಿಟ್ಟಿದ್ದೆ: ದೀಪಿಕಾ

ಕೋವಿಡ್‌ನಿಂದಾಗಿ ಈ ವರೆಗೆ (ಜನವರಿ 07) 4.83 ಲಕ್ಷಕ್ಕೂ ಹೆಚ್ಚು ಜನ ಮರಣ ಹೊಂದಿದ್ದಾರೆ. ಕೋಟ್ಯಂತರ ಮಂದಿ ಕೋವಿಡ್‌ನಿಂದ ಬಾದಿತರಾಗಿ ಚೇತರಿಸಿಕೊಂಡಿದ್ದಾರೆ. ಈಗಲೂ 3.53 ಕೋಟಿ ಸಕ್ರಿಯ ಕೋವಿಡ್ ಪ್ರಕರಣಗಳು ದೇಶದಲ್ಲಿವೆ.

ಹಲವು ಸಿನಿಮಾ ಸೆಲೆಬ್ರಿಟಿಗಳು ಕೋವಿಡ್‌ನಿಂದ ಈಗಾಗಲೇ ನಿಧನ ಹೊಂದಿದ್ದಾರೆ. ಅದರಲ್ಲಿಯೂ ಕೋವಿಡ್ ಎರಡನೇ ಅಲೆಗೆ ಜೀವಗಳು ತರಗೆಲೆಗಳಂತಾಗಿದ್ದವು. ಆ ಸಮಯದಲ್ಲಿ ಕೋವಿಡ್‌ ಸೋಂಕಿಗೆ ತುತ್ತಾದವರು ತೀವ್ರ ಅಸ್ವಸ್ಥರಾಗಿದ್ದರು.

ಇದೀಗ ನಟಿ ದೀಪಿಕಾ ಪಡುಕೋಣೆ ತಾವು ಕೋವಿಡ್‌ನಿಂದಾಗಿ ತೀವ್ರ ಅಸ್ವಸ್ಥರಾಗಿದ್ದ ವಿಷಯವನ್ನು ಮಾಧ್ಯಮಗಳೊಟ್ಟಿಗೆ ಹಂಚಿಕೊಂಡಿದ್ದಾರೆ. ಬಾಲಿವುಡ್‌ ಸುಂದರತಿ ದೀಪಿಕಾ ಪಡುಕೋಣೆ ಕೋವಿಡ್‌ನಿಂದಾಗಿ ಗುರುತು ಸಹ ಸಿಗಲಾರದಷ್ಟು ದೈಹಿಕ ಬದಲಾವಣೆ ಅನುಭವಿಸಿದ್ದರಂತೆ!

Deepika Padukone Opens About Difficulty She Faced Due To COVID

2021ರ ಏಪ್ರಿಲ್ ತಿಂಗಳಲ್ಲಿ ಎರಡನೇ ಅಲೆಯ ಆರಂಭದ ಸಂದರ್ಭದಲ್ಲಿ ನಟಿ ದೀಪಿಕಾ ಪಡುಕೋಣೆ, ಅವರ ತಂದೆ ಪ್ರಕಾಶ್ ಪಡುಕೋಣೆ, ಅಮ್ಮ ಉಜ್ವಲ, ಸಹೋದರಿ ಅನಿಷಾ ಪಡುಕೋಣೆ ಎಲ್ಲರಿಗೂ ಕೋವಿಡ್ ಪಾಸಿಟಿವ್ ಆಗಿತ್ತು. ಆ ಸಮಯದಲ್ಲಿ ಕೋವಿಡ್‌ನಿಂದಾಗಿ ತೀವ್ರವಾಗಿ ಅಸ್ವಸ್ಥರಾಗಿದ್ದರು ದೀಪಿಕಾ ಪಡುಕೋಣೆ.

ಕೋವಿಡ್‌ ಬಂದಾಗ ತಾವು ಅನುಭವಿಸಿದ ಕಷ್ಟದ ಬಗ್ಗೆ ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ದೀಪಿಕಾ, ''ಕೋವಿಡ್ ಬಂದಾಗ ನಾನು ಮಾಮೂಲಿನಂತೆಯೇ ಇದ್ದೆ. ಆದರೆ ನಂತರ ಅದರ ತೀವ್ರತೆ ಹೆಚ್ಚಾಯಿತು. ನನ್ನ ಮೆದುಳು ಸಹ ಕೆಲಸ ಮಾಡುತ್ತಿಲ್ಲ ಎನಿಸಲು ಆರಂಭವಾಯ್ತು'' ಎಂದಿದ್ದಾರೆ.

''ಕೋರೊನಾ ನಂತರ ನನ್ನ ಜೀವನ ಸಾಕಷ್ಟು ಬದಲಾಗಿದೆ. ಕೋವಿಡ್ ಬಂದಾಗ ದೈಹಿಕವಾಗಿ ನಾನು ಬಹಳ ಬದಲಾಗಿಬಿಟ್ಟೆ. ನನ್ನನ್ನು ಯಾರೂ ಗುರುತಿಸಲು ಸಹ ಸಾಧ್ಯವಾಗುತ್ತಿರಲಿಲ್ಲ ಅಷ್ಟು ಬದಲಾಗಿದ್ದೆ. ಕೋವಿಡ್ ಬಂದಾಗ ಹಲವು ರೀತಿಯ ಸ್ಟಿರಾಯ್ಡ್ಸ್, ಇತರೆ ರೀತಿಯ ಚುಚ್ಚುಮುದ್ದುಗಳು, ಔಷಧಗಳನ್ನು ತೆಗೆದುಕೊಂಡೆ ಹಾಗಾಗಿ ನನ್ನ ದೇಹ ಬದಲಾಗಿಬಿಟ್ಟಿತ್ತು'' ಎಂದಿದ್ದಾರೆ ದೀಪಿಕಾ.

Deepika Padukone Opens About Difficulty She Faced Due To COVID

''ಕೋವಿಡ್ ಭಿನ್ನ ರೀತಿಯ ಕಾಯಿಲೆ. ಅದು ನಮ್ಮ ದೇಹದ ಮೇಲೆ ಮಾಡುವ ಪರಿಣಾಮವೂ ಭಿನ್ನ. ನನಗಂತೂ ಏನನ್ನೂ ಯೋಚನೆ ಮಾಡಲು ಸಹ ಸಾಧ್ಯವಾಗುತ್ತಿರಲಿಲ್ಲ. ಮೆದುಳು ಕೆಲಸ ಮಾಡುವುದನ್ನೇ ನಿಲ್ಲಿಸಿಬಿಟ್ಟಿದೆಯೇನೋ ಎನ್ನಿಸಿಬಿಟ್ಟಿತ್ತು. ಆ ಸಮಯ ನನ್ನ ಪಾಲಿಗೆ ಬಹಳ ಸವಾಲಿನದ್ದಾಗಿತ್ತು. ಕೋವಿಡ್ ಬಳಿಕ ಎರಡು ತಿಂಗಳು ನಾನು ಕೆಲಸವನ್ನು ನಿಲ್ಲಿಸಿಬಿಟ್ಟೆ. ಯಾರನ್ನೂ ಭೇಟಿಯೂ ಆಗಲಿಲ್ಲ. ನಾನು ಪೂರ್ಣ ಗುಣಮುಖವಾದ ಬಳಿಕ ಕೆಲಸ ಮುಂದುವರೆಸಿದೆ'' ಎಂದಿದ್ದಾರೆ ದೀಪಿಕಾ ಪಡುಕೋಣೆ.

ದೀಪಿಕಾ ಪಡುಕೋಣೆ ಶಾರುಖ್ ಖಾನ್ ಜೊತೆಗೆ 'ಪಠಾಣ್' ಸಿನಿಮಾದಲ್ಲಿ ಈಗಾಗಲೇ ನಟಿಸಿದ್ದಾರೆ. ಸಿನಿಮಾದ ಚಿತ್ರೀಕರಣ ಮುಗಿದಿದೆ. ಬಳಿಕ ಹೃತಿಕ್ ರೋಷನ್ ಜೊತೆಗೆ 'ಫೈಟರ್' ಸಿನಿಮಾದಲ್ಲಿ ನಟಿಸಲಿದ್ದಾರೆ. ದೀಪಿಕಾ ನಟಿಸಿರುವ 'ಗೆಹಾರಿಯಾಂ' ಸಿನಿಮಾದ ಚಿತ್ರೀಕರಣವೂ ಬಹುತೇಕ ಮುಗಿದಿದೆ. ಪ್ರಭಾಸ್ ಜೊತೆ ನಟಿಸುತ್ತಿರುವ ಇನ್ನೂ ಹೆಸರಿಡದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದರ ಬಳಿಕ ಅಮಿತಾಬ್ ಬಚ್ಚನ್ ಜೊತೆಗೆ 'ದಿ ಇಂಟರ್ನ್' ಸಿನಿಮಾದಲ್ಲಿ ನಟಿಸಲಿದ್ದಾರೆ.

More from Filmibeat

English summary
Actress Deepika Padukone opens about difficulty she faced due to COVID. She said 'I was unrecognized, I changed physically'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X