'ಪಠಾಣ್' ಲೇಡಿ ದೀಪಿಕಾ ಪಡುಕೋಣೆ ಲುಕ್ ಔಟ್!
ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ 'ಪಠಾಣ್' ಸಿನಿಮಾ ಹಲವು ವಿಶೇಷತೆಗಳಿಂದ ಕೂಡಿದೆ. ನಟ ಶಾರುಖ್ ಖಾನ್ ದೊಡ್ಡ ಬ್ರೇಕ್ ಬಳಿಕ ಈ ಚಿತ್ರದ ಮೂಲಕ ಮತ್ತೆ ಕಮ್‌ಬ್ಯಾಕ್ ಮಾಡುತ್ತಿದ್ದಾರೆ ಎನ್ನುವುದು ಒಂದು ಕಡೆ ಆದ್ರೆ, ದೀಪಿಕಾ-ಶಾರುಖ್ ಜೋಡಿ ಒಂದಾಗುತ್ತಿದೆ ಎನ್ನುವುದು ಮತ್ತೊಂದು ವಿಶೇಷ.
ಇಷ್ಟು ದಿನ ನಟ ಶಾರುಖ್ ಖಾನ್ ಬಗ್ಗೆ ಮಾತ್ರವೇ ಹೆಚ್ಚಿನ ಸುದ್ದಿ ಆಗ್ತಿತ್ತು. ಶಾರುಖ್ ಪಾತ್ರದ ಟೀಸರ್ ಕೂಡ ರಿಲೀಸ್ ಆಗಿತ್ತು. ಆದರೆ ದೀಪಿಕಾ ಪಾತ್ರದ ಬಗ್ಗೆ ಯಾವ ಸುಳಿವು ಬಿಟ್ಟು ಕೊಟ್ಟಿರಲಿಲ್ಲ. ಈಗ ಈ ಕುತೂಹಲಕ್ಕೆ ತೆರೆ ಬಿದ್ದಿದೆ.
ದೀಪಿಕಾ ಪಡುಕೋಣೆ ಮತ್ತು ಶಾರುಖ್ ಖಾನ್ ಒಂದಾದರೆ ಆ ಸಿನಿಮಾ ಹಿಟ್ ಅಂತಲೇ ಲೆಕ್ಕ. ಇದೇ ನಿಟ್ಟಿನಲ್ಲಿ ಈ ಚಿತ್ರದಲ್ಲಿ ಇವರ ಪಾತ್ರಗಳು ಹೇಗೆ ಇರಲಿವೆ ಎನ್ನುವ ಕುತೂಹಲ ದಿನೇ, ದಿನೇ ಹೆಚ್ಚುತ್ತಿದೆ. ಇನ್ನು ಈಗ ರಿಲೀಸ್ ಆಗಿರುವ ಟೀಸರ್‌ನಲ್ಲಿ ದೀಪಿಕಾ ಪಾತ್ರದ ಸುಳಿವು ಸಿಕ್ಕಿದೆ.
ದೀಪಿಕಾ ಪಠಾಣ್ ಲುಕ್!
ಪಠಾಣ್ ಸಿನಿಮಾದಲ್ಲಿ ನಟಿ ದೀಪಿಕಾ ಪಡುಕೋಣೆ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುಳಿವು ಸಿಕ್ಕಿದೆ. ಟೀಸರ್‌ನಲ್ಲಿ ಗನ್ ಹಿಡಿದು ಬುಲೆಟ್ ಶುಟ್ ಮಾಡಿದ್ದಾರೆ. ದೀಪಿಕಾ ಮುಖಕ್ಕೆ ಗಾಯಗಳಾಗಿವೆ. ಇದನ್ನು ಗಮನಿಸಿದರೆ ಚಿತ್ರದಲ್ಲಿ ದೀಪಿಕಾಗೂ ಆ್ಯಕ್ಷನ್ ದೃಶ್ಯಗಳು ಇವೆ ಎಂದು ಊಹಿಸ ಬಹುದು. ಒಟ್ಟಾರೆ ಈ ಟೀಸರ್‌ನಲ್ಲಿ ದೀಪಿಕಾ ಪಡುಕೋಣೆ ಖಡಕ್ ಆಗಿ ಮಿಂಚಿದ್ದಾರೆ.

ಶಾರುಖ್, ದೀಪಿಕಾ ಜೋಡಿ ಮೋಡಿ!
ನಟಿ ದೀಪಿಕಾ ಪಡುಕೋಣೆ ಶಾರುಖ್ ಖಾನ್ ಜೊತೆಗೆ 'ಓಂ ಶಾಂತಿ ಓಂ' ಸಿನಿಮಾದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. ನಂತರ ಈ ಜೋಡಿ ಒಟ್ಟಿಗೆ ಮಾಡಿದ ಸಿನಿಮಾಗಳು ಸೂಪರ್ ಹಿಟ್ ಲಿಸ್ಟ್ ಸೇರಿದವು. ಅದರಲ್ಲಿ 'ಚೆನ್ನೈ ಎಕ್ಸ್‌ಪ್ರೆಸ್' ಕೂಡ ಒಂದು. ಈಗ ಈ ಜೋಡಿ ಪಠಾಣ್‌ನಲ್ಲಿ ಒಂದಾಗಿದ್ದು, ನಿರೀಕ್ಷೆ ಮೂಡಿಸಿದೆ. ಇದು ಬಾಲಿವುಡ್‌ನ ಹಿಟ್ ಜೋಡಿಗಳಲ್ಲಿ ಒಂದಾಗಿದೆ.

ಈ ಬಾರಿ ಗೆಲ್ಲುತ್ತಾ ಯಶ್ ರಾಜ್ ಫಿಲ್ಮ್ಸ್!
'ಪಠಾಣ್' ಚಿತ್ರಕ್ಕೆ ಬಾಲಿವುಡ್‌ನ ಹೆಸರಾಂತ ನಿರ್ಮಾಣ ಸಂಸ್ಥೆ ಯಶ್ ರಾಜ್ ಫಿಲ್ಮ್ಸ್ ಬಂಡವಾಳ ಹೂಡಿದೆ. ಇತ್ತೀಚೆಗೆ ರಿಲೀಸ್ ಆದ ಈ ನಿರ್ಮಾಣ ಸಂಸ್ಥೆಯ 2 ಸಿನಿಮಾಗಳು ನೆಲ ಕಚ್ಚಿವೆ. ಅಕ್ಷಯ್ ಕುಮಾರ್ ಅಭಿನಯದ ಸಾಮ್ರಾಟ್ ಪೃಥ್ವಿ ರಾಜ್ ಮತ್ತು ರಣ್ಬೀರ್ ಕಪೂರ್ ಅಭಿನಯದ ಶಂಶೇರಾ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಅಂದುಕೊಂಡ ಮಟ್ಟಿಗೆ ಸದ್ದು ಮಾಡಿಲ್ಲ. ಹಾಗಾಗಿ ಪಠಾಣ್ ಮೂಲಕ ಹೊಸ ಗೆಲುವು ಸಾಧಿಸುವ ಪ್ರಯತ್ನದಲ್ಲಿದೆ.

ಶಾರುಖ್ ಸಿನಿಮಾ ಜರ್ನಿಗೆ 30 ವರ್ಷ!
ಶಾರುಖ್ ಖಾನ್ ಸಿನಿಮಾ ಜರ್ನಿಗೆ 30 ವರ್ಷಗಳ ಆಗಿದೆ. ಸುದೀರ್ಘ 30 ವರ್ಷದ ಸಿನಿಮಾ ಪಯಣವನ್ನು ಮುಗಿಸಿದ್ದಾರೆ ಶಾರುಖ್ ಖಾನ್. ಮೊದಲ ಚಿತ್ರ 'ದೀವಾನಾ' 25 ಜೂನ್ 1992 ರಂದು ಬಿಡುಗಡೆಯಾಯಿತು. ಈ ಚಿತ್ರದಲ್ಲಿ ರಿಷಿ ಕಪೂರ್ ಮುಖ್ಯ ನಾಯಕನಾಗಿದ್ದರೂ. ಮೊದಲ ಚಿತ್ರದಲ್ಲೇ ಶಾರುಖ್ ಖಾನ್‌ಗೆ ಬ್ರೇಕ್ ಸಿಕ್ಕಿತು. ಬಳಿಕ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಪಡೆದ್ದಿದ್ದಾರೆ ಶಾರುಖ್.


Click it and Unblock the Notifications











