»   » ದೀಪಿಕಾ ಕೆನ್ನೆಗೆ ಮುತ್ತಿಟ್ಟ ನಟ, ಪಾನಮತ್ತರಾಗಿದ್ದರಾ 'ಪದ್ಮಾವತಿ'.!

ದೀಪಿಕಾ ಕೆನ್ನೆಗೆ ಮುತ್ತಿಟ್ಟ ನಟ, ಪಾನಮತ್ತರಾಗಿದ್ದರಾ 'ಪದ್ಮಾವತಿ'.!

Posted By:
Subscribe to Filmibeat Kannada

ದೀಪಿಕಾ ಪಡುಕೋಣೆ ಅಭಿನಯದ 'ಪದ್ಮಾವತಿ' ಚಿತ್ರದ ಟ್ರೈಲರ್ ಸೂಪರ್ ಹಿಟ್ ಆಗಿದ್ದು, ಬಾಲಿವುಡ್ ನಲ್ಲಿ ಪ್ರಶಂಸೆ ಗಿಟ್ಟಿಸಿಕೊಂಡಿದೆ. ಇದೇ ಸಂತಸದಲ್ಲಿದ್ದ ಡಿಪ್ಪಿ ತಮ್ಮ ನಿವಾಸದಲ್ಲಿ ಪಾರ್ಟಿ ಆಯೋಜಿಸಿದ್ದರು. ಈ ಪಾರ್ಟಿಯಲ್ಲಿ ದೀಪಿಕಾ ಪಡುಕೋಣೆಗೆ ಯುವ ನಟನೊಬ್ಬ ಮುತ್ತಿಟ್ಟಿದ್ದಾನೆ. ಈ ಫೋಟೋ ಈಗ ವೈರಲ್ ಆಗಿದೆ.

ಈ ಪಾರ್ಟಿಯಲ್ಲಿ ಬಾಲಿವುಡ್ ಸ್ಟಾರ್‌ ಗಳಾದ ಶಾರುಖ್ ಖಾನ್‌, ಕರಣ್ ಜೋಹರ್, ಸಿದ್ಧಾರ್ಥ ಮಲ್ಹೋತ್ರಾ, ರಣವೀರ್ ಸಿಂಗ್‌, ಆಲಿಯಾ ಭಟ್‌, ಸೋನಾಕ್ಷಿ ಸಿನ್ಹಾ ಸೇರಿದಂತೆ 'ಪದ್ಮಾವತಿ' ಚಿತ್ರ ತಂಡ ಭಾಗಿಯಾಗಿತ್ತು. ಆದ್ರೆ, ವಿಶೇಷವಾಗಿ ಗಮನ ಸೆಳೆದಿರುವುದು ಮಾತ್ರ ರಣ್ಬೀರ್ ಕಸಿನ್ಸ್.

ದೀಪಿಕಾ ಪಡುಕೋಣೆಯ ಮಾಜಿ ಪ್ರಿಯಕರ ಬಾಲಿವುಡ್ ಗೆ ಎಂಟ್ರಿ.!

Deepika Padukone Pics With Ranbir Kapoor's Cousins

ಹೌದು, ರಣ್ಬೀರ್ ಕಸಿನ್ ಗಳಾದ ಆದರ್ ಜೈನ್‌ ಮತ್ತು ಅರ್ಮಾನ್ ಜೈನ್‌ ಕೂಡ ಈ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಆದರ್ ಜೈನ್‌, ದೀಪಿಕಾ ಪಡುಕೋಣೆಗೆ ಕೆನ್ನೆಗೆ ಮುತ್ತಿಟ್ಟಿದ್ದಾರೆ. ಇದು ಈಗ ಟ್ರೋಲ್ ಆಗಿದೆ. ರಣ್ಬೀರ್ ಕಪೂರ್ ಅವರ ಕಸಿನ್ಸ್ ಇನ್ನು ಚಿತ್ರರಂಗಕ್ಕೆ ಕಾಲಿಟ್ಟಿಲ್ಲ. ಹೀಗಿದ್ದರೂ, ಅವರ ಜೊತೆ ಇಷ್ಟೊಂದು ಸಲಿಗೆಯಿಂದ ಕಾಣಿಸಿಕೊಂಡಿರುವುದು ಸಾಮಾಜಿಕ ಜಾಲಜಾಣದಲ್ಲಿ ಚರ್ಚೆಗೆ ಕಾರಣವಾಗಿದೆ.

ಬಾಲಿವುಡ್ ಚಿತ್ರಕ್ಕೆ ಕೊಡುವ ಗೌರವವನ್ನ ಕನ್ನಡ ಚಿತ್ರಕ್ಕೆ ನೀಡದ ದೀಪಿಕಾ.!

Deepika Padukone Pics With Ranbir Kapoor's Cousins

ಮತ್ತೊಂದು ಫೋಟೋದಲ್ಲಿ ದೀಪಿಕಾ ಪಡುಕೋಣೆ ಪಾನಮತ್ತರಾಗಿರುವಂತೆ ಕಾಣಿಸುತ್ತಿದ್ದಾರೆ. ಈ ಫೋಟೋವೂ ವೈರಲ್ ಆಗಿದ್ದು, ಡಿಪ್ಪಿಗೆ ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.

English summary
Deepika Padukone got pictures clicked with Ranbir Kapoor's cousins Armaan and Adaar Jain at the Padmavati trailer success party.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X