ಗುಳಿ ಕೆನ್ನೆ ಬೆಡಗಿ ದೀಪಿಕಾ ಪಡುಕೋಣೆ 'ಗರ್ಭಿಣಿ' ; ಡೌಟಿನಲ್ಲಿ ಬಿ ಟೌನ್..?

ಕಳೆದ ಐದು ವರ್ಷಗಳಿಂದ ದೀಪಿಕಾ ಪಡುಕೋಣೆಯ ಹೆರಿಗೆಯ ದಿನಕ್ಕೆ ಅನೇಕರು ಕಾದು ಕುಂತಿದ್ದಾರೆ. ಆದರೆ ಡಿಪ್ಪಿ ಇಲ್ಲಿಯವರೆಗೆ ಗುಡ್ ನ್ಯೂಸ್ ಕೊಟ್ಟಿಲ್ಲ. ಆದರೆ ಈಗ ಶೀಘ್ರದಲ್ಲಿಯೇ ದೀಪಿಕಾ, ಸಿಹಿ ಸುದ್ದಿ ಕೊಡಬಹುದು ಎಂಬ ನಿರೀಕ್ಷೆ ಮತ್ತೆ ಗರಿಗೆದರಿದೆ. ದೀಪಿಕಾಗೆ ಈಗ 03 ತಿಂಗ್ಳು ಎಂಬ ಸುದ್ದಿ ಊರು ತುಂಬಾ ಹಬ್ಬಿದೆ.

ಹೌದು, ಅಸಲಿಗೆ ಲಂಡನ್‌ನಲ್ಲಿ ನಡೆದ 77th BAFTA ರೆಡ್ ಕಾರ್ಪೆಟ್‌ನಲ್ಲಿ ದೀಪಿಕಾ ಪಡುಕೋಣೆ ಭಾಗವಹಿಸಿದ್ದರು. ಸೀರೆಯಲ್ಲಿ ಕಂಗೊಳಿಸುತ್ತಿದ್ದರು. ಇದೇ ಸಮಯದಲ್ಲಿ ಅನೇಕರ ಕಣ್ಣು ದೀಪಿಕಾ ಪಡುಕೋಣೆಯವರ ಹೊಟ್ಟೆ ಮೇಲೆ ಬಿದ್ದಿದೆ.

Deepika Padukone pregnant with her first child ?

ದೀಪಿಕಾ ಹೊಟ್ಟೆಯನ್ನ ಬೇಕಂತಲೇ ಮುಚ್ಚಿಕೊಂಡಿದ್ದಾರಾ ಎಂಬ ಅನುಮಾನ ಮೂಡಿದೆ. ಅನುಮಾನಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಸದ್ಯಕ್ಕೆ ನಡೆಯುತ್ತಿದೆ. ದೀಪಿಕಾ ಪಡುಕೋಣೆ ಗರ್ಭಿಣಿನಾ ಇಲ್ಲವಾ ಎಂಬ ಚರ್ಚೆ ಕೂಡ ನಡೆಯುತ್ತಿದೆ.

ತಾಯಿಯಾಗುವ ಆಸೆ ವ್ಯಕ್ತಪಡಿಸಿದ್ದ ದೀಪಿಕಾ..!

ಈ ವರ್ಷದ ಆರಂಭದಲ್ಲಿ ದೀಪಿಕಾ ಪಡುಕೋಣೆ ಅವರಿಗೆ ಮಗು ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಉತ್ತರಿಸಿದ್ದ ದೀಪಿಕಾ ನನಗೂ ತಾಯಿ ಆಗಬೇಕಿದೆ. ನನಗೂ, ರಣವೀರ್‌ಗೂ ಮಗು ಅಂದರೆ ತುಂಬ ಇಷ್ಟ. ಹೊಸ ಕುಟುಂಬ ಶುರು ಮಾಡಲು ನಾವು ಉತ್ಸುಕರಾಗಿದ್ದೇವೆ.

Deepika Padukone pregnant with her first child ?

ನನ್ನ ಚಿಕ್ಕಮ್ಮ, ಅತ್ತೆ, ಸ್ನೇಹಿತರನ್ನು ನಾನು ಭೇಟಿ ಮಾಡಿದಾಗ ಎಲ್ಲವೂ ನಾನು ಸ್ವಲ್ಪವೂ ಬದಲಾಗಿಲ್ಲ ಅಂತ ಹೇಳುತ್ತಾರೆ. ಚಿತ್ರರಂಗದಲ್ಲಿ ಹೆಸರು ಮಾಡೋದು, ಹಣ ಗಳಿಸೋದು ಸುಲಭ. ಮನೆಯಲ್ಲಿ ಯಾರೂ ನನ್ನ ಸೆಲೆಬ್ರಿಟಿ ಥರ ಟ್ರೀಟ್ ಮಾಡೋದಿಲ್ಲ. ನನಗೂ ಕೂಡ ಆ ಥರದ ಬದಲಾವಣೆ ಬೇಕಿಲ್ಲ. ಮಕ್ಕಳಿಗೆ ಕುಟುಂಬದ ಮೌಲ್ಯ ತಿಳಿಸಿಕೊಡಬೇಕು ಅಂತ ನಾನು, ರಣವೀರ್ ಬಯಸುತ್ತೇವೆ ಎಂದು ಹೇಳಿದ್ದರು.

ಐದು ವರ್ಷದ ಹಿಂದೆಯೂ ಹಬ್ಬಿತ್ತು ದೀಪಿಕಾ ಗರ್ಭಿಣಿ ಎಂಬ ವದಂತಿ..!

05 ವರ್ಷದ ಹಿಂದೆ ದೀಪಿಕಾ ಮತ್ತು ರಣವೀರ್ ಜೊತೆಯಾಗಿ ಫೋಟೋ ಕ್ಲಿಕಿಸಿಕೊಂಡಾಗ ಕೂಡ ಇಂಥಹದ್ದೇ ಒಂದು ಅನುಮಾನ ಬಹುತೇಕರಿಗೆ ಕಾಡಿತ್ತು. ಸಾಮಾನ್ಯವಾಗಿ ಬಾಡಿ ಹಗ್ ಉಡುಪುಗಳನ್ನು ಧರಿಸುವ ದೀಪಿಕಾ ಈ ಪೋಟೋದಲ್ಲಿ ಸಡಿಲವಾಗಿರುವ ಉಡುಪು ಧರಿಸಿದ್ದರು.

Deepika Padukone pregnant with her first child ?

ಇದನ್ನೇ ಎಳೆಯಾಗಿಟ್ಟುಕೊಂಡು ಪೋಸ್ಟೊಂದನ್ನು ದೀಪಿಕಾ ಅವರ ಅಪ್ಪಟ ಅಭಿಮಾನಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ದೀಪಿಕಾ ಅವರ ಬೇಬಿ ಬಂಪ್ ಕಾಣಿಸುತ್ತಿದೆ ಎಂದೂ ಬರೆದುಕೊಂಡಿದ್ದರು.

ಅವತ್ತು ಕೂಡ ಆ ಫೋಟೋವನ್ನು ನೋಡಿರುವ ಸಾಕಷ್ಟು ಮಂದಿ ದಿಪ್ಪಿ ಪ್ರೆಗ್ನೆಂಟ್ ಆಗಿದ್ದರೂ ಹೈಡ್ ಮಾಡುತ್ತಿದ್ದಾರೆಯೇ ಎಂತೆಲ್ಲ ಚರ್ಚೆ ಮಾಡಿದ್ದರು. ಅಂದು ಕೂಡ ದೀಪಿಕಾ ತುಟಿ ಎರಡು ಮಾಡಿರಲಿಲ್ಲ. ಈಗಲೂ ಕೂಡ ತುಟಿ ಬಿಚ್ಚಿಲ್ಲ

More from Filmibeat

English summary
A new report has claimed that Deepika is expecting her first baby with Ranveer Singh. Deepika has been married to Ranveer for over five years now.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X