ಬಾಡಿಗೆ ತಾಯ್ತನದ ಗಾಸಿಪ್‌ಗೆ ಬ್ರೇಕ್ ; ದೀಪಿಕಾ ಪಡುಕೋಣೆ ಬೇಬಿ ಬಂಪ್ ವಿಡಿಯೋ ವೈರಲ್..!

ದೀಪಿಕಾ ಪಡುಕೋಣೆ ನಿಜಕ್ಕೂ ಗರ್ಭಿಣಿನಾ ಅನ್ನುವ ಅನುಮಾನ ಮೊನ್ನೆವರೆಗೆ ಅನೇಕರಲ್ಲಿತ್ತು. ಯಾಕೆಂದರೆ.. ಗರ್ಭಿಣಿಯಾಗಿದ್ದರೂ ಕೂಡ ದೀಪಿಕಾ ಪಡುಕೋಣೆ ಕಾಯಕವೇ ಕೈಲಾಸ ಎಂದು ಸಿಂಗಂ ಅಗೈನ್ ಚಿತ್ರದ ಚಿತ್ರೀಕರಣದಲ್ಲಿ ಇತ್ತೀಚೆಗಷ್ಟೇ ಭಾಗಿಯಾಗಿದ್ದರು. ಅದು ಕೂಡ.. ನಾರ್ಮಲ್ ಸನ್ನಿವೇಶ ಅಲ್ಲ ಬದಲಿಗೆ ಆಕ್ಷನ್ ಸೀಕ್ವೆನ್ಸ್.

ಈ ಕಾರಣಕ್ಕೆ.. ಅನೇಕರು ತಾಯ್ತನ ಎಂಬ ಅವರ್ಣನೀಯ ಅನುಭವಕ್ಕೆ ದೀಪಿಕಾ ಪಡುಕೋಣೆ ಅಪಚಾರ ಎಸಗುತ್ತಿದ್ದಾರೆ ಎಂದು ಕಿಡಿ ಕಾರಿದ್ದರು.ಸುಖಾ ಸುಮ್ಮನೆ ಪ್ರೆಗ್ನೆಂಟ್ ಅಂತೇಳಿ ಪ್ರಚಾರವನ್ನ ಪಡೆಯುತ್ತಿದ್ದಾರೆ ಎಂದು ಮಾತನಾಡಿದ್ದರು.

deepika-padukone-proudly-displays-her-baby-bump-while-arriving-to-vote-alongside-ranveer-singh

ಇನ್ನೂ ಕೆಲವರು ಬಾಡಿಗೆ ತಾಯ್ತನದ ಮೂಲಕ ದೀಪಿಕಾ ಪಡುಕೋಣೆ ಮಗುವನ್ನ ಪಡೆಯಲಿದ್ದಾರೆ ಎಂದು ಪುಕಾರು ಹಬ್ಬಿಸಿದರು. ಸಿಂಗಂ ಅಗೈನ್ ಚಿತ್ರದ ಚಿತ್ರೀಕರಣದಲ್ಲಿ ದೀಪಿಕಾ ಭಾಗಿಯಾದಾಗ ಬೇಬಿ ಬಂಪ್ ಕಾಣದ ಕಾರಣ ಅನೇಕರು ಹಬ್ಬಿಸಲಾದ ಈ ಸುದ್ದಿಯನ್ನ ನಂಬಿದ್ದರು ಕೂಡ. ಆದರೆ ಈಗ ಆ ಎಲ್ಲ ಅನುಮಾನಗಳನ್ನ ಖುದ್ದು ದೀಪಿಕಾ ಪಡುಕೋಣೆ ದೂರ ಮಾಡಿದ್ದಾರೆ. ಬೇಬಿ ಬಂಪ್ ಜೊತೆ ಪ್ರತ್ಯಕ್ಷರಾಗಿದ್ದಾರೆ.

ಹೌದು. ಲೋಕಸಭಾ ಚುನಾವಣೆಯ ಹಿನ್ನೆಲೆ ದೀಪಿಕಾ ಪಡುಕೋಣೆ ನಿನ್ನೆ ಮತದಾನ ಮಾಡಲು ತಮ್ಮ ನಲ್ಮೆಯ ಜೀವನ ಸಂಗಾತಿ ರಣ್ವೀರ್ ಸಿಂಗ್ ಜೊತೆ ಬಂದಿದ್ದರು. ಜನಜಂಗುಳಿಯ ನಡುವೆ ಕಾರಿನಿಂದ ಇಳಿದ ನಂತರ ರಣವೀರ್ ಎಂದಿನಂತೆ ದೀಪಿಕಾಳ ಬಳಿ ಯಾರು ಸುಳಿಯಂತೆ ಸುರಕ್ಷಿತವಾಗಿ ಮತಗಟ್ಟೆಗೆ ಕರೆದುಕೊಂಡು ಹೋದರು. ಈ ಸಮಯದಲ್ಲಿ ದೀಪಿಕಾ ಮೇಲೆ ರಣ್ವೀರ್ ಸಿಂಗ್‌ಗೆ ಇರುವ ಕಾಳಜಿ ಮತ್ತು ಪ್ರೀತಿಯ ಜೊತೆ ದೀಪಿಕಾ ಅವರ ಬೇಬಿ ಬಂಪ್‌ನ ದರ್ಶನವೂ ಆಯಿತು.

deepika-padukone-proudly-displays-her-baby-bump-while-arriving-to-vote-alongside-ranveer-singh

ದೀಪಿಕಾ ಪಡುಕೋಣೆ ನಿಜಕ್ಕೂ ಗರ್ಭಿಣಿಯಾಗಿರುವ ಸತ್ಯವನ್ನ ಕಣ್ಣಾರೆ ಕಂಡ ನಂತರ ನೆಮ್ಮದಿಯ ನಿಟ್ಟುಸಿರನ್ನ ಬಿಟ್ಟಿರುವ ದೀಪಿಕಾ ಅವರ ಅಭಿಮಾನಿಗಳು ದೀಪಿಕಾ ಮತ್ತು ರಣ್ವೀರ್ ಸಿಂಗ್ ಮನೆಗೆ ಗಂಡು ಮಗನ ಆಗಮನವಾಗಲಿದೆ ಎಂಬ ಭವಿಷ್ಯವನ್ನ ಸದ್ಯಕ್ಕೆ ಹೇಳುತ್ತಿದ್ದಾರೆ. ರಣ್ವೀರ್ ಸಿಂಗ್ ಅವರಂತಹ ಕೇರಿಂಗ್ ಗಂಡನನ್ನ ಪಡೆಯಲು ಪುಣ್ಯ ಮಾಡಿರಬೇಕು ಅನ್ನುತ್ತಿದ್ದಾರೆ.

ಇನ್ನೂ ದೀಪಿಕಾ ಪಡುಕೋಣೆಗೆ ಈಗ ನಾಲ್ಕು ತಿಂಗ್ಳು. ಈ ಕಾರಣಕ್ಕೆ.. ದೀಪಿಕಾಗೆ ಈಗ ವಿಶ್ರಾಂತಿಯ ಅಗತ್ಯ ಇದೆ ಎಂದು ಅತೀ ಕಾಳಜಿಯನ್ನ ವಹಿಸುತ್ತಿರುವ ಅನೇಕರು, ದೀಪಿಕಾ ಸದ್ಯಕ್ಕೆ ಚಿತ್ರರಂಗದಿಂದ ಅಂತರ ಕಾಪಾಡಿಕೊಳ್ಳಬೇಕೆಂಬ ಅಭಿಪ್ರಾಯವನ್ನ ವ್ಯಕ್ತಪಡಿಸುತ್ತಿದ್ದಾರೆ. ಯಾಕೆಂದರೆ ಈ ಸಮಯದಲ್ಲಿ ಭಾವನೆಗಳ ಕುಸಿತದಿಂದ ಸಂಭವಿಸುವ ಸಮಸ್ಯೆ ಹಲವಾರು. ಇನ್ನೂ ಮಾನಸಿಕ ಸಮಸ್ಯೆಗೆ ಒಳಗಾಗುವ ಸಾಧ್ಯತೆಯೂ ಇರುತ್ತೆ. ಹೀಗಾಗಿಯೇ ಸಿಂಗಂ ಅಗೈನ್.. ಕಲ್ಕಿ.. ಚಿತ್ರದ ಪ್ರಚಾರಕ್ಕೆಂದು ಅಪ್ಪಿ..ತಪ್ಪಿಯೂ ಹೋಗಬೇಡಿ ಎನ್ನುತ್ತಿದ್ದಾರೆ ದೀಪಿಕಾ ಪಡುಕೋಣೆ ಅವರ ಆರಾಧಕರು.

ಒಟ್ನಲ್ಲಿ ದೀಪಿಕಾ ಪಡುಕೋಣೆ ನಿಜಕ್ಕೂ ಗರ್ಭಿಣಿಯಾ ಇಲ್ಲವಾ ಅನ್ನುವ ಅನುಮಾನ ಸದ್ಯಕ್ಕೆ ದೂರವಾಗಿದೆ. ಇನ್ನೇನು ಕೆಲವೇ ದಿನ ದೀಪಿಕಾ ಅವರ ಮನೆಗೆ ಪುಟ್ಟ ಕಂದಮ್ಮನ ಆಗಮನವಾಗಲಿದೆ.

More from Filmibeat

English summary
Mom-To-Be Deepika Padukone was spotted walking hand in hand with husband Ranveer Singh as they entered a polling booth in Mumbai on Monday. Deepika's baby bump was noticeable beneath the loose shirt she wore. The couple anticipates the arrival of their first child in September of this year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X