»   »  ಮತ್ತೆ ಒಂದಾದ ಬಾಲಿವುಡ್ ಮಾಜಿ ಪ್ರೇಮಿಗಳು

ಮತ್ತೆ ಒಂದಾದ ಬಾಲಿವುಡ್ ಮಾಜಿ ಪ್ರೇಮಿಗಳು

Posted By:
Subscribe to Filmibeat Kannada

ಬಿ ಟೌನ್ ನಲ್ಲಿ ಸಾಕಷ್ಟು ವರ್ಷಗಳು ಪ್ರೇಮಿಗಳಾಗಿ ಸುತ್ತಾಡಿಕೊಂಡಿದ್ದು ನಂತರ ಬ್ರೇಕ್ ಅಪ್ ಮಾಡಿಕೊಂಡ ಜೋಡಿ ರಣಬೀರ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ. ಸದ್ಯ ದೀಪಿಕಾ ರಣವೀರ್ ಸಿಂಗ್ ಪ್ರೀತಿಯಲ್ಲಿ ಬಿದ್ದಿದ್ದು ಈ ಜೋಡಿ ಇದೇ ವರ್ಷಾಂತ್ಯಕ್ಕೆ ಮದುವೆ ಆಗುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿವೆ.

ಆದರೆ ಮಾಜಿ ಪ್ರೇಮಿಗಳಾದ ರಣಬೀರ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ ಸಾಕಷ್ಟು ದಿನಗಳ ನಂತರ ಒಟ್ಟಿಗೆ ಅಭಿಮಾನಿಗಳ ಮುಂದೆ ಕಾಣಿಸಿಕೊಳ್ಳುತ್ತಿದ್ದಾರೆ. ಅದೂ ಕೂಡ ಒಂದು ಒಳ್ಳೆ ಕೆಲಸದ ನಿಮ್ಮಿತ್ತ. ಹೌದು ಬಿ ಟೌನ್ ಡಿಂಪಿ ಹಾಗೂ ರಣಬೀರ್ ಕಪೂರ್ ಒಟ್ಟಿಗೆ ರ್ಯಾಂಪ್ ವಾಕ್ ಮಾಡಲಿದ್ದಾರೆ.

Deepika Padukone, Ranbir Kapoor to unite once again

ಗುಟ್ಟಾಗಿ ಮದುವೆ ಆದ ದೀಪಿಕಾ ಪಡುಕೋಣೆ-ರಣ್ವೀರ್ ಸಿಂಗ್!

ಏರ್ಪಿಲ್ 9 ರಂದು ಮನೀಶ್ ಮಲ್ಹೋತ್ರ ಶಬಾನ ಹಜ್ಮಿ ಅವರ 'ಎನ್ ಜಿ ಓ' ಜೊತೆ ಕೈ ಜೋಡಿಸಿ ಒಂಬತ್ತು ವರ್ಷಗಳು ಕಳೆಯುತ್ತವೆ. ಮಿಜ್ವಾನ್ ಎಂಬ ಹಳ್ಳಿಯಲ್ಲಿರು ಮಕ್ಕಳ ಶಿಕ್ಷಣಕ್ಕಾಗಿ ಮನೀಶ್ ಮಲ್ಹೋತ್ರ ತಮ್ಮ ಫ್ಯಾಷನ್ ಕಂಪನಿ ಮೂಲಕ ಸಹಾಯ ಮಾಡುತ್ತಿದ್ದಾರೆ.

'ಎನ್ ಜಿ ಓ' ಜೊತೆಗಿನ ಒಡನಾಟ ಹೀಗೆ ಮುಂದುವರೆಯುತ್ತದೆ ಎನ್ನುವುದನ್ನ ತಿಳಿಸಲು ಕಾರ್ಯಕ್ರಮವನ್ನ ಆಯೋಜಿಸಲಾಗಿದೆ. ಆ ಸಮಾರಂಭದಲ್ಲಿ ದೀಪಿಕಾ ಹಾಗೂ ರಣಬೀರ್ ಕಪೂರ್ ಒಟ್ಟಿಗೆ ವೇದಿಕೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

Deepika Padukone, Ranbir Kapoor to unite once again

ಈ ಬಗ್ಗೆ ಖುದ್ದು ಮನೀಶ್ ಮಲ್ಹೋತ್ರ ತಮ್ಮ ಇನ್ ಸ್ಟಾಗ್ರಾಂ ನಲ್ಲಿ ಅಪ್ಡೇಟ್ ಮಾಡಿದ್ದಾರೆ. ವಿಶೇಷ ಎಂದರೆ ರಣಬೀರ್ ಹಾಗೂ ದೀಪಿಕಾ ಇಬ್ಬರ ಫೋಟೋವನ್ನು ಕೊಲಾಜ್ ಮಾಡಿ ಅಪ್ಲೋಡ್ ಮಾಡಿದ್ದಾರೆ.

NTR ಬಯೋಪಿಕ್ ನಲ್ಲಿ ಶ್ರೀದೇವಿಯಾಗಲು ಅವಕಾಶ ಪಡೆದ ಸ್ಟಾರ್ ನಟಿ.!

English summary
Deepika Padukone and Ranveer Singh are expected to walk the ramp for Shabana Azmi-led NGO, Mijwan Welfare Society. Deepika Padukone, Ranbir Kapoor to unite once again for Manish Malhotra at Mijwan fashion show

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X