ಕೊಂಕಣಿ ಸಂಪ್ರದಾಯದಂತೆ ಉಂಗುರ ಬದಲಿಸಿಕೊಂಡ ದೀಪಿಕಾ-ರಣ್ವೀರ್

Recommended Video

ರಣ್ವೀರ್ ಮನೆತನದ ಸಂಪ್ರದಾಯದಂತೆ ಉಂಗುರ ಬದಲಿಸಿಕೊಂಡ ದೀಪಿಕಾ, ರಣ್ವೀರ್ | Oneindia Kannada

ಬಾಲಿವುಡ್ ನ ಬಹುಬೇಡಿಕೆಯ ತಾರೆಯರ ವಿವಾಹ ಮಹೋತ್ಸವ ಇಂದು ಇಟಲಿಯ ಲೇಕ್ ಕೋಮೋದಲ್ಲಿ ನಡೆಯಲಿದೆ. ಬೆಂಗಳೂರು ಬೆಡಗಿ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಇಂದು ವೈವಾಹಿಕ ಬದುಕಿಗೆ ಕಾಲಿಡಲಿದ್ದಾರೆ.

ವಿವಾಹ ಮಹೋತ್ಸವಕ್ಕೂ ಮುನ್ನ ಅಂದ್ರೆ ನಿನ್ನೆ ಮೆಹಂದಿ ಹಾಗೂ ಸಂಗೀತ ಕಾರ್ಯಕ್ರಮಗಳು ನಡೆದವು. ಇದರ ಜೊತೆಗೆ ಕೊಂಕಣಿ ಸಂಪ್ರದಾಯದಂತೆ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಉಂಗುರ ಬದಲಿಸಿಕೊಂಡರು.

ದೀಪಿಕಾ ಪಡುಕೋಣೆ ಮೂಲತಃ ಕೊಂಕಣಿ. ಹೀಗಾಗಿ, ಇಟಲಿಯಲ್ಲಿ ಮದುವೆ ಶಾಸ್ತ್ರ ಶುರುವಾಗಿದ್ದು ಕೊಂಕಣಿಯ ಸಾಂಪ್ರದಾಯಿಕ 'ಫೂಲ್ ಮುದ್ದಿ' ಮೂಲಕ. ಮುಂದೆ ಓದಿರಿ...

ಏನಿದು ಫೂಲ್ ಮುದ್ದಿ ಶಾಸ್ತ್ರ.?

ಏನಿದು ಫೂಲ್ ಮುದ್ದಿ ಶಾಸ್ತ್ರ.?

ವರನ ಕುಟುಂಬವನ್ನ ಆತ್ಮೀಯವಾಗಿ ಬರಮಾಡಿಕೊಂಡ ದೀಪಿಕಾ ತಂದೆ ಪ್ರಕಾಶ್ ಪಡುಕೋಣೆ, ವರ ರಣ್ವೀರ್ ಸಿಂಗ್ ಪಾದ ತೊಳೆದು, ಪೂಜೆ ಸಲ್ಲಿಸಿದರು. ಬಳಿಕ ರಣ್ವೀರ್ ಮತ್ತು ದೀಪಿಕಾ ಉಂಗುರ ಬದಲಿಸಿಕೊಂಡರು.

ಮಂಡಿಯೂರಿ ಉಂಗುರ ತೊಡಿಸಿದ ರಣ್ವೀರ್

ಮಂಡಿಯೂರಿ ಉಂಗುರ ತೊಡಿಸಿದ ರಣ್ವೀರ್

ನಿಶ್ಚಿತಾರ್ಥ ಸಮಾರಂಭದಲ್ಲಿ ವಧು ದೀಪಿಕಾ ಪಡುಕೋಣೆ ಬೆರಳಿಗೆ ಮಂಡಿಯೂರಿ ರಣ್ವೀರ್ ಸಿಂಗ್ ಉಂಗುರ ತೊಡಿಸಿದ್ದಾರಂತೆ.

ಫೋಟೋ ಲೀಕ್ ಆಗಿಲ್ಲ.!

ಫೋಟೋ ಲೀಕ್ ಆಗಿಲ್ಲ.!

ಮದುವೆ ಶಾಸ್ತ್ರದ ಫೋಟೋಗಳು ಸೋಷಿಯಲ್ ಮೀಡಿಯಾ ಮತ್ತು ಮಾಧ್ಯಮಗಳಲ್ಲಿ ಲೀಕ್ ಆಗದಂತೆ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಎಚ್ಚರ ವಹಿಸಿದ್ದಾರೆ.

ಸಿಂಗಾರಗೊಂಡಿರುವ ಲೇಕ್ ಕೋಮೋ

ಸಿಂಗಾರಗೊಂಡಿರುವ ಲೇಕ್ ಕೋಮೋ

ವಿವಾಹ ಮಹೋತ್ಸವದ ವೆನ್ಯೂ ಲೇಕ್ ಕೋಮೋ ಮದುವಣಗಿತ್ತಿಯಂತೆಯೇ ಸಿಂಗಾರಗೊಂಡಿದೆ. ವರದಿಗಳ ಪ್ರಕಾರ, ಲೇಕ್ ಕೋಮೋವನ್ನ ವಾಟರ್ ಲಿಲ್ಲಿ ಹೂವುಗಳಿಂದ ಸಿಂಗಾರಗೊಳಿಸಲು ಫ್ಲೋರೆನ್ಸ್ ನಿಂದ ಹನ್ನೆರಡು ಮಂದಿಯನ್ನ ಕರೆತರಲಾಗಿದೆ.

ಪಂಜಾಬಿ ಥೀಮ್ ನಲ್ಲಿ ಮೆಹಂದಿ-ಸಂಗೀತ ಸಮಾರಂಭ

ಪಂಜಾಬಿ ಥೀಮ್ ನಲ್ಲಿ ಮೆಹಂದಿ-ಸಂಗೀತ ಸಮಾರಂಭ

ಇಟಲಿ ಕಾಲಮಾನದ ಪ್ರಕಾರ, ನಿನ್ನೆ ಬೆಳಗ್ಗೆ 11 ಗಂಟೆ ಸುಮಾರಿಗೆ ಮೆಹಂದಿ ಮತ್ತು ಸಂಗೀತ ಸಮಾರಂಭ ನಡೆದಿದೆ. ಪಂಜಾಬಿ ಥೀಮ್ ನಲ್ಲಿ ಮೆಹಂದಿ ಹಾಗೂ ಸಂಗೀತ ಕಾರ್ಯಕ್ರಮ ನೆರವೇರಿದ್ದು, ವಧು-ವರರು ಕುಣಿದು ಕುಪ್ಪಳಿಸಿದ್ದಾರೆ.

ರಿಸೆಪ್ಷನ್ ಯಾವಾಗ.?

ರಿಸೆಪ್ಷನ್ ಯಾವಾಗ.?

ಇಂದು ಕೊಂಕಣಿ ಶೈಲಿಯಲ್ಲಿ ದೀಪಿಕಾ-ರಣ್ವೀರ್ ಸಿಂಗ್ ಮದುವೆ ನಡೆಯಲಿದ್ದು, ನಾಳೆ ಸಿಂಧಿ ಸಂಪ್ರದಾಯದಂತೆ ದೀಪಿಕಾ-ರಣ್ವೀರ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ನವೆಂಬರ್ 21 ರಂದು ಬೆಂಗಳೂರಿನಲ್ಲಿ ಆರತಕ್ಷತೆ ಸಮಾರಂಭ ನಡೆಯಲಿದ್ದು, ನವೆಂಬರ್ 28 ರಂದು ಮುಂಬೈನಲ್ಲಿ ರಿಸೆಪ್ಷನ್ ನೆರವೇರಲಿದೆ.

More from Filmibeat

English summary
Deepika Padukone-Ranveer Singh exchange rings in Phool Muddi, traditional Konkani Engagement Ceremony.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X